»   » 'ಯೂ ಟರ್ನ್' ರಿಮೇಕ್ ಸಿನಿಮಾದಲ್ಲಿ ಸಮಂತಾ ನಟಿಸುವುದು ಪಕ್ಕಾ!

'ಯೂ ಟರ್ನ್' ರಿಮೇಕ್ ಸಿನಿಮಾದಲ್ಲಿ ಸಮಂತಾ ನಟಿಸುವುದು ಪಕ್ಕಾ!

Posted By:
Subscribe to Filmibeat Kannada

ಕನ್ನಡದ 'ಯೂ ಟರ್ನ್' ಸಿನಿಮಾ ತೆಲುಗು ಮತ್ತು ತಮಿಳು ಭಾಷೆಯಲ್ಲಿಯೂ ರಿಮೇಕ್ ಆಗಲಿದೆ ಎಂಬ ಸುದ್ದಿ ಅನೇಕ ದಿನದಿಂದ ಕೇಳಿ ಬರುತ್ತಿತ್ತು. ಅದರ ಜೊತೆಗೆ ಈ ಚಿತ್ರಕ್ಕೆ ಯಾರು ನಾಯಕಿ ಎಂಬುದು ಕೂಡ ದೊಡ್ಡ ನಿರೀಕ್ಷೆ ಹುಟ್ಟಿಸಿತ್ತು. ಆದರೆ ಈಗ ಚಿತ್ರದಲ್ಲಿ ನಟಿ ಸಮಂತಾ ನಟಿಸುವುದು ಪಕ್ಕಾ ಆಗಿದೆ.

ಸಮಂತಾ-ನಾಗಚೈತನ್ಯ ಮದುವೆ ಮುಗಿದು ಹೋಗಿದೆಯಂತೆ.!

ಮೊದಲು ಚಿತ್ರಕ್ಕೆ ಸಮಂತಾ ಹೆಸರು ಕೇಳಿ ಬಂದಿದ್ದಾದರು ಬಳಿಕ ನಿತ್ಯಾ ಮೆನನ್ ಚಿತ್ರದ ನಾಯಕಿ ಆಗುತ್ತಾರೆ ಎಂಬ ಸುದ್ದಿಯೂ ಹರಿದಾಡಿತ್ತು. ಆದರೆ ಇದೀಗ ಎಲ್ಲ ಗೊಂದಲಗಳು ನಿವಾರಣೆ ಆಗಿದೆ. ಸಿನಿಮಾದಲ್ಲಿ ಸೌತ್ ಬ್ಯೂಟಿ ಸಮಂತಾ ನಟಿಸುವುದು ಫೈನಲ್ ಆಗಿದೆ. ಕನ್ನಡದಲ್ಲಿ ಶ್ರದ್ಧಾ ಶ್ರೀನಾಥ್ ನಟಿಸಿದ್ದ ಪಾತ್ರದಲ್ಲಿ ಸಮಂತಾ ಮಿಂಚಲಿದ್ದಾರೆ.

 Samantha will play a lead role in 'U Turn' remake.

ಕನ್ನಡದ ಈ ಸೂಪರ್ ಹಿಟ್ ಸಿನಿಮಾ ತಮಿಳು ಮತ್ತು ತೆಲುಗು ಎರಡು ಭಾಷೆಗೆ ರಿಮೇಕ್ ಆಗಲಿದೆ. ಎರಡು ಭಾಷೆಯಲ್ಲಿ ಸಮಂತಾ ಅವರೇ ಲೀಡ್ ರೋಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕನ್ನಡದಲ್ಲಿ ಪವನ್ ಕುಮಾರ್ ನಿರ್ದೇಶನ ಮಾಡಿದ್ದು, ತಮಿಳು ಮತ್ತು ತೆಲುಗಿನ ನಿರ್ದೇಶಕರ ಹೆಸರು ಇನ್ನು ಫೈನಲ್ ಆಗಿಲ್ಲ. ಸದ್ಯ ಇದೇ ಅಕ್ಟೋಬರ್ 6 ರಂದು ಸಮಂತಾ ಮತ್ತು ನಾಗಚೈತನ್ಯ ವಿವಾಹ ನಡೆಯಲಿದ್ದು, ಆ ಬಳಿಕ ಈ ಚಿತ್ರದ ಶೂಟಿಂಗ್ ನಡೆಯಲಿದೆ.

English summary
Actress Samantha will play a lead role in 'U Turn' telugu and tamil remake.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada