Just In
Don't Miss!
- News
ಬೈಕ್ ಹತ್ತುವ ಮುನ್ನ ಈ ಭಯಾನಕ ಅಪಘಾತ ದೃಶ್ಯ ನೋಡಿ !
- Automobiles
ಅನಾವರಣವಾಯ್ತು 2021ರ ಕೆಟಿಎಂ 1290 ಸೂಪರ್ ಅಡ್ವೆಂಚರ್ ಎಸ್ ಬೈಕ್
- Sports
ಐಎಸ್ಎಲ್: ಕೇರಳ ಬ್ಲಾಸ್ಟರ್ಸ್ಗೆ ಜೆಮ್ಷೆಡ್ಪುರ ಎಫ್ಸಿ ಸವಾಲು: Live ಸ್ಕೋರ್
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 27ರ ಚಿನ್ನ, ಬೆಳ್ಳಿ ದರ
- Lifestyle
ಲಸಿಕೆ ಸಿಕ್ಕಿದರೂ 2021ರಲ್ಲಿ ಕೊರೊನಾವೈರಸ್ ಸಂಪೂರ್ಣ ನಾಶವಾಗಲ್ಲ:WHO ಎಚ್ಚರಿಕೆ
- Education
KSAT Recruitment 2021: 16 ಶೀಘ್ರಲಿಪಿಗಾರ ಮತ್ತು ಬೆರಳಚ್ಚುಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಜೋಗಿ ಕಾದಂಬರಿ ಆಧಾರಿತ 'ಸಮಯದ ಹಿಂದೆ ಸವಾರಿ' ಚಿತ್ರ ಜೂನ್ 28ಕ್ಕೆ ಬಿಡುಗಡೆ
ಕಾದಂಬರಿ ಆಧಾರಿತ ಸಿನಿಮಾಗಳು ಕಡಿಮೆ ಆಗುತ್ತಿರುವ ಈ ಸಮಯದಲ್ಲಿ ಒಂದು ಕಾದಂಬರಿ ಇಟ್ಟುಕೊಂಡು ಸಿನಿಮಾ ಮಾಡಿ, ಆ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. 'ಸಮಯದ ಹಿಂದೆ ಸವಾರಿ' ಸಿನಿಮಾ ಜೂನ್ 28ಕ್ಕೆ ಬಿಡುಗಡೆಯಾಗುತ್ತಿದೆ.
ಜೋಗಿ ರವರ 'ನದಿಯ ನೆನಪಿನ ಹಂಗು' ಕಾದಂಬರಿ ಈಗ ಸಿನಿಮಾ ರೂಪಕ್ಕೆ ಬಂದಿದೆ. ಕಾದಂಬರಿಯಲ್ಲಿ '' ರಘುನಂದನನಿಗೆ ಸುದ್ದಿ ತಿಳಿಯೋ ಹೊತ್ಗೆ ನಿರಂಜನ ಸತ್ತು 36 ಘಂಟೆಗಳಾಗಿತ್ತು'' ಎಂಬ ಸಾಲು ಓದಿದ ದಿನವೇ ಇದನ್ನ ಸಿನಿಮಾ ಮಾಡಬೇಕು ಎನ್ನುವ ನಿರ್ಧಾರವನ್ನು ನಿರ್ದೇಶಕರು ಮಾಡಿದ್ದರಂತೆ.
ಟಿ ಎಸ್ ನಾಗಾಭರಣ ಸಂಚಿಕೆಯ 'ವೀಕೆಂಡ್ ವಿತ್ ರಮೇಶ್' ಪ್ರೊಮೋ ನೋಡಿ
ರಂಗಭೂಮಿಯ ಪ್ರತಿಭಾವಂತ ನಟ, ಸಂಗೀತಗಾರ ಹಾಗೂ ನಿರ್ದೇಶಕ ರಾಜ್ ಗುರು ಹೊಸಕೋಟೆ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಚಿತ್ರಕಥೆ, ಸಾಹಿತ್ಯ, ಸಂಗೀತ, ಸಂಭಾಷಣೆಯ ಜವಾಬ್ದಾರಿಯನ್ನು ಕೂಡ ಅವರೇ ನಿರ್ವಹಿಸಿದ್ದಾರೆ. ಇದೆಲ್ಲದರ ನಡುವೆ ಒಂದು ಪಾತ್ರವನ್ನು ಮಾಡಿದ್ದಾರೆ.
ರಾಹುಲ್ ಹೆಗ್ಡೆ, ಪ್ರಕೃತಿ, ಕಿರಣ್ ವಟಿ, ರಂಜಿತ್ ಶೆಟ್ಟಿ, ಶಿವ ಶಂಕರ್, ಪ್ರವಿನ್ ಹೆಗ್ಡೆ ಚಿತ್ರದಲ್ಲಿ ನಟಿಸಿದ್ದಾರೆ. ರಾಹುಲ್ ಹೆಗ್ಡೆ ಚಿತ್ರದ ನಿರ್ಮಾಣ ಮಾಡಿದ್ದು, ರಂಜಿತ್, ಪ್ರವೀಣ್ ಹೆಗ್ಡೆ ಸಹ ನಿರ್ಮಾಪಕರಾಗಿದ್ದಾರೆ.
ಚಿತ್ರದ ಮತ್ತೊಂದು ಹೈಲೈಟ್ ಅಂದರೆ, ಗಾಯಕ ಎಲ್ ಎನ್ ಶಾಸ್ತ್ರಿ ಹಾಡಿರುವ ಹಾಡು. ಸಿನಿಮಾ ಮಾಡೋ ಮುಂಚೆ ಈ ಕಾದಂಬರಿ ನಾಟಕವಾಗಿತಂತೆ. ಆಗ ಎಲ್ .ಎನ್ ಶಾಸ್ತ್ರೀ ಅವರ ಧ್ವನಿಯಲ್ಲಿ 'ಸಮಯದ ಹಿಂದೆ ಸವಾರಿ ಹುಡುಕಿದರು ಸಿಗದೆ ಕಾಡೋ ದಾರಿ' ಎಂಬ ಹಾಡನ್ನು ಹಾಡಿಸಿದ್ದರು. ಈಗ ಆ ಹಾಡನ್ನು ಸಿನಿಮಾದಲ್ಲಿ ಸಹ ಬಳಸಿಕೊಳ್ಳಲಾಗಿದೆ.
ಅಂಹದಾಗೆ, ಚಿತ್ರದ ಉಳಿದ ಹಾಡುಗಳನ್ನು ವಸಿಷ್ಟ ಸಿಂಹ, ನವೀನ್ ಸಜ್ಜು, ಅನನ್ಯ ಭಟ್, ಶ್ವೇತಪ್ರಭು ಹಾಡಿದ್ದಾರೆ. ಇನ್ನು ಸಿನಿಮಾವನ್ನು ವೀಕ್ಷಿಸಿದ ಸೆನ್ಸಾರ್ ಮಂಡಳಿ "U" ಸರ್ಟೀಫಿಕೆಟ್ ಅನ್ನು ನೀಡಿದೆ. ಸಿನಿಮಾದ ಸವಾರಿ ಇದೇ ತಿಂಗಳ 28ಕ್ಕೆ ಪ್ರಾರಂಭ ಆಗಲಿದೆ.
ರಂಗಭೂಮಿಯಲ್ಲಿ ಸಕ್ರಿಯವಾಗಿ 6 ವರ್ಷಗಳಿಂದ ತನ್ನದೇ ಆದ ಛಾಪು ಮೂಡಿಸಿರುವ ರಂಗಪಯಣ ಮತ್ತು ಸಾತ್ವಿಕ ತಂಡ ಹೊಸದೊಂದು ಪ್ರಯೋಗ ಇದಾಗಿದೆ. ತಮ್ಮ ನಾಟಕಗಳಲ್ಲಿ ಸಿಕ್ಸರ್ ಬಾರಿಸುವ ರಾಜ್ ಗುರು ಸಿನಿಮಾವನ್ನು ಹೇಗೆ ನಿಭಾಹಿಸಿದ್ದಾರೆ ಎನ್ನುವ ನಿರೀಕ್ಷೆ ಇದೆ.