For Quick Alerts
  ALLOW NOTIFICATIONS  
  For Daily Alerts

  'ಕನ್ನಡದ ಹುಡುಗಿಯರಿಗೆ ಏಕೆ ಅವಕಾಶ ನೀಡುತ್ತಿಲ್ಲ': ನಟ, ನಿರ್ದೇಶಕರಿಗೆ ಈ ಪ್ರಶ್ನೆ ಮಾಡಲ್ಲ ಏಕೆ?

  |

  ನಟಿ ಸಂಯುಕ್ತ ಹೆಗ್ಡೆ ಎರಡು ವರ್ಷಗಳ ನಂತರ ಮತ್ತೆ ಕನ್ನಡಕ್ಕೆ ಬಂದಿದ್ದಾರೆ. 'ಕಾಲೇಜ್ ಕುಮಾರ್' ಸಿನಿಮಾದ ವಿವಾದದ ನಂತರ ಮತ್ತೊಂದು ಅವಕಾಶ ಅವರಿಗೆ ಸಿಕ್ಕಿದೆ.

  ನನ್ನ ಕಂಡ್ರೆ ಎಲ್ಲರಿಗೂ ಇಷ್ಟ ಆಗಲ್ಲ ಅಂತ ನಂಗೂ ಗೊತ್ತು | Samyuktha Hegde | Filmibeat Kannada|

  'ಕಿರಿಕ್ ಪಾರ್ಟಿ' ಸಿನಿಮಾದ ಮೂಲಕ ಚಿತ್ರರಂಗ ಪ್ರವೇಶ ಮಾಡಿದ ಸಂಯುಕ್ತ ಹೆಗ್ಡೆ ಮೊದಲ ಸಿನಿಮಾದಲ್ಲಿಯೇ ಹೆಸರು ಮಾಡಿದರು. ಸಂಯುಕ್ತ ಕನ್ನಡಕ್ಕೆ ಒಳ್ಳೆಯ ನಟಿ ಆಗುತ್ತಾರೆ ಎಂದು ಅನೇಕರು ಭವಿಷ್ಯ ನುಡಿದರು. ಆದರೆ, ಮುಂದೆ ಆಗಿದ್ದೆ ಬೇರೆ.

  ಟ್ರಾಫಿಕ್ ಶುಲ್ಕ ಹೆಚ್ಚಳ ವಿರೋಧಿಸಿ ಸಂಯುಕ್ತಾ ಹೆಗ್ಡೆ ಟ್ವೀಟ್ಟ್ರಾಫಿಕ್ ಶುಲ್ಕ ಹೆಚ್ಚಳ ವಿರೋಧಿಸಿ ಸಂಯುಕ್ತಾ ಹೆಗ್ಡೆ ಟ್ವೀಟ್

  ಸಂಯುಕ್ತ ಹೆಗ್ಡೆ ಚಿತ್ರತಂಡಕ್ಕೆ ಸರಿಯಾಗಿ ಸಹಕಾರ ನೀಡಲ್ಲ, ಪ್ರಚಾರಕ್ಕೆ ಬರೋಲ್ಲ ಈ ರೀತಿಯ ಮಾತುಗಳು ಹೆಚ್ಚಾದವು. ಹೀಗಾಗಿ ಅವರಿಗೆ ಕನ್ನಡದಿಂದ ಯಾವುದೇ ಅವಕಾಶಗಳು ಹೋಗಲಿಲ್ಲ. ತೆಲುಗು, ತಮಿಳಿನಲ್ಲಿ ಒಂದೆರಡು ಸಿನಿಮಾ ಮಾಡಿದ್ದ ಅವರು ಈಗ ಮತ್ತೆ ಕನ್ನಡಕ್ಕೆ ಬಂದಿದ್ದಾರೆ.

  'ತುರ್ತು ನಿರ್ಗಮನ' ದಿಂದ ಆಗಮನ

  'ತುರ್ತು ನಿರ್ಗಮನ' ದಿಂದ ಆಗಮನ

  'ತುರ್ತು ನಿರ್ಗಮನ' ಸಿನಿಮಾದಿಂದ ವರ್ಷಗಳ ನಂತರ ಸಂಯುಕ್ತ ಹೆಗ್ಡೆ ಆಗಮನ ಕನ್ನಡದಲ್ಲಿ ಆಗುತ್ತಿದೆ. ಈ ಸಿನಿಮಾದ ಪತ್ರಿಕಾಗೋಷ್ಠಿ ಕಾರ್ಯಕ್ರಮದಲ್ಲಿ ತಮ್ಮ ಸಿನಿಮಾ ಹಾಗೂ ಪಾತ್ರದ ಬಗ್ಗೆ ಸಂಯುಕ್ತ ಮಾತನಾಡಿದರು. ಈ ವೇಳೆಯೇ ಕನ್ನಡ ಸಿನಿಮಾದಲ್ಲಿ ಏಕೆ ನಟಿಸಲು ಆಗಲಿಲ್ಲ ಎನ್ನುವುದಕ್ಕೆ ಕಾರಣ ಹೇಳಿಕೊಂಡರು.

  ಅವಕಾಶಗಳು ಇವೆ, ಒಳ್ಳೆಯ ಸಿನಿಮಾ ಇಲ್ಲ

  ಅವಕಾಶಗಳು ಇವೆ, ಒಳ್ಳೆಯ ಸಿನಿಮಾ ಇಲ್ಲ

  ''ಕನ್ನಡದ ಸಿನಿಮಾಗಳ ಅವಕಾಶಗಳೇ ಇಲ್ಲ ಎಂದೆನೂ ಇಲ್ಲ. ಕನ್ನಡದಿಂದ ಅವಕಾಗಳು ಬರುತ್ತಿವೆ. ಆದರೆ, ಯಾವುದು ಒಳ್ಳೆಯ ಕಥೆ ಇಲ್ಲ. ಒಳ್ಳೆಯ ಸಿನಿಮಾ ಸಿಕ್ಕರೆ ಖಂಡಿತ ನಟಿಸುತ್ತಾರೆ. ಉತ್ತಮ ಸಿನಿಮಾಗಾಗಿ ನಾನು ಕೂಡ ಕಾಯುತ್ತಿದ್ದೇನೆ. ಇಲ್ಲಿ ಸಿನಿಮಾ ಇಲ್ಲದಾಗ ಬೇರೆ ಭಾಷೆಯಲ್ಲಿ ಸಿನಿಮಾ ಮಾಡಿದ್ದೇನೆ.'' ಎಂದಿದ್ದಾರೆ ಸಂಯುಕ್ತ.

  ಲಿಪ್ ಲಾಕ್ ದೃಶ್ಯದಲ್ಲಿ ಕಿರಿಕ್ ಸುಂದರಿ: ಸಂಯುಕ್ತಾ 'ಪಪ್ಪಿ' ಸೀನ್ ವೈರಲ್ಲಿಪ್ ಲಾಕ್ ದೃಶ್ಯದಲ್ಲಿ ಕಿರಿಕ್ ಸುಂದರಿ: ಸಂಯುಕ್ತಾ 'ಪಪ್ಪಿ' ಸೀನ್ ವೈರಲ್

  ಕನ್ನಡದ ಹುಡುಗಿಯರಿಗೆ ಏಕೆ ಅವಕಾಶ ನೀಡುತ್ತಿಲ್ಲ

  ಕನ್ನಡದ ಹುಡುಗಿಯರಿಗೆ ಏಕೆ ಅವಕಾಶ ನೀಡುತ್ತಿಲ್ಲ

  ಕನ್ನಡ ಸಿನಿಮಾ ಮಾಡಲು ನೀವೇ ತಡ ಮಾಡುತ್ತಿದ್ದೀರಿ ಎನ್ನುವ ಪ್ರಶ್ನೆ ಸಂಯುಕ್ತಗೆ ಬಂತು. ಆಗ ''ನಾನು ಒಂದು ಪ್ರಶ್ನೆ ಕೇಳುತ್ತೇನೆ'' ಎಂದರು ಸಂಯುಕ್ತ. ''ಕನ್ನಡದ ಹುಡುಗಿಯರಿಗೆ ಏಕೆ ಅವಕಾಶ ನೀಡುತ್ತಿಲ್ಲ ಎಂದು ನಟರಿಗೆ, ನಿರ್ದೇಶಕರಿಗೆ ಕೇಳಿ. ನಮ್ಮನ್ನು ಮಾತ್ರ ಕನ್ನಡ ಸಿನಿಮಾ ಮಾಡುವುದಿಲ್ಲ ಎಂದು ಕೇಳಬೇಡಿ'' ಎಂದರು.

  ನಾನು ಎಲ್ಲರಿಗೂ ಇಷ್ಟ ಆಗಲಿಲ್ಲ

  ''ನಾನು 18 ವರ್ಷಕ್ಕೆ ಚಿತ್ರರಂಗಕ್ಕೆ ಬಂದೆ. ಓದು ಮುಗಿಯುವ ಮುನ್ನ ಸಿನಿಮಾಗಳನ್ನು ಶುರು ಮಾಡಿದೆ. ನನ್ನ ವ್ಯಕ್ತಿತ್ವ, ನೇರ ನುಡಿ ಎಲ್ಲರಿಗೂ ಇಷ್ಟ ಆಗಲಿಲ್ಲ. ಎಲ್ಲರಿಗೂ ಎಲ್ಲರೂ ಇಷ್ಟ ಆಗುವುದಿಲ್ಲ. ನಾನು ಈವರೆಗೆ ಆರು ಸಿನಿಮಾ ಮಾಡಿದ್ದೇನೆ ಅದರಲ್ಲಿ ಒಂದೇ ಸಿನಿಮಾದಲ್ಲಿ ಮಾತ್ರ ವಿವಾದ ಆಗಿದೆ.'' ಎಂದರು ಸಂಯುಕ್ತ.

  English summary
  Actress Samyuktha Hegde came back to sandalwood from 'Thurthu Nirgamana' movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X