»   » ಸಮೀರಾಚಾರ್ಯ ಮೇಲೆ ಹಲ್ಲೆ ಮಾಡಿದ ಬಳಿಕ ಸಂಯುಕ್ತಾಗೆ ಈ ಗತಿ ಬಂತು!

ಸಮೀರಾಚಾರ್ಯ ಮೇಲೆ ಹಲ್ಲೆ ಮಾಡಿದ ಬಳಿಕ ಸಂಯುಕ್ತಾಗೆ ಈ ಗತಿ ಬಂತು!

Posted By:
Subscribe to Filmibeat Kannada
ಸಂಯುಕ್ತ ಹೆಗ್ಡೆ ಮಾಡ್ಕೊಂಡಿದ್ದ ಕೆಲ್ಸಕ್ಕೆ ಈ ಗತಿ ಬಂತು | FilmibeatKannada

ಕಿರಿಕ್ ಹುಡುಗಿ ಸಂಯುಕ್ತ ಹೆಗ್ಡೆ ತಮ್ಮ 'ಕಿರಿಕ್ ಪಾರ್ಟಿ' ಸಿನಿಮಾದ ಹೆಸರಿನ ರೀತಿ ಪ್ರತಿ ಬಾರಿ ಕಿರಿಕ್ ಕೆಲಸ ಮಾಡುತ್ತಿದ್ದಾರೆ. ಅದರಲ್ಲಿಯೂ ಇತ್ತೀಚಿಗಷ್ಟೆ 'ಬಿಗ್ ಬಾಸ್' ಮನೆಯಲ್ಲಿ ಸಂಯುಕ್ತ ದೊಡ್ಡ ರಂಪಾಟ ಮಾಡಿದ್ದರು. 'ಬಿಗ್ ಬಾಸ್' ಸ್ಪರ್ಧಿಯಾಗಿದ್ದ ಸಮೀರಾಚಾರ್ಯ ಮೇಲೆ ಹಲ್ಲೆ ಮಾಡಿ ಸಂಯುಕ್ತ ಎಲ್ಲರ ಕೆಂಗಣ್ಣಿಗೆ ಗುರಿ ಆಗಿದ್ದರು.

ಸಮೀರಾಚಾರ್ಯ ಮೇಲೆ ಹಲ್ಲೆ ಮಾಡಿದ ನಂತರ ಸಂಯುಕ್ತ ಹೆಗ್ಡೆ ಅವರನ್ನು 'ಬಿಗ್ ಬಾಸ್' ಕಾರ್ಯಕ್ರಮದದಿಂದ ಆಚೆ ಹಾಕಲಾಯಿತು. ಜೊತೆಗೆ ಆ ಘಟನೆ ನೆಡೆದ ನಂತರ ಸಾಮಾಜಿಕ ಜಾಲತಾಣಗಳಲ್ಲಿಯೂ ಅವರ ವಿರುದ್ಧ ಅನೇಕ ಟ್ರೋಲ್ ಆಗಿತ್ತು. ಇದೆಲ್ಲದರ ನಂತರ ಈಗ ಸಂಯುಕ್ತ ಹೆಗ್ಡೆ ತಾವು ಮಾಡಿದ ಕೆಲಸಕ್ಕೆ ಅವರ ಅಭಿಮಾನಿಗಳಿಂದ ತಕ್ಕ ಗತಿ ಬಂದಿದೆ. ಮುಂದೆ ಓದಿ...

ಸಾಮಾಜಿಕ ಜಾಲತಾಣಗಳಲ್ಲಿ

ಎರಡೇ ಸಿನಿಮಾ ಮಾಡಿದ್ದರು ನಟಿ ಸಂಯುಕ್ತ ಹೆಗ್ಡೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಫಾಲೋವರ್ಸ್ ಹೊಂದಿದ್ದರು. ಆದರೆ ಸಮೀರಾಚಾರ್ಯ ಮೇಲೆ ಹಲ್ಲೆ ಮಾಡಿದ ನಂತರ ಅವರ ಫಾಲೋವರ್ಸ್ ಸಂಖ್ಯೆ ತುಂಬ ಕಡಿಮೆ ಆಗಿದೆ.

ಬಿಗ್ ಬಾಸ್ ಮನೆಯಿಂದ ಬಂದ ನಂತರ ಊರು ಬಿಟ್ಟ ಸಂಯುಕ್ತ ಹೆಗಡೆ

ಫಾಲೋವರ್ಸ್ ಸಂಖ್ಯೆ ಕುಸಿತ

ಸಂಯುಕ್ತ ಹೆಗ್ಡೆ ಅವರ ಇನ್ಟಾಗ್ರಾಮ್ ಖಾತೆಯಲ್ಲಿ ಈ ಹಿಂದೆ 615000 ಜನ ಫಾಲೋವರ್ಸ್ ಇದ್ದರು. ಆದರೆ 'ಬಿಗ್ ಬಾಸ್' ಘಟನೆ ನಡೆದ ನಂತರ ಅದರಲ್ಲಿ 4 ಸಾವಿರ ಫಾಲೋವರ್ಸ್ ಕಡಿಮೆ ಆಗಿದ್ದಾರೆ.

ಕಮೆಂಟ್ ಮಾಡುವ ಹಾಗೆ ಇಲ್ಲ

ಇದರ ಜೊತೆಗೆ ಸಂಯುಕ್ತ ಅವರ ಇನ್ಟಾಗ್ರಾಮ್ ಖಾತೆಯಲ್ಲಿ ಅನೇಕರು ಕಮೆಂಟ್ ಮಾಡಿ 'ಬಿಗ್ ಬಾಸ್'ನಲ್ಲಿ ನಡೆದ ಘಟನೆ ಬಗ್ಗೆ ತರಾಟೆ ತಗೆದುಕೊಳ್ಳುತ್ತಿದ್ದರು ಅದಕ್ಕೆ ಅವರು ಯಾರು ಅವರ ಪೋಸ್ಟ್ ಗೆ ಕಮೆಂಟ್ ಮಾಡದ ರೀತಿ ಬ್ಲಾಕ್ ಮಾಡಿದ್ದಾರೆ.

'ಸರಿಯಾಗಿ ವಾಂಚುತ್ತೇನೆ' ಎಂದು ಮೊದಲೇ ವಾರ್ನಿಂಗ್ ಕೊಟ್ಟಿದ್ದ ಸಂಯುಕ್ತ.!

ಶ್ರೀ ಲಂಕಾಕ್ಕೆ ಹೋಗಿದ್ದರು

ಈ ವಿವಾದ ಆದ ಬಳಿಕ ನಟಿ ಸಂಯುಕ್ತ ಪ್ರವಾಸಕ್ಕಾಗಿ ಶ್ರೀಲಂಕಾಗೆ ಹೋಗಿದ್ದು, ಈ ಮೂಲಕ ಒಂದಿಷ್ಟು ದಿನ ವಿವಾದಗಳಿಂದ ದೂರ ಉಳಿದುಕೊಳ್ಳುವ ಯೋಚನೆ ಮಾಡಿದ್ದಾರೆ.

ತೆಲುಗು 'ಕಿರಿಕ್ ಪಾರ್ಟಿ'

ಸಂಯುಕ್ತ ಸದ್ಯ ತೆಲುಗು 'ಕಿರಿಕ್ ಪಾರ್ಟಿ' ಚಿತ್ರದಲ್ಲಿಯೂ ನಟಿಸುತ್ತಿದ್ದಾರೆ. ಈ ಚಿತ್ರ ಚಿತ್ರೀಕರಣ ಸದ್ಯ ಹೈದರಾಬಾದ್ ನಲ್ಲಿ ನಡೆಯುತ್ತಿದೆ.

English summary
After Bigg Boss Kannada controversy actress Samyuktha Hegde's instagram followers has decreased.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X