»   » ''ನನ್ನನ್ನು ತುಳಿಯುತ್ತಿದ್ದಾರೆ'' ಎಂದು ಕಣ್ಣೀರಿಟ್ಟ ಸಂಯುಕ್ತ ಹೆಗ್ಡೆ !

''ನನ್ನನ್ನು ತುಳಿಯುತ್ತಿದ್ದಾರೆ'' ಎಂದು ಕಣ್ಣೀರಿಟ್ಟ ಸಂಯುಕ್ತ ಹೆಗ್ಡೆ !

Posted By:
Subscribe to Filmibeat Kannada
''ನನ್ನನ್ನು ತುಳಿಯುತ್ತಿದ್ದಾರೆ'' ಎಂದು ಕಣ್ಣೀರಿಟ್ಟ ಸಂಯುಕ್ತ ಹೆಗ್ಡೆ ! | Filmibeat Kannada

ನಟಿ ಸಂಯುಕ್ತ ಹೆಗಡೆ ವಿರುದ್ಧ ನಿರ್ಮಾಪಕ ಪದ್ಮನಾಭ್ ಫಿಲ್ಮ್ ಚೆಂಬರ್ ನಲ್ಲಿ ದೂರು ನೀಡುವ ನಿರ್ಧಾರ ಮಾಡಿದ್ದರು. 'ಕಾಲೇಜ್ ಕುಮಾರ್' ಸಿನಿಮಾದ ಪ್ರಚಾರಕ್ಕೆ ಬರಲಿಲ್ಲ ಎನ್ನುವ ಕಾರಣ ನಿರ್ಮಾಪಕರು ಕೋಪಗೊಂಡಿದ್ದರು. ಇದರ ಹಿಂದೆ ಈ ವಿವಾದ ಬಗ್ಗೆ ಈಗ ಸ್ವತಃ ಸಂಯುಕ್ತ ಹೆಗ್ಡೆ ಪ್ರತಿಕ್ರಿಯೆ ನೀಡಿದ್ದಾರೆ.

ಅನ್ನ ಹಾಕಿದ ನಿರ್ಮಾಪಕರಿಗೆ ದ್ರೋಹ ಬಗೆದ ಸಂಯುಕ್ತ ವಿರುದ್ಧ ದೂರು ದಾಖಲು.!

''ಈ ಹಿಂದೆಯೇ ಕೂಡ ಇದೇ ರೀತಿ ಮಾಡಿದ್ದರು. ಚಿತ್ರದ ರಿಲೀಸ್ ಮುಂಚೆ ನಾನು ಪ್ರಮೋಷನ್ ಗಳಿಗೆ ಹೋಗಿದ್ದೇನೆ. ಸಿನಿಮಾ ಗೆದ್ದಿದೆ. ಈ ರೀತಿಯ ಪ್ರಚಾರದ ಅವಶ್ಯಕತೆ ಇಲ್ಲ. ನನ್ನನ್ನು ಚಿತ್ರರಂಗದಲ್ಲಿ ತುಳಿಯುವುದಕ್ಕೆ ಪ್ರಯತ್ನ ಮಾಡುತ್ತಿದ್ದಾರೆ. ನಾನು ಏನು ತಪ್ಪು ಮಾಡಿದ್ದೇನೆ. ನಿರ್ಮಾಪಕರಿಗೆ ಸಮಸ್ಯೆ ಆದಾಗ ಎಲ್ಲರೂ ಬರುತ್ತಾರೆ. ಕಲಾವಿದರಿಗೆ ತೊಂದರೆ ಆದರೆ ಯಾಕೆ ಯಾರು ಬರುವುದಿಲ್ಲ.'' ಎಂದು ತಮ್ಮ ಗೋಳು ಹೇಳಿಕೊಂಡು ಸಂಯುಕ್ತ ಹೆಗ್ಡೆ ಕಣ್ಣೀರು ಹಾಕಿದ್ದಾರೆ.

Samyuktha Hegde Spoke about 'College Kumar' controversy

ಇನ್ನು 'ಕಾಲೇಜ್ ಕುಮಾರ್' ಸಿನಿಮಾಗೆ ಎಲ್ಲ ಕಡೆಯಿಂದ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದ್ದು 50ನೇ ದಿನದತ್ತ ಮುನ್ನುಗುತ್ತಿದೆ. ಚಿತ್ರಕ್ಕೆ ಸಂತು ನಿರ್ದೇಶನ ಮಾಡಿದ್ದಾರೆ. ವಿಕ್ಕಿ ಚಿತ್ರದ ನಾಯಕನಾಗಿದ್ದು, ರವಿಶಂಕರ್ ತಂದೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

English summary
Actress Samyuktha Hegde Spoke about 'College Kumar' controversy. 'ಕಾಲೇಜ್ ಕುಮಾರ್' ಚಿತ್ರದ ವಿವಾದದ ಬಗ್ಗೆ ಸಂಯುಕ್ತ ಮಾತನಾಡಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada