For Quick Alerts
  ALLOW NOTIFICATIONS  
  For Daily Alerts

  'ಕಿರಿಕ್ ಪಾರ್ಟಿ' ಚೆಲುವೆ ಸಂಯುಕ್ತಾ ಹೆಗ್ಡೆಗೆ ಕೊರೊನಾ ಪಾಸಿಟಿವ್

  |

  ಕನ್ನಡ ನಟಿ ಸಂಯುಕ್ತಾ ಹೆಗ್ಡೆಗೆ ಕೊರೊನಾ ಸೋಂಕು ತಗುಲಿದೆ. ಈ ಕುರಿತು ಬುಧವಾರ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ನಟಿ ಮಾಹಿತಿ ಹಂಚಿಕೊಂಡಿದ್ದಾರೆ. ಸದ್ಯ ಮನೆಯಲ್ಲಿಯೇ ಕ್ವಾರಂಟೈನ್ ಆಗಿದ್ದು, ವೈದ್ಯರ ಸಲಹೆಯಂತೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದೇನೆ ಎಂದು ಸಂಯುಕ್ತಾ ಹೆಗ್ಡೆ ಪೋಸ್ಟ್ ಹಾಕಿದ್ದಾರೆ.

  ಕೊರೊನ ಪಾಸಿಟಿವ್ ವಿಚಾರವನ್ನ instagramನಲ್ಲಿ ಹಂಚಿಕೊಂಡ Samyuktha Hegde!!

  ಕಳೆದ ತಿಂಗಳು ತನ್ನ ಪೋಷಕರಿಗೆ ಕೋವಿಡ್ ಸೋಂಕು ತಗುಲಿತ್ತು. ಬಳಿಕ, ಗುಣಮುಖರಾಗಿದ್ದರು. ನನಗೆ ಈಗ ಸೋಂಕು ಅಂಟಿಕೊಂಡಿದೆ ಎಂದು ಸಂಯುಕ್ತಾ ತಿಳಿಸಿದರು.

  ಲಿಪ್ ಲಾಕ್ ದೃಶ್ಯದಲ್ಲಿ ಕಿರಿಕ್ ಸುಂದರಿ: ಸಂಯುಕ್ತಾ 'ಪಪ್ಪಿ' ಸೀನ್ ವೈರಲ್ಲಿಪ್ ಲಾಕ್ ದೃಶ್ಯದಲ್ಲಿ ಕಿರಿಕ್ ಸುಂದರಿ: ಸಂಯುಕ್ತಾ 'ಪಪ್ಪಿ' ಸೀನ್ ವೈರಲ್

  ''ಎಲ್ಲರಿಗೂ ಹಾಯ್,,,ಎಲ್ಲರೂ ಆರಾಮಗಿದ್ದೀರಾ ಎಂದು ಭಾವಿಸುತ್ತೇನೆ. ಇಂದು ನನಗೆ ಕೊರೊನಾ ವೈರಸ್ ಪಾಸಿಟಿವ್ ಬಂದಿದೆ. ವೈದ್ಯರ ಸಲಹೆಯಂತೆ ಕ್ವಾರಂಟೈನ್ ಆಗಿದ್ದೇನೆ. ನೀವು ಸುರಕ್ಷಿತೆಯಿಂದಿರಿ. ನನ್ನ ಪೋಷಕರಿಗೆ ಕೋವಿಡ್ ತಗುಲಿತ್ತು. ಈಗ ಅವರು ಸಂಪೂರ್ಣವಾಗಿ ಚೇತರಿಕೆ ಕಂಡಿದ್ದಾರೆ.

  ಇನ್ನು ಬಿಬಿಎಂಪಿ ಸಿಬ್ಬಂದಿಯ ಕೆಲಸದ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಮೊದಲು ಅಂದ್ರೆ 25 ದಿನಗಳ ಹಿಂದೆ ನಮ್ಮ ಪೋಷಕರು ಕೊರೊನಾ ಪರೀಕ್ಷೆ ಮಾಡಿದಾಗ, ವರದಿ ಬಂದ 11 ದಿನದ ನಂತರ ಫೋನ್ ಮಾಡಿದ್ದರು. ಆದ್ರೀಗ, ನನ್ನ ವರದಿ ಬಂದ ಒಂದು ಗಂಟೆಯಷ್ಟರಲ್ಲಿ ಫೋನ್ ಮಾಡಿ ವಿಚಾರಿಸಿದರು' ಎಂದು ಬರೆದುಕೊಂಡಿದ್ದಾರೆ.

  ಕನ್ನಡ ಹಾಗೂ ತಮಿಳಿನ ಚಿತ್ರಗಳಲ್ಲಿ ನಟಿಸುತ್ತಿರುವ ಸಂಯುಕ್ತಾ, ಕೊನೆಯದಾಗಿ 2019ರಲ್ಲಿ ತೆರೆಕಂಡ 'ಪಪ್ಪಿ' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಕನ್ನಡದಲ್ಲಿ 'ತುರ್ತು ನಿರ್ಗಮನ' ಸಿನಿಮಾದಲ್ಲಿ ನಟಿಸಿದ್ದು, ಬಿಡುಗಡೆಯಾಗಬೇಕಿದೆ.

  English summary
  Kannada Actress Samyuktha Hegde Test Positive For Covid19 on May 19th,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X