For Quick Alerts
  ALLOW NOTIFICATIONS  
  For Daily Alerts

  6 ನೇ ಮೈಲಿ ಟ್ರೇಲರ್ ರಿಲೀಸ್ ಮಾಡಲಿರುವ ಶಿವಣ್ಣ

  By Pavithra
  |

  ಕನ್ನಡ ಸಿನಿಮಾರಂಗದಲ್ಲಿ ಪ್ರಯೋಗಾತ್ಮಕ ಸಿನಿಮಾಗಳು ಹೆಚ್ಚೆಚ್ಚು ಬರುತ್ತಿವೆ. ಅದೇ ಹಳೇ ಮಾದರಿಯಲ್ಲಿ ಸಿನಿಮಾ ಕೊಟ್ಟರೆ ಯಾರು ನೋಡುವುದಿಲ್ಲ ಎನ್ನುವುದನ್ನ ತಿಳಿದಿರುವ ನಿರ್ದೇಶಕರು ಹೊಸ ರೀತಿ ಚಿತ್ರಗಳಿಗೆ ಆಕ್ಷನ್ ಕಟ್ ಹೇಳಲು ಮುಂದಾಗಿದ್ದಾರೆ. '6 ನೇ ಮೈಲಿ'..ಸತ್ಯ ಘಟನೆಯನ್ನು ಆಧಾರವಾಗಿಟ್ಟುಕೊಂಡು ತೆರೆ ಮೇಲೆ ಬರಲು ಸಿದ್ದವಾಗಿರುವ ಸಿನಿಮಾ.

  ಈಗಾಗಲೇ ಟೀಸರ್ ಮತ್ತು ಪೋಸ್ಟರ್ ಗಳಿಂದಲೇ ಕುತೂಹಲ ಹುಟ್ಟಿಹಾಕಿರುವ 6 ನೇ ಮೈಲಿ ಚಿತ್ರದ ಟ್ರೇಲರ್ ಇಂದು ಸಂಜೆ (ಜೂನ್ 30) ಬಿಡುಗಡೆ ಆಗುತ್ತಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಟ್ರೇಲರ್ ರಿಲೀಸ್ ಮಾಡಲಿದ್ದಾರೆ.

  'ಡೆತ್ ಮೆಟಲ್ ಪ್ಯಾಟ್ರನ್'ನ ಮೊದಲ ಬಾರಿಗೆ ಕನ್ನಡಕ್ಕೆ ತಂದ ಚಿತ್ರ '6ನೇ ಮೈಲಿ' 'ಡೆತ್ ಮೆಟಲ್ ಪ್ಯಾಟ್ರನ್'ನ ಮೊದಲ ಬಾರಿಗೆ ಕನ್ನಡಕ್ಕೆ ತಂದ ಚಿತ್ರ '6ನೇ ಮೈಲಿ'

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಪಿ ಆರ್ ಕೆ ಆಡಿಯೋ ಕಂಪನಿಯಲ್ಲಿ ಟ್ರೇಲರ್ ರಿಲೀಸ್ ಆಗಲಿದೆ. '6 ನೇ ಮೈಲಿ' ಸಸ್ಪೆನ್ಸ್-ಥ್ರಿಲ್ಲರ್ ಕಥಾಹಂದರ ಹೊಂದಿದ್ದು ಸೀನಿ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಡಾ ಶೈಲೇಶ್ ಕುಮಾರ್ ಸಿನಿಮಾನ್ನು ನಿರ್ಮಾಣ ಮಾಡಿದ್ದಾರೆ.

  ಆರ್ ಜೆ ನೇತ್ರಾ, ಸಂಚಾರಿ ವಿಜಯ್ , ಹೇಮಂತ್ ಕುಮಾರ್ ಹಾಗೂ ಜಾನ್ಹವಿ ಜ್ಯೋತಿ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಇಷ್ಟೆಲ್ಲಾ ವಿಶೇಷತೆಗಳ ಹೊಂದಿರುವ '6 ನೇ ಮೈಲಿ' ಸಿನಿಮಾ ಜುಲೈ 6 ರಂದು ರಾಜ್ಯಾದ್ಯಂತ ಬಿಡುಗಡೆ ಆಗಲಿದೆ.

  English summary
  Kannada actor Sanchari Vijay acted 6ne mili movie trailer will be released today. Shivaraj Kumar will release the trailer.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X