For Quick Alerts
  ALLOW NOTIFICATIONS  
  For Daily Alerts

  ನಟಿ ವಿಜಯಲಕ್ಷ್ಮಿ ಕಷ್ಟಕ್ಕೆ ಮಿಡಿದ ಕಾರುಣ್ಯ, ಸಂಚಾರಿ ವಿಜಯ್

  |

  ಆರ್ಥಿಕ ಸಂಕಷ್ಟದಿಂದ ನೋವು ಅನುಭವಿಸುತ್ತಿರುವ ಹಿರಿಯ ನಟಿ ವಿಜಯಲಕ್ಷ್ಮಿ ಅವರಿಗೆ ಬಿಗ್ ಬಾಸ್ ಖ್ಯಾತಿಯ ಕಾರುಣ್ಯ ರಾಮ್ ಮತ್ತು ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಸಹಾಯ ಹಸ್ತ ಚಾಚಿದ್ದಾರೆ.

  ಅನಾರೋಗ್ಯದಿಂದ ಮಲ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿಜಯಲಕ್ಷ್ಮಿ ಅವರನ್ನ ಭೇಟಿ ಮಾಡಿದ್ದ ಕಾರುಣ್ಯ ರಾಮ್ 25 ಸಾವಿರ ದುಡ್ಡು ನೀಡಿ ಸಾಂತ್ವನ ಹೇಳಿದ್ದಾರೆ.

  ದರ್ಶನ್, ಶಿವಣ್ಣ, ಯಶ್ ಯಾಕೆ ಈ ನಿರ್ಲಕ್ಷ್ಯ? ಕಣ್ಣೀರಿಟ್ಟು ಅಂಗಲಾಚಿದ ವಿಜಯಲಕ್ಷ್ಮಿ ದರ್ಶನ್, ಶಿವಣ್ಣ, ಯಶ್ ಯಾಕೆ ಈ ನಿರ್ಲಕ್ಷ್ಯ? ಕಣ್ಣೀರಿಟ್ಟು ಅಂಗಲಾಚಿದ ವಿಜಯಲಕ್ಷ್ಮಿ

  ಇನ್ನು ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಅವರು ಕೂಡ ವಿಜಯಲಕ್ಷ್ಮಿ ಅವರ ಆರೋಗ್ಯ ವಿಚಾರಿಸಿ 30 ಸಾವಿರ ಹಣ ನೀಡಿ ಸಹಾಯ ಮಾಡಿದ್ದಾರೆ. ಖುದ್ದು ವಿಜಯಲಕ್ಷ್ಮಿ ಅವರೇ ಈ ಬಗ್ಗೆ ಮಾಹಿತಿ ನೀಡಿದ್ದು, ಅವರಿಗೆ ಧನ್ಯವಾದ ತಿಳಿಸಿದ್ದಾರೆ.

  ಕಷ್ಟದಲ್ಲಿರುವ ನಟಿ ವಿಜಯಲಕ್ಷ್ಮಿಗೆ ನೆರವು ನೀಡಿದ ಕಿಚ್ಚ ಸುದೀಪ್ಕಷ್ಟದಲ್ಲಿರುವ ನಟಿ ವಿಜಯಲಕ್ಷ್ಮಿಗೆ ನೆರವು ನೀಡಿದ ಕಿಚ್ಚ ಸುದೀಪ್

  ಸದ್ಯ ವಿಜಯಲಕ್ಷ್ಮಿ ಅವರು ಮಲ್ಯ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎನ್ನಲಾಗಿದೆ. ಆಸ್ಪತ್ರೆಯ ವೈದ್ಯರೇ ಒತ್ತಡ ಹೇರಿ ಡಿಸ್ಚಾರ್ಜ್ ಮಾಡಿದ್ದಾರೆ ಎಂದು ನಟಿ ವಿಜಯಲಕ್ಷ್ಮಿ ಆರೋಪಿಸಿದ್ದಾರೆ.

  ನಟಿ ವಿಜಯಲಕ್ಷ್ಮಿಗೆ ಸಹಾಯ ಮಾಡಲು ಮುಂದಾದ ಫಿಲ್ಮ್ ಚೇಂಬರ್ ನಟಿ ವಿಜಯಲಕ್ಷ್ಮಿಗೆ ಸಹಾಯ ಮಾಡಲು ಮುಂದಾದ ಫಿಲ್ಮ್ ಚೇಂಬರ್

  ಈ ಹಿಂದೆ ಕಿಚ್ಚ ಸುದೀಪ್ ಅವರು ವಿಜಯಲಕ್ಷ್ಮಿ ಅವರ ಚಿಕಿತ್ಸೆಗೆ 1 ಲಕ್ಷ ಹಣ ನೀಡಿ ನೆರವಾಗಿದ್ದಾರೆ. ಇನ್ನು ಕನ್ನಡ, ತೆಲುಗು, ತಮಿಳು ಚಿತ್ರಗಳಲ್ಲಿ ನಟಿಸಿರುವ ವಿಜಯಲಕ್ಷ್ಮಿ ಸ್ವಸ್ತಿಕ್, ನಾಗಮಂಡಲ, ಸೂರ್ಯವಂಶ, ಹಬ್ಬ, ಜೋಡಿ ಹಕ್ಕಿ ಅಂತಹ ಚಿತ್ರಗಳಲ್ಲಿ ನಟಿಸಿದ್ದಾರೆ.

  English summary
  National award winner actor sanchari vijay and karunya ram helps to senior actress vijayalakshmi. vijayalakshmi was suffering from blood pressure.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X