twitter
    For Quick Alerts
    ALLOW NOTIFICATIONS  
    For Daily Alerts

    ರೈತ ನಾಯಕನ ಪಾತ್ರಕ್ಕೆ ಜೀವ ತುಂಬುವ ಮುಂಚೆ ಜೀವ ಬಿಟ್ಟ ಸಂಚಾರಿ ವಿಜಯ್

    |

    ಸಂಚಾರಿ ವಿಜಯ್ ನಿಧನರಾದ ದಿನ 'ಲೂಸಿಯಾ' ಸಿನಿಮಾ ನಿರ್ದೇಶಕ ಪವನ್ ಕುಮಾರ್ ಫೇಸ್‌ಬುಕ್ ಪೋಸ್ಟ್ ಒಂದನ್ನು ಹಾಕಿದ್ದರು, ''ನಿನ್ನ ಮೂಲಕ ಜೀವ ತಳೆಯಲು ಕಾಯುತ್ತಿದ್ದ ಹಲವು ಪಾತ್ರಗಳು ನಿನ್ನ ನಿರ್ಗಮನದಿಂದ ಮತ್ತೆ ನಿಧನ ಹೊಂದಿವೆ'' ಎಂದು. ಈ ಮಾತು ನೂರಕ್ಕೆ ನೂರು ನಿಜ ಎನಿಸುತ್ತಿದೆ.

    ಸಂಚಾರಿ ವಿಜಯ್ ಮಾಡಬೇಕಿದ್ದ ಪಾತ್ರಗಳು ಹಲವಾರಿದ್ದವು. ಹಲವು ಪಾತ್ರಗಳು ಅವರಿಗಾಗಿಯೇ ಕಾಯುತ್ತಿದ್ದವು. ಆದರೆ ಅವುಗಳನ್ನೆಲ್ಲ ತಮ್ಮ ನಟನೆ ಮೂಲಕ ಜೀವಂತ ಮಾಡುವ ಮುನ್ನವೇ ಸಂಚಾರಿ ವಿಜಯ್ ಹೋಗಿಬಿಟ್ಟಿದ್ದಾರೆ. ಅವುಗಳಲ್ಲಿ ಒಂದು ರೈತ ನಾಯಕ ಪ್ರೋ.ನಂಜುಂಡಸ್ವಾಮಿ ಅವರದ್ದು.

    ಕರ್ನಾಟಕ ಕಂಡ ಧೀಮಂತ ರೈತ ನಾಯಕ ಪ್ರೊಫೆಸರ್ ಎಂ.ಡಿ.ನಂಜುಂಡಸ್ವಾಮಿ ಅವರ ಜೀವನವನ್ನು ಸಿನಿಮಾ ಮಾಡಲು ನಂಜುಂಡಸ್ವಾಮಿ ಪುತ್ರ ಪಚ್ಚೆ ನಂಜುಂಡಸ್ವಾಮಿ ಬಯಸಿದ್ದರು. ನಂಜುಂಡಸ್ವಾಮಿ ಅವರ ಪಾತ್ರಕ್ಕೆ ಸಂಚಾರಿ ವಿಜಯ್ ಅವರೇ ಸೂಕ್ತ ಎಂದು ನಿರ್ಣಯಿಸಿ ಅವರೊಟ್ಟಿಗೆ ಮಾತುಕತೆ ಸಹ ಮಾಡಿದ್ದರು. ಅವರಿಬ್ಬರ ಮಾತುಕತೆಯ ಸ್ಕ್ರೀನ್‌ಶಾಟ್‌ಗಳನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ ಪಚ್ಚೆ ನಂಜುಂಡಸ್ವಾಮಿ.

    ನಂಜುಂಡಸ್ವಾಮಿ ಜೀವನ ಕುರಿತ ಸಿನಿಮಾವನ್ನು ಸಂಚಾರಿ ವಿಜಯ್ ಆತ್ಮೀಯ ಸ್ನೇಹಿತ ಮಂಸೋರೆ ನಿರ್ದೇಶನ ಮಾಡುವವರಿದ್ದರು. ಈ ಬಗ್ಗೆ ಮಂಸೋರೆಯೇ ಪಚ್ಚೆ ಬಳಿ ಹೇಳಿದ್ದರು. ನಂಜುಂಡಸ್ವಾಮಿ ಅವರ ಪಾತ್ರಕ್ಕೆ ವಿಜಯ್ ಅವರನ್ನು ಸೂಚಿಸಿದ್ದಿದ್ದು ಸಹ ಅವರೇ. ಈ ಬಗ್ಗೆ ವಿವರವಾದ ಪೋಸ್ಟ್ ಅನ್ನು ಪಚ್ಚೆ ನಂಜುಂಡಸ್ವಾಮಿ ಹಂಚಿಕೊಂಡಿದ್ದಾರೆ.

    ಫ್ರೊಫೆಸರ್ ನಂಜುಂಡಸ್ವಾಮಿ ಅವರ ಜೀವನ ಆಧಾರಿತ ಸಿನಿಮಾ

    ಫ್ರೊಫೆಸರ್ ನಂಜುಂಡಸ್ವಾಮಿ ಅವರ ಜೀವನ ಆಧಾರಿತ ಸಿನಿಮಾ

    "ನಾತಿಚರಾಮಿ"ಯ ಎಡಿಟಿಂಗ್ ನಡೆಯುತ್ತಿದ್ದ ಸಂದರ್ಭ ದಲ್ಲಿ ಪ್ರೊಫೆಸರ್ ಎಂ.ಡಿ.ನಂಜುಂಡಸ್ವಾಮಿಯವರ ಒಂದು ವಿಡಿಯೋ ಗೆ ನಿರ್ದೇಶಕ ಮನ್ಸೋರೆ ರವರು "ಪ್ರೊಫೆಸರ್ ಬಯೋಪಿಕ್" ಮಾಡುವ ಆಸೆಯಿದೆ ಎಂದು ಕಾಮೆಂಟ್ ಮಾಡಿದ್ದರು. ಸ್ವಲ್ಪ ದಿನಗಳ ನಂತರ ಅವರನ್ನು ಮನೆಗೆ ಆಹ್ವಾನಿಸಿದೆ. ಅಪ್ಪನಿಗೆ ಸಂಬಂಧಪಟ್ಟ ಪುಸ್ತಕಗಳನ್ನು ಅವರಿಗೆ ಕೊಟ್ಟೆ'' ಎಂದು ಬರೆದುಕೊಂಡಿದ್ದಾರೆ ಪಚ್ಚೆ ನಂಜುಂಡಸ್ವಾಮಿ.

    ಫ್ರೊಫೆಸರ್ ಪಾತ್ರಕ್ಕೆ ವಿಜಯ್ ಸೂಕ್ತ ಎಂದಿದ್ದ ಮಂಸೋರೆ

    ಫ್ರೊಫೆಸರ್ ಪಾತ್ರಕ್ಕೆ ವಿಜಯ್ ಸೂಕ್ತ ಎಂದಿದ್ದ ಮಂಸೋರೆ

    ''ಪ್ರೊಫೆಸರ್ ಬದುಕು ಬಹಳ ದೊಡ್ಡ ಕ್ಯಾನ್ವಾಸ್.60,70,80,90 ರ ದಶಕವನ್ನು ಕಟ್ಟಿಕೊಡಬೇಕು ಎಂದರೆ ದುಬಾರಿ ವೆಚ್ಚ ತಗಲುತ್ತದೆ.ಆದರೆ ಖಂಡಿತವಾಗಿಯೂ ಪ್ರೊಫೆಸರ್ ಬಯೋ ಪಿಕ್ ಆಗೇ ಆಗುತ್ತದೆ ಎಂದರು ಮನ್ಸೋರೆ. ಪ್ರೊಫೆಸರ್ ಪಾತ್ರ ಯಾರು ಮಾಡಬಲ್ಲರು? ಎಂಬ ಪ್ರಶ್ನೆ ಬಂತು. ಕಿಂಚಿತ್ತೂ ಯೋಚಿಸದೆ ಸಂಚಾರಿ ವಿಜಯ್ ರವರ ಹೆಸರು ಹೇಳಿದರು ಮನ್ಸೋರೆರವರು.ಅಯ್ಯೋ "ಅದ್ಭುತವಾದ ಕಲಾವಿದ ಸರ್" ನಾನೇ ನಿರ್ದೇಶನ ಮಾಡಿರುವ "ಹರಿವು"ಎಂಬ ಚಿತ್ರ ಇದೆ ನೋಡಿ ಎಂದರು.ಆ ಚಿತ್ರದ ಕೆಲವು ಸೀನ್ ಗಳಲ್ಲಿ ವಿಜಯ್ ರವರು ಜೀವ ತುಂಬಿದ್ದನ್ನು ನಾನು ನೋಡಿದೆ'' ಎಂದಿದ್ದಾರೆ ನಂಜುಂಡಸ್ವಾಮಿ ಪುತ್ರ.

    ಫ್ರೊಫೆಸರ್ ಸ್ಮಾರಕದ ಬಳಿಯೇ ಚಿತ್ರೀಕರಣ

    ಫ್ರೊಫೆಸರ್ ಸ್ಮಾರಕದ ಬಳಿಯೇ ಚಿತ್ರೀಕರಣ

    ''ಕಾಕತಾಳಿಯವೋ ಏನೋ, ವಿಜಯ್ ಅಮೋಘವಾಗಿ ನಟಿಸಿರುವ "ತಲೆದಂಡ"ಚಿತ್ರ ಪ್ರೊಫೆಸರ್ ಸ್ಮಾರಕದ ಬಳಿಯೇ ಚಿತ್ರೀಕರಣ ವಾಯ್ತು. ಪ್ರೊಫೆಸರ್ ಸ್ಮಾರಕದ ಎದುರು ಇರುವ ಗೆಸ್ಟ್ ಹೌಸ್ ನಲ್ಲೇ ವಿಜಯ್ ರವರು, ಖ್ಯಾತ ಛಾಯಾಗ್ರಾಹಕ ಅಶೋಕ್ ಕಶ್ಯಪ್ ಸರ್ ದಂಪತಿಗಳು, ಮಂಗಳಾ ರವರು, ಪಂಡಿತ್ ರವರು, ಹಾಗೂ ಚಿತ್ರದ ನಿರ್ದೇಶಕ ಹಾಗೂ ನಿರ್ಮಾಪಕ ಪ್ರವೀಣ್ ಕೃಪಾಕರ್ ರವರು ಹಾಗೂ ಇತರೆ ಕಲಾವಿದರುಗಳು ಸುಮಾರು ದಿನಗಳು ಅಲ್ಲೇ ನೆಲೆಸಿದ್ದರು'' ಎಂದಿದ್ದಾರೆ ಪಚ್ಚೆ ನಂಜುಂಡಸ್ವಾಮಿ.

    ''ತಲೆದಂಡ' ಸಿನಿಮಾದಲ್ಲಿ ಅದೆಷ್ಟು ಅದ್ಭುತವಾಗಿ ನಟಿಸಿದ್ದಾರೆ''

    ''ತಲೆದಂಡ' ಸಿನಿಮಾದಲ್ಲಿ ಅದೆಷ್ಟು ಅದ್ಭುತವಾಗಿ ನಟಿಸಿದ್ದಾರೆ''

    ''ಪರಿಸರ ಸಂರಕ್ಷಣೆಗೆ ಸಂಬಂಧಪಟ್ಟ ಆ ಸಿನಿಮಾದಲ್ಲಿ ವಿಜಯ್ ರವರದ್ದು ಮರವನ್ನು ಕಡಿಯುವಾಗ ಅದನ್ನು ರಕ್ಷಿಸುವ ಮುಗ್ಧ ಹುಡುಗನ ಪಾತ್ರ. ಅಬ್ಬಾ ಅದೆಷ್ಟು ಚೆನ್ನಾಗಿ ಅಭಿನಯಿಸುತ್ತಿದ್ದರು ಗೊತ್ತಾ. ಹಿರಿಯ ನಟರಾದ ಪಂಡಿತ್ ರವರು ವಿಜಯ್ ತಂದೆಯ ಪಾತ್ರಧಾರಿ. ಪಂಡಿತ್ ರವರ ಮಡದಿ ಪಾತ್ರಧಾರಿ ಮಂಗಳಾವರು ಹಾಗೂ ಮಗನ ಉಪಸ್ಥಿತಿಯಲ್ಲಿ ಪಂಡಿತ್ ರವರು ಪ್ರಾಣ ಬಿಡುವ ಒಂದು ದೃಶ್ಯ. ರಿಹರ್ಸಲ್ ಸಂದರ್ಭದಲ್ಲಿ,"ಅಪ್ಪೋ,ಅದೆಷ್ಟು ಸರ್ತಿ ಕೆಮ್ತೀಯ? ರಜನೀಕಾಂತ್ ಥರಾ ಒಂದೇ ಸರ್ತಿ ಕೆಂಬಿಡಪ್ಪೋ"ಎಂದು ಸ್ಕ್ರಿಪ್ಟ್ ನಿಂದಾಚೆ ಹೇಳಿ, ವಿಜಯ್ ಇಡೀ ಸೆಟ್ಟನ್ನು ನಗೆಗಡಲಲ್ಲಿ ತೇಲಿಸಿದ್ದರು. ಒಟ್ಟಿಗೆ ಊಟ ಮಾಡಿದೆವು. ನಕ್ಕಿದೆವು, ನಲಿದೆವು'' ಎಂದು ಘಟನೆಯನ್ನು ನೆನಪು ಮಾಡಿಕೊಂಡಿದ್ದಾರೆ.

    Recommended Video

    ಪ್ರಶಾಂತ್ ಸಂಬರಗಿ ಯಾರು ಅನ್ನೋದೇ ಗೊತ್ತಿಲ್ಲ ಅವರ ಪರಿಚಯವೇ ಇಲ್ಲ ಎಂದ ರಾಗಿಣಿ | Filmibeat Kannada
    ಛೇ ಎಂಥಹಾ ನಿರಾಸೆ: ಪಚ್ಚೆ ನಂಜುಂಡಸ್ವಾಮಿ

    ಛೇ ಎಂಥಹಾ ನಿರಾಸೆ: ಪಚ್ಚೆ ನಂಜುಂಡಸ್ವಾಮಿ

    ''ನಂತರ Act 1978 ಸಿನೆಮಾದ ಪ್ರೀಮಿಯರ್ ನಲ್ಲಿ ವಿಜಯ್ ಸಿಕ್ಕರು. ನನ್ನನ್ನು ತಬ್ಬಿ ಬಹಳ ಪ್ರೀತಿಯಿಂದ ಮಾತನ್ನಾಡಿಸಿದ್ದರು.ಇತ್ತೀಚೆಗೆ ಮೇ 3 ರಂದು ಪ್ರೊಫೆಸರ್ ಬಯೋಪಿಕ್ ಬಗ್ಗೆ ಮತ್ತೆ ವಿಜಯ್ ಮತ್ತು ಮನ್ಸೋರೆ ರವರಿಬ್ಬರ ಬಳಿ ಚರ್ಚಿಸಿದ್ದೆ. ವಿಜಯ್ ತುಂಬಾ ಖುಷಿಪಟ್ಟರು. ಮಂಸೋರೆ ಸರ್ ಬಳಿ ಮತ್ತೆ ಮಾತನಾಡಿ ಎಂದಿದ್ದರು. ನಾನು ಮಾತನಾಡಿದ್ದೆ ಕೂಡ. ನೀವು ಮತ್ತು ಮಂಸೋರೆ ಕೂಡಿದರೆ, ಇತಿಹಾಸ ನಿರ್ಮಾಣವಾಗುತ್ತದೆ ಎಂದಿದ್ದೆ. ಅದಕ್ಕವರು ಹೌದು ಸರ್ ಎಂದು ನಕ್ಕು,ತುಂಬಾ ಖುಷಿಯಾಗಿದ್ದರು.

    ಆದರೆ, ಛೆ ಎಂಥಹಾ ನಿರಾಸೆ, ವಿಜಯ್‌ರನ್ನು ಪ್ರೊಫೆಸರ್ ಪಾತ್ರದಲ್ಲಿ ನೋಡುವ ಆಸೆ ಈಡೇರಲೇ ಇಲ್ಲ. ವಿಜಯ್ ಉತ್ತಮ ನಟರಷ್ಟೇ ಆಗಿರಲಿಲ್ಲ, ನಿಷ್ಕಲ್ಮಷ ಮನಸ್ಸಿನ ವ್ಯಕ್ತಿಯೂ ಆಗಿದ್ದರು. ವಿಜಯ್ ರವರ ಆತ್ಮಕ್ಕೆ ಶಾಂತಿಸಿಗಲೆಂದು ಪ್ರಾರ್ಥಿಸುತ್ತೇನೆ'' ಎಂದಿದ್ದಾರೆ ಪಚ್ಚೆ ನಂಜುಂಡಸ್ವಾಮಿ.

    English summary
    Sanchcari Vijay rope to play Professor MD Nanjundawamy's character in his biopic. Manso re wanted to make film based on MD Nanjundawamy's life.
    Saturday, June 19, 2021, 9:28
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X