»   » 4 ವಿಭಿನ್ನ ಶೇಡ್ ನಲ್ಲಿ ಸಂಚಾರಿ ವಿಜಯ್ ಹೊಸ ಅವತಾರ

4 ವಿಭಿನ್ನ ಶೇಡ್ ನಲ್ಲಿ ಸಂಚಾರಿ ವಿಜಯ್ ಹೊಸ ಅವತಾರ

Posted By:
Subscribe to Filmibeat Kannada

'ನಾನು ಅವನಲ್ಲ ಅವಳು' ಚಿತ್ರದಲ್ಲಿ ಮಂಗಳಮುಖಿಯ ಪಾತ್ರದಲ್ಲಿ ಮಿಂಚಿ ರಾಷ್ಟ್ರಪ್ರಶಸ್ತಿ ಗಿಟ್ಟಿಸಿಕೊಂಡ ಅಪರೂಪದ ನಟ ಸಂಚಾರಿ ವಿಜಯ್ ಅವರು ಇದೀಗ ಅದೇ ಮಾದರಿಯಲ್ಲಿ ಮತ್ತೊಂದು ಸಿನಿಮಾದಲ್ಲಿ ಮಿಂಚುತ್ತಿದ್ದಾರೆ.

'ನಾನು ಅವನಲ್ಲ ಅವಳು' ಚಿತ್ರದಲ್ಲಿ ನಟ ಸಂಚಾರಿ ವಿಜಯ್ ಅವರು ಮಾಡಿದ ಪಾತ್ರ ಮತ್ತು ಅವರ ಅಭಿನಯ ನೋಡಿದ ಅಭಿಮಾನಿಗಳು ಮಾತ್ರವಲ್ಲದೇ, ಸ್ಯಾಂಡಲ್ ವುಡ್ ನಟ ಸ್ಟಾರ್ ನಟರೂ ಕೂಡ ಭಾರಿ ಪ್ರಶಂಸೆ ವ್ಯಕ್ತಪಡಿಸಿದ್ದರು.

Sanchari Vijay's next movie is a Horror-Comedy

'ನಾನು ಅವನಲ್ಲ ಅವಳು' ಸಿನಿಮಾದ ನಂತರ ಮತ್ತೆ ಅಂತಹದೆ ಪಾತ್ರ ಸಿಗುತ್ತೋ, ಇಲ್ವೋ ಅನ್ನೋ ಅಳುಕಿದ್ದ ನಟ ಸಂಚಾರಿ ವಿಜಯ್ ಅವರಿಗೆ ಒಂದಲ್ಲಾ ನಾಲ್ಕು ವಿಭಿನ್ನ ಶೇಡ್ ನಲ್ಲಿ ಮಿಂಚುವ ಅವಕಾಶ ಈಗಾಗಲೇ ಸಿಕ್ಕಿದೆ.

ಹೌದು ನವ ನಿರ್ದೇಶಕ ಅಮೃತ್ ಕುಮಾರ್ ಆಕ್ಷನ್-ಕಟ್ ಹೇಳುತ್ತಿರುವ ಹೊಸ ಸಿನಿಮಾ ಹಾರರ್ ಕಾಮಿಡಿಯುಳ್ಳ 'ರಿಕ್ತ' ಚಿತ್ರದಲ್ಲಿ ನಟ ಸಂಚಾರಿ ವಿಜಯ್ ಅವರು ಲವರ್ ಬಾಯ್, ಕಾಮಿಡಿಯನ್, ಚಿಕ್ಕ ಹುಡುಗ, ಮತ್ತು ಹೆದರಿಸುವ ದೆವ್ವ ಅಂತ ಹೀಗೆ ನಾಲ್ಕು ವಿಭಿನ್ನ ಶೇಡ್ ನಲ್ಲಿ ಮಿಂಚುತ್ತಿದ್ದಾರೆ.

Sanchari Vijay's next movie is a Horror-Comedy

ಅತ್ಯಂತ ಕಡಿಮೆ ಬಜೆಟ್ ನಲ್ಲಿ ತಯಾರಾಗಿರುವ ಚಿತ್ರಕ್ಕೆ ಸಂಪೂರ್ಣವಾಗಿ ಹೊಸಬರು ಕೆಲಸ ಮಾಡಿದ್ದು, ಹಗಲು ರಾತ್ರಿ ಚಿತ್ರಕ್ಕಾಗಿ ಕಷ್ಟಪಟ್ಟು ದುಡಿದಿದ್ದಾರೆ. ಈಗಾಗಲೇ ಬಹುತೇಕ ಚಿತ್ರದ ಶೂಟಿಂಗ್ ಮುಗಿದಿದ್ದು, ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.

ಸಂಗೀತ ನಿರ್ದೇಶಕ ರಾಕೇಶ್ ಎಂಬುವವರು ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡಿದ್ದು, ಈಗಿನ ಯುವಜನತೆ ಇಷ್ಟಪಡುವ ಹಾಡುಗಳು 'ರಿಕ್ತ' ಸಿನಿಮಾದಲ್ಲಿವೆಯಂತೆ. ಚಿತ್ರದಲ್ಲಿ ನಾಯಕಿ ನಟಿಯಾಗಿ ಹೊಸ ಪ್ರತಿಭೆ ಅದ್ವಿಕಾ ಮಿಂಚಿದ್ದಾರೆ.

Sanchari Vijay's next movie is a Horror-Comedy

ಅದೇನೇ ಇರಲಿ ಸಂಚಾರಿ ವಿಜಯ್ ಅವರಿಗೆ 'ನಾನು ಅವನಲ್ಲ ಅವಳು' ಸಿನಿಮಾ ಬ್ರೇಕ್ ಕೊಟ್ಟಂತೆ 'ರಿಕ್ತ' ಕೂಡ ಹೆಸರು ತಂದುಕೊಡುವಲ್ಲಿ ಯಶಸ್ವಿಯಾಗುತ್ತಾ ಅಂತ ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ.

English summary
After delivering a national Award-winning performance in 'Naanu Avanalla Avalu'. Sanchari Vijay is excited about his new movie 'Riktha', in which his character has 4-5 different shades.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada