»   » ನಿರೀಕ್ಷೆಯ ಸಿನಿಮಾಗಳನ್ನ ಮಕಾಡೆ ಮಲಗಿಸಿದ 2014

ನಿರೀಕ್ಷೆಯ ಸಿನಿಮಾಗಳನ್ನ ಮಕಾಡೆ ಮಲಗಿಸಿದ 2014

By: ಜೀವನರಸಿಕ
Subscribe to Filmibeat Kannada

ಸ್ಯಾಂಡಲ್ ವುಡ್ ಸಿನಿಮಾದ 2014ರ ಅರ್ಧ ವರ್ಷ ಕಳೆದು ಹೋಗಿದೆ. ಆರು ತಿಂಗಳ ಸೋಲು ಗೆಲುವಿನ ಲೆಕ್ಕಾಚಾರ ಶುರುವಾಗಿದೆ. ಕನ್ನಡದಲ್ಲಿ ಗೆದ್ದ ಸಿನಿಮಾಗಳೆಷ್ಟು? ಸೋತ ಸಿನಿಮಾಗಳೆಷ್ಟು? ಅಂತ ಲೆಕ್ಕ ಹಾಕಿದ್ರೆ ಬೆರಳೆಣಿಕೆ ಸಿನಿಮಾಗಳು ಮಾತ್ರ ಸದ್ದು ಮಾಡಿವೆ.

ಆದರೆ 2014ರ ಓಪನಿಂಗ್ 2013ರಷ್ಟು ಅದ್ಧೂರಿಯಾಗಿ ಇಲ್ಲದಿದ್ರೂ ನಿಧಾನಕ್ಕೆ ಸ್ಯಾಂಡಲ್ ವುಡ್ ಮೈ ಕೊಡವಿ ಮೇಲೇಳ್ತಿದೆ. ಚಿತ್ರಗಳು ಒಂದೊಂದಾಗಿ ಯಶಸ್ಸಿನ ಅರಮನೆಯ ಮೆಟ್ಟಿಲೇರ್ತಿವೆ. ಆದರೆ ಈ ವರ್ಷವೂ ನಿರೀಕ್ಷೆ ಇಲ್ಲದ ಸಿನಿಮಾಗಳು ಗೆದ್ದಿವೆ. ನಿರೀಕ್ಷೆ ಮಾಡಿದ ಸಿನಿಮಾಗಳು ಸೋತಿವೆ. [ನೋಡಿರಣ್ಣ ಹೇಗಿದೆ ಕನ್ನಡ ಸಿನಿಮಾಗಳ ದರ್ಬಾರು]

ಸಂತೋಷದ ವಿಚಾರ ಅಂದ್ರೆ ಈ ಬಾರಿ ಕನ್ನಡ ಚಿತ್ರಗಳು ಹೊರ ರಾಜ್ಯ, ಹೊರ ದೇಶಗಳಿಗೂ ಒಂದೊಂದಾಗಿ ಲಗ್ಗೆ ಇಡ್ತಿವೆ. ತೆರೆಗೆ ಬಂದ ಸಿನಿಮಾಗಳು 25 ದಿನಗಳಲ್ಲಿ ನಿರ್ಮಾಪಕರ ನಿದ್ದೆ ಕೆಡಿಸದೆ ಕಲೆಕ್ಷನ್ ಮಾಡಿಕೊಳ್ತಿವೆ. ಈ ಅರ್ಧ ವರ್ಷದಲ್ಲಿ ನಿರೀಕ್ಷೆ ಮೂಡಿಸಿ ಸೋತ ಸಿನಿಮಾಗಳೆಷ್ಟು ಒಂದು ಸಣ್ಣ ಲುಕ್ ಈ ಸ್ಲೈಡ್ ನಲ್ಲಿದೆ ನೋಡಿ.

ಅರ್ಧ ವರ್ಷದಲ್ಲಿ 68 ಸಿನಿಮಾಗಳು

ಗಾಂಧಿನಗರದಲ್ಲಿ ಚಿತ್ರ ಮಾಡೋರಿಗೆ ಬರವಿಲ್ಲ. ಆದರೆ ಒಳ್ಳೆಯ ಸಿನಿಮಾ ಮಾಡೋರ ಬರವಿದೆ. ಈ ವರ್ಷಾರ್ಧಕ್ಕೆ ಹೆಚ್ಚೂ ಕಡಿಮೆ 70 ಸಿನಿಮಾಗಳು ತೆರೆಗೆ ಬಂದಿವೆ. ಆದರೆ ನಿರೀಕ್ಷೆ ಇಲ್ಲದೇ ಗೆದ್ದಿರೋ ಸಿನಿಮಾ ಒಂದು 'ಉಗ್ರಂ' ಮಾತ್ರ, ಆದರೆ ನಿರೀಕ್ಷೆ ಮೂಡಿಸಿ ಸೋತ ಸ್ಟಾರ್ ಸಿನಿಮಾಗಳು ಹಲವು. [ಉಗ್ರಂ ಚಿತ್ರ ವಿಮರ್ಶೆ]

ನಿನ್ನಿಂದಲೇ ನಿರೀಕ್ಷೆ ನಿರಾಶೆ

ಪವರ್ ಸ್ಟಾರ್ ಪುನೀತ್ ಅಭಿನಯದ ನಿನ್ನಿಂದಲೇ ಚಿತ್ರದ ಬಗ್ಗೆ ಇನ್ನಿಲ್ಲದ ನಿರೀಕ್ಷೆ ಶುರುವಾಗಿತ್ತು. 2013ರಲ್ಲಿ ಪುನೀತ್ ರ ಯಾವುದೇ ಸಿನಿಮಾ ರಿಲೀಸಾಗದೇ ಇದ್ದಿದ್ದು ಚಿತ್ರವನ್ನ ಅಭಿಮಾನಿಗಳು ಕಾದಿದ್ರು. ಆದರೆ ಕಥೆ, ನಿರ್ದೇಶನದಲ್ಲಿ ತಿರುಳಿಲ್ಲದೆ ಚಿತ್ರ ನಿರಾಶೆ ಮೂಡಿಸ್ತು. [ನಿನ್ನಿಂದಲೇ ಚಿತ್ರ ವಿಮರ್ಶೆ]

ಉಪ್ಪಿ-ಚಂದ್ರು ಬ್ರಹ್ಮ

ರಿಯಯ್ ಸ್ಟಾರ್ ಉಪ್ಪಿ ಅಭಿನಯದ 'ಬ್ರಹ್ಮ' ಸಿನಿಮಾ ಬಗ್ಗೆ ದೊಡ್ಡ ಮಟ್ಟಿಗಿನ ನಿರೀಕ್ಷೆ ಇತ್ತು. ಉಪೇಂದ್ರ ರಾಜನ ಗೆಟಪ್ ನಲ್ಲಿ ಮಿಂಚಿದ್ದು ಮತ್ತು ನಿರ್ದೇಶಕ ಆರ್ ಚಂದ್ರು ನಿರೀಕ್ಷೆ ಹೆಚ್ಚಾಗೋಕೆ ಕಾರಣ. ಆದ್ರೆ ಸಿನಿಮಾ ಜನ್ರಿಗೆ ಇಷ್ಟವಾಗದೆ ಬೇಗನೆ ಥಿಯೇಟರ್ ಗಳಿಂದ ಎತ್ತಂಗಡಿಯಾಯ್ತು. [ಬ್ರಹ್ಮ ಚಿತ್ರ ವಿಮರ್ಶೆ]

ಉಳಿದವರು ಕಂಡಂತೆ

ಕೇವಲ ಟ್ರೇಲರ್ ನಿಂದ ಸಿಕ್ಕಾಪಟ್ಟೆ ನಿರೀಕ್ಷೆ ಮೂಡಿಸಿದ್ದ ಉಳಿದವರು ಕಂಡಂತೆ ನೋಡೋಕೆ ಪ್ರೇಕ್ಷಕರು ತುದಿಗಾಲಲ್ಲಿ ನಿಂತಿದ್ರು. ಆದ್ರೆ ಚಿತ್ರ ನೋಡಿದ ಪ್ರೇಕ್ಷಕರಿಂದ ಪಾಸಿಟೀವ್ ರೆಸ್ಪಾನ್ಸ್ ಬಂದಿದ್ದು ಕಡಿಮೆ. [ಉಳಿದವರು ಕಂಡಂತೆ ಚಿತ್ರ ವಿಮರ್ಶೆ]

ಸವಾರಿ-2 ಗೆಲುವಿನ ಸವಾರಿಯಲ್ಲ

ಜೇಕಬ್ ವರ್ಗೀಸ್ ಅನ್ನೋ ನಿರ್ದೇಶಕ ನಿರೀಕ್ಷೆಗಳೇ ಇಲ್ಲದೆ ಸವಾರಿ ಸಿನಿಮಾವನ್ನ ಗೆಲ್ಲಿಸಿದ್ದಕ್ಕಾಗಿ ಸವಾರಿ-2 ಮೇಲೆ ನಿರೀಕ್ಷೆಗಳ ಭಾರವಿತ್ತು. ಆದ್ರೆ ಸವಾರಿ-2 ಗೆಲುವು ಕಾಣಲಿಲ್ಲ. ಎರಡನೇ ಸವಾರಿ ಪ್ರೇಕ್ಷಕರಿಗೆ ಹಿತಕರ ಅನ್ನಿಸಲಿಲ್ಲ. [ಸವಾರಿ 2 ಚಿತ್ರ ವಿಮರ್ಶೆ]

ಅಗ್ರಜನಾಗಲಿಲ್ಲ ಜಗ್ಗೇಶ್, ದರ್ಶನ್

ನವರಸನಾಯಕ ಜಗ್ಗೇಶ್ ಅಭಿನಯದ ಅಗ್ರಜ ಸಿನಿಮಾದಲ್ಲಿ ದರ್ಶನ್ ಕೂಡ ಗೆಸ್ಟ್ ಎಂಟ್ರಿಕೊಟ್ಟಿದ್ರು. ಆದರೆ ಅಗ್ರಜ ಸಿನಿಮಾ ಥಿಯೇಟರ್ನಲ್ಲಿ ಇಷ್ಟವಾಗಲಿಲ್ಲ. ದರ್ಶನ್ ಎಂಟ್ರಿಗೆ ಚಪ್ಪಾಳೆ ಶಿಳ್ಳೆಯ ಸದ್ದು ಕೇಳಿದ್ದು ಬಿಟ್ರೆ ಸಿನಿಮಾ ಗೆಲ್ಲಲಿಲ್ಲ.

ಕ್ರೇಜಿಸ್ಟಾರ್ ಅಷ್ಟಕ್ಕಷ್ಟೆ

ರವಿಮಾಮನ ಸಿನಿಮಾ ಅನ್ನುವ ನಿರೀಕ್ಷೆಯ ಭಾರ ಹೊತ್ತು. ಒಂದು ದೊಡ್ಡ ಗ್ಯಾಪ್ ನ ನಂತರ ತೆರೆಕಂಡ ಕ್ರೇಜಿಸ್ಟಾರ್ ಕೂಡ ಭರ್ಜರಿ ಓಪನಿಂಗ್ ಪಡೆದುಕೊಳ್ಳಲಿಲ್ಲ. ಆದ್ರೆ ಸಿನಿಮಾ ಹೀನಾಯವಾಗದಿದ್ರೂ ನಿರೀಕ್ಷೆಯನ್ನ ಮುಟ್ಟೋಕೆ ಸಾಧ್ಯವಾಗಲಿಲ್ಲ. [ಕ್ರೇಜಿಸ್ಟಾರ್ ಚಿತ್ರ ವಿಮರ್ಶೆ]

English summary
It has been a roller coaster ride for Sandalwood, which has witnessed a few ups and downs in the first half of 2014 and had enough controversial moments. Like every year, 2014 too begun with a lot of hope but failed to meet the expectations of the audience.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada