»   » 'ಆರ್ಮುಗಂ' ರವಿಶಂಕರ್ ಗೆ ಹ್ಯಾಪಿ ಬರ್ತ್ ಡೇ ಹೇಳಿ.!

'ಆರ್ಮುಗಂ' ರವಿಶಂಕರ್ ಗೆ ಹ್ಯಾಪಿ ಬರ್ತ್ ಡೇ ಹೇಳಿ.!

Posted By:
Subscribe to Filmibeat Kannada

ಚಂದನವನದಲ್ಲಿ 'ಆರ್ಮುಗಂ' ಎಂದೇ ಖ್ಯಾತಿ ಗಳಿಸಿರುವ ಖ್ಯಾತ ಖಳನಾಯಕ ರವಿಶಂಕರ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ.

'ಕೆಂಪೇಗೌಡ' ಚಿತ್ರದಲ್ಲಿ 'ಆರ್ಮುಗಂ' ನಾಗಿ ಅಬ್ಬರಿಸಿದ ಖಳನಟ ರವಿಶಂಕರ್ ಅವರು ಇಂದು 49 ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದ್ದಾರೆ.

Sandalwood actor Ravishankar P celebrates his 49th birthday with fans

ಅಂದಹಾಗೆ ತಮ್ಮ ನೆಚ್ಚಿನ ನಾಯಕನ ಹುಟ್ಟುಹಬ್ಬವನ್ನು, ಅಭಿಮಾನಿಗಳು ಯಲಹಂಕದಲ್ಲಿರುವ ನಟ ರವಿಶಂಕರ್ ಅವರ ನಿವಾಸದಲ್ಲಿ ರಾತ್ರಿ ಕೇಕ್ ಕತ್ತರಿಸಿ ಭರ್ಜರಿಯಾಗಿ ಹುಟ್ಟುಹಬ್ಬ ಆಚರಿಸಿದರು.['ಬಿಗ್ ಬಾಸ್' ಶೋಗೆ ಖಳನಟ ರವಿಶಂಕರ್ ಎಂಟ್ರಿ ]

ನೂರಾರು ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳು ಪಟಾಕಿ ಸಿಡಿಸಿ ಸಿಹಿ ಹಂಚಿ ತಮ್ಮ ನೆಚ್ಚಿನ ನಟನಿಗೆ ಶುಭಕೋರಿದರು. ನೆರೆದಿದ್ದ ಅಭಿಮಾನಿಗಳ ಅಭಿಲಾಷೆಯಂತೆ 'ಕೆಂಪೇಗೌಡ' ಸಿನಿಮಾದ ಡೈಲಾಗ್ ಹೊಡೆದು ರವಿಶಂಕರ್ ಅವರು ತಮ್ಮ ಅಭಿಮಾನಿಗಳನ್ನು ರಂಜಿಸಿದರು.

ಹುಟ್ಟುಹಬ್ಬದ ಸಂದರ್ಭದಲ್ಲಿ ಮಾತನಾಡಿದ ನಟ ರವಿಶಂಕರ್ ಅವರು ತಮ್ಮ ತಂದೆ ವಿಧಿವಶರಾದ ಹಿನ್ನಲೆಯಲ್ಲಿ ಈ ವರ್ಷ ಹುಟ್ಟುಹಬ್ಬ ಆಚರಿಸಿಕೊಳ್ಳಬಾರದು ಎಂದು ನಿರ್ಧರಿಸಿದ್ದೆ. ಆದರೆ ಅಭಿಮಾನಿಗಳ ಒತ್ತಾಯದ ಮೇರೆಗೆ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದೇನೆ ಎಂದರು.

Sandalwood actor Ravishankar P celebrates his 49th birthday with fans

ಇದೇ ವೇಳೆ ನಟ ರವಿಶಂಕರ್ ಅವರ ಅಭಿಮಾನಿಗಳು ರವಿಶಂಕರ್ ಅವರ 'ಆರ್ಮುಗಂ' ದರ್ಬಾರ್ ಎಂಬ ಆಡಿಯೋವನ್ನು ಬಿಡುಗಡೆ ಮಾಡಿದರು.

ಸಂಭ್ರಮದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಆರ್ಮುಗಂ ರವಿಶಂಕರ್ ಅವರಿಗೆ ನಮ್ಮ ಕಡೆಯಿಂದಲೂ ವಿಶ್ ಯೂ ಹ್ಯಾಪಿ ಬರ್ತ್ ಡೇ. ಖಳನಟ ರವಿಶಂಕರ್ ಅವರ ಹುಟ್ಟುಹಬ್ಬದ ಸಂಭ್ರಮಾಚರಣೆಯ ವಿಡಿಯೋ ಇಲ್ಲಿದೆ ನೋಡಿ..(ವಿಡಿಯೋ ಕೃಪೆ: ಪಬ್ಲಿಕ್ ಟಿವಿ)

<iframe width="600" height="450" src="https://www.youtube.com/embed/sxdAQQMKpf4" frameborder="0" allowfullscreen></iframe>
English summary
Watch Video: Sandalwood actor Ravishankar P celebrated his 49th birthday with fans in Bengaluru. &#13;

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada