For Quick Alerts
  ALLOW NOTIFICATIONS  
  For Daily Alerts

  ಈ ಆರು ನಟರಲ್ಲಿ ಉತ್ತಮ ಗಾಯಕರಾರು?ನಿಮ್ಮ ಆಯ್ಕೆ

  |

  ಒಬ್ಬ ನಟ ನಮಗೆ ದಿನವೂ ನೆನಪಿಗೆ ಬರಬೇಕೆಂದೇನೂ ಇಲ್ಲ. ಆದರೆ ಹಾಡು ಮತ್ತು ಗಾಯಕರು ಹಾಗಲ್ಲ, ಬೇಡವೆಂದರೂ ಯಾವುದಾದರೂ ಹಾಡನ್ನು ನಾವು ಗುನಗದೇ ಇರುವುದಿಲ್ಲ. ಅದರಲ್ಲೂ ಅರ್ಥಗರ್ಭಿತ ಸಾಹಿತ್ಯವಿದ್ದ, ಇಂಪಾಗಿರುವ ಟ್ಯೂನಿನ ಹಾಡಿದ್ದರೆ ಅದರ ಗಮ್ಮತ್ತೇ ಬೇರೆ.

  ನಾಯಕ ನಟನಾಗಿ ಕಾಣಿಸಿಕೊಂಡು ಗಾಯಕನಾಗಿಯೂ ಗುರುತಿಸಿಕೊಂಡ ಬಹಳಷ್ಟು ನಟರು ಕನ್ನಡದಲ್ಲೂ ಬಹಳಷ್ಟು ಮಂದಿ ಇದ್ದಾರೆ. ಅದರಲ್ಲಿ ಮಂಚೂಣಿಯಲ್ಲಿ ಕೇಳಿ ಬರುವ ಹೆಸರು ಡಾ.ರಾಜ್ ಕುಮಾರ್.

  ಡಾ. ರಾಜ್ ನಂತರ ವಿಷ್ಣುವರ್ಧನ್ ಕೂಡಾ ಕೆಲವೊಂದು ಚಿತ್ರಗಳಲ್ಲಿ ಹಾಡಿದ್ದರು. ಜಿಮ್ಮಿಗಲ್ಲು ಚಿತ್ರದ 'ತುತ್ತು ಅನ್ನಾ ತಿನ್ನೋಕೆ ಬೊಗಸೆ ನೀರು ಕುಡಿಯೋಕೆ' ಮುಂತಾದ ಹಾಡುಗಳು ಇಂದಿಗೂ ಜನಪ್ರಿಯ.

  ಈಗಿನ ನಮ್ಮ ಕನ್ನಡ ನಟರಲ್ಲಿ ಈ ನಮ್ಮ ಆರು ನಟರಲ್ಲಿ ಉತ್ತಮ ಗಾಯಕರಾರು?

  ಶಿವರಾಜ್ ಕುಮಾರ್

  ಶಿವರಾಜ್ ಕುಮಾರ್

  ಶಿವಣ್ಣ ತನ್ನ ವೃತ್ತಿ ಜೀವನದಲ್ಲಿ ಹಲವು ವರ್ಷಗಳಿಂದ ಹಾಡುಗಾರನಾಗೂ ಗುರುತಿಸಿಕೊಂಡಿದ್ದಾರೆ. ಜನುಮದ ಜೋಡಿ ಚಿತ್ರದಲ್ಲಿ ಅವರು ಹಾಡಿದ 'ಮಣಿ ಮಣಿ ಮಣಿಗೊಂದು ದಾರ' ಜನಪ್ರಿಯ ಹಾಡು. ಮಾಲಾಶ್ರೀ ಪ್ರಮುಖ ಭೂಮಿಕೆಯಲ್ಲಿದ್ದ ಶಕ್ತಿ ಚಿತ್ರಕ್ಕೂ ಶಿವಣ್ಣ ಒಂದು ಹಾಡು ಹಾಡಿದ್ದಾರೆ.

  ಉಪೇಂದ್ರ

  ಉಪೇಂದ್ರ

  ಆಡು ಮುಟ್ಟದ ಸೊಪ್ಪಿಲ್ಲ ಎನ್ನುವ ಹಾಗೆ ರಿಯಲ್ ಸ್ಟಾರ್ ಉಪೇಂದ್ರ ಚಿತ್ರರಂಗದಲ್ಲಿ ಮಾಡದ ಕೆಲಸವಿಲ್ಲ. ನಿರ್ದೇಶಕನಾಗಿ, ನಟನಾಗಿ ಮಾತ್ರವಲ್ಲದೇ ಚಿತ್ರಕ್ಕೆ ಹಾಡನ್ನು ಹಾಡಿದ ಹೆಗ್ಗಳಿಕೆ ಉಪ್ಪಿದ್ದು. ಅದರಲ್ಲಿ ಪ್ರಮುಖ ಹಿಟ್ ಗೀತೆಗಳೆಂದರೆ ಜೋಗಯ್ಯ ಚಿತ್ರದ 'ತಗಲಾಕೊಂಡೆ ನಾನು', ಸೂಪರ್ ಚಿತ್ರದ 'ನಾನು ಸೂಪರೋ ರಂಗ" ಬುದ್ದಿವಂತ ಚಿತ್ರದ 'ಚಿತ್ರಾನ್ನ ಚಿತ್ರಾನ್ನ' ಹಾಡು ಪ್ರಮುಖವಾದದ್ದು.

  ಸುದೀಪ್

  ಸುದೀಪ್

  ಯಶಸ್ಸಿನ ಉತ್ತುಂಗದಲ್ಲಿರುವ ಸುದೀಪ್ ಅವರ ವಾಯ್ಸಿಗೆ ಮರಳಾಗದವರಿಲ್ಲ. ವೀರಮದಕರಿ, ಗೂಳಿ, ಶಾಂತಿನಿವಾಸ, ರಂಗ ಎಸ್ಎಸ್ಎಲ್ಸಿ ಮುಂತಾದ ಚಿತ್ರಗಳಲ್ಲಿ ಸುದೀಪ್ ಹಾಡಿದ್ದಾರೆ. ಕೆಂಪೇಗೌಡ ಚಿತ್ರದಲ್ಲಿನ 'ಹಳೇ ರೇಡಿಯೋ' ಹಾಡು ಜನಪ್ರಿಯವಾಗಿತ್ತು.

  ಪುನೀತ್ ರಾಜಕುಮಾರ್

  ಪುನೀತ್ ರಾಜಕುಮಾರ್

  ಬಾಲನಟನಾಗಿದ್ದಾಗಿಂದಲೇ ಪುನೀತ್ ಒಬ್ಬ ಹಾಡುಗಾರ. ಚಲಿಸುವ ಮೋಡಗಳು, ಬೆಟ್ಟದ ಹೂವು ಮುಂತಾದ ಚಿತ್ರದ ಹಾಡುಗಳು ಈಗಲೂ ಜನಪ್ರಿಯ. ತನ್ನದೇ ವಂಶಿ, ಜಾಕಿ ಚಿತ್ರದಲ್ಲಿ ಪುನೀತ್ ಹಾಡಿದ್ದಾರೆ. ಅಲ್ಲದೇ ಶಿವರಾಜ್ ಕುಮಾರ್, ಗಣೇಶ್ ಚಿತ್ರಗಳಿಗೂ ಹಾಡಿದ್ದಾರೆ. ಇತ್ತೀಚಿನ ಮೈಲಾರಿ ಚಿತ್ರದ 'ಊರಿಂದ ಓಡಿ ಬಂದ ಮೈಲಾಪುರ ಮೈಲಾರಿ' ಹಾಡು ಜನಪ್ರಿಯವಾಗಿತ್ತು.

  ಗಣೇಶ್

  ಗಣೇಶ್

  ಯಶಸ್ಸಿನ ಹಾದಿಯ ಹುಡುಕಾಟದಲ್ಲಿರುವ ಗೋಲ್ಡನ್ ಸ್ಟಾರ್ ಗಣೇಶ್ ಕೆಲವೊಂದು ಚಿತ್ರಗಳಿಗೆ ಹಾಡಿದ್ದುಂಟು. ಕೂಲ್ ಚಿತ್ರದ "ಕಾಫಿಗೆ ಹೋಗೋಣ' ಹಾಡು ಹಿಟ್ ಆಗಿತ್ತು.

  ಯೋಗೀಶ್

  ಯೋಗೀಶ್

  ಲೂಸ್ ಮಾದ ಯಾನೆ ಯೋಗೀಶ್ ಅವರಲ್ಲಿ ಕೂಡ ಹಾಡುಗಾರನಿದ್ದಾನೆ. ತನ್ನದೇ ಕಾಲಾಯ ತಸ್ಮೈ ನಮ: ಚಿತ್ರದಲ್ಲಿ ಕೊಲವರಿ ಡಿ ಸ್ಟೈಲಿನಲ್ಲಿ ಯೋಗಿ ಹಾಡೊಂದನ್ನು ಹಾಡಿದ್ದರು.

  English summary
  Sandalwood is trending with several actors singing for Kannada films for their own films and others too.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X