»   » 'ಅಮೂಲ್ಯ' ಮದುವೆ ಸಂಭ್ರಮ, ಈ ದಿನದ ವಿಶೇಷತೆಗಳು ಏನು?

'ಅಮೂಲ್ಯ' ಮದುವೆ ಸಂಭ್ರಮ, ಈ ದಿನದ ವಿಶೇಷತೆಗಳು ಏನು?

Posted By: Naveen
Subscribe to Filmibeat Kannada

ಸ್ಯಾಂಡಲ್ ವುಡ್ ಗೋಲ್ಡನ್ ಗರ್ಲ್ 'ಅಮೂಲ್ಯ ಮತ್ತು ಜಗದೀಶ್' ವಿವಾಹ ಇಂದು ನಡೆಯಲಿದೆ. ನಿನ್ನೆ ಮಧ್ಯಾಹ್ನ ಅಮೂಲ್ಯ ಮತ್ತು ಜಗದೀಶ್ ಕುಟುಂಬಸ್ಥರು ಮಂಡ್ಯ ಜಿಲ್ಲೆಯ ಆದಿಚುಂಚನಗಿರಿ ಮಠಕ್ಕೆ ಆಗಮಿಸಿದ್ದು, ಇಂದು ಮುಹೂರ್ತ ಕಾರ್ಯಕ್ರಮ ನಡೆಯಲಿದೆ.

ನಿನ್ನೆ ಸಂಜೆ ಬಳೆ ಶಾಸ್ತ್ರ, ಅರಿಶಿಣ ಶಾಸ್ತ್ರ ಸೇರಿದಂತೆ ಅನೇಕ ಪೂಜಾ ಕಾರ್ಯಕ್ರಮಗಳು ನೆರವೇರಿತು. ಇಂದು ಸಹ ಕೆಲ ಶಾಸ್ತ್ರಗಳ ನಂತರ ಮಧ್ಯಾಹ್ನ 12 ಗಂಟೆಯಿಂದ 12.30ರ ಅಭಿಜಿತ್ ಶುಭ ಲಗ್ನದಲ್ಲಿ ಮಾಂಗಲ್ಯ ಧಾರಣೆ ನಡೆಯಲಿದೆ.

ಅಮೂಲ್ಯ ಮತ್ತು ಜಗದೀಶ್ ಕಲ್ಯಾಣೋತ್ಸವದ ಇನ್ನಷ್ಟು ವಿಶೇಷತೆಗಳು ಮುಂದಿದೆ ಓದಿ...

ವರ ಪೂಜೆ ಮತ್ತು ಗಂಗೆ ಪೂಜೆ

ಆದಿಚುಂಚನಗಿರಿಯ ಕಾಲಭೈರವೇಶ್ವರ ಸನ್ನಿಧಿಯಲ್ಲಿ ವಿವಾಹಕಾರ್ಯ ನಡೆಯುತ್ತಿದೆ. ಮೊದಲು ವರಪೂಜೆ ಮತ್ತು ಗಂಗೆ ಪೂಜೆಯೊಂದಿಗೆ ಇಂದಿನ ವಿವಾಹ ಕಾರ್ಯಕ್ರಮ ಶುರುವಾಗಲಿದೆ.

ಒಕ್ಕಲಿಗ ಸಂಪ್ರದಾಯದಂತೆ ಮದುವೆ

ಅಮೂಲ್ಯ ಜಗದೀಶ್ ಅವರ ಮದುವೆ ಒಕ್ಕಲಿಗ ಸಂಪ್ರದಾಯದಂತೆ ನಡೆಯಲಿದೆ. ನಿರ್ಮಲಾನಂದ ಸ್ವಾಮಿಗಳ ಆರ್ಶಿವಾದದೊಂದಿಗೆ ವಿವಾಹ ಕಾರ್ಯಗಳು ನಡೆಯಲಿದೆ.

12 ಗಂಟೆಯಿಂದ 12.30ಕ್ಕೆ ಮುಹೂರ್ತ

ಇಂದು ಮಧ್ಯಾಹ್ನ 12 ಗಂಟೆಗೆ ಅಮೂಲ್ಯ ರವರ ಕೊರಳಿಗೆ ಜಗದೀಶ್ ಮಾಂಗಲ್ಯ ಧಾರಣೆ ಮಾಡಲಿದ್ದಾರೆ.

ಸಿಲ್ಕ್ ಸೀರೆಯಲ್ಲಿ ಮಿಂಚಲಿರೋ ಅಮೂಲ್ಯ

ಅಮೂಲ್ಯ ಇಂದು ಸಿಲ್ಕ್ ಸೀರೆಯಲ್ಲಿ ಮಿಂಚಲಿದ್ದಾರೆ. ಹಾಫ್ ವೈಟ್ ಪರ್ಪಲ್ ಬಾರ್ಡರ್ ಸಿಲ್ಕ್ ಸೀರೆ ಇದಾಗಿದೆ. ಶಿಲ್ಪಾ ಗಣೇಶ್ ಮತ್ತು ವರನ ಸಹೋದರಿ ಈ ಸೀರೆಯನ್ನ ಡಿಸೈನ್ ಮಾಡಿದ್ದಾರೆ.

ವಿವಾಹ ಪೂರ್ವ ಕಾರ್ಯಗಳು

ಮಾಂಗಲ್ಯ ಧಾರಣೆಗೂ ಮೊದಲು ಕಾಶೀಯಾತ್ರೆ, ಕಂಕಣಧಾರಣೆ, ಕನ್ಯಾದಾನ ರೀತಿಯ ವಿವಾಹ ಪೂರ್ವ ಕಾರ್ಯಗಳು ನಡೆಯಲಿದೆ.

ತಿಂಡಿಯ ಮೆನು

ಮದುವೆಯ ತಿಂಡಿಯ ಮೆನುವಿನಲ್ಲಿ ಕೇಸರಿಬಾತ್, ಇಡ್ಲಿ, ವಡಾ, ಸಾಂಬಾರ್, ಪೊಂಗಲ್ ಮತ್ತು ಖಾರಾ ಬಾತ್ ಇರಲಿದೆ.

ಊಟದ ಮೆನು

ಮಧ್ಯಾಹ್ನ ಎರಡು ಸಾವಿರ ಜನಕ್ಕೆ ಊಟದ ವ್ಯವಸ್ಥೆಯನ್ನ ಮಾಡಲಾಗಿದೆ. ಖರ್ಜೂರ ಪಾಯಸ, ಲಾಡು, ಕಾಜು ಬರ್ಫಿ, ಬೇಬಿ ಕಾರ್ನ್ ಮಂಚೂರಿ, ಅಕ್ಕಿ ರೊಟ್ಟಿ, ವೆಜ್ ಬಿರಿಯಾನಿ, ಎಣೆಗಾಯಿ ಮಸಾಲ, ಅನ್ನ ಸಾಂಬರ್, ಬೀಡಾ, ಐಸ್ ಕ್ರೀಂ ಊಟದ ಮೆನು ಆಗಿದೆ.

English summary
sandalwood actress amulya and jagdish marriage.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada