For Quick Alerts
  ALLOW NOTIFICATIONS  
  For Daily Alerts

  'ಅಮೂಲ್ಯ' ಮದುವೆಯ ಊಟದ ಮೆನುವಿನಲ್ಲಿ ತರಹೇವಾರಿ ಖಾದ್ಯಗಳು

  |

  ಇಂದು(ಮೇ12) ನಟಿ ಅಮೂಲ್ಯ ಮತ್ತು ಜಗದೀಶ್ ವಿವಾಹ ಮಹೋತ್ಸವ ನಡೆಯಲಿದೆ. ಇಂದು ಮಧ್ಯಾಹ್ನ 12 ಗಂಟೆಯಿಂದ 12.30ರ ಅಭಿಜಿತ್ ಶುಭ ಲಗ್ನದಲ್ಲಿ ಮಾಂಗಲ್ಯ ಧಾರಣೆಯಾಗಲಿದೆ.

  ಮದುವೆ ಕಾರ್ಯಕ್ರಮಗಳಲ್ಲಿ ಊಟಕ್ಕೆ ವಿಶೇಷ ಪ್ರಾಮುಖ್ಯತೆ ಇರುತ್ತದೆ. ಇಂತಹ ದೊಡ್ಡ ಸ್ಟಾರ್ ಗಳ ಮದುವೆ ಊಟದ ಮೆನುವಿನಲ್ಲಿ ಏನೇನು ಇರಲಿದೆ ಅನ್ನುವುದು ಅನೇಕರ ಕುತೂಹಲವಾಗಿರುತ್ತದೆ.

  ಅಮೂಲ್ಯ ಜಗದೀಶ್ ಮದುವೆಯ ಊಟದ ಮೆನುವಿನಲ್ಲಿ ತರಹೇವಾರಿ ಖಾದ್ಯಗಳ ಲಿಸ್ಟ್ ಮುಂದಿದೆ ಓದಿ...

  ಎರಡು ಸಾವಿರ ಜನರಿಗೆ ಊಟದ ವ್ಯವಸ್ಥೆ

  ಎರಡು ಸಾವಿರ ಜನರಿಗೆ ಊಟದ ವ್ಯವಸ್ಥೆ

  ಅಮೂಲ್ಯ ಮತ್ತು ಜಗದೀಶ್ ಮದುವೆಗೆ ಸುಮಾರು ಎರಡು ಸಾವಿರ ಜನರು ಬರುವ ನಿರೀಕ್ಷೆ ಇದೆ. ವಿವಾಹಕ್ಕೆ ಬರುವ ಎಲ್ಲ ಅತಿಥಿಗಳಿಗೆ ಊಟದ ವ್ಯವಸ್ಥೆಯನ್ನ ಮಾಡಲಾಗಿದೆ.

  ತಿಂಡಿಯ ಮೆನು

  ತಿಂಡಿಯ ಮೆನು

  ಬೆಳಗ್ಗೆ ಮದುವೆಗೆ ಬಂದ ಅತಿಥಿಗಳಿಗೆ ತಿಂಡಿ - ಕೇಸರಿಬಾತ್, ಇಡ್ಲಿ, ವಡಾ, ಸಾಂಬಾರ್, ಪೊಂಗಲ್ ಮತ್ತು ಖಾರಾ ಬಾತ್ ಇರಲಿದೆ.

  ಊಟದ ಮೆನು

  ಊಟದ ಮೆನು

  ಮಧ್ಯಾಹ್ನ ಊಟ - ಖರ್ಜೂರ ಪಾಯಸ, ಲಾಡು, ಕಾಜು ಬರ್ಫಿ, ಬೇಬಿ ಕಾರ್ನ್ ಮಂಚೂರಿ, ಅಕ್ಕಿ ರೊಟ್ಟಿ, ವೆಜ್ ಬಿರಿಯಾನಿ, ಎಣೆಗಾಯಿ ಮಸಾಲ, ಮೆಂತ್ಯ ರೊಟ್ಟಿ, ಎರಡು ಬಗೆಯ ಪಲ್ಯ, ಅನ್ನ ಸಾಂಬಾರ್, ಬೀಡಾ, ಐಸ್ ಕ್ರೀಂ.

  ಶ್ರೀಮಠದಲ್ಲಿ ಊಟ

  ಶ್ರೀಮಠದಲ್ಲಿ ಊಟ

  ಆದಿಚುಂಚನಗಿರಿಯ ಶ್ರೀ ಮಠದ ಅನ್ನದಾನಿ ಭೈರವೇಶ್ವರ ಪ್ರಸಾದ ನಿಲಯದಲ್ಲಿ ಊಟದ ವ್ಯವಸ್ಥೆಯನ್ನ ಮಾಡಲಾಗಿದೆ. ವಧು ವರರ ಸಂಬಂಧಿಗಳ ಜೊತೆಗೆ ಮಠದ ಭಕ್ತರಿಗೂ ಊಟದ ವ್ಯವಸ್ಥೆಯನ್ನ ಮಾಡಲಾಗಿದೆ.

  ರಾತ್ರಿಯೂ ಇತ್ತು ಭರ್ಜರಿ ಭೋಜನ

  ರಾತ್ರಿಯೂ ಇತ್ತು ಭರ್ಜರಿ ಭೋಜನ

  ನಿನ್ನೆ ರಾತ್ರಿ ಸಹ ಬಂದಿರುವ ಅತಿಥಿಗಳಿಗೆ ಊಟದ ವ್ಯವಸ್ಥೆಯನ್ನ ಮಾಡಲಾಗಿತ್ತು. ಶಾವಿಗೆ ಪಾಯಿಸ, ಮಾವಿನಕಾಯಿ ಚಿತ್ರಾನ್ನ, ಪೂರಿ, ವೆಜ್ ಸಾಗು, ಕ್ಯಾರೆಟ್ ಹೋಳಿಗೆ, ಮೈಸೂರು ಪಾಕ್, ಅನ್ನ ಸಾಂಬಾರ್ ರಾತ್ರಿ ಊಟದಲ್ಲಿತ್ತು.

  English summary
  sandalwood actress amulya and jagdish marriage food menu.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X