»   » ಕನ್ನಡದ ಕಂಪನ್ನು ಟ್ವಿಟ್ಟರ್ ನಲ್ಲಿ ಪಸರಿಸಿದ ಚಂದನವನದ ತಾರೆಯರು!

ಕನ್ನಡದ ಕಂಪನ್ನು ಟ್ವಿಟ್ಟರ್ ನಲ್ಲಿ ಪಸರಿಸಿದ ಚಂದನವನದ ತಾರೆಯರು!

Posted By:
Subscribe to Filmibeat Kannada

ಇಡೀ ಕರ್ನಾಟಕದ ಜನತೆಗೆ ಇಂದು 60ನೇ ಕನ್ನಡ ರಾಜ್ಯೋತ್ಸವದ ಸಂಭ್ರಮ. ಎಲ್ಲೆಡೆ ಕನ್ನಡದ ಬಾವುಟ ಹಾರಿಸಿ, ತಾಯಿ ಕನ್ನಡಾಂಬೆಗೆ ಪುಷ್ಪ ನಮನ ಸಲ್ಲಿಸಿ ಎಲ್ಲಾ ಕನ್ನಡಾಭಿಮಾನಿಗಳು ಕೊಂಡಾಡುತ್ತಿದ್ದಾರೆ.

ಇದೀಗ ಕನ್ನಡ ಚಿತ್ರರಂಗದ ಖ್ಯಾತ ನಟ-ನಟಿಯರು ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಿಕೊಂಡಿದ್ದು, ತಮ್ಮ ತಮ್ಮ ಟ್ವಿಟ್ಟರ್ ಮೂಲಕ ಇಡೀ ಕರ್ನಾಟಕದ ಜನತೆಗೆ 60ನೇ ಕನ್ನಡ ರಾಜ್ಯೋತ್ಸವದ ಶುಭ ಕಾಮನೆಗಳನ್ನು ಕೋರಿದ್ದಾರೆ.[ಟ್ವಿಟ್ಟರ್ ನಲ್ಲಿ 'ಕನ್ನಡ ರಾಜ್ಯೋತ್ಸವ' ಟ್ರೆಂಡಿಂಗ್]

ಕನ್ನಡದ ಮಣ್ಣಿನ ಮಗ ಚಾಲೆಂಜಿಂಗ್ ಸ್ಟಾರ್ ದರ್ಶನ್, ರಾಕಿಂಗ್ ಸ್ಟಾರ್ ಯಶ್, ನಟಿ ಕೃತಿ ಕರಬಂಧ, ಕನ್ನಡತಿ ನಟಿ ಹರಿಪ್ರಿಯ, ಕರಾವಳಿ ಹುಡುಗ ನಟ-ನಿರ್ದೇಶಕ ರಕ್ಷಿತ್ ಶೆಟ್ಟಿ, ಕನ್ನಡವೇ ನನ್ನ ಉಸಿರು ಎನ್ನುವ ನವರಸ ನಾಯಕ ಜಗ್ಗೇಶ್ ಮುಂತಾದವರು ಇಡೀ ಕರ್ನಾಟಕದ ಹೆಮ್ಮೆಯ ಕನ್ನಡಿಗ ಬಾಂಧವರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯ ತಿಳಿಸಿದ್ದಾರೆ.[ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಮಹಾನ್ ಕಲಾವಿದರು ]

ಚಂದನವನದ ನಟ-ನಟಿಯರು ತಮ್ಮ ಕನ್ನಡ ಅಭಿಮಾನವನ್ನು ಹೇಗೆ ಹಂಚಿಕೊಂಡಿದ್ದಾರೆ ಎಂದು ತಿಳಿಯಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ..

ನವರಸ ನಾಯಕ ಜಗ್ಗೇಶ್

"ಸ್ನೇಹಿತರೇ ಸಾಧ್ಯವಾದಷ್ಟು ಈ ದಿನ ಸೋಶಿಲ್ ಮೀಡಿಯಾದಲ್ಲಿ ಕನ್ನಡ ಭಾಷೆಯ ಉಳಿವಿನ ಬಗ್ಗೆ ಸುನಾಮಿ ಎಬ್ಬಿಸಿ, ಜಗದ ಮೂಲೆ-ಮೂಲೆಗೂ ಕನ್ನಡದ ಜಾಗೃತಿ ಮೂಡಿಸಿ, ಅದು ಒಂದು ಥರ ಕನ್ನಡ ಸೇವೆಯೇ" ಎಂದು ಚಂದನವನದ ನಟ ಜಗ್ಗೇಶ್ ಅವರು ಕನ್ನಡ ಅಭಿಮಾನ ಹಾಗೂ ಕನ್ನಡ ಭಾಷೆಯ ಬಗ್ಗೆ ತಮ್ಮ ಟ್ವಿಟ್ಟರ್‌ ನಲ್ಲಿ ಜಾಗೃತಿ ಮೂಡಿಸಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್

ಕನ್ನಡದ ನಟ, ಬಾಕ್ಸಾಫೀಸ್ ಸುಲ್ತಾನ ದರ್ಶನ್ ಅವರು ವಿಶ್ವದಾದ್ಯಂತ ನೆಲೆಸಿರುವ ಎಲ್ಲಾ ಸಮಸ್ತ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳನ್ನು ಅಚ್ಛ ಕನ್ನಡ ಭಾಷೆಯಲ್ಲಿ ಕೋರಿದ್ದಾರೆ.

ಬಹು ಭಾಷಾ ನಟಿ ಕೃತಿ ಕರಬಂಧ

ಬಹುಭಾಷಾ ನಟಿ, ಗೂಗ್ಲಿ ಬೆಡಗಿ ಕೃತಿ ಕರಬಂಧ ಅವರು ಸಮಸ್ತ ಕರ್ನಾಟಕದ ಹೆಮ್ಮೆಯ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯವನ್ನು ಶುದ್ಧ ಕನ್ನಡ ಭಾಷೆಯಲ್ಲಿ ಟ್ವಿಟ್ಟರ್ ಮೂಲಕ ಕೋರಿದ್ದಾರೆ.

ರಾಕಿಂಗ್ ಸ್ಟಾರ್ ಯಶ್

ಕನ್ನಡ ನಟ ರಾಕಿಂಗ್ ಸ್ಟಾರ್ ಯಶ್ ಅವರು ಇಡೀ ಕರ್ನಾಟಕದ ಜನತೆಗೆ ಹಾಗೂ ತಮ್ಮ ಪ್ರೀತಿಯ ಅಭಿಮಾನಿಗಳಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯ ಕೋರಿದ್ದಾರೆ.

ನಟ ಜಗ್ಗೇಶ್

ಕನ್ನಡ ನಟ ಜಗ್ಗೇಶ್ ಅವರು ಕನ್ನಡದ ಪುಟ್ಟ ಮನಸುಗಳಿಗೆ ಸಣ್ಣ ಸಣ್ಣ ಮಾಹಿತಿಯನ್ನು ಬಹಳ ಅಚ್ಚುಕಟ್ಟಾಗಿ, ಶುದ್ಧ ಕನ್ನಡದಲ್ಲಿ ವ್ಯಕ್ತಪಡಿಸಿದ್ದಾರೆ.

ನಟ-ನಿರ್ದೇಶಕ ರಕ್ಷಿತ್ ಶೆಟ್ಟಿ

ಕರಾವಳಿ ಕುವರ, ಕನ್ನಡ ನಟ ಕಮ್ ನಿರ್ದೇಶಕ ರಕ್ಷಿತ್ ಶೆಟ್ಟಿ ಅವರು ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯವನ್ನು ಕೋರಿದ್ದಾರೆ.

'ಉಗ್ರಂ' ಬೆಡಗಿ ನಟಿ ಹರಿಪ್ರಿಯಾ

ನಟಿ ಹರಿಪ್ರಿಯಾ ಅವರು ಎಲ್ಲಾ ಕನ್ನಡಿಗ ವರ್ಗಕ್ಕೆ ಹಾಗೂ ಸಮಸ್ತ ಕನ್ನಡಿಗರಿಗೆ 60ನೇ ಕನ್ನಡ ರಾಜ್ಯೋತ್ಸವದ ಶುಭಾಶಯ ಕೋರಿದ್ದಾರೆ.

ನಟ ಜಗ್ಗೇಶ್

ಕನ್ನಡ ಚಿತ್ರರಂಗದ ನವರಸ ನಾಯಕ ಜಗ್ಗೇಶ್ ಅವರು ಕನ್ನಡ ರಾಜ್ಯೋತ್ಸವದ ಬಗ್ಗೆ ಹಾಗೂ ಕನ್ನಡ ಭಾಷೆಯ ಬಗ್ಗೆ ವಿಭಿನ್ನ ಪ್ರೀತಿ-ಗೌರವವನ್ನು ಇಟ್ಟುಕೊಂಡಿದ್ದು, ಸಂಭ್ರಮದಿಂದ ರಾಜ್ಯೋತ್ಸವವನ್ನು ಈ ಥರ ಆಚರಿಸುತ್ತಿದ್ದಾರೆ.

English summary
Sandalwood Celeb Tweets on 6oth Kannada Rajyotsava. Kannada Rajyotsava is celebrated on November 1 every year. On this day in 1956, all the Kannada language-speaking regions of southern India were merged to form the state of Karnataka.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada