»   » ಯುಗಾದಿ ಸಡಗರ: ತಾರೆಯರ ಮನೆಯಲ್ಲಿ ಏನು ವಿಶೇಷ?

ಯುಗಾದಿ ಸಡಗರ: ತಾರೆಯರ ಮನೆಯಲ್ಲಿ ಏನು ವಿಶೇಷ?

Posted By:
Subscribe to Filmibeat Kannada

ಹಬ್ಬಗಳು ಬಂದಾಗೆಲ್ಲಾ ಇಡೀ ಚಿತ್ರರಂಗ ರಂಗೇರುತ್ತದೆ. ಅದ್ರಲ್ಲೂ ಹೊಸ ವರ್ಷ ಆರಂಭವಾಗುವ 'ಯುಗಾದಿ' ಹಬ್ಬ ಅಂದರೆ ಕೇಳೋದೇ ಬೇಡ. ತಾರೆಯರು ಕೂಡ ವಿಭಿನ್ನವಾಗಿ ಹಬ್ಬವನ್ನು ಆಚರಿಸಲು ಶುರು ಹಚ್ಚಿಕೊಳ್ಳುತ್ತಾರೆ.

ಅಂದಹಾಗೆ ಈ ಬಾರಿ ಕೂಡ ಚಂದನವನದ ಚೆಂದದ ತಾರೆಯರು ಯುಗಾದಿ ಹಬ್ಬವನ್ನು ವಿಭಿನ್ನವಾಗಿ ಆಚರಣೆ ಮಾಡುತ್ತಿದ್ದಾರೆ. ಬೇವು-ಬೆಲ್ಲ ತಿಂದು ಸಿಹಿ ಮತ್ತು ಕಹಿಯನ್ನು ಒಟ್ಟಾಗಿ ಸ್ವೀಕರಿಸಲು ತಯಾರಾಗುತ್ತಿದ್ದಾರೆ.[ಮಾಮರವೆಲ್ಲೋ ಕೋಗಿಲೆ ಎಲ್ಲೋ]

ಇನ್ನು ಕಲರ್ ಫುಲ್ ಬಟ್ಟೆಯನ್ನು ಹಾಕಿಕೊಂಡು ಹೊಸ ವರ್ಷವಾದ ಯುಗಾದಿ ಹಬ್ಬವನ್ನು ಭರ್ಜರಿಯಾಗಿ ಸಂಭ್ರಮದಿಂದ ಇಡೀ ಕನ್ನಡ ಚಿತ್ರರಂಗವೇ ಬರಮಾಡಿಕೊಳ್ಳುತ್ತದೆ.

ಈ ಬಾರಿ ಕೂಡ ಕನ್ನಡ ಚಿತ್ರರಂಗದ ತಾರೆಯರು ಯುಗಾದಿ ಹಬ್ಬವನ್ನು ಆಚರಿಸಲು ತಯಾರಾಗುತ್ತಿದ್ದು, ಎಲ್ಲರೂ ಬೇರೆ ಬೇರೆ ಕಡೆ ಸಂಭ್ರಮದಿಂದ ಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.[ಈ ಯುಗಾದಿಗೆ ಯಶ್ ರಿಂದ ಅಭಿಮಾನಿಗಳಿಗೆ ವಿಶೇಷ ಉಡುಗೊರೆ]

ಇದೀಗ ನಿಮ್ಮ ಫಿಲ್ಮಿಬೀಟ್ ಕನ್ನಡ ಕೆಲವು ಕನ್ನಡ ತಾರೆಯರನ್ನು ಫೋನ್ ನಲ್ಲಿ ಸಂಪರ್ಕಿಸಿದಾಗ ಅವರು ಹಬ್ಬದ ಸಿಹಿಯನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ. ಯುಗಾದಿ ಬಗ್ಗೆ ಯಾರೆಲ್ಲಾ ಏನು ಹೇಳಿದ್ದಾರೆ ಅನ್ನೋದನ್ನ ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ...

ನಟಿ ಸುಕೃತಾ ವಾಗ್ಲೆ

ಮತ್ತೋರ್ವ ಕರಾವಳಿ ಬೆಡಗಿ 'ಜಟ್ಟಾ' ಖ್ಯಾತಿಯ ನಟಿ ಸುಕೃತಾ ವಾಗ್ಲೆ ಅವರು ಯುಗಾದಿ ಆಚರಿಸಲೆಂದೇ ಬೆಂಗಳೂರಿನಿಂದ ತಮ್ಮ ಹುಟ್ಟೂರಾದ ಉಡುಪಿ ಕಡೆ ಪ್ರಯಾಣ ಬೆಳೆಸಿದ್ದಾರೆ. ಈ ನಡುವೆ ಅವರನ್ನು ಸಂಪರ್ಕಿಸಿದಾಗ 'ನಮ್ಮ ಮನೆಯಲ್ಲಿ ಬೆಳಗ್ಗೆ ಬೇಗ ಎದ್ದು ಎಣ್ಣೆ ಸ್ನಾನ ಮಾಡಿ ಆಮೇಲೆ ಪಕ್ಕದಲ್ಲಿರುವ ದೇವಸ್ಥಾನಕ್ಕೆ ಭೇಟಿ ಕೊಟ್ಟು ವಿಶೇಷ ಪೂಜೆ ಸಲ್ಲಿಸುತ್ತೇವೆ. ಆನಂತರ ವಿಶೇಷವಾಗಿ ಯುಗಾದಿ ದಿನ ಮನೆಯವರೆಲ್ಲಾ ಸೇರಿ ಒಟ್ಟಾಗಿ ಬಾಳೆ ಎಲೆ ಊಟ ಮಾಡುತ್ತಾ ಅಮ್ಮನ ಕೈ ರುಚಿ ಸವಿಯುತ್ತೇವೆ'. ಈಗಾಗಲೇ ಮನೆ ಎಲ್ಲಾ ಗುಡಿಸಿ-ಕ್ಲೀನ್ ಮಾಡಿ ಅಲಂಕರಿಸಿದ್ದೇವೆ. ಸಂಜೆಯ ವೇಳೆಗೆ ಶಾಪಿಂಗ್ ಎನ್ನುತ್ತಾರೆ.

ನಟಿ ಯಜ್ಞಾ ಶೆಟ್ಟಿ

'ನಾನು ಮಂಗಳೂರಿನವಳಾದ್ದರಿಂದ ನಮಗೆ ಯುಗಾದಿ ಹಬ್ಬ ಅಷ್ಟು ಜೋರಾಗಿ ಇರೋದಿಲ್ಲ. ನಮ್ಮ ಊರಲ್ಲಿ, (ಮಂಗಳೂರಿನಲ್ಲಿ) ಮನೆಯಲ್ಲಿ ಏಪ್ರಿಲ್ 14 ನಂತರ ಬರುವ 'ಬಿಸು' ಹಬ್ಬವನ್ನು ತುಂಬಾ ಜೋರಾಗಿ ಸೆಲೆಬ್ರೆಟ್ ಮಾಡ್ತಾರೆ. ನಾನು ಸದ್ಯಕ್ಕೆ ಬೆಂಗಳೂರಿನಲ್ಲಿ ಇರೋದ್ರಿಂದ ನನ್ನ ಫ್ರೆಂಡ್ಸ್ ಜೊತೆ ನಾರ್ಮಲ್ ಪೂಜೆ ಮಾಡಿ ಸಿಹಿ ತಿಂದು ಯುಗಾದಿಯನ್ನು ಬರಮಾಡಿಕೊಳ್ಳುತ್ತೇನೆ ಅಂತಾರೆ 'ಉಳಿದವರು ಕಂಡಂತೆ' ಖ್ಯಾತಿಯ ನಟಿ ಕುಡ್ಲದ ಪೊರ್ಲುದ ಪೊಣ್ಣು ಯಜ್ಞಾ ಶೆಟ್ಟಿ ಅವರು.[ಸರಳ ಜೀವನ ವಾಹಿನಿಯಲ್ಲಿ ಯುಗಾದಿ ಹಬ್ಬದ ವಿಶೇಷ ಕಾರ್ಯಕ್ರಮಗಳು]

ನಟಿ ಸೋನು ಗೌಡ

'ಕಿರಗೂರಿನ ಗಯ್ಯಾಳಿಗಳು' ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿರುವುದಕ್ಕೆ ಖುಷಿಯಾಗಿರುವ ನಟಿ ಸೋನು ಗೌಡ ಅವರು ಇದೇ ಸಂಭ್ರಮದಲ್ಲಿ ಹಬ್ಬವನ್ನು ಕೂಡ ಬಹಳ ಗ್ರ್ಯಾಂಡ್ ಆಗಿ ಸೆಲೆಬ್ರೇಟ್ ಮಾಡುತ್ತಿದ್ದಾರೆ. 'ಯುಗಾದಿ ಅಂದ್ರೆ ನನಗೆ ನೆನಪಾಗೋದು ಬೇಳೆ ಒಬ್ಬಟ್ಟು, ಅದೇ ರೀತಿ ನಮ್ಮ ಮನೆಯಲ್ಲೂ ಈ ಬಾರಿ ಬೇಳೆ ಒಬ್ಬಟ್ಟು ಸ್ಪೆಷಲ್. ಆಮೇಲೆ ಎಣ್ಣೆ ಸ್ನಾನ. ನಾನು ಕೂಡ ಈ ಬಾರಿ ಎಣ್ಣೆ ಸ್ನಾನ ಮಾಡಿ ಹೊಸ ಬಟ್ಟೆ ಹಾಕಿಕೊಂಡು ಮನೆಯವರ ಜೊತೆ ಹಬ್ಬ ಆಚರಿಸ್ತಾ ಇದ್ದೀನಿ. ಬೇವು-ಬೆಲ್ಲ ತಿಂದು ಒಳ್ಳೆಯದನ್ನು ಮಾತಾಡ್ತೀನಿ. ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು ಅಂತಾರೆ 'ಕಿರಗೂರಿನ ಗಯ್ಯಾಳಿ' ನಟಿ ಸೋನು ಅವರು.

ನಟ ಕಮ್ ನಿರೂಪಕ ಅಕುಲ್ ಬಾಲಾಜಿ

ಸದ್ಯಕ್ಕೆ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದೇನೆ. ಟ್ರಾವೆಲಿಂಗ್ ನಲ್ಲಿ ಇದ್ದೇನೆ. ನನಗೆ ಎರಡು ಮನೆಯಲ್ಲಿ ಯುಗಾದಿ ಹಬ್ಬ ಇದೆ. ತಾಯಿ ಮನೆಯಲ್ಲಿ ಮತ್ತು ಅತ್ತೆ ಮನೆಯಲ್ಲಿ. ಹಾಗಾಗಿ ಎಲ್ಲಿ ಹೋಗೋದು ಅಂತ ತುಂಬಾ ಕನ್ ಫ್ಯೂಶನ್ ಮಾಡಿಕೊಂಡಿದ್ದೇನೆ. ಜೊತೆಗೆ ನಾನು ಡಯಟ್ ನಲ್ಲಿ ಇದ್ದೇನೆ ಸಿಹಿ ತಿನ್ನೋದಾ? ಕಹಿ ತಿನ್ನೋದಾ? ಅಂತಾನೂ ಕನ್ ಫ್ಯೂಶನ್. ಶೂಟಿಂಗ್ ನಲ್ಲಿ ಟೈಟ್ ಆಗಿ ಇದ್ರೂನೂ ನಾಳೆ ಎರಡು ಮನೆಗೆ ಹೋಗಿ ಯುಗಾದಿ ಆಚರಣೆ ಮಾಡ್ತೀನಿ. ಹೊಸ ವರ್ಷವನ್ನು ಬಹಳ ಸಿಹಿಯಾಗಿ ಆಚರಣೆ ಮಾಡ್ತೀನಿ ಅಂತಾರೆ ನಿರೂಪಣೆಯ ಮೂಲಕ ಎಲ್ಲರ ಗಮನ ಸೆಳೆಯುತ್ತಿರುವ ನಟ ಅಕುಲ್ ಬಾಲಾಜಿ ಅವರು.

ನಟಿ ಹರ್ಷಿಕಾ ಪೂನಚ್ಚ

ತಾವು ಅಭಿನಯಿಸಿರುವ ತೆಲುಗು ಚಿತ್ರ 'ಅಪ್ಪುಡಲಾ ಇಪ್ಪುಡಿಲಾ' ಬಿಡುಗಡೆಗೊಂಡು ಯಶಸ್ವಿ ಪ್ರದರ್ಶನ ಕಾಣುತ್ತಿರುವ ಹಿನ್ನಲೆಯಲ್ಲಿ ಫುಲ್ ಖುಷ್ ಆಗಿರುವ ನಟಿ ಹರ್ಷಿಕಾ ಪೂನಚ್ಚ ಅವರು ಈ ಬಾರಿ ಹೈದರಾಬಾದ್ ನಲ್ಲಿ ಯುಗಾದಿ ಹಬ್ಬವನ್ನು ಸೆಲೆಬ್ರೇಟ್ ಮಾಡಿಕೊಳ್ಳುತ್ತಿದ್ದಾರೆ. 'ಮನೆಯಲ್ಲಿ ಅಮ್ಮ-ಅಪ್ಪ ಹಬ್ಬ ಆಚರಿಸ್ತಾ ಇದ್ದಾರೆ. ನಾನು ಈ ಬಾರಿ ಅವರ ಜೊತೆ ಸೇರಿಕೊಳ್ಳಲು ಆಗಲ್ಲ ಅಂತ ಅನ್ಕೋತೀನಿ. ಆದರೆ ಖಂಡಿತ ಪ್ರಯತ್ನ ಮಾಡ್ತೀನಿ ನಾಳೆ ಬೆಳಗ್ಗೆ ಹೋದ್ರು ಹೋದೆ'. 'ರೇ' ಸಿನಮಾ 50 ದಿನ ಹಾಗೂ ತೆಲುಗು ಸಿನಿಮಾ ಯಶಸ್ವಿ ಪ್ರದರ್ಶನವೇ ನನಗೆ ಯುಗಾದಿ ಹಬ್ಬ ಆಗಿದೆ' ಅಂತಾರೆ ನಟಿ ಹರ್ಷಿಕಾ ಪೂನಚ್ಚ ಅವರು.

ನಟಿ ಸಂಜನಾ ಗಲ್ರಾನಿ

ತೆಲುಗಿನ ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರ ಅದ್ಧೂರಿ ಸಿನಿಮಾ 'ಸರ್ದಾರ್ ಗಬ್ಬರ್ ಸಿಂಗ್' ಯುಗಾದಿ ಹಬ್ಬದಂದು ವಿಶೇಷವಾಗಿ ಬಿಡುಗಡೆ ಆಗುತ್ತಿದೆ. ಈ ಚಿತ್ರದಲ್ಲಿ ವಿಶೇಷ ಪಾತ್ರ ವಹಿಸಿರುವ ಕನ್ನಡತಿ ನಟಿ ಸಂಜನಾ ಗಲ್ರಾನಿ ಅವರು "ಈ ವರ್ಷದ ಯಗಾದಿ ಹಬ್ಬವನ್ನು ಸ್ಪೆಷಲ್ ಆಗಿ ಹೈದರಾಬಾದ್ ನಲ್ಲಿ 'ಗಬ್ಬರ್ ಸಿಂಗ್' ಚಿತ್ರತಂಡದ ಜೊತೆ ಆಚರಿಸಿಕೊಳ್ಳುತ್ತಿದ್ದೇನೆ ಅಂತಾರೆ.

English summary
Kannada Film industry's celebrities reveal plans for the festival that marks the auspicious start of the new year.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada