»   » ಮಹಿಳೆಯರಿಗಾಗಿ ಸ್ಯಾಂಡಲ್ ವುಡ್ ತಾರೆಗಳ ಓಟದ ಸ್ಪರ್ಧೆ

ಮಹಿಳೆಯರಿಗಾಗಿ ಸ್ಯಾಂಡಲ್ ವುಡ್ ತಾರೆಗಳ ಓಟದ ಸ್ಪರ್ಧೆ

Posted By:
Subscribe to Filmibeat Kannada

ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ (ಮಾರ್ಚ್ 8) ಭಾರತದಲ್ಲಿ 'ಕ್ವಾಂಟಾ ಜಿ' ಸಂಸ್ಥೆಯು ಪ್ರಪ್ರಥಮವಾಗಿ ಏಕದಿನದಲ್ಲಿ ಏಕಕಾಲದಲ್ಲಿ ಮೂರು ಮಹಾನಗರಗಳಲ್ಲಿ 'ವುಮೆನ್ ಥಾನ್' ಶೀರ್ಷಿಕೆಯಡಿ ಮ್ಯಾರಥಾನ್ ಕಾರ್ಯಕ್ರಮವನ್ನು ಆಯೋಜಿಸಿದೆ.

ಬೆಂಗಳೂರು, ಚೆನ್ನೈ ಹಾಗೂ ಹೈದರಾಬಾದ್ ನಗರಗಳಲ್ಲಿ ಏಕಕಾಲಕ್ಕೆ ಮ್ಯಾರಥಾನ್ ಓಟ ನಡೆಯಲಿದ್ದು ಸಾವಿರಾರು ಪುರುಷರು ಮ್ಯಾರಥಾನ್ ನಲ್ಲಿ ಭಾಗವಹಿಸಲಿದ್ದಾರೆ. ಸಾಮೂಹಿಕ ಓಟ ಸ್ಪರ್ಧೆಯು ಕ್ರೀಡೆಗಳಲ್ಲಿ ಅತ್ಯುನ್ನತ ಚಟುವಟಿಕೆಯಾಗಿದೆ. ಅಲ್ಲದೆ ಸಾಮೂಹಿಕ ಓಟ ಸ್ಪರ್ಧೆಯು ವಿಶ್ವದಲ್ಲೇ ಅತ್ಯುನ್ನತ ಕ್ರೀಡೆಯಾಗಿದೆ.

Sandalwood celebrities in 'Womanathon' - By Men for Women

ಮಹಿಳೆಯರನ್ನು ಗೌರವಿಸುವ, ಮಹಿಳೆಯರಿಗೆ ಧನ್ಯವಾದ ಅರ್ಪಿಸುವುದೇ ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ತಾಯಿ, ಸಹೋದರಿ, ಗೆಳತಿ ಅಥವಾ ಮಡದಿ ಪ್ರತಿಯೊಬ್ಬ ಪುರುಷರ ಜೀವನವನ್ನು ಸಂಪೂರ್ಣಗೊಳಿಸುತ್ತಾಳೆ. ಆಕೆಯನ್ನು ಗೌರವಿಸುವುದು ಪ್ರತಿಪುರುಷರ ಜವಾಬ್ದಾರಿ.

ಆಕೆಯೊಂದಿಗೆ ಓಟ, ಆಕೆಗಾಗಿ ಓಟ ಎಂಬ ಘೋಷಣಾ ವಾಕ್ಯದೊಂದಿಗೆ ಆಕೆಗೆ ಧನ್ಯವಾದ ಅರ್ಪಿಸಲು ಸಾಮೂಹಿಕ ಓಟ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಇತ್ತೀಚೆಗೆ ಮಹಿಳೆಯರ ವಿರುದ್ಧ ನಡೆಯುತ್ತಿರುವ ದೌರ್ಜನ್ಯಗಳನ್ನು ತಡೆಗಟ್ಟುವ ಸಲುವಾಗಿ ಜಾಗೃತಿ ಮೂಡಿಸುವುದು ಅಗತ್ಯವಾಗಿದ್ದು, ಸಾಮೂಹಿಕ ಸಂಕಲ್ಪ ಕೈಗೊಳ್ಳಬೇಕಾಗಿದೆ.

Sandalwood celebrities in 'Womanathon' - By Men for Women

ಕೇವಲ ಪುರುಷರು ಮಾತ್ರ ಮ್ಯಾರಥಾನ್ ಕಾರ್ಯಕ್ರಮದ ಪ್ರಮುಖರಲ್ಲ. ಮಹಿಳೆಯರಿಗಾಗಿ ನಡೆಯುತ್ತಿರುವ ಈ ಕಾರ್ಯಕ್ರಮದಲ್ಲಿ ಮಹಿಳೆಯರು ಪ್ರಮುಖ ಅತಿಥಿಗಳಾಗಿದ್ದು, ಇದು ನಿಮ್ಮ ಕಾರ್ಯಕ್ರಮ. ‘ವುಮೆನ್ ಥಾನ್' ಕಾರ್ಯಕ್ರಮದಲ್ಲಿ ನಟಿ ಸಂಜನಾ, ಅರ್ಚನಾ ಭಾಗವಹಿಸುತ್ತಿರುವುದು ವಿಶೇಷ.

ಈ ಕಾರ್ಯಕ್ರಮದ ಕುರಿತಂತೆ ಮಾತನಾಡಿದ ಅವರು, "ನನ್ನ ತಾಯಿಯು ಮಹಿಳೆಯಾಗಿದ್ದು ಆಕೆಯ ಅಸಾಧಾರಣ ವ್ಯಕ್ತಿತ್ವಕ್ಕೆ ಗೌರವ ಸಲ್ಲಿಸುವುದಾಗಿ" ಮೆಚ್ಚುಗೆ ವ್ಯಕ್ತಪಡಿಸಿದರು. ಮಹಿಳೆಯನ್ನು ಗೌರವಿಸುವುದು ಮಾತ್ರ ಈ ಸಂಸ್ಥೆಯ ಉದ್ದೇಶವಲ್ಲ. ಮಹಿಳೆಯರಿಗೆ ಶಿಕ್ಷಣ ನೀಡುವುದು, ಸಬಲೀಕರಣಗೊಳಿಸುವುದು ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ.

Sandalwood celebrities in 'Womanathon' - By Men for Women

ಮಹಿಳೆಯರ ಕ್ಷೇಮಾಭಿವೃದ್ಧಿಗಾಗಿ ಅನೇಕ ಕಾರ್ಯಕ್ರಮಗಳನ್ನು ಕೈಗೊಂಡಿದ್ದು ಯಶಸ್ವಿಗೊಳಿಸಿದೆ. ಇದರಿಂದ ಸಾವಿರಾರು ಮಹಿಳೆಯರು ಫಲಾನುಭವಿಗಳಾಗಿದ್ದಾರೆ. ಸಂಸ್ಥೆಯು ಕಾಂಚಿಪುರಂ ಸಮೀಪದ ಪೂಂದನ್‍ತಳಂ ಎಂಬ ಹಳ್ಳಿಯನ್ನು ದತ್ತು ಪಡೆದಿದ್ದು, ಮಹಿಳೆಯರ ಕ್ಷೇಮಾಭಿವೃದ್ಧಿಗಾಗಿ ಅನೇಕ ಜನಪರ ಕಾರ್ಯಕ್ರಮಗಳನ್ನು ಕೈಗೊಂಡಿದೆ.

ಬೆಂಗಳೂರು, ಚೆನ್ನೈ, ಹೈದರಾಬಾದ್ ನಲ್ಲಿ ಮ್ಯಾರಥಾನ್ ಓಟ ಸ್ಪರ್ಧೆ ಆಯೋಜಿಸಿರುವುದು ಮಾತ್ರವಲ್ಲ ಮಹಿಳೆಯರಿಗೆ ಗೌರವ ಸಲ್ಲಿಸುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಮುಂದಿನ ವರ್ಷದ ವೇಳೆಗೆ ಮಹಿಳೆಯರ ದಿನಾಚರಣೆಯ ಅಂಗವಾಗಿ ಭಾರತದ ಮತ್ತಷ್ಟು ಹಲವು ನಗರಗಳಲ್ಲಿ "ವುಮೆನ್ ಥಾನ್" ಕಾರ್ಯಕ್ರಮವನ್ನು ಆಯೋಜಿಸಲು ಸಂಸ್ಥೆಯು ಚಿಂತಿಸುತ್ತಿದ್ದು, ಮಹಿಳೆಯರ ರಕ್ಷಣೆ ಕುರಿತು ಜಾಗೃತಿ ಮೂಡಿಸಲು ಬೃಹತ್ ಅಭಿಯಾನ ಮೂಡಿಸುವುದು ಸಂಸ್ಥೆಯ ಪ್ರಮುಖ ಉದ್ದೇಶವಾಗಿದೆ. (ಫಿಲ್ಮಿಬೀಟ್ ಕನ್ನಡ)

English summary
Quanta-G is now conducting "Womanathon"- By Men for Women to be held on 8th March 2015,International Women's Day. For the FIRST TIME IN INDIA, we are conducting a run which will be held simultaneously across 3 cities. Womanathon will be held simultaneously across Bengaluru, Chennai & Hyderabad cities.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada