For Quick Alerts
  ALLOW NOTIFICATIONS  
  For Daily Alerts

  ಮ್ಯಾನ್ Vs ವೈಲ್ಡ್ ಅಲ್ಲ.. ಮ್ಯಾನ್ with ವೈಲ್ಡ್ 'ಗಂಧದಗುಡಿ'

  |

  ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ ಕನಸಿನ ಸಿನಿಮಾ 'ಗಂಧದಗುಡಿ' ಸಿನಿಮಾ ವಿಶ್ವದಾದ್ಯಂತ ತೆರೆಗಪ್ಪಳಿಸಿ ಅದ್ಭುತ ಓಪನಿಂಗ್ ಪಡೆದುಕೊಂಡಿದೆ. ಸಿನಿಮಾ ನೋಡಿದವರೆಲ್ಲಾ ಮೆಚ್ಚಿ ಕೊಂಡಾಡುತ್ತಿದ್ದಾರೆ. ಎಲ್ಲರೂ ಅಪ್ಪು ಕೈ ಹಿಡಿದು ಕಾಡು ಮೇಡು ಅಲೆದು 'ಗಂಧದಗುಡಿ' ದರ್ಶನ ಮಾಡಿ ಬರುತ್ತಿದ್ದಾರೆ.

  ಪುನೀತ್ ರಾಜ್‌ಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ನರ್ತಕಿ ಥಿಯೇಟರ್‌ನಲ್ಲಿ ಬೆಳ್ಳಂ ಬೆಳಗ್ಗೆ ಅಭಿಮಾನಿಗಳ ಜೊತೆ 'ಗಂಧದಗುಡಿ' ವೀಕ್ಷಿಸುತ್ತಿದ್ದಾರೆ. ಪೇಯ್ಡ್‌ ಪ್ರೀಮಿಯರ್‌ ಶೋಗಳೆಲ್ಲಾ ಸೋಲ್ಡ್‌ಔಟ್ ಆಗಿ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಫ್ಯಾನ್ಸ್ ಶೋಗಳು ಕೂಡ ಹೌಸ್‌ಫುಲ್ ಆಗಿದೆ.ಅಭಿಮಾನಿಗಳು ಸಡಗರ ಸಂಭ್ರಮದಿಂದ ಅಪ್ಪು ಕೊನೆಯ ಸಿನಿಮಾವನ್ನು ಸ್ವಾಗತಿಸಿದ್ದಾರೆ. ಸ್ಯಾಂಡಲ್‌ವುಡ್ ತಾರೆಯರು ಕೂಡ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ನಗರದ ಒರಾಯನ್ ಮಾಲ್‌ನಲ್ಲಿ ಸೆಲೆಬ್ರೆಟಿ ಶೋ ಆಯೋಜಿಸಲಾಗಿತ್ತು. ತೆರೆಮೇಲೆ ರಾಜರತ್ನನ ಅಪರೂಪದ ಪಯಣ ನೋಡಿ ಬೆರಗಾದರು, ಭಾವುಕರಾದರು.

  ಅಶ್ವಿನಿ ಪುನೀತ್ ರಾಜ್‌ಕುಮಾರ್ 'ಗಂಧದ ಗುಡಿ'ಯನ್ನು ಎಲ್ಲಿ ನೋಡ್ತಾರೆ? ಕಾರ್ಯಕ್ರಮದ ಪಟ್ಟಿಯೇನು?ಅಶ್ವಿನಿ ಪುನೀತ್ ರಾಜ್‌ಕುಮಾರ್ 'ಗಂಧದ ಗುಡಿ'ಯನ್ನು ಎಲ್ಲಿ ನೋಡ್ತಾರೆ? ಕಾರ್ಯಕ್ರಮದ ಪಟ್ಟಿಯೇನು?

  ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ, ವಿಜಯ್ ರಾಘವೇಂದ್ರ, ನಟಿಯರಾದ ರಮ್ಯಾ, ಅಮೃತಾ ಅಯ್ಯಂಗಾರ್, ನಿಶ್ವಿಕಾ ನಾಯ್ಡು ಸೇರಿದಂತೆ ಹಲವರು ಸಿನಿಮಾ ನೋಡಿದ್ದಾರೆ. ನಟಿ ರಮ್ಯಾ ಮಾತನಾಡುತ್ತಾ ಅಪ್ಪು ಜೊತೆಗಿನ ನೆನಪುಗಳನ್ನು ಮೆಲುಕು ಹಾಕಿದರು.

  ಜೀವನದ ಪಾಠ ಇದೆ: ರಮ್ಯಾ

  ಜೀವನದ ಪಾಠ ಇದೆ: ರಮ್ಯಾ

  ಸುವರ್ಣ ನ್ಯೂಸ್‌ಗೆ ಮಾತನಾಡಿದ ರಮ್ಯಾ "ಎಲ್ಲರೂ 'ಗಂಧದಗುಡಿ' ಸಿನಿಮಾ ನೋಡಬೇಕು. ಅಮೂಲ್ಯವಾದ ಜೀವನ ಪಾಠ ಚಿತ್ರದಲ್ಲಿದೆ. ಈ ಸಿನಿಮಾ ನೋಡಿದ ಮೇಲೆ ನಾವೆಲ್ಲರೂ ಬದಲಾಗುತ್ತೇವೆ. ಪ್ರತಿಯೊಬ್ಬರ ಮನಸ್ಸಿನಲ್ಲಿ ಒಂದು ಬದಲಾವಣೆ ಆಗುತ್ತದೆ. ಸಿಎಂ ಬೊಮ್ಮಾಯಿ ಸರ್‌ಗೆ ಮನವಿ ಮಾಡುತ್ತೇನೆ ತೆರೆಗೆ ವಿನಾಯಿತಿ ನೀಡುವಂತೆ. ಹೆಚ್ಚು ಜನ ಸಿನಿಮಾ ನೋಡಬೇಕು. ಮುಖ್ಯವಾಗಿ ಮಕ್ಕಳು ನೋಡಬೇಕು. ಪ್ಲಾಸ್ಟಿಕ್, ಕಾಡನ್ನು, ಪ್ರಾಣಿಗಳನ್ನು ಉಳಿಸುವ ಬಗ್ಗೆ ಸಾಕಷ್ಟು ಸಂದೇಶ ಇದೆ. ಒಳ್ಳೆ ಮನುಷ್ಯನಾಗಿರಬೇಕು, ನಮ್ಮ ಪಯಣ ಏನು ಈ ಲೈಫಲ್ಲಿ ಅನ್ನೋದು ಚಿತ್ರದಲ್ಲಿದೆ. ನನಗೆ ಅವರು ವೈಯಕ್ತಿಕವಾಗಿ ಗೊತ್ತು. ತುಂಬಾ ಜನಕ್ಕೆ ಗೊತ್ತಿರಲ್ಲ. ಗಂಧದ ಗುಡಿ ನೋಡಿದರೆ ನಿಮಗೆ ನಿಜವಾಗಲೂ ಅಪ್ಪು ಯಾರು ಎನ್ನುವುದು ಗೊತ್ತಾಗುತ್ತದೆ. ನಮ್ಮ ತಂದೆ ಕಳೆದುಕೊಂಡಾಗ ನನಗೂ ಅನ್ನಿಸಿತ್ತು. ಎಲ್ಲಿ ಹೋಗುತ್ತಾರೆ ಏನು ಅಂತ. ಸಾವು ಎಂದರೆ ಏನು ಬದುಕು ಎಂದರೇನು ಅಂತ. ನನಗೆ ಇವತ್ತು ಅನ್ನಿಸಿತು ಅವರು ಎಲ್ಲೂ ಹೋಗಲ್ಲ, ನಮ್ಮ ಜೊತೆಗೆ ಇರುತ್ತಾರೆ ಅಂತ. ದೈಹಿಕವಾಗಿ ಇಲ್ಲದೇ ಇದ್ದರೂ ಸದಾ ನಮ್ಮ ಮನಸ್ಸಿನಲ್ಲಿ ಇರುತ್ತಾರೆ. ಅಪ್ಪು ಸದಾ ನಮ್ಮ ಜೊತೆಗೆ ಇದ್ದಾರೆ" ಎಂದರು.

  ಯಶ್ ಹೇಳಿದಂತೆ ಕೆಜಿಎಫ್‌ಗಿಂತ ದೊಡ್ಡ ದಾಖಲೆ ಬರೆದ 'ಗಂಧದಗುಡಿ'; ಮಲ್ಟಿಪ್ಲೆಕ್ಸ್ ಕಿಂಗ್ ಈಸ್ ಬ್ಯಾಕ್!ಯಶ್ ಹೇಳಿದಂತೆ ಕೆಜಿಎಫ್‌ಗಿಂತ ದೊಡ್ಡ ದಾಖಲೆ ಬರೆದ 'ಗಂಧದಗುಡಿ'; ಮಲ್ಟಿಪ್ಲೆಕ್ಸ್ ಕಿಂಗ್ ಈಸ್ ಬ್ಯಾಕ್!

  ಅದ್ಭುತ ಬೀಳ್ಗೊಡುಗೆ: ರಕ್ಷಿತ್ ಶೆಟ್ಟಿ

  ಅದ್ಭುತ ಬೀಳ್ಗೊಡುಗೆ: ರಕ್ಷಿತ್ ಶೆಟ್ಟಿ

  "ಅಪ್ಪು ಸರ್ ಹೋಗುವ ಮುಂಚೆ ಕನ್ನಡಿಗರಿಗೆ ಒಂದು ಅದ್ಭುತ ಬೀಳ್ಕೊಡುಗೆ ಕೊಟ್ಟು ಹೋಗಿದ್ದಾರೆ. ಗಂಧದಗುಡಿ ಒಂದೊಳ್ಳೆ ಬೀಳ್ಗೊಡುಗೆ ಎನ್ನಬಹುದು. ಅಪ್ಪು ಸರ್ ಪಕ್ಕ ಕೂತು ಕರ್ನಾಟಕದ ವನ ಸಂಪತ್ತು ಹಾಗೂ ಸಮುದ್ರ ಒಳಗಿರುವ ಜೀವ ಪ್ರತಿಯೊಂದನ್ನು ನೋಡಿದಂತಾಗುತ್ತದೆ. ಸಿನಿಮಾ ಹಂತ ಹಂತವಾಗಿ ನಿಮ್ಮನ್ನು ಒಳಗೆ ಕರೆದುಕೊಂಡು ಹೋಗುತ್ತದೆ. ಕೊನೆ 40 ನಿಮಿಷ ಅವರೊಟ್ಟಿಗೆ ಇರುತ್ತೀರಾ ಅಂತಹ ಅನುಭವ ಆಗುತ್ತದೆ. ನಾವು ಅಪ್ಪು ಸರ್‌ನ ಬೇರೆ ಬೇರೆ ಪಾತ್ರಗಳಲ್ಲಿ ಸುಮಾರು ಸಿನಿಮಾಗಳಲ್ಲಿ ನೋಡಿದ್ದೇವೆ. ಅವರನ್ನು ಅವರಾಗಿಯೇ ನೋಡಿರಲಿಲ್ಲ. ಅವರ ನಿಜ ಜೀವನದಲ್ಲಿ ಹೇಗಿರುತ್ತಾರೆ, ಅವರನ್ನು ನಾವು ಭೇಟಿ ಮಾಡಿದಾಗ ಹೇಗೆ ನೋಡಿದ್ವಿ, ಅದನ್ನು ತೆರೆಮೇಲೆ ನೋಡಿದಂತಾಯಿತು. ಕೊನೆಯಲ್ಲಿ ಒಳ್ಳೆ ಸಂದೇಶ ಇದೆ. ನಾವು ಏನೇ ಕನಸು ಇಟ್ಟುಕೊಂಡು ಕೆಲಸ ಮಾಡಿದರೂ ಪ್ರಕೃತಿಗೂ ಏನಾದರೂ ಮಾಡಬೇಕು ಎನ್ನುವುದನ್ನು ಚೆನ್ನಾಗಿ ತೋರಿಸಿದ್ದಾರೆ.

  "ಪ್ರತಿಯೊಬ್ಬ ಕನ್ನಡಿಗ ನೋಡಬೇಕು": ರಿಷಬ್

  "ಸಿನಿಮಾ ನೋಡಿ ಏನು ಅನಿಸಿತು ಎನ್ನುವುದನ್ನು ಹೇಳುವುದು ಕಷ್ಟ. ಸಿನಿಮಾದಲ್ಲಿ ಎಲ್ಲರೂ ಹೀರೊ ಆಗುತ್ತಾರೆ. ನಿಜ ಜೀವನದಲ್ಲಿ ವಿಶ್ವಮಾನವ ಆಗುವುದು ಗ್ರೇಟ್. ಅಪ್ಪು ಏನೆಲ್ಲಾ ಸಂದೇಶ ಕೊಡಬೇಕು ಎಂದಿದ್ದರು, ಅವರು ಏನು ಅನುಭವಿಸಬೇಕು ಎಂದಿದ್ದರು ಎಲ್ಲವೂ ತೆರೆಗೆ ತಂದಿದ್ದಾರೆ. ಪ್ರತಿಯೊಬ್ಬ ಕನ್ನಡಿಗ ಯಾವುದೇ ಮೂಲೆಯಲ್ಲಿ ಇದ್ದರೂ ಈ ಸಿನಿಮಾ ನೋಡಬೇಕು. ಮಕ್ಕಳಿಗೂ ಸಿನಿಮಾ ತೋರಿಸಬೇಕು. ಮುಖ್ಯವಾಗಿ ಅಮೋಘ ವರ್ಷ ಅವರಿಗೆ ಧನ್ಯವಾದ ಹೇಳಬೇಕು. ಅಪ್ಪು ಸರ್ ಆಸೆಪಟ್ಟಂತೆ ತೋರಿಸಿದ್ದಕ್ಕೆ ಅವರಿಗೆ ಅಭಿನಂದನೆ ಸಲ್ಲಿಸಬೇಕು.

  ಪತ್ನಿ ಜೊತೆ ಮಾತಾಡಲು ಬೆಟ್ಟ ಹತ್ತಿದ್ದ ಅಪ್ಪು: 'ಗಂಧದ ಗುಡಿ'ಯಲ್ಲಿ ಅಶ್ವಿನಿ ಸರ್ಪ್ರೈಸ್ ಎಂಟ್ರಿ!ಪತ್ನಿ ಜೊತೆ ಮಾತಾಡಲು ಬೆಟ್ಟ ಹತ್ತಿದ್ದ ಅಪ್ಪು: 'ಗಂಧದ ಗುಡಿ'ಯಲ್ಲಿ ಅಶ್ವಿನಿ ಸರ್ಪ್ರೈಸ್ ಎಂಟ್ರಿ!

  ನಿಜವಾದ ವಿಶ್ವಮಾನವ: ವಿಜಯ ರಾಘವೇಂದ್ರ

  ನಿಜವಾದ ವಿಶ್ವಮಾನವ: ವಿಜಯ ರಾಘವೇಂದ್ರ

  "ಗಂಧದಗುಡಿ ಸಿನಿಮಾ ನೋಡಿ ಮಾತುಗಳು ಬರ್ತಿಲ್ಲ. ಅದ್ಭುತವಾಗಿತ್ತು. ಇನ್ನುಷ್ಟು ದಶಕಗಳ ಕಾಲ ಅಪ್ಪು ನಮ್ಮ ಜೊತೆ ಇರುತ್ತಾರೆ. ಜೊತೆಯಲ್ಲೇ ಪಕ್ಕದಲ್ಲೇ ಕೂತಿದ್ದಾರೆ ಎನ್ನುವಷ್ಟು ಖುಷಿ. ಅಮೋಘ ವರ್ಷ ಬಹಳ ಚೆನ್ನಾಗಿ ಹೇಳುತ್ತಾರೆ. ಗಂಧದಗುಡಿ ಬರೀ ನಮ್ಮ ನೆನಪಾಗಿ ಅಲ್ಲ ನಮ್ಮ ಮುಂದಿನ ಪೀಳಿಗೆಯ ಮನದ್ದಲ್ಲೂ ಜವಾಬ್ದಾರಿಯಾಗಿ ಇರುತ್ತದೆ ಅಂತ. ಎಮೋಷನಲ್ ಆಗಿ ನಮ್ಮ ಜೊತೆ ಇರುತ್ತದೆ. ನಮ್ಮ ನಿಜವಾದ ವಿಶ್ವಮಾನವ ಅಪ್ಪು ಮಾಮ" ಎಂದು ವಿಜಯ ರಾಘವೇಂದ್ರ ಹೇಳಿದ್ದಾರೆ.

  English summary
  Sandalwood Celebrities reaction after watching Gandhada gudi premier show. Rakshith Shetty, Rishab Shetty, Vijaya raghavendara, Ramya Emotional Words After Watching Puneeth rajkumar's Last Movie.
  Friday, October 28, 2022, 8:40
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X