»   » ಸ್ಯಾಂಡಲ್ ವುಡ್ ನಲ್ಲಿ ಏನೋ ಒಂಥರಾ 'ಕಿಸ್ ಆಫ್ ಲವ್'

ಸ್ಯಾಂಡಲ್ ವುಡ್ ನಲ್ಲಿ ಏನೋ ಒಂಥರಾ 'ಕಿಸ್ ಆಫ್ ಲವ್'

Posted By: ಹರ್ಷಿತಾ ನಾಗರಾಜ್
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  'ಕಿಸ್ ಆಫ್ ಲವ್', ಕೆಳೆದ ಕೆಲ ದಿನಗಳಿಂದ ಎಲ್ಲಾ ಮಾಧ್ಯಮಗಳಲ್ಲಿ, ಪತ್ರಿಕೆಗಳಲ್ಲಿ ಹೆಡ್ ಲೈನ್ಸ್ ಆಗಿರುವ ವಿಚಾರ. ''ಬೀದಿಯಲ್ಲಿ ಮುತ್ತು ನೀಡುವುದು ನಮ್ಮ ಸಂಸ್ಕೃತಿ ಅಲ್ಲ'', ಅಂತ ಅನೇಕ ಮಡಿವಂತರು ಈ ಪ್ರತಿಭಟನೆ ನಡೆಯುವ ಬಗ್ಗೆ ವಿರೋಧಿಸುತ್ತಲೇ ಬಂದಿದ್ದಾರೆ.

  ಆದರೆ, ನೈತಿಕ ಪೊಲೀಸ್ ಗಿರಿ ವಿರುದ್ಧ ನಡೆಸಲಾಗುತ್ತಿರುವ 'ಕಿಸ್ ಆಫ್ ಲವ್' ಗೆ ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳು ಏನಂತಾರೆ? ತೆರೆಮೇಲೆ ಲಿಪ್-ಲಾಕ್ ಮಾಡಿ ಪಬ್ಲಿಸಿಟಿ ಪಡೆದುಕೊಳ್ಳುವ ಕಲಾವಿದರು, ಬೀದಿಯಲ್ಲಿ ನಡೆಯುವ ಈ ಕಾರ್ಯಕ್ರಮಕ್ಕೆ ಜೈಕಾರ ಹಾಕ್ತಾರಾ? [ಮುತ್ತು ಕೊಟ್ರೆ ಏನಾಗ್ತದೆ? ಕಿಸ್ ಅಂದ್ರೆ ಏನು?]

  ಈ ಪ್ರಶ್ನೆಯನ್ನ ಇಟ್ಕೊಂಡು 'ಫಿಲ್ಮಿಬೀಟ್ ಕನ್ನಡ', ಸ್ಯಾಂಡಲ್ ವುಡ್ ತಾರೆಗಳನ್ನ ಸಂಪರ್ಕಿಸಿದಾಗ, ಅವರಿಂದ ಬಂದ ಉತ್ತರಗಳು ಹೀಗಿವೆ. 'ಕಿಸ್ ಆಫ್ ಲವ್' ಬಗ್ಗೆ ಯಾರ್ಯಾರು ಏನಂದ್ರು ಅಂತ ತಿಳಿದುಕೊಳ್ಳುವುದಕ್ಕೆ ಸ್ಲೈಡ್ ಗಳನ್ನ ಕ್ಲಿಕ್ ಮಾಡಿ. [ಕಿಸ್ ಆಫ್ ಕಿಲೋ ಗಟ್ಟಲೇ ಬ್ಯಾಕ್ಟೀರಿಯಾ...]

  ಇನ್ನೊಬ್ಬರನ್ನ ಬನ್ನಿ ಅಂತ ಕರೆಯೋದು ತಪ್ಪು: ಶ್ರೀಮುರುಳಿ

  ''ಅದು ಪಾಪದ ಕೆಲಸ ಅಂತೂ ಅಲ್ಲ. ಅಲ್ಲಿ ಯಾರನ್ನೂ ಕೊಲೆ ಮಾಡ್ತಿಲ್ಲ. ಆದರೆ, ಎಲ್ಲರೂ ಒಂದೇ ತರಹ ಯೋಚನೆ ಮಾಡೋಕೆ ಆಗಲ್ಲ. ಯಾರಿಗೆ ಅದನ್ನ ಮಾಡಲೇಬೇಕು ಅಂತಿದೆಯೋ ಮಾಡಬಹುದು. ಅದು ಅವರಿಗೆ ಬಿಟ್ಟಿದ್ದು. ಬಟ್ ಇನ್ನೊಬ್ಬರನ್ನ ಬನ್ನಿ ಅಂತ ಕರೆಯೋದು ತಪ್ಪು. ಅದಕ್ಕಂತ ಒಂದು ದಿನ 'ಕಿಸ್ ಡೇ' ಅಂತ ಸೆಲೆಬ್ರೇಟ್ ಮಾಡೋದು ತುಂಬಾ ಸಿಲ್ಲಿ. ತುಂಬಾ ಬಿಜಿಯಾಗಿರೋರು ಈ ತರಹದ ಕೆಲಸಗಳನ್ನ ಮಾಡ್ತಿದ್ದಾರೆ ಅನ್ಸತ್ತೆ. ಕಂಪ್ಲೀಟ್ ನಾನ್ ಸೆನ್ಸ್. ಕೆನ್ನೆ ಮೇಲೆ ಕೊಡುವುದನ್ನ 'ಪೆಕ್' ಅಂತಾರೆ. ಕಿಸ್ ಅಂತ ಎಲ್ಲಡೆ ಹೇಳುತ್ತಿರುವುದು ತುಂಬಾ ತಪ್ಪು. ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುತ್ತೆ.'' ['ಉಗ್ರಂ' ರೀಮೇಕ್ ರೈಟ್ಸ್ ನಾಟ್ ಫಾರ್ ಸೇಲ್]

  ಇಟ್ಸ್ ವೇಸ್ಟ್ ಆಫ್ ಟೈಮ್: ಶ್ವೇತಾ ಶ್ರೀವಾತ್ಸವ್

  ''ಇಟ್ಸ್ ವೇಸ್ಟ್ ಆಫ್ ಟೈಮ್. ಅದಕ್ಕಾಗಿ ಪ್ರತಿಭಟನೆ ಮಾಡುವ ಬದಲು ಇನ್ನು ಬೇಕಾದಷ್ಟು ಒಳ್ಳೊಳ್ಳೆ ಕೆಲಸಗಳನ್ನ ಮಾಡಬಹುದು. ಅನಿಮಲ್ ಶೆಲ್ಟರ್ ನಲ್ಲಿ ಪ್ರಾಣಿಗಳನ್ನ ದತ್ತು ಪಡೆದು ಅವುಗಳಿಗೆ ಪ್ರೀತಿ ಕೊಡಿ. ಎಷ್ಟೋ ಮಕ್ಕಳಿಗೆ ಒಳ್ಳೆ ವಿದ್ಯೆ ಸಿಗುತ್ತಿಲ್ಲ. ಅದಕ್ಕೆ ಪ್ರತಿಭಟಿಸಿ. ಅದರಿಂದ ಒಬ್ರಿಗೆ ಸಹಾಯವಾದರೂ ಆಗುತ್ತೆ. ಅದೆಲ್ಲಾ ಬಿಟ್ಟು ಈ ತರಹದ ಪ್ರತಿಭಟನೆ ನಂಗಿಷ್ಟ ಇಲ್ಲ. ಅದರ ಬಗ್ಗೆ ಮಾತಾಡುವುದೇ ಸಮಯ ವ್ಯರ್ಥ. ನಮ್ಮ ಸಂಸ್ಕೃತಿ ಅಲ್ಲ ಅದು. ಯಾಕೆ ಬೇಕು ಇದೆಲ್ಲಾ.'' [ಸಿಂಪಲ್ ಕ್ವೀನ್ ಶ್ವೇತಾ ಶ್ರೀವಾತ್ಸವ್ ಇನ್ಮುಂದೆ ನಿರ್ದೇಶಕಿ]

  ಒಂದು ದಿನ ಮೀಸಲಿಡೋದು ದಡ್ಡತನ: ಚೇತನ್ (ಆ ದಿನಗಳು)

  ''ನನಗೆ ಈ ವಿಷಯದ ಬಗ್ಗೆ ಮಾತನಾಡುವುದಕ್ಕೆ ಇಷ್ಟವಿಲ್ಲ. ಸಮಾಜದಲ್ಲಿ ತಲೆಕೆಡಿಸಿಕೊಳ್ಳುವುದಕ್ಕೆ ಬೇಕಾದಷ್ಟು ವಿಷಯಗಳಿವೆ. ಎಷ್ಟೋ ಮಕ್ಕಳಿಗೆ ತಿನ್ನುವುದಕ್ಕೆ ಊಟವಿಲ್ಲ. ಅದರ ಬಗ್ಗೆ ಯಾರೂ ಮಾತಾಡಲ್ಲ. ಕಿಸ್ ಮಾಡಿ ಪ್ರತಿಭಟನೆ ಮಾಡೋದು. ಅದಕ್ಕಂತಲೇ ಒಂದು ದಿನ ಮೀಸಲಿಡೋದು ದಡ್ಡತನ.''[ಎತ್ತ ಕಳೆದುಹೋದರು 'ಆ ದಿನಗಳು' ಚೇತನ್?]

  ನಾನು ಇದನ್ನ ವಿರೋಧಿಸುತ್ತೀನಿ: ಸಂಜನಾ ಗಲ್ರಾನಿ

  ''ನಮ್ಮ ಆತ್ಮೀಯ ಸ್ನೇಹಿತರಿಗೆ (ಹುಡುಗಿಯರಿಗೆ), ಅಮ್ಮನಿಗೆ, ತಂಗಿಗೆ ಕೆನ್ನೆ ಮೇಲೆ ಮುತ್ತು ಕೊಟ್ಟರೆ ತಪ್ಪಲ್ಲ. ಆದರೆ ಪ್ರೀತಿಯನ್ನ ಹಂಚಬೇಕು ಅಂತ 'ಕಿಸ್ ಆಫ್ ಲವ್' ಹೆಸರಲ್ಲಿ ಈಗ ಮಾಡುತ್ತಿರುವುದು ಸರಿಯಲ್ಲ. ನಾನು ಇದನ್ನ ವಿರೋಧಿಸುತ್ತೀನಿ. ಈ ಪ್ರತಿಭಟನೆಯಲ್ಲಿ ಕ್ಲಾಸ್ ಮತ್ತು ಡಿಗ್ನಿಟಿ ಇಲ್ಲ.''['ಡಾರ್ಲಿಂಗ್' ಚಿತ್ರದ ಐಟಂ ಡಾನ್ಸರ್ ಆಗಿ ಸಂಜನಾ]

  ಎಕ್ಸ್ ಪ್ರೆಸ್ ಮಾಡುವುದು ಎಷ್ಟು ಸರಿ: ಭಾವನಾ

  ''ನಮ್ಮ ಸಮಾಜ ಯಾವುದನ್ನೂ ಒಪ್ಪಿಕೊಳ್ಳುವುದಿಲ್ಲ ಅನ್ನುವುದು ಸುಳ್ಳು. ಪುರಾತನ ಶಿಲಾಬಾಲಕಿಯರನ್ನ ನೋಡಿದರೆ ನಮ್ಮ ಸಮಾಜ ಓಪನ್ ಅನ್ನುವುದು ಗೊತ್ತಾಗುತ್ತೆ. ಆದರೆ ಎಲ್ಲಾದಕ್ಕೂ ಅದರದ್ದೇ ಆದ ಒಂದು ರೀತಿ-ನೀತಿ ಇರುತ್ತದೆ. ಕಿಸ್ಸಿಂಗ್ ಅನ್ನುವಂತದ್ದು ತೀರಾ ವೈಯುಕ್ತಿಕವಾದದ್ದು. ಅದನ್ನ ಪಬ್ಲಿಕ್ ನಲ್ಲಿ ಎಕ್ಸ್ ಪ್ರೆಸ್ ಮಾಡುವುದು ಎಷ್ಟು ಸರಿ? ಅಮ್ಮ ಮಗಳಿಗೆ, ಅಕ್ಕ ತಂಗಿಗೆ 'ಪೆಕ್'ಗಳನ್ನ ಕೊಡಬಹುದು ಅದಕ್ಕೆ ಕಿಸ್ ಅಂತ ಯಾರೂ ಕರೆಯಲ್ಲ. 'ಕಿಸ್' ಅನ್ನುವುದೇ ಬೇರೆ. ಎಲ್ಲದಕ್ಕೂ ಒಂದು ಭಾವನೆ ಇರುತ್ತೆ. ಅದನ್ನೆಲ್ಲಾ ಒಂದೇ ತಕ್ಕಡಿಯಲ್ಲಿ ತೂಗೋಕೆ ಆಗಲ್ಲ. ಇದು ನನಗೆ ಸರಿ ಕಾಣುತ್ತಿಲ್ಲ.'' [ರಮ್ಯಾ 'ನೀರ್ ದೋಸೆ'ಯಲ್ಲಿ ಮತ್ತೆ ಬದಲಾವಣೆ]

  ನಾನು ಇದನ್ನ ವಿರೋಧಿಸುತ್ತೀನಿ: ರೂಪಾ ಅಯ್ಯರ್

  ''ಕಿಸ್ಸಿಂಗ್ ಅನ್ನುವಂತದ್ದು ತೀರಾ ಪ್ರೆಶ್ಶಿಯಸ್. ಒಬ್ಬರನ್ನ ನೋಡಿದ ತಕ್ಷಣ ಆಲಂಗಿಸಿ, ಮುತ್ತು ಕೊಡುವುದು ಕೆಲ ಸಮಾಜಗಳಲ್ಲಿವೆ. ಅದು ಬೇರೆ ವಿಷ್ಯ. ಎಲ್ಲರಿಗೂ ಅವರದ್ದೇ ಆದ ವ್ಯಕ್ತಿತ್ವ ಇರುತ್ತೆ. ಯಾರೇ ಆಗಲಿ, ಎಲ್ಲವನ್ನೂ ಎಲ್ಲರೊಂದಿಗೆ ಹಂಚಿಕೊಳ್ಳುವುದಕ್ಕೆ ಆಗಲ್ಲ. ವೈಯುಕ್ತಿಕವಾಗಿರಬೇಕಾದದ್ದನ್ನ ಅವರಿಗೆ ಬೇಕಾದವರ ಜೊತೆಗೆ ಹಂಚಿಕೊಳ್ಳಬೇಕು. ಪ್ರಕೃತಿಯಲ್ಲಿ ಎಲ್ಲದಕ್ಕೂ ಅದರದ್ದೇ ಆದ ಹೆಸರಿದೆ. ಸಂಬಂಧಗಳಲ್ಲಿ ಭಾವನೆಗಳು ಬದಲಾಗಿರಬಹುದು. ಆದರೆ ಅಪರಿಚಿತರೊಂದಿಗೆ ಕಿಸ್ ಮಾಡುವುದು ನಮ್ಮ ಸಂಸ್ಕೃತಿಯಲ್ಲ. ನೈತಿಕ ಪೊಲೀಸ್ ಗಿರಿಯನ್ನ ವಿರೋಧಿಸುವವರು ಅದನ್ನ ಮಾಡೇ ನಿಲ್ಲಿಸಬೇಕು ಅಂತೇನಿಲ್ಲ. ಅತ್ಯಾಚಾರ ನಿಲ್ಲಿಸುವುದಕ್ಕೆ ಅತ್ಯಾಚಾರವನ್ನ ಮಾಡೇ ನಿಲ್ಲಿಸೋಕೆ ಆಗುತ್ತಾ? ಸಂಸಾರವನ್ನ ಮನೆಯಲ್ಲೇ ನಡೆಸಬೇಕು. ಬೀದಿಯಲ್ಲಿ ನಡೆಸೋಕೆ ಆಗಲ್ಲ. ನಾನು ಇದನ್ನ ವಿರೋಧಿಸುತ್ತೀನಿ.'' [ಗೌತಮ್ ಜತೆ ಏಳುಹೆಜ್ಜೆ ಹಾಕಿದ ರೂಪಾ ಅಯ್ಯರ್]

  ಕಿಸ್ ಮಾಡಿ ಪ್ರತಿಭಟನೆ ಮಾಡೋದು ತಪ್ಪು: ಶ್ವೇತಾ ಪಂಡಿತ್

  ''ನೈತಿಕ ಪೊಲೀಸ್ ಗಿರಿ ಮಾಡಬಾರದು. ಅದನ್ನ ನಾನೂ ವಿರೋಧಿಸುತ್ತೀನಿ. ಅದಕ್ಕೋಸ್ಕರ ಪಬ್ಲಿಕ್ ನಲ್ಲಿ ಕಿಸ್ ಮಾಡಿ ಪ್ರತಿಭಟನೆ ಮಾಡೋದು ತಪ್ಪು. ಪ್ರತಿಭಟನೆಗಾಗಿ ಕಿಸ್ ಮಾಡಿದ್ರೆ ನಮ್ಮ ಸಂಸ್ಕೃತಿಗೂ ಬೆಲೆ ಇಲ್ಲ. ನಮ್ಮ ಭಾವನೆಗಳಿಗೂ ಬೆಲೆ ಇಲ್ಲ ಅಂತಲೇ ಅರ್ಥ. ಈ ಕಾರಣ ಬಿಟ್ಟು ಬೇರೆ ಕಾರಣಕ್ಕೆ ಪ್ರತಿಭಟನೆ ಮಾಡಿದ್ರೆ ಒಳ್ಳೆಯದು.'' [ಅನಂತ್ ಜೊತೆ 'ಬಿಗ್ ಬಾಸ್' ಶ್ವೇತಾ ಕುಚ್ ಕುಚ್]

  ಅದು ಅವರವರ ವೈಯುಕ್ತಿಕ ವಿಚಾರ: ರೂಪಿಕಾ

  ''ಅದು ಅವರವರ ವೈಯುಕ್ತಿಕ ವಿಚಾರ. ನನಗೆ ಅದರಲ್ಲಿ ಅಷ್ಟು ಇಂಟ್ರೆಸ್ಟ್ ಇಲ್ಲ. ಅದು ನಮ್ಮ ಕಲ್ಚರ್ ಅಲ್ಲ. ನನಗೆ ಅದ್ರಲ್ಲಿ ಕಮ್ಫರ್ಟ್ ಇಲ್ಲ. ಆಕ್ಟಿಂಗ್ ಅಂದ್ರೆ ನಾವೇನು ನಿಜವಾಗಲೂ ಕಿಸ್ ಮಾಡೋದಿಲ್ಲ. ನಾನು ಇದುವರೆಗೂ ಯಾವ ಸಿನಿಮಾದಲ್ಲೂ ಲಿಪ್ ಲಾಕ್ ಮಾಡಿಲ್ಲ. ಈ ಕಿಸ್ಸಿಂಗ್ ಡೇ ಬಗ್ಗೆಯೂ ಆಸಕ್ತಿ ಇಲ್ಲ.''['ನವರಂಗಿ' ತಾರೆ ರೂಪಿಕಾ ಪಂಚರಂಗಿ ಚಿತ್ರಗಳು]

  ''ಆ ಕಾನ್ಸೆಪ್ಟ್ ನಂಗೆ ಇಷ್ಟ ಆಗಿಲ್ಲ" : ಹರ್ಷಿಕಾ ಪೂಣಚ್ಚ

  ''ನನಗದರ ಬಗ್ಗೆ ಕಮೆಂಟ್ ಮಾಡೋಕೆ ಇಷ್ಟ ಇಲ್ಲ. ಆ ಕಾನ್ಸೆಪ್ಟ್ ನಂಗೆ ಇಷ್ಟ ಆಗಿಲ್ಲ.'' [ಬಿಗ್ ಬಾಸ್ ನಿಂದ ಹೊರಬಂದ ಹರ್ಷಿಕಾ ಏನ್ಮಾಡ್ತಾರೆ?]

  ಅವರವರ ಅಭಿಪ್ರಾಯಕ್ಕೆ ಬಿಟ್ಟಿದ್ದು: ಯಜ್ಞಾ ಶೆಟ್ಟಿ

  ''ಪಬ್ಲಿಕ್ ನಲ್ಲಿ ಕಿಸ್ ಮಾಡಬೇಕಾ? ಬೇಡ್ವಾ? ಅನ್ನೋದು ಅವರವರ ಅಭಿಪ್ರಾಯಕ್ಕೆ ಬಿಟ್ಟಿದ್ದು. ಆದ್ರೆ ನಾನು ಮಾತ್ರ ಪಬ್ಲಿಕ್ ನಲ್ಲಿ ಕಿಸ್ ಮಾಡೋದಿಲ್ಲ. ಯಾರು ಮಾಡುವುದಕ್ಕೆ ಮುಂದೆ ಬಂದಿದ್ದಾರೆ ಅದು ಅವರ ಪರ್ಸನಲ್ ಚಾಯ್ಸ್. ಎಲ್ಲರೂ ಅದು ನಮ್ಮ ಕಲ್ಚರ್ ಅಲ್ಲ ಅಂತಾರೆ. ಆದ್ರೆ ಪಾಶ್ಚಿಮಾತ್ಯ ಸಂಸ್ಕೃತಿಯಿಂದ ಅನೇಕ ವಿಚಾರಗಳನ್ನ ಅಡಾಪ್ಟ್ ಮಾಡಿಕೊಂಡಿದ್ದೀವಿ. ಅದ್ರಲ್ಲಿ ನಮಗೆ ಯಾವುದು ಕಮ್ಫರ್ಟ್ ಆಗುತ್ತೋ, ಅದನ್ನ ಮಾತ್ರ ಮಾಡ್ಬೇಕು.'' [ಕರಾವಳಿ ಚೆಲುವೆಗೆ ಕೊನೆಗೂ ಬಂತು ಲಕ್ಕಿ ಟೈಂ]

  ನಮ್ಮ ಸಮಾಜಕ್ಕಲ್ಲ ಅದು: ಚೇತನ್ ಚಂದ್ರ

  ''ನಮ್ಮ ಸಮಾಜಕ್ಕಲ್ಲ ಅದು. ರೋಡಲ್ಲೆಲ್ಲಾ ಮುತ್ತು ಕೊಟ್ಕೊಂಡು ಓಡಾಡೋಕೆ ಆಗುತ್ತಾ? ತಾಯಿ ಮಗುಗೆ ಮುತ್ತುಕೊಟ್ಟರೆ ಪರ್ವಾಗಿಲ್ಲ. ಸಿಕ್ಕಿಸಿಕ್ಕಿದವರಿಗೆಲ್ಲಾ ಕೊಡೋದು ಏನ್ ಚಂದ? ಸ್ವಚ್ಛ ಭಾರತ ಅಭಿಯಾನ ಶುರುವಾಗಿದೆ. ಅದನ್ನ ಖುಷಿಯಿಂದ ಎಲ್ಲರೂ ಮಾಡ್ತಿದ್ದಾರೆ. ಅದು ಬಿಟ್ಟು ಇಂತವುಗಳನ್ನೆಲ್ಲಾ ಮಾಡೋಕಾಗುತ್ತಾ? ಅಸಹ್ಯ ಅನ್ಸುತ್ತೆ. ಸ್ವಾತಂತ್ಯ ಸಿಕ್ಕಿದೆ ಅಂತ ಈ ತರ ಎಲ್ಲಾ ಮಾಡಬಾರದು.''[ಐಶ್ವರ್ಯಾಗೆ ಬಿಸ್ಕೆಟ್ ಹಾಕಲಿರುವ ಚೇತನ್ ಚಂದ್ರ]

  ನಮ್ಮ ನಮ್ಮ ಲಿಮಿಟ್ ನಲ್ಲಿ ನಾವಿರಬೇಕು: ಅನುಶ್ರೀ

  ''ಇದೆಲ್ಲಾ ನಮ್ಮ ಸಮಾಜಕ್ಕಲ್ಲವೇ ಅಲ್ಲ. ನಾವೇ ಎಷ್ಟೇ ಮುಂದುವರಿದ್ರೂ, ನಮ್ಮ ನಮ್ಮ ಲಿಮಿಟ್ ನಲ್ಲಿ ನಾವಿರಬೇಕು. ಇದು ಕಂಪ್ಲೀಟ್ ನಾನ್ ಸೆನ್ಸ್. ಕಿಸ್ ಅನ್ನೋದು ಸ್ಪೆಷಲ್ ಮತ್ತು ಪ್ರೈವೇಟ್ ಮೊಮೆಂಟ್. ಅದನ್ನ ಓಪನ್ ಆಗಿ ಸೆಲೆಬ್ರೇಟ್ ಮಾಡೋಥರ ಮಾಡೋದು ಸರಿಯಲ್ಲ. ನನಗದು ಇಷ್ಟ ಆಗೋದಿಲ್ಲ.''['ಬೆಂಕಿಪಟ್ಣ'ಕ್ಕೆ ಬಂದ ರಿಯಾಲಿಟಿ ಬೆಡಗಿ ಅನುಶ್ರೀ]

  English summary
  'Kiss of Love', which has become talk of the town for various reasons. Though many are against it, Sandalwood Celebrities' are quite mum about the topic. Are they really in support of Kiss of Love? Here are the reactions of the few Sandalwood Stars.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more