For Quick Alerts
  ALLOW NOTIFICATIONS  
  For Daily Alerts

  ಡಾ.ರಾಜ್ ಕುಮಾರ್ ಜನ್ಮದಿನ: ಧ್ರುವತಾರೆಯನ್ನು ನೆನೆದ ಸಿನಿ ತಾರೆಯರು

  |

  ಇಂದು ನಟಸಾರ್ವಭೌಮ ಡಾ.ರಾಜ್ ಕುಮಾರ್ ಜನ್ಮದಿನದ ಸವಿನೆನಪು. ಅಭಿಮಾನಿಗಳಿಗೆ ಇಂದು (ಏಪ್ರಿಲ್ 24) ಹಬ್ಬದ ಸಂಭ್ರಮ. ಡಾ.ರಾಜ್ ಅವರ 92ನೇ ವರ್ಷದ ಜನ್ಮದಿನಾಚರಣೆಯ ಸಡಗರದಲ್ಲಿದ್ದಾರೆ ಅನೇಕರು ಶುಭ ಕೋರಿ ರಾಜ್ ಸ್ಮರಣೆ ಮಾಡಿದ್ದಾರೆ. ಪ್ರತಿವರ್ಷ ರಾಜ್ ಕುಮಾರ್ ಹುಟ್ಟುಹಬ್ಬವನ್ನು ರಾಜ್ಯದಾದ್ಯಂತ ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತಿತ್ತು.

  ಕೊರೊನಾ ಹಾವಳಿಯ ಪರಿಣಾಮ ಎರಡು ವರ್ಷಗಳಿಂದ ಅದ್ದೂರಿ ಹುಟ್ಟುಹಬ್ಬಕ್ಕೆ ಬ್ರೇಕ್ ಬಿದ್ದಿದೆ. ಕರ್ಫ್ಯೂ ನಡುವೆಯೂ ಅಭಿಮಾನಿಗಳು ಸರಳವಾಗಿ ರಾಜ್ ಹುಟ್ಟುಹಬ್ಬ ಆಚರಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಅಭಿಮಾನಿಗಳು, ಚಿತ್ರರಂಗದ ಗಣ್ಯರು ಸಾಮಾಜಿಕ ಜಾಲತಾಣದ ಮೂಲಕವೇ ಡಾ.ರಾಜ್ ಗೆ ಶುಭಾಶಯ ಕೋರುತ್ತಿದ್ದಾರೆ. ಜಗ್ಗೇಶ್, ರಮೇಶ್ ಅರವಿಂದ್, ಸಿಂಪಲ್ ಸುನಿ ಸೇರಿದಂತೆ ಅನೇಕ ಗಣ್ಯರು ವಿಶ್ ಮಾಡಿದ್ದಾರೆ. ಮುಂದೆ ಓದಿ...

  ಅಣ್ಣಾವ್ರ ಬಗ್ಗೆ ಹೊನ್ನವಳ್ಳಿ ಕೃಷ್ಣ ಮೊಗೆದು ಕೊಟ್ಟ ನೆನಪ ಸುಧೆಅಣ್ಣಾವ್ರ ಬಗ್ಗೆ ಹೊನ್ನವಳ್ಳಿ ಕೃಷ್ಣ ಮೊಗೆದು ಕೊಟ್ಟ ನೆನಪ ಸುಧೆ

  ನವರಸನಾಯಕ ಜಗ್ಗೇಶ್

  ನವರಸನಾಯಕ ಜಗ್ಗೇಶ್

  'ಅನ್ಯತಾರೆ ಸಾಮಾನ್ಯ ಧ್ರುವತಾರೆ ಅಸಮಾನ್ಯ' 'ಗುರು ಪರಂಪರೆ ಸಾಮಾನ್ಯ, ಗುರುರಾಯರು ಅಸಮಾನ್ಯ' 'ಮನುಷ್ಯ ಸಾಮಾನ್ಯ ಅತಿಮಾನುಷ ಅಸಮಾನ್ಯ' 'ನಟ ಸಾಮಾನ್ಯ ವರನಟ ಅಸಮಾನ್ಯ' 'ಶತಮಾನಕ್ಕೆ ಬಂದು ಹೋದ ಅನೇಕರಲ್ಲಿ ಕಲಾಶ್ರೇಷ್ಠ' 'ಕನ್ನಡಕ್ಕೆ ಅಣ್ಣ ಅಂದರೆ ರಾಜಣ್ಣ' 24/4/1929 ತುಲಾರಾಶಿಯಲ್ಲಿ ಜನಿಸಿದ ಅನರ್ಘ್ಯ ರತ್ನನ ದಿನದ ಶುಭಾಶಯ' ಎಂದು ಜಗ್ಗೇಶ್ ವಿಶ್ ಮಾಡಿದ್ದಾರೆ.

  ಸಿಂಪಲ್ ಸುನಿ

  ಸಿಂಪಲ್ ಸುನಿ

  'ಪದ್ಮಭೂಷಣ, ಕೆಂಟಿಕಿ ಕಲೋನಿಯಲ್, ಕರ್ನಾಟಕರತ್ನ, ನ್ಯಾಷನಲ್ ಅವಾರ್ಡ್, ದಾದಾಸಾಹೇಬ್ ಫಾಲ್ಕೆ, 11 ಕರ್ನಾಟಕ ರಾಜ್ಯ ಪ್ರಶಸ್ತಿ 8 ಫಿಲ್ಮ್ ಫೇರ್ ಪ್ರಶಸ್ತಿ 'ಅಣ್ಣಾವ್ರ ಭಾವಚಿತ್ರದ ಪೋಸ್ಟಲ್ ಸ್ಟ್ಯಾಂಪ್' ಮುಗಿಯದ ಸಾಧನೆಗಳ ಪಟ್ಟಿಯ ಅಭಿಮಾನಿಗಳ ದೇವರು Dr.Rajkumar ರವರಿಗೆ 92ನೇ ಹುಟ್ಟುಹಬ್ಬದ ನಮನಗಳು' ಎಂದು ಸಿಂಪಲ್ ಸುನಿ ರಾಜ್ ಸ್ಮರಣೆ ಮಾಡಿದ್ದಾರೆ.

  ನಟ ರಮೇಶ್ ಅರವಿಂದ್

  ನಟ ರಮೇಶ್ ಅರವಿಂದ್

  ನಟ ರಮೇಶ್ ಅರವಿಂದ್, ಡಾ.ರಾಜ್ ಕುಮಾರ್ ಅವರ ಹಳೆಯ ವಿಡಿಯೋವನ್ನು ಹಂಚಿಕೊಳ್ಳುವ ಮೂಲಕ ನೆನಪಿಸಿಕೊಂಡಿದ್ದಾರೆ. ಡಾ.ರಾಜ್ ಕುಮಾರ್ ಅವರಿಗೆ ರಮೇಶ್ ಅರವಿಂದ್ ಹಾರ ಹಾಕುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

  ಅಪ್ಪನಿಗೆ Puneeth Rajkumar ರಿಂದ ಹೃದಯಸ್ಪರ್ಶಿ ಗೀತೆಯ ಕೊಡುಗೆ | Filmibeat Kannada
  ಪವನ್ ಒಡೆಯರ್ ವಿಶ್

  ಪವನ್ ಒಡೆಯರ್ ವಿಶ್

  ನಿರ್ದೇಶಕ ಪವನ್ ಒಡೆಯರ್ ಕೂಡ ಡಾ.ರಾಜ್ ಸ್ಮರಣೆ ಮಾಡಿದ್ದಾರೆ. ಡಾ.ರಾಜ್ ಕುಮಾರ್ ಅವರ ಸುಂದರ ಫೋಟೊವನ್ನು ಹಂಚಿಕೊಳ್ಳುವ ಮೂಲಕ ವರನಟನಿಗೆ ಶುಭಕೋರಿದ್ದಾರೆ.

  English summary
  Sandalwood Celebrities Remember Dr Rajkumar On his Birth Anniversary.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X