»   » 'ಯೋಗವೇ ಜೀವನ' ಎಂದು ಹೇಳುತ್ತಿರುವ ಚಂದನವನದ ತಾರೆಯರು

'ಯೋಗವೇ ಜೀವನ' ಎಂದು ಹೇಳುತ್ತಿರುವ ಚಂದನವನದ ತಾರೆಯರು

Posted By:
Subscribe to Filmibeat Kannada

ಸಿನಿಮಾ ನಟ, ನಟಿಯರು ತಮ್ಮ ಲುಕ್ ಮತ್ತು ಫಿಟ್ನೆಸ್ ಬಗ್ಗೆ ಬಹಳ ಜಾಗರೂಕತೆಯಿಂದ ಇರುತ್ತಾರೆ. ಅವರ ಆ ಫಿಟ್ನೆಸ್ ಗೆ ಪ್ರಮುಖ ಕಾರಣ ಏನು ಅಂದ್ರೆ ಯೋಗ ಎಂಬ ಉತ್ತರ ಸಿಗುತ್ತದೆ. ವಿಶ್ವ ಯೋಗ ದಿನಾಚಾರಣೆಯಾಗಿರುವ ಇಂದು (ಜೂನ್ 21) ಸೆಲೆಬ್ರಿಟಿಗಳು ಯೋಗದ ಮಹತ್ವದ ಬಗ್ಗೆ ತಿಳಿಸಿದ್ದಾರೆ.

ಹಾಟ್ ಹುಡುಗಿ ಸಂಜನಾ ಅವರ ಮೈ ಜುಮ್ಮೆನಿಸುವ 'ಯೋಗಾಭ್ಯಾಸ'.!

ನಟ ಗಣೇಶ್, ರಾಗಿಣಿ, ಸಂಜನಾ ಗಲ್ರಾನಿ, ಸೇರಿದಂತೆ ಸಾಕಷ್ಟು ನಟ ನಟಿಯರು ಪ್ರತಿದಿನ ಯೋಗ ಮಾಡುತ್ತಾರಂತೆ. ಸಿನಿಮಾದಲ್ಲಿ ಅವರ ಸೌಂದರ್ಯವನ್ನು ನೋಡಿ ಏನು ಇವರ ಸಿಕ್ರೇಟ್ ಎಂಬ ಪ್ರಶ್ನೆ ಅನೇಕರಿಗೆ ಇರುತ್ತದೆ. ಆದರೆ ಅದಕ್ಕೆಲ್ಲ ಕಾರಣ 'ಯೋಗ'. ಯೋಗ ಒಬ್ಬ ಮನುಷ್ಯನಿಗೆ ಎಷ್ಟು ಮುಖ್ಯ ಎನ್ನುವುದನ್ನು ಸ್ವತ ಅನುಭವದಿಂದ ಈ ಸೆಲೆಬ್ರಿಟಿಗಳು ಹೇಳಿದ್ದಾರೆ. ಮುಂದೆ ಓದಿ....

ತಪ್ಪದೇ ಯೋಗ ಮಾಡುತ್ತೇನೆ

''ನಾನು ವಾರದಲ್ಲಿ ನಾಲ್ಕು ದಿನ ಕನಿಷ್ಠ ಒಂದೂವರೆ ಗಂಟೆ ತಪ್ಪದೇ ಯೋಗ ಮಾಡುತ್ತೇನೆ. ಕೊಲೆಸ್ಟ್ರಾಲ್ ಕರಗಿಸುವುದಕ್ಕೆ ವರ್ಕ್ ಔಟ್ ಮಾಡುವುದಕ್ಕಿಂತ ಯೋಗವೇ ಬೆಸ್ಟ್. ಇದನ್ನು ನಾನು ಸ್ವತಃ ಎಕ್ಸಪೀರಿಯನ್ಸ್ ಮಾಡಿದ್ದೇನೆ. - ರಾಗಿಣಿ ದ್ವಿವೇದಿ , ನಟಿ

ನನಗೆ ಡಾ.ರಾಜ್ ಸ್ಫೂರ್ತಿ

''ನಾನು ಚಿಕ್ಕ ವಯಸ್ಸಿನಲ್ಲಿದ್ದಾಗ ಡಾ.ರಾಜ್ ಕುಮಾರ್ ಅವರು ಯೋಗದಿಂದಲೇ ನನ್ನನ್ನು ಮೊದಲು ಸೆಳೆದಿದ್ದರು. ಹೈಸ್ಕೂಲ್ ದಿನಗಳಿಂದ ಈವರೆಗೂ ನಾನು ಯೋಗ ಮಾಡುತ್ತೇನೆ. ಹಾಗಾಗಿ ಆರೋಗ್ಯವನ್ನು ಕಾಪಾಡಿಕೊಂಡು ಬರಲು ಸಾಧ್ಯವಾಗಿದೆ.'' - ಗಣೇಶ್, ನಟ

ಡಾ.ರಾಜ್ ಕುಮಾರ್ ಎಂಬ ಕನ್ನಡದ ಶ್ರೇಷ್ಠ 'ಯೋಗಿ'

ಒಳ್ಳೆಯ ಲೈಫ್ ಸ್ಟೈಲ್ ಗಾಗಿ

''ಪ್ರತಿದಿನ ಒಂದು ಗಂಟೆ 20 ನಿಮಿಷ ಯೋಗ ಮಾಡುತ್ತೇನೆ. 90 ಕೆಜಿಗೂ ಅಧಿಕ ತೂಕವಿದ್ದ ನಾನು ಯೋಗ ಮಾಡಿ 21 ಕೆಜಿ ತೂಕ ಇಳಿಸಿಕೊಂಡಿದ್ದೇನೆ. ಒಳ್ಳೆಯ ಲೈಫ್ ಸ್ಟೈಲ್ ಮತ್ತು ಒಳ್ಳೆಯ ಮನಸ್ಸಿಗೆ ಯೋಗ ಮಾಡುವುದು ಉತ್ತಮ.'' - ಕೋಮಲ್, ನಟ

ಅಮೂಲ್ಯ ಸಮಯ

''ದಿನದಲ್ಲಿ ಅಮೂಲ್ಯ ಸಮಯ ಅಂದರೆ ಯೋಗ ಮಾಡುವ ಕ್ಷಣ. ನನ್ನ ಜೀವನ ಯೋಗದ ಮೇಲೆ ಡಿಪೆಂಡ್ ಆಗಿದೆ. ನನ್ನ ಮನಸ್ಸು, ದೇಹ, ದೇವರು, ಆತ್ಮ ಎಲ್ಲವೂ ಒಂದು ಕಡೆ ಜೋಡಣೆ ಆಗಿರುವುದು ಯೋಗದಿಂದಲೇ.'' - ಸಂಜನಾ ಗರ್ಲಾನಿ

English summary
Sandalwood Celebrities Ganesh, Ragini dwivedi, sanjjanaa Galrani and Komal have done yoga and Greatly Benefited from it.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada