»   » ಸ್ಯಾಂಡಲ್ ವುಡ್ ಕ್ರಿಕೆಟ್ ಲೀಗ್ ಸದ್ಯದಲ್ಲೇ ಶುರು

ಸ್ಯಾಂಡಲ್ ವುಡ್ ಕ್ರಿಕೆಟ್ ಲೀಗ್ ಸದ್ಯದಲ್ಲೇ ಶುರು

By: ಜೀವನರಸಿಕ
Subscribe to Filmibeat Kannada

ಸ್ಟಾರ್ ಗಳು ಫೀಲ್ಡಿಗಿಳಿಯೋ ಸಮಯ ದೂರವಿಲ್ಲ ಅಂತ ಒನ್ ಇಂಡಿಯಾ ಕನ್ನಡ ಸಾಕಷ್ಟು ಹಿಂದೆಯೇ ಸುದ್ದಿ ಪ್ರಕಟಿಸಿತ್ತು. ಅದು ಸ್ಯಾಂಡಲ್ ವುಡ್ ಕ್ರಿಕೆಟ್ ಲೀಗ್ ಅನ್ನೋ ಕಲರ್ಫುಲ್ ಟೂರ್ನಿಯ ಮೂಲಕ. ಈಗ ಆ ಸಿಸಿಎಲ್ ಟೂರ್ನಿಗೆ ಸಮಯ ಹತ್ತಿರವಾಗ್ತಿದೆ.

ಮೊದಲ ಬಾರಿಗೆ ಸ್ಯಾಂಡಲ್ ವುಡ್ ನ್ನು ಒಟ್ಟಾಗಿಸೋಕೆ ನಿರ್ಮಾಪಕ ಕಲ್ಲೂರು ಎಂಟರ್ ಟೈನ್ ಮೆಂಟ್ ಜೊತೆಯಾಗಿ ಎ ಬಿ ನೆಟ್ ವರ್ಕ್ ಆಯೋಜಿಸ್ತಾ ಇರೋ ಸ್ಯಾಂಡಲ್ ವುಡ್ ಕ್ರಿಕೆಟ್ ಲೀಗ್ ನಲ್ಲಿ ಸಿಸಿಎಲ್ ಆಡಿ ಚಾಂಪಿಯನ್ ಗಳಾದ ಕಿಚ್ಚ ಸುದೀಪ್ ಸೇರಿದಂತೆ ಸ್ಯಾಂಡಲ್ ವುಡ್ ಸೂಪರ್ ಕ್ರಿಕೇಟ್ ಪ್ಲೇಯರ್ ಗಳು ಇಲ್ಲಿ ಆಡ್ತಾರೆ. [ಸಿಸಿಎಲ್ ಮುಗಿದಿದೆ ಈಗ ಎಸ್ಸಿಎಲ್ ಶುರುವಾಗಲಿದೆ]

ಮೊದಲ ಕ್ರಿಕೆಟ್ ಲೀಗನ್ ಫುಲ್ ಫ್ರೊಫೆಷನಲ್ಲಾಗಿ ಆಡಿಸಲಿರೋ ಎಸ್ ಸಿ ಎಲ್ ಆಯೋಜಕರು ರಾಜ್ಯದ ಎಂಟು ಜಿಲ್ಲೆಗಳಲ್ಲಿ ಪಂದ್ಯಾಟಗಳನ್ನ ಅಯೋಜಿಸ್ತಿದ್ದಾರೆ. ರಾಜ್ಯದ ಅವಳಿ ನಗರಗಳಾದ ಹುಬ್ಬಳ್ಳಿ-ಧಾರವಾಡ, ಬಿಜಾಪುರ, ಬಾಗಲಕೋಟೆ, ಹಾಸನ ಮಂಡ್ಯ ಮೈಸೂರುಗಳಲ್ಲಿ ಸ್ಯಾಂಡಲ್ ವುಡ್ ಸ್ಟಾರ್ ಗಳು ಮೈದಾನಕ್ಕಿಳೀತಾರೆ.

ಪ್ಲೇಯಿಂಗ್ ಫಾರ್ ಯುನಿಟಿ ಅನ್ನೋ ಉದ್ದೇಶದಡಿ ಆಡ್ತಿರೋ ಈ ಪಂದ್ಯಾಟವನ್ನ ಆಡೋಕೆ ಈಗಾಗ್ಲೇ ಸ್ಯಾಂಡಲ್ ವುಡ್ ಕಿಂಗ್ ಶಿವರಾಜ್ ಕುಮಾರ್ ಸೈ ಅಂದಿದ್ದು ಸದ್ಯದಲ್ಲೇ ಕರ್ಟನ್ ರೈಸರ್ ಕಾರ್ಯಕ್ರಮ ಹುಬ್ಬಳ್ಳಿಯಲ್ಲಿ ನಡೆಯಲಿದೆ. ಫೈನಲ್ ಪಂದ್ಯ ಮಂಡ್ಯದಲ್ಲಿ ನಡೆಯಲಿದೆ.

ಆರು ತಂಡಗಳು ನೂರೆಂಟು ಸ್ಟಾರ್ ಗಳು

ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ಗಳಿಗೇನೂ ಕಡಿಮೆಯಿಲ್ಲ. ಆಕ್ಟಿಂಗ್ ನಲ್ಲಿ ಇಷ್ಟವಾಗೋ ತಾರೆಯರು ಫೀಲ್ಡಿಗಿಳಿದ್ರೆ ಅಲ್ಲಿ ಮತ್ತೂ ಇಷ್ಟವಾಗ್ತಾರೆ. ಆದರೆ 2012ರಲ್ಲಿ ರಾಜ್ ಕಪ್ ನಡೆದಿದ್ದು ಬಿಟ್ರೆ ತಾರೆಯರು ಈ ಎರಡು ವರ್ಷದಲ್ಲಿ ಯಾವ ಪಂದ್ಯಾಟದಲ್ಲೂ ಗ್ರೌಂಡಿಗಿಳಿದಿರಲಿಲ್ಲ. ಈಗ ತಾರೆಯರು ಗ್ರೌಂಡಿಗಿಳಿದ್ರೆ ಅದನ್ನ ನೋಡೋಕೆ ಪ್ರೇಕ್ಷಕರಂತೂ ಕಾದು ಕುಳಿತಿದ್ದಾರೆ.

ದರ್ಶನ್, ಸುದೀಪ್, ಪುನೀತ್, ಯಶ್ ಹೈಲೈಟ್

ಸ್ಯಾಂಡಲ್ ವುಡ್ ನ ಯಂಗ್ ಸ್ಟಾರ್ ಗಳಾದ ಚಾಲೆಂಜಿಂಗ್ ಸ್ಟಾರ್ ದರ್ಶನ್, ಸಿಸಿಎಲ್ ಕರ್ನಾಟಟಕ ಬುಲ್ಡೋಜರ್ಸ್ ಕ್ಯಾಪ್ಟನ್ ಕಿಚ್ಚ ಸುದೀಪ್, ಪವರ್ ಸ್ಟಾರ್ ಪುನೀತ್, ರಾಕಿಂಗ್ ಸ್ಟಾರ್ ಯಶ್ ಗ್ರೌಂಡಿಗಿಳಿದ್ರೆ ಹಬ್ಬ ಕನ್ಫರ್ಮ್.

ಸಿಸಿಎಲ್ ಆಟಗಾರರು ಪ್ರಮುಖ ಆಕರ್ಷಣೆ

ಎರಡು ವರ್ಷಗಳಿಂದ ಸಿಸಿಎಲ್ ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸ್ತಾ ಇರೋ ಸ್ಯಾಂಡಲ್ ವುಡ್ ನ ಸ್ಟಾರ್ ಪ್ಲೇಯರ್ ಗಳಾದ ಪ್ರದೀಪ್, ರಾಜೀವ್, ದೃವ, ಜೆ ಕೆ ಸ್ಯಾಂಡಲ್ ವುಡ್ ಕ್ರಿಕೇಟ್ ಲೀಗ್ ನಲ್ಲೂ ಪ್ರಮುಖ ಆಕರ್ಷಣೆಯಾಗಲಿದ್ದಾರೆ.

ಹಾಸನದಲ್ಲಿ ಸೆಮಿಫೈನಲ್..

ಸ್ಯಾಂಡಲ್ ವುಡ್ ಸ್ಟಾರ್ ಗಳಾದ ಕ್ರಿಕೆಟ್ ಕದನ ಬೆಂಗಳೂರಲ್ಲಿ ನಡೆಯೋದಿಲ್ಲ. ಒಟ್ಟು ಆರು ಜಿಲ್ಲೆಗಳಲ್ಲಿ ಪಂದ್ಯಾಟಗಳು ನಡೆಯಲಿದ್ದು ಸೆಮಿಫೈನಲ್ ಪಂದ್ಯವನ್ನ ಶ್ರೀಸಾಮಾನ್ಯರ ಊಟಿ ಅಂತಾನೇ ಕರೆಸಿಕೊಳ್ಳೋ ಹಾಸನದಲ್ಲಿ ನಡೆಸಲಿದ್ದಾರೆ.

ಸಕ್ಕರೆ ನಾಡು ಮಂಡ್ಯದಲ್ಲಿ ಫೈನಲ್

ಆರು ತಂಡಗಳ ಫೈನಲ್ ಕಾದಾಟ ನಡೆಯೋದು ಸಕ್ಕರೆ ನಾಡು ಮಂಡ್ಯದಲ್ಲಿ. ಚಿತ್ರರಂಗದ ಬಡಾ ಬಡಾ ಸ್ಟಾರ್ ಗಳನ್ನ ಸಕ್ಕರೆ ನಾಡಿಗೆ ಕರೆಸೋ ಯೋಚನೆ ಮಾಡಿದ್ದಾರೆ ಆಯೋಜಕರು.

ಒಟ್ಟಾಗ್ತಾರೆ ಸ್ಟಾರ್ ಗಳು ಆದ್ರೆ ಒಗ್ಗಟ್ಟಾಗ್ತಾರಾ?

ಆದರೆ ಇದೆಲ್ಲದ್ರ ನಡುವೆ ಉಳಿಯೋ ಪ್ರಶ್ನೆ ಒಂದೇ ಸ್ಯಾಂಡಲ್ ವುಡ್ ನ ಒಟ್ಟಾಗಿಸ್ತಾರೆ ಸರಿ. ಆದ್ರೆ ಎಲ್ಲರೂ ಒಗ್ಗಟ್ಟಾಗ್ತಾರಾ ಅನ್ನೋದೇ ಪ್ರಶ್ನೆ. ಈ ಪಂದ್ಯಾಟದ ಮೂಲಕವಾದ್ರೂ ಒಗ್ಗಟ್ಟಾಗಲಿ ಅನ್ನೋ ಆಶಯ ನಮ್ಮದು.

English summary
Sandalwood Cricket League is a officially announced cricket tournament by Kannada Film Industry. More then 120 Kannada celebrities participating in this tournament. The tournament starts soon. 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada