twitter
    For Quick Alerts
    ALLOW NOTIFICATIONS  
    For Daily Alerts

    ಇಡೀ ಸ್ಯಾಂಡಲ್ ವುಡ್ ಒಗ್ಗಟ್ಟಿಗೆ ರಂಗಮಂಚ ಸಿದ್ಧ

    By Harshitha
    |

    ಕರ್ನಾಟಕದ ಸಿನಿಮಾ ಮತ್ತು ಕ್ರಿಕೆಟ್​ ಪ್ರೇಮಿಗಳಿಗೆ ಇದೋ ಇಲ್ಲಿದೆ ಸಿಹಿ ಸುದ್ದಿ. ಇದು ತೆರೆ ಮೇಲೆ ನೋಡೋ ರೀಲ್​ ಸಿನಿಮಾ ಅಲ್ಲ, ಮೈದಾನದಲ್ಲಿ ಕಣ್ಣ ಮುಂದೆ ನಡೆಯುವ ರಿಯಲ್​ ಸಿನಿಮಾ. ಹೌದು, ನಿಮ್ಮ ಅಚ್ಚುಮೆಚ್ಚಿನ ಸ್ಟಾರ್​ಗಳು ಮೈದಾನಕ್ಕಿಳಿದು ಕ್ರಿಕೆಟ್​ ಆಡುವುದನ್ನು ಕಣ್ತುಂಬಿಕೊಳ್ಳುವ ಸುವರ್ಣಾವಕಾಶ ನಿಮಗೆ ಸಿಗಲಿದೆ.[ಸ್ಯಾಂಡಲ್ ವುಡ್ ಕ್ರಿಕೆಟ್ ಲೀಗ್ ಒಗ್ಗಟ್ಟಿನ ಆಟಕ್ಕೆ ರೆಡಿ]

    ಮುಂಬೈ ಮೂಲದ ಲೆಜೆಂಡರಿ ಎಂಟರ್​ಟೈನ್ಮೆಂಟ್​ ಪ್ರೈವೇಟ್​ ಲಿಮಿಟೆಡ್​ ಸಂಸ್ಥೆ ಇಡೀ ಸ್ಯಾಂಡಲ್​ವುಡ್ ನ ಮೈದಾನಕ್ಕಿಳಿಸುವ ಮೂಲಕ ಸ್ಟಾರ್​ಗಳನ್ನು ಒಂದೇ ವೇದಿಕೆ ಮೇಲೆ ತರುವ ನೂತನ ಸಾಹಸಕ್ಕೆ ಕೈಹಾಕಿದೆ. ಇದಕ್ಕೆ ಕನ್ನಡದ ಸೂಪರ್​ಸ್ಟಾರ್​ಗಳೂ ಸಾಥ್​ ನೀಡಲಿದ್ದಾರೆ. [ಸ್ಯಾಂಡಲ್ ವುಡ್ ಕ್ರಿಕೆಟ್ ಲೀಗ್ ಸದ್ಯದಲ್ಲೇ ಶುರು]

    ಇಡೀ ಸ್ಯಾಂಡಲ್ ವುಡ್ ಒಂದಾಗಲಿರುವ ಕ್ರಿಕೆಟ್ ಲೀಗ್ ನ ಸಂಪೂರ್ಣ ಡೀಟೈಲ್ಸ್ ಇಲ್ಲಿದೆ ನೋಡಿ....

    ಎಸ್.​ ಸಿ.ಎಲ್​ ಮೂಲಕ ಒಂದಾಗಲಿರುವ ಸ್ಯಾಂಡಲ್ ವುಡ್

    ಎಸ್.​ ಸಿ.ಎಲ್​ ಮೂಲಕ ಒಂದಾಗಲಿರುವ ಸ್ಯಾಂಡಲ್ ವುಡ್

    ಎಸ್​ .ಸಿ.ಎಲ್​ ಅಂದ್ರೆ (ಸ್ಯಾಂಡಲ್ ವುಡ್ ಕ್ರಿಕೆಟ್​ ಲೀಗ್​). ಇದು ಸ್ಯಾಂಡಲ್​ವುಡ್​ ಸ್ಟಾರ್​ಗಳನ್ನು ಕ್ರಿಕೆಟ್​ ಮೈದಾನದಲ್ಲಿ ಸೇರಿಸುವ ವಿಶೇಷ ಹಾಗೂ ವಿನೂತನ ಪ್ರಯತ್ನ. ಈ ಹಿಂದೆಯೂ ಸ್ಟಾರ್​ಗಳು ಕ್ರಿಕೆಟ್​ ಆಡಿರುವುದನ್ನು ನೀವು ನೋಡಿರಬಹುದು. ಆದ್ರೆ ಎಸ್.​ಸಿ.ಎಲ್​ ಎಲ್ಲಕಿಂತ ವಿಭಿನ್ನ ಮತ್ತು ವಿಶೇಷ.

    ಎಷ್ಟು ತಂಡಗಳು?

    ಎಷ್ಟು ತಂಡಗಳು?

    ಎಸ್​ .ಸಿ.ಎಲ್​ನಲ್ಲಿ ಒಟ್ಟು 8 ತಂಡಗಳಿರುತ್ತವೆ. ಎರಡು ಪೂಲ್​ಗಳಲ್ಲಿ ತಲಾ ನಾಲ್ಕು ತಂಡಗಳು. ಆಯಾ ಪೂಲ್​ನಲ್ಲಿ ಅತಿ ಹೆಚ್ಚು ಗೆಲುವು ಸಾಧಿಸುವ ತಂಡಗಳು ಮುಂದಿನ ಸುತ್ತಿಗೆ ಹೋಗುತ್ತವೆ. ಮೊದಲು ಲೀಗ್​, ನಂತರ ಸೆಮೀಸ್​ ಬಳಿಕ ಫೈನಲ್ಸ್.

    'ಅತಿರಥ ಮಹಾರಥರ' ಹೆಸರು

    'ಅತಿರಥ ಮಹಾರಥರ' ಹೆಸರು

    ಕನ್ನಡ ಚಿತ್ರರಂಗದಲ್ಲಿ ಹಲವು ದಶಕಗಳ ಕಾಲ ಸೇವೆ ಸಲ್ಲಿಸಿದ ಮಹಾನ್​ ನಟರ ಹೆಸರನ್ನೇ ಎಂಟೂ ಟೀಮ್ ಗಳಿಗೂ ನಾಮಕರಣ ಮಾಡಿರೋದು ಎಸ್​.ಸಿ.ಎಲ್​ ನ ಸ್ಪೆಷಾಲಿಟಿ.

    ಪಂದ್ಯಗಳು ಎಲ್ಲೆಲ್ಲಿ?

    ಪಂದ್ಯಗಳು ಎಲ್ಲೆಲ್ಲಿ?

    ಹುಬ್ಬಳ್ಳಿ, ಶಿವಮೊಗ್ಗ, ದಾವಣಗೆರೆ, ಬಾಗಲಕೋಟೆ, ಮೈಸೂರಿನಲ್ಲಿ ಪಂದ್ಯಗಳು ನಡೆಯಲಿದ್ದು, ಫೈನಲ್ ಮ್ಯಾಚ್ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಯೋಜಿಸಲಾಗಿದೆ.

    ಪೂಲ್​ ಎ ತಂಡಗಳು ಇಂತಿವೆ:

    ಪೂಲ್​ ಎ ತಂಡಗಳು ಇಂತಿವೆ:

    ರಾಜ್​ ರೈಡರ್ಸ್​
    ನರಸಿಂಹ ರೋರರ್ಸ್​
    ವಜ್ರಮುನಿ ಹಿಟ್ಟರ್ಸ್​
    ಶಕ್ತಿಪ್ರಸಾದ್ ​ ಥಂಡರ್ಸ್​

    ಪೂಲ್​ ಬಿ ತಂಡಗಳು ಇಂತಿವೆ:

    ಪೂಲ್​ ಬಿ ತಂಡಗಳು ಇಂತಿವೆ:

    ಶಂಕರ್​ ಪ್ಯಾಂಥರ್ಸ್​
    ಕರುನಾಡ ಟೈಗರ್ಸ್
    ತೂಗುದೀಪ ಚಾಲೆಂಜರ್ಸ್​
    ವಿಷ್ಣುವರ್ಧನ ವಾರಿಯರ್ಸ್​

    ಲೋಗೋ ಲಾಂಚ್​

    ಲೋಗೋ ಲಾಂಚ್​

    ಮೊನ್ನೆ ಶನಿವಾರವಷ್ಟೇ ಎಸ್.ಸಿ.ಎಲ್ ಲೋಗೋ ಲಾಂಚ್ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು. ನವರಸ ನಾಯಕ ಜಗ್ಗೇಶ್​, ಲೂಸ್​ ಮಾದ ಯೋಗಿ, ದೂದ್​ಪೇಡಾ ದಿಗಂತ್​ ಸೇರಿದಂತೆ ಚಿತ್ರರಂಗದ ಹಲವು ಮಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

    ಯೋಗಿ ಎಚ್ಚರಿಕೆ

    ಯೋಗಿ ಎಚ್ಚರಿಕೆ

    'ಶಂಕರ್​ ಪ್ಯಾಂಥರ್ಸ್'​ ಟೀಮ್​ನಲ್ಲಿ ಆಡುತ್ತಿರುವ ಲೂಸ್​ ಮಾದ ಯೋಗಿ, ''ನಾವೇ ಈ ಬಾರಿಯ ಎಸ್​ಸಿಎಲ್​ ಗೆಲ್ಲೋದು ಹುಷಾರಾಗಿರಿ'' ಅಂತ ಎಲ್ಲರಿಗೂ ಎಚ್ಚರಿಕೆ ನೀಡಿದರು.

    ಆಯೋಜಕರು ಯಾರು?

    ಆಯೋಜಕರು ಯಾರು?

    ಲೆಜೆಂಡರಿ ಎಂಟರ್​ಟೈನ್ಮೆಂಟ್​ ಪ್ರೈವೇಟ್​ ಲಿಮಿಟೆಡ್​ ಮುಂಬೈ ಮೂಲದ ಸಂಸ್ಥೆಯಾಗಿದ್ದು, ಗಜಾನನ ಎಸ್​.ಕೆ ಇದರ ಸಂಸ್ಥಾಪಕರು. ಜಾಹೀರಾತು ಹಾಗೂ ಸಿನಿಮಾ ನಿರ್ಮಾಣ, ಈವೆಂಟ್​ ಮ್ಯಾನೇಜ್ಮೆಂಟ್​, ಬ್ರ್ಯಾಂಡ್​ ಪ್ರಮೋಷನ್ಸ್​ ಸೇರಿದಂತೆ ಹಲವಾರು ಸಿನಿಮಾ ಹಾಗೂ ಕ್ರಿಕೆಟ್​ ಸಂಬಂಧಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಿರುವ ಹೆಗ್ಗಳಿಕೆ ಲೆಜೆಂಡರಿ ಎಂಟರ್​ಟೈನ್ಮೆಂಟ್​ ಸಂಸ್ಥೆಯದ್ದು. ಇಂತಹ ಅತ್ಯುನ್ನತ ಲೆಜೆಂಡರಿ ಎಂಟರ್​ಟೈನ್ಮೆಂಟ್​ ಸಂಸ್ಥೆ ಈಗ ಕರ್ನಾಟಕಕ್ಕೂ ಪದಾರ್ಪಣೆ ಮಾಡಿದೆ. ಸ್ಯಾಂಡಲ್​ವುಡ್​ ನ ಕ್ರಿಕೆಟ್​ ಮೂಲಕ ಒಂದು ಗೂಡಿಸಲು ಮುಂದಾಗಿದೆ.

    English summary
    Sandalwood Cricket League 2015 official logo was launched on Saturday (July 11th) in Bengaluru. More than 120 Kannada Celebrities are participating in this tournament. The event is organized by Legendary Entertainment Pvt Ltd from Mumbai.
    Monday, July 13, 2015, 15:37
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X