For Quick Alerts
  ALLOW NOTIFICATIONS  
  For Daily Alerts

  ಡ್ರಗ್ಸ್ ಪ್ರಕರಣ: ನಟ ದಿಗಂತ್-ಐಂದ್ರಿತಾ ದಂಪತಿಗೆ ಸಿಸಿಬಿ ನೋಟಿಸ್

  |

  ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಜಾಲದ ನಂಟು ಈಗ ಸ್ಟಾರ್ ದಂಪತಿ ದಿಗಂತ್ ಮತ್ತು ಐಂದ್ರಿತಾ ರೇಯನ್ನು ಸುತ್ತಿಕೊಂಡಿದೆ. ಈ ಸಂಬಂಧ ಸಿಸಿಬಿ ದಿಗಂತ್ ಮತ್ತು ಐಂದ್ರಿತಾಗೆ ನೋಟಿಸ್ ನೀಡಿದೆ ಎಂದ ಹೇಳಲಾಗುತ್ತಿದೆ. ನಾಳೆ (ಸೆಪ್ಟಂಬರ್ 16) ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಹೇಳಿದೆ.

  ಸಂಜನಾ, ರಾಗಿಣಿ ಆಯ್ತು ಈಗ ದಿಗಂತ್, ಐಂದ್ರಿತಾ ಸರದಿ | Oneindia Kannada

  ಸದ್ಯ ಡ್ರಗ್ಸ್ ಪ್ರಕರಣದಲ್ಲಿ ಬಂಧಿತರಾಗಿರುವವರ ಜೊತೆ ದಿಂಗತ್ ಮತ್ತು ಐಂದ್ರಿತಾ ಕಾಣಿಸಿಕೊಂಡಿದ್ದಾರೆ. ಅಲ್ಲದೆ ಬಂಧಿತರು ದಿಗಂತ್-ಐಂದ್ರಿತಾ ಹೆಸರು ಉಲ್ಲೇಖಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಐಂದ್ರಿತಾ ರೈ ಅನೇಕ ಭಾರಿ ವೈಭವ್ ಜೌನ್ ಮತ್ತು ವಿರೇನ್ ಆಯೋಜಿಸಿದ್ದ ಪಾರ್ಟಿಗಳಲ್ಲಿ ಭಾಗಿಯಾಗಿರುವ ಫೋಟೋಗಳು ಹರಿದಾಡುತ್ತಿವೆ. ಪಕ್ಕ ಮಾಹಿತಿ ಮೇರೆಗೆ ದಿಗಂತ್-ಐಂದ್ರಿತಾಗೆ ನೋಟಿಸ್ ನೀಡಲಾಗಿದೆ ಎನ್ನುವ ಮಾಹಿತಿ ಇದೆ.

  ಶೇಖ್ ಫಾಸಿಲ್ ನಟಿ ಐಂದ್ರಿತಾರನ್ನು ಶ್ರೀಲಂಕಾದ ಕೆಸಿನೋ ಪಾರ್ಟಿಗೆ ಆಹ್ವಾನ ಮಾಡುತ್ತಿದ್ದರು ಎನ್ನಲಾಗುತ್ತಿದೆ. ಪಾರ್ಟಿಗೆ ಆಹ್ವಾನ ಮಾಡಿದ ಬಗ್ಗೆ ಐಂದ್ರಿತಾ ಪ್ರತಿಕ್ರಿಯೆ ನೀಡಿರುವ ವಿಡಿಯೋವೊಂದು ವೈರಲ್ ಆಗಿದೆ. ಹಾಗಾಗಿ ಶೇಖ್ ಫಾಸಿಲ್ ಜೊತೆ ಐಂದ್ರಿತಾ ಸಂಪರ್ಕದಲ್ಲಿದ್ದರು ಎನ್ನುವ ಮಾಹಿತಿ ಆಧರಿಸಿ ನೋಟಿಸ್ ನೀಡಲಾಗಿದೆ ಎನ್ನಲಾಗುತ್ತಿದೆ. ಸದ್ಯ ಶೇಖ್ ಫಾಸಿಲ್ ಗಾಗಿ ಹುಡುಕಾಟ ನಡೆಯುತ್ತಿದೆ.

  ಬ್ಯಾಲೀನ್ ಕೆಸಿನೊ ಪಾರ್ಟಿಯಲ್ಲಿ ಐಂದ್ರಿತಾ ಭಾಗಿಯಾಗಿದ್ದರು ಎನ್ನುವ ಶಂಕೆ ಇದೆ. ಸದ್ಯ ಸಿಸಿಬಿ ಇಬ್ಬರಿಗೆ ನೋಟಿಸ್ ನೀಡುತ್ತಿದಂತೆ ಮತ್ತಷ್ಟು ಮಂದಿಗೆ ಆತಂಕ ಹೆಚ್ಚಾಗಿದೆ. ಈಗಾಗಲೇ ಡ್ರಗ್ಸ್ ಪ್ರಕರಣದಲ್ಲಿ ಬಂಧಿಯಾಗಿರುವ ಸಂಜನಾ ಮತ್ತು ರಾಗಿಣಿ ಸ್ಥಿತಿಯೇ ದಿಗಂತ್, ಐಂದ್ರಿತಾಗೆ ಎದುರಾಗುವ ಸಾಧ್ಯತೆ ಇದೆ. ನಾಳೆ ಈ ಸ್ಟಾರ್ ದಂಪತಿ ಸಿಸಿಬಿ ಮುಂದೆ ಹಾಜರಾಗಲಿದ್ದಾರಾ? ಹಾಜರಾದರೆ ಯಾವೆಲ್ಲ ವಿಚಾರಗಳನ್ನು ಬಹಿರಂಗ ಪಡಿಸಲಿದ್ದಾರೆ ಎನ್ನುವ ಕುತೂಹಲ ಮೂಡಿಸಿದೆ.

  English summary
  CCB Summons to Actor Diganth And Actress Aindrita Ray.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X