Don't Miss!
- Sports
ಐಪಿಎಲ್ 2021: ಬೆಂಗಳೂರು vs ಕೊಲ್ಕತ್ತಾ ಮುಖಾಮುಖಿಯಲ್ಲಿ ಯಾರದ್ದು ಮೇಲುಗೈ?
- News
ದೇಶದ ವಿವಿಧ ನಗರಗಳಲ್ಲಿ ಏಪ್ರಿಲ್ 18ರ ಪೆಟ್ರೋಲ್, ಡೀಸೆಲ್ ದರ ಇಲ್ಲಿದೆ
- Automobiles
ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿಗೂ ಮುನ್ನ ಪರಿಶೀಲಿಸಬೇಕಾದ ಸಂಗತಿಗಳಿವು
- Lifestyle
ವಾರ ಭವಿಷ್ಯ: 12 ರಾಶಿಗಳ ರಾಶಿಫಲ ಹೇಗಿದೆ?
- Finance
UMANG APP: ಇಪಿಎಫ್ಗೆ ಸಂಬಂಧಿಸಿದ ಆ್ಯಪ್, ವೈಶಿಷ್ಟ್ಯಗಳೇನು ತಿಳಿಯಿರಿ
- Education
Ninasam Diploma Admission 2020-21: ಮೇ ತಿಂಗಳಲ್ಲಿ ನೀನಾಸಂ ಡಿಪ್ಲೋಮಾ ಪ್ರವೇಶಾತಿ ಆರಂಭ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
2ನೇ ದಿನ ಮುಂದುವರಿದ 'ಡ್ರಗ್ಸ್' ವಿಚಾರಣೆ: ಸ್ಟಾರ್ ನಟಿಯರ ಜೊತೆ ನಿರ್ಮಾಪಕ ಶಂಕರ್ ಗೌಡ ನಂಟು?
ಸ್ಯಾಂಡಲ್‌ವುಡ್ ಡ್ರಗ್ಸ್ ಪ್ರಕರಣ ಮತ್ತೆ ಚುರುಕು ಪಡೆದುಕೊಂಡಿದೆ. ನಿರ್ಮಾಪಕ ಶಂಕರ್ ಗೌಡ ಮನೆ ಹಾಗೂ ಕಚೇರಿ ಮೇಲೆ ದಾಳಿ ನಡೆಸಿದ ಪೊಲೀಸರಿಗೆ ಕೆಲವು ಮಹತ್ವದ ಮಾಹಿತಿಗಳು ಸಿಕ್ಕಿವೆ ಎಂಬ ವಿಚಾರ ಹೊರಬಿದ್ದಿದೆ.
ಶಂಕರ್ ಗೌಡ ಅವರ ಮೊಬೈಲ್, ಲ್ಯಾಪ್‌ಟ್ಯಾಪ್, ಪೆನ್ ಡ್ರೈವ್ ವಶಕ್ಕೆ ಪಡೆದು ಗೋವಿಂದಪುರ ಪೊಲೀಸ್ ಅಧಿಕಾರಿಗಳು ವಿಚಾರಣೆ ನಡೆಸಿದ್ದರು. ಮೊದಲ ದಿನದ ವಿಚಾರಣೆ ವೇಳೆ ಸ್ಟಾರ್ ನಟಿಯರ ಜೊತೆ ಶಂಕರ್ ಗೌಡ ನಂಟು ಹೊಂದಿರುವುದು ಪತ್ತೆಯಾಗಿದೆ. ಖ್ಯಾತ ನಟಿಯರಿಗಾಗಿ ಶಂಕರ್ ಗೌಡ ಡ್ರಗ್ ಪಾರ್ಟಿ ಆಯೋಜಿಸುತ್ತಿದ್ದರು ಎಂಬ ವಿಚಾರ ತಿಳಿದಿದೆ. ಈ ಹಿನ್ನೆಲೆ ಆ ಸ್ಟಾರ್ ನಟಿಯರಿಗೂ ಸಿಸಿಬಿ ಪೊಲೀಸರು ನೋಟಿಸ್ ನೀಡುವ ಸಾಧ್ಯತೆ ಇದೆ. ಈಗ ಎರಡನೇ ದಿನವೂ ಶಂಕರ್ ಗೌಡ ವಿಚಾರಣೆ ಮುಂದುವರೆದಿದೆ. ಮುಂದೆ ಓದಿ...

ಎರಡನೇ ದಿನ ಶಂಕರ್ ಗೌಡ ವಿಚಾರಣೆ
ಡ್ರಗ್ಸ್ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಶಂಕರ್ ಗೌಡ ಮಾರ್ಚ್ 9 ರಂದು ಗೋವಿಂದಪುರ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಿದ್ದರು. ಮೊದಲ ದಿನದ ತನಿಖೆ ವೇಳೆ ಹಲವು ಮಾಹಿತಿ ಕಲೆ ಹಾಕಿರುವ ಪೊಲೀಸರು ಮಾರ್ಚ್ 10 ರಂದು ವಿಚಾರಣೆಗೆ ಬರುವಂತೆ ಸೂಚಿಸಿದ್ದರು. ಈ ಹಿನ್ನಲೆ ಇಂದು ಬೆಳಗ್ಗೆ 11 ಗಂಟೆಗೆ ಶಂಕರ್ ಗೌಡ, ಆತನ ಮ್ಯಾನೇಜರ್ ಭೀಮ, ಫಯೂಮ್, ವಿಕ್ಕಿ ಮಲ್ಹೋತ್ರಾ ಪೊಲೀಸ್ ವಿಚಾರಣೆಗೆ ಬಂದಿದ್ದಾರೆ.
ಡ್ರಗ್ಸ್ ಪ್ರಕರಣ: 'ಕೆಂಪೇಗೌಡ-2' ಸಿನಿಮಾ ನಿರ್ಮಾಪಕನ ಮನೆ ಮೇಲೆ ದಾಳಿ

ಕಾಶ್ಮೀರದಿಂದ ಡ್ರಗ್ಸ್ ತರಿಸುತ್ತಿದ್ದ ಆರೋಪ
ಶಂಕರ್ ಗೌಡ ಅವರು ಸ್ಟಾರ್ ನಟ-ನಟಿಯರಿಗೆ ಡ್ರಗ್ ಪಾರ್ಟಿ ಆಯೋಜಿಸುತ್ತಿದ್ದರು. ಅದಕ್ಕಾಗಿ ಕಾಶ್ಮೀರ ಮೂಲದ ಫಯೂಮ್‌ನಿಂದ ಡ್ರಗ್ಸ್ ತರಿಸಿಕೊಳ್ಳುತ್ತಿದ್ದರು ಎಂಬ ಆರೋಪ ಎದುರಿಸುತ್ತಿದ್ದಾರೆ. ಈ ಸಂಬಂಧ ಪೊಲೀಸರು ಮಾಹಿತಿ ಕಲೆ ಹಾಕಿದ್ದು, ಈ ಹಿನ್ನಲೆ ತನಿಖೆ ಆರಂಭಿಸಿದ್ದಾರೆ. ಎರಡನೇ ದಿನದ ಶಂಕರ್ ಗೌಡ ವಿಚಾರಣೆಯಲ್ಲಿ ಈ ಸಂಬಂಧ ಮತ್ತಷ್ಟು ವಿಚಾರ ಹೊರಬೀಳಲಿದೆ.

ಸ್ಟಾರ್ ನಟಿಯರು ಯಾರು?
ಪ್ರಾಥಮಿಕ ತನಿಖೆ ವೇಳೆ ಶಂಕರ್ ಗೌಡ ಸ್ಟಾರ್ ನಟಿಯರ ಜೊತೆ ನಂಟು ಹೊಂದಿದ್ದರು ಹಾಗೂ ಅವರಿಗಾಗಿ ಪಾರ್ಟಿ ಆಯೋಜಿಸುತ್ತಿದ್ದರು ಎಂಬ ವಿಚಾರ ಹೊರಬಿದ್ದಿದೆ. ಈ ಹಿಂದೆ ಡ್ರಗ್ಸ್ ಕೇಸ್‌ನಲ್ಲಿ ರಾಗಿಣಿ, ಸಂಜನಾ, ದಿಗಂತ್, ಐಂದ್ರಿತಾ, ಅನುಶ್ರೀ, ಗೀತಾ ಭಟ್ ಸೇರಿದಂತೆ ಹಲವರು ವಿಚಾರಣೆಗೆ ಒಳಗಾಗಿದ್ದರು. ಇದೀಗ, ಶಂಕರ್ ಗೌಡ ಜೊತೆ ನಂಟು ಹೊಂದಿರುವ ನಟಿಯರಿಗೂ ಸಿಸಿಬಿ ಪೊಲೀಸರು ನೋಟಿಸ್ ನೀಡಬಹುದೇ ಎಂಬ ಪ್ರಶ್ನೆ ಎದುರಾಗಿದೆ.
ಡ್ರಗ್ಸ್ ಸರಬರಾಜು ಆರೋಪ: ಬಿಗ್ ಬಾಸ್ ಖ್ಯಾತಿಯ ಮಸ್ತಾನ್ ಮನೆ ಮೇಲೆ ಪೊಲೀಸರ ದಾಳಿ

ಬಿಗ್ ಬಾಸ್ ಮಸ್ತಾನ್ ಅರೆಸ್ಟ್
ಅಂದ್ಹಾಗೆ, ಡ್ರಗ್ಸ್ ಪ್ರಕರಣದ ಬೆನ್ನತ್ತಿದ್ದ ಗೋವಿಂದಪುರ ಪೊಲೀಸರಿಗೆ ಬಿಗ್ ಬಾಸ್ ಮಾಜಿ ಸ್ಪರ್ಧಿ ಮಸ್ತಾನ್ ಸಿಕ್ಕಿಬಿದ್ದಿದ್ದರು. ಮಸ್ತಾನ್ ವಿಚಾರಣೆ ವೇಳೆ ನಿರ್ಮಾಪಕ ಶಂಕರ್ ಗೌಡ ಜೊತೆ ನಂಟು ಹೊಂದಿರುವುದು ತಿಳಿದಿದೆ. ಈ ಹಿನ್ನೆಲೆ ಶಂಕರ್ ಗೌಡ ಅವರ ಮನೆ, ಕಚೇರಿ ಮೇಲೆ ದಾಳಿ ನಡೆಸಲಾಗಿತ್ತು.