For Quick Alerts
  ALLOW NOTIFICATIONS  
  For Daily Alerts

  ಸ್ಯಾಂಡಲ್ ವುಡ್ ನ ಎವರ್ ಗ್ರೀನ್ ಜೋಡಿ ಹಕ್ಕಿಗಳು

  By ಉದಯರವಿ
  |

  ಕ್ಯಾಲೆಂಡರ್ ನಲ್ಲಿ ಪ್ರತಿ ವರ್ಷ ಫೆಬ್ರವರಿ 14ನೇ ತಾರೀಖು ಬಂದಷ್ಟೇ ವೇಗವಾಗಿ ಹಿಂದೆ ಸರಿಯುತ್ತದೆ. ಆದರೆ ಪ್ರೇಮಿಗಳು ಮಾತ್ರ ಫೆ.14ನೇ ತಾರೀಖಿನಲ್ಲೇ ನಿಂತುಬಿಡುತ್ತಾರೆ. ಮಧುರ ನೆನಪುಗಳನ್ನು ಮೆಲುಕು ಹಾಕುತ್ತಾ ಹಾಕುತ್ತಾ ಅದರಲ್ಲೇ ಮೈಮರೆಯುತ್ತಾ ಹೋದಂತೆ ಇನ್ನೊಂದು ಪ್ರೇಮಿಗಳ ದಿನ ಬಂದಿರುತ್ತದೆ.

  ಪ್ರೇಮಿಗಳ ದಿನಾಚರಣೆ ಹಿನ್ನೆಲೆಯಲ್ಲಿ ಪ್ರೇಮಿಗಳನ್ನು ಸದಾ ಕೆಣಕುವ ಸ್ಯಾಂಡಲ್ ವುಡ್ ಜೋಡಿಗಳ ಬಗ್ಗೆ ನಾವಿಲ್ಲಿ ವಿವರ ನೀಡುತ್ತಿದ್ದೇವೆ. ಈ ಜೋಡಿ ತೆರೆಯ ಮೇಲೆ ಬಂದರೆ ಸಾಕು ಎಂಥವರೂ ಆಹಾ ಎಂದು ಉದ್ಗರಿಸುತ್ತಿದ್ದರು.

  ತಮ್ಮ ಪಾತ್ರಕ್ಕೆ ಪ್ರಾಣ ತುಂಬುತ್ತಿದ್ದರು. ಅದು ಸಿನಿಮಾ ಎಂಬುದನ್ನೂ ಮರೆತು ನಿಜವಾಗಿಯೂ ಅವರಿಬ್ಬರನ್ನು ಗಂಡ ಹೆಂಡತಿ, ಪ್ರೇಯಸಿ ಪ್ರಿಯಕರನಂತೆ ಭಾವಿಸುತ್ತಿದ್ದರು. ಅಷ್ಟರ ಮಟ್ಟಿಗೆ ಅವರು ತೆರೆಯ ಮೇಲೆ ಪ್ರಭಾವ ಬೀರುತ್ತಿದ್ದರು. ತೆರೆಯ ಮೇಲಿನ ಆ ರೀತಿಯ ಜೋಡಿಗಳು ಸ್ಲೈಡ್ ನಲ್ಲಿ...

  ರಾಜ್ ಕುಮಾರ್ - ಜಯಪ್ರದಾ ಪ್ರಣಯ ಜೋಡಿ

  ರಾಜ್ ಕುಮಾರ್ - ಜಯಪ್ರದಾ ಪ್ರಣಯ ಜೋಡಿ

  ಇವರಿಬ್ಬರನ್ನು ತೆರೆಯ ಮೇಲೆ ನೋಡುವುದೇ ಒಂದು ಆನಂದ. ಕವಿರತ್ನ ಕಾಳಿದಾಸ ಚಿತ್ರದಲ್ಲಿನ ಇವರಿಬ್ಬರ ಭಾವಪೂರ್ಣ ಅಭಿನಯ ಇಂದಿಗೂ ಎಷ್ಟೋ ಪ್ರೇಮಿಗಳಿಗೆ ಸ್ಫೂರ್ತಿ ತುಂಬುತ್ತಿತ್ತು. ಓ ಪ್ರಿಯಮತ ಕರುಣೆಯಾ ತೋರೆಯಾ...ಹಾಡು ಇಂದಿಗೂ ಎಷ್ಟೋ ಪ್ರೇಮಿಗಳ ಪ್ರೇಮಗೀತೆ ಎಂದರೆ ತಪ್ಪಾಗಲಾರದು. ಸನಾದಿ ಅಪ್ಪಣ್ಣ, ಹುಲಿಯ ಹಾಲಿನ ಮೇವು, ಶಬ್ದವೇದಿ ಚಿತ್ರಗಳಲ್ಲೂ ಈ ಜೋಡಿ ಸೂಪರ್ ಅನ್ನಿಸಿಕೊಂಡಿತ್ತು.

  ವಿಷ್ಣುವರ್ಧನ್ - ಸುಹಾಸಿನಿ ಸುಮಧುರ ಜೋಡಿ

  ವಿಷ್ಣುವರ್ಧನ್ - ಸುಹಾಸಿನಿ ಸುಮಧುರ ಜೋಡಿ

  ತೆರೆಯ ಮೇಲೆ ಈ ಜೋಡಿ ಹೇಳಿ ಮಾಡಿಸಿದಂತಿತ್ತು. ಬಂಧನ ಚಿತ್ರದ ಗೀತೆಗಳನ್ನು ಇಂದಿಗೂ ಆಸ್ವಾದಿಸುವ ಲೆಕ್ಕವಿಲ್ಲದಷ್ಟು ಪ್ರೇಮಿಗಳಿದ್ದಾರೆ. ಮಾತಾಡ್ ಮಾತಾಡ್ ಮಲ್ಲಿಗೆ, ಮಾಸ್ಟರ್ ಚಿತ್ರಗಳಲ್ಲೂ ವಿಷ್ಣು ಹಾಗೂ ಸುಹಾಸಿನಿ ಜೋಡಿ ಮೋಡಿ ಮಾಡಿತ್ತು.

  ಅನಂತನಾಗ್ - ಲಕ್ಷ್ಮಿ ಚೆಲುವಿನ ಜೋಡಿ

  ಅನಂತನಾಗ್ - ಲಕ್ಷ್ಮಿ ಚೆಲುವಿನ ಜೋಡಿ

  ತೆರೆಯ ಮೇಲೆ ಈ ಲವ್ಲಿ ಜೋಡಿ ಮಾಡಿದ ಮೋಡಿ ಅಷ್ಟಿಷ್ಟಲ್ಲ. ಕನ್ನಡ ಬೆಳ್ಳೆಪರದೆ ಮೇಲಿನ ಅತ್ಯುತ್ತಮ ಜೋಡಿಗಳಲ್ಲಿ ಅನಂತ್ ನಾಗ್ ಹಾಗೂ ಲಕ್ಷ್ಮಿ ತಮ್ಮದೇ ಛಾಪು ಮೂಡಿಸಿದ್ದರು. ನಾ ನಿನ್ನ ಬಿಡಲಾರೆ, ಒಲವು ಮೂಡಿದಾಗ ಹಾಗೂ ಚಂದನ ಗೊಂಬೆ ಚಿತ್ರಗಳನ್ನು ನೋಡಿದರೆ ಪ್ರೇಮಿಗಳು ಪರವಶರಾಗುತ್ತಾರೆ.

  ರವಿಚಂದ್ರನ್ - ಜೂಹಿ ಚಾವ್ಲಾ ಒಲವಿನ ಜೋಡಿ

  ರವಿಚಂದ್ರನ್ - ಜೂಹಿ ಚಾವ್ಲಾ ಒಲವಿನ ಜೋಡಿ

  ಕನ್ನಡ ಬೆಳ್ಳಿಪರದೆ ಮೇಲೆ ಪ್ರೇಮಲೋಕವನ್ನೇ ಸೃಷ್ಟಿಸಿದ ಜೋಡಿ. ಪ್ರೀತಿ ಮಾಡಬಾರದು ಮಾಡಿದರೆ ಜಗಕೆ ಹೆದರಬಾರದು ಎಂದು ಇಂದಿಗೂ ಪ್ರೇಮಿಗಳ ಹೃದಯದಲ್ಲಿ ಗುನುಗುತ್ತಿರುವ ಹಾಡು. ಶಾಂತಿ ಕ್ರಾಂತಿ, ಕಿಂದರ ಜೋಗಿ ಮೂಲಕವೂ ಈ ಕಿಲಾಡಿ ಜೋಡಿ ಪ್ರೇಮಿಗಳಿಗೆ ಹೊಸ ಸ್ಫೂರ್ತಿ ತುಂಬಿತು.

  ಅಂಬರೀಶ್ - ಸುಮಲತಾ ಆದರ್ಶ ಜೋಡಿ

  ಅಂಬರೀಶ್ - ಸುಮಲತಾ ಆದರ್ಶ ಜೋಡಿ

  ರಿಯಲ್ ಲೈಫ್ ಹಾಗೂ ರೀಲ್ ಲೈಫ್ ಎರಡರಲ್ಲೂ ಆದರ್ಶ ಜೋಡಿ ಎನ್ನಿಸಿಕೊಂಡವರು ಅಂಬರೀಶ್ ಹಾಗೂ ಸುಮಲತಾ. ಇತ್ತೀಚೆಗಿನ ವರದನಾಯಕ ಚಿತ್ರದಲ್ಲಿ ಈ ಜೋಡಿ ಅಭಿನಯಿಸಿ ಮತ್ತೆ ಪ್ರೇಮಿಗಳ ಪಾಲಿಗೆ ಮಧುರ ನೆನಪುಗಳನ್ನು ಮೀಟಿತು.

  ಸುದೀಪ್ - ರಮ್ಯಾ ಸೂಪರ್ ಜೋಡಿ

  ಸುದೀಪ್ - ರಮ್ಯಾ ಸೂಪರ್ ಜೋಡಿ

  ತೆರೆಯ ಮೇಲೆ ಸೂಪರ್ ಜೋಡಿ ಎನ್ನಿಕೊಂಡವರು ಸುದೀಪ್ ಹಾಗೂ ರಮ್ಯಾ. ಜಸ್ಟ್ ಮಾತ್ ಮಾತಲ್ಲಿ, ಕಿಚ್ಚ ಹುಚ್ಚ, ರಂಗ ಎಸ್ಎಸ್ ಎಲ್ ಸಿ ಚಿತ್ರಗಳ ಮೂಲಕ ಬೆಳ್ಳಿತೆರೆಯ ಮೇಲೆ ಮೋಡಿ ಮಾಡಿದ ಜೋಡಿ.

  ದರ್ಶನ್ - ರಕ್ಷಿತಾ ಸ್ವೀಟ್ ಜೋಡಿ

  ದರ್ಶನ್ - ರಕ್ಷಿತಾ ಸ್ವೀಟ್ ಜೋಡಿ

  ಇಬ್ಬರ ಎತ್ತರ, ತೂಕ ಹೇಳಿ ಮಾಡಿಸಿದಂತಿತ್ತು. ಕಲಾಸಿಪಾಳ್ಯ, ಸುಂಟರಗಾಳಿ ಹಾಗೂ ಮಂಡ್ಯ ಚಿತ್ರಗಳ ಮೂಲಕ ಚಿತ್ರಪ್ರೇಮಿಗಳ ಪಾಲಿಗೆ ಸ್ವೀಟ್ ಜೋಡಿ ಎನ್ನಿಸಿಕೊಂಡಿದೆ. ಸುಂಟರ ಗಾಳಿ ಚಿತ್ರದ ಹಾಡಿನಲ್ಲಿ ಇಬ್ಬರೂ ಕುಣಿದು ಪ್ರೇಮದ ಬಿರುಗಾಳಿ ಎಬ್ಬಿಸಿದ್ದನ್ನು ಇನ್ನೂ ಮರೆತಿಲ್ಲ.

  ಪುನೀತ್ - ಭಾವನಾ ಮೆನನ್ ರೊಮ್ಯಾಂಟಿಕ್ ಜೋಡಿ

  ಪುನೀತ್ - ಭಾವನಾ ಮೆನನ್ ರೊಮ್ಯಾಂಟಿಕ್ ಜೋಡಿ

  ಪುನೀತ್ ಜೊತೆ ರಮ್ಯಾ ಎಷ್ಟು ಸೊಗಸಾಗಿ ಕಾಣಿಸುತ್ತಿದ್ದರೋ ಭಾವನಾ ಮೆನನ್ ಸಹ ಅಷ್ಟೇ ರೊಮ್ಯಾಂಟಿಕ್ ಆಗಿ ಅಭಿನಯಿಸಿದ್ದಾರೆ. ಜಾಕಿ ಹಾಗೂ ಯಾರೇ ಕೂಗಾಡಲಿ ಚಿತ್ರಗಳಲ್ಲಿ ಇಬ್ಬರ ಅಭಿನಯ ಪ್ರೇಮಿಗಳ ಪಾಲಿಗೆ ಹೊಸ ಪಾಠ.

  ದಿಗಂತ್ - ಐಂದ್ರಿತಾ ರೇ ರಿಯಲ್ ಜೋಡಿ

  ದಿಗಂತ್ - ಐಂದ್ರಿತಾ ರೇ ರಿಯಲ್ ಜೋಡಿ

  ಇತ್ತೀಚೆಗೆ ಸಿಸಿಎಲ್ ಮ್ಯಾಚ್ ವೇಳೆ ಐಂದ್ರಿತಾ ರೇ ತನ್ನ ಬಾಯ್ ಫ್ರೆಂಡ್ ದಿಗಂತ್ ಬಗ್ಗೆ ಕೇಳದಿದ್ದರೂ ಹೇಳಿದರು. ಅಲ್ಲೇ ಗೊತ್ತಾಗುತ್ತದೆ ಇವರಿಬ್ಬರ ಆನ್ ಸ್ಕ್ರೀನ್ ಕೆಮಿಸ್ಟ್ರಿ ಆಫ್ ಸ್ಕ್ರೀನ್ ವರೆಗೂ ಇರುವುದನ್ನು. ಮನಸಾರೆ ಹಾಗೂ ಪಾರಿಜಾತ ಚಿತ್ರಗಳಲ್ಲಿ ಎಲ್ಲ ಪ್ರೇಮಿಗಳಿಗೂ ಹೊಸ ಸ್ಫೂರ್ತಿ ತುಂಬಿರುವ ಜೋಡಿ.

  ಶಿವ - ಪಾರ್ವತಿ ಮ್ಯಾಚಿಂಗ್ ಜೋಡಿ

  ಶಿವ - ಪಾರ್ವತಿ ಮ್ಯಾಚಿಂಗ್ ಜೋಡಿ

  ಇವರಿಬ್ಬರ ಹೆಸರು ಮ್ಯಾಚ್ ಆದಂತೆ ಈ ಜೋಡಿಯೂ ತೆರೆಯ ಮೇಲೆ ಎಲ್ಲರ ಮೆಚ್ಚಿನ ಜೋಡಿ ಆಗಿದೆ. ಅಂದರ್ ಬಾಹರ್ ಚಿತ್ರದಲ್ಲಿ ಇಬ್ಬರ ಮನೋಜ್ಞ ಅಭಿನಯ ಎಂಥಹ ಪ್ರೇಮಿಗಳನ್ನೂ ಕೆಣಕುವಂತಿದೆ.

  English summary
  valentine's day special, here is some of the best on screen couples who have delivered hits in Sandalwood. The evergreen couple like Rajkumar and Jayaprada, Vishnuvardhan and Suhasini, Ananth Nag and Lakshmi.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X