»   » ಆಗಸ್ಟ್ 1ರಿಂದ ಸ್ಯಾಂಡಲ್ ವುಡ್ ಫುಲ್ ಬಿಜಿ ಮಗಾ

ಆಗಸ್ಟ್ 1ರಿಂದ ಸ್ಯಾಂಡಲ್ ವುಡ್ ಫುಲ್ ಬಿಜಿ ಮಗಾ

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನಲ್ಲಿ ಆಗಸ್ಟ್ ಮೊದಲ ವಾರ ಹಲವು ವಿಶೇಷತೆಗಳ ಮೂಲಕ ರಂಗೇರಲಿದೆ. ಆಷಾಢ ಮುಗಿಯೋವರೆಗೂ ಸ್ಯಾಂಡಲ್ ವುಡ್ ನಲ್ಲಿ ಯಾವುದೇ ಮುಹೂರ್ತಗಳೂ ನಡೆದಿರಲಿಲ್ಲ. ಈಗ ಕಿಚ್ಚ ಸುದೀಪ್ ಅಭಿನಯದ ತೆಲುಗಿನ 'ಅತ್ತಾರಿಂಟಿಕಿ ದಾರೇದಿ' ಚಿತ್ರದ ರೀಮೇಕ್ ಆಗಿರೋ ಕನ್ನಡ ಸಿನಿಮಾದ ಮುಹೂರ್ತ ನಡೆದಿದೆ.

ನಂದಕಿಶೋರ್ ನಿರ್ದೇಶನದ ಟೀಂ ಜೊತೆ ಕಿಚ್ಚ ಸುದೀಪ್ ಶೂಟಿಂಗ್ ಗಾಗಿ ಹೈದರಾಬಾದ್ ಗೆ ಪ್ರಯಾಣ ಬೆಳೆಸಿದ್ದಾರೆ. ಶರಣ್ ಅಭಿನಯದ ರಾಜ ರಾಜೇಂದ್ರ ಸಿನಿಮಾ ಶೂಟಿಂಗ್ ಶುರು ಮಾಡ್ತಿದೆ. ಸಿನಿಮಾ ಮುಹೂರ್ತಗಳು ಸಾಲು ಸಾಲಾಗಿ ಶುರುವಾದ್ರೆ ಆಷಾಢ ಮುಗಿದಂತೆ ಹಬ್ಬಗಳು ಶುರುವಾಗ್ತಿವೆ. ಸಿನಿಮಾ ರಿಲೀಸ್ ಗಳೂ ಶುರುವಾಗ್ತಿವೆ.

ಆದ್ರೆ ಆಗಸ್ಟ್ ಮೊದಲ ವಾರ ಸ್ಯಾಂಡಲ್ ವುಡ್ ನಲ್ಲಿ ಹಲವು ಕಾರ್ಯಕ್ರಮಗಳು ನಡೀತಿವೆ. ಅದ್ರಲ್ಲಿ ನೀವು ಬಿಜಿ ಜೊತೆಗೆ ಬಿಸಿ ಎರಡೂ ಆಗೋದು ಗ್ಯಾರಂಟಿ. ಅಂತಹಾ ಕಾರ್ಯಕ್ರಮಗಳೇನು ಸ್ಲೈಡ್ ನಲ್ಲಿ ನೋಡಿ ಮೈಮರೆಯಿರಿ.

ಸನ್ನಿ ಬರ್ತಿದ್ದಾರೆ ಬೆಂಗಳೂರಿಗೆ

ಸ್ಯಾಂಡಲ್ ವುಡ್ ಗೆ ಹಾಟ್ ಡಾಲ್ ಸನ್ನಿ ಬರ್ತಿದ್ದಾರೆ. ಆಗಸ್ಟ್ ಒಂದಕ್ಕೆ ಬೆಂಗಳೂರಿಗೆ ಬಾಲಿವುಡ್ ಹಾಟ್ ಸೆನ್ಸೇಷನ್ ಸನ್ನಿ ಎಂಟ್ರಿಕೊಡ್ತಿದ್ದಾರೆ. ಪ್ರೇಮ್ ಅಭಿನಯದ 'ಡಿಕೆ' ಸಿನಿಮಾದಲ್ಲಿ ಸನ್ನಿ ಐಟಂ ಡಾನ್ಸ್ ಮಾಡ್ತಾರೆ.

ಪ್ರೇಮ್ ಲಿರಿಕ್ಸ್ ಸನ್ನಿ ಸಖತ್ ಹಾಟ್

ಸನ್ನಿ ಲಿಯೋನ್ ಹಾಡಿಗೆ ಲಿರಿಕ್ಸ್ ಬರೆದಿರೋದು ಸ್ವತಃ ಪ್ರೇಮ್. ಸನ್ನಿ ಆಗಸ್ಟ್ 1ಕ್ಕೆ ಬಿಟೌನ್ ಗೆ ಬಂದ್ರೆ ಮೂರು ದಿನಗಳ ಡೇಟ್ಸ್ ಕೊಟ್ಟಿದ್ದಾರೆ. ಸನ್ನಿ ಬರ್ತಾರೆ ಅಂತ ಹೇಳೀನೇ ಭರ್ಜರಿ ಪಬ್ಲಿಸಿಟಿ ಗಿಟ್ಟಿಸಿಕೊಂಡಿರೋ ಪ್ರೇಮ್, ಸನ್ನಿ ಜೊತೆ ಕುಣೀತಾರಾ ಅಥ್ವಾ ಬೇರೆ ಯಾರಾದ್ರೂ ಹಾಟ್ ಸ್ಟೆಪ್ ಹಾಕ್ತಾರಾ ಗೊತ್ತಿಲ್ಲ

ಶಿವಣ್ಣ ಮಗಳು ನಿರುಪಮಾ ನಿಶ್ಚಿತಾರ್ಥ

ಸ್ಯಾಂಡಲ್ ವುಡ್ ಕಿಂಗ್ ಶಿವರಾಜ್ ಕುಮಾರ್ ಪುತ್ರಿ ನಿರುಪಮಾ ನಿಶ್ಚಿತಾರ್ಥ ಇದೇ ತಿಂಗಳ ಮೂರರಂದು ನಡೆಯಲಿದೆ. ಸ್ಯಾಂಡಲ್ ವುಡ್ ಕಿಂಗ್ ಮನೆಯಲ್ಲಿ ಕಾರ್ಯಕ್ರಮ ಅಂದ್ರೆ ಚಿತ್ರರಂಗವೇ ಅಲ್ಲಿಗೆ ಬರೋದು ಕನ್ಫರ್ಮ್.

ಮೈಸೂರಿನ ವೈದ್ಯ ದಿಲೀಪ್ ಜೊತೆ ನಿಶ್ಚಿತಾರ್ಥ

ಶಿವಣ್ಣ ಪುತ್ರಿ ನಿರುಪಮಾ ಜೊತೆಯಲ್ಲೇ ಓದುತ್ತಿದ್ದ ಮೈಸೂರಿನ ಹ್ಯಾಂಡ್ ಸಮ್ ಹುಡುಗ ದಿಲೀಪ್ ಅನ್ನೋರ ಜೊತೆ ಶಿವಣ್ಣ ಪುತ್ರಿಯ ನಿಶ್ಚಿತಾರ್ಥ ನಡೆಯಲಿದ್ದು ಮದುವೆಯ ಡೇಟ್ ಇನ್ನೂ ಫಿಕ್ಸ್ ಆಗಬೇಕಿದೆ.

ಆರ್ಯನ್ ರಿಲೀಸ್ ಹವಾ

ಆಗಸ್ಟ್ ಒಂದಕ್ಕೆ ರಾಜ್ಯಾದ್ಯಂತ ಮಾತ್ರವಲ್ಲದೆ ದೇಶಾದ್ಯಂತ ಆರ್ಯನ್ ಸಿನಿಮಾ ತೆರೆಕಂಡಿದೆ. ಶಿವರಾಜ್ ಕುಮಾರ್ ಸಿನಿಮಾಗೆ ಮುಂಬೈ, ಚೆನ್ನೈ ಮತ್ತು ಹೈದಾರಾಬಾದ್ ನಲ್ಲೂ ಬೇಡಿಕೆಯಿದೆ. ಹಾಗಾಗಿ 'ಆರ್ಯನ್' ಚಿತ್ರ ದೇಶಾದ್ಯಂತ ಬಿಡುಗಡೆಯಾಗಿ ಹೊಸ ಹವಾ ಎಬ್ಬಿಸಿದೆ.

ಸನ್ನಿ ಬರ್ತಾರೆ ನಿಜಾನಾ ಪ್ರೇಮ್ ಅವರೇ?

ಆದರೆ ಯಾವುದಕ್ಕೂ ಜೋಗಿ ಪ್ರೇಮ್ ವಿಷಯದಲ್ಲಿ ಪ್ರತಿಯೊಂದನ್ನೂ ಮತ್ತೊಮ್ಮೆ ಕನ್ಫರ್ಮ್ ಮಾಡಿಕೊಳ್ಳಲೇಬೇಕು. ಯಾಕಂದ್ರೆ ಪ್ರೇಮ್ ಹೇಳೋದೆಲ್ಲ ಸತ್ಯವಲ್ಲ ಹಾಗಂತ ಸುಳ್ಳೂ ಅಲ್ಲ ಅನ್ನುತ್ತೆ ಗಾಂಧಿನಗರ. ಒಟ್ಟಾರೆ ಆಗಸ್ಟ್ ಮೊದಲವಾರ ಗಾಂಧಿನಗರದಲ್ಲಿ ಭರ್ಜರಿ ಕಾರ್ಯಕ್ರಮಗಳಿವೆ.

English summary
Sandalwood movie indutry is in zoom from 1st August 2014. Because series of programmes, events took place in the month. Sunny Leone all set to enter Sandalwood, Shivrajkumar daughter Dr Nirupama engagement held on 3rd August.
Please Wait while comments are loading...