»   » 'ಚಂದ್ರಲೇಖ'ಗೆ ಬೆನ್ನುತಟ್ಟಿದ ಸ್ಯಾಂಡಲ್ ವುಡ್ ಸ್ಟಾರ್ಸ್

'ಚಂದ್ರಲೇಖ'ಗೆ ಬೆನ್ನುತಟ್ಟಿದ ಸ್ಯಾಂಡಲ್ ವುಡ್ ಸ್ಟಾರ್ಸ್

Posted By:
Subscribe to Filmibeat Kannada

ಜನ ಮನ್ನಣೆ ಗಳಿಸಿ ಮುನ್ನುಗುತ್ತಿರುವ ಹಾಸ್ಯ ರಂಜನೆಯ ಜೊತೆಗೆ ಹಾರರ್ ಅಂಶ ಇಟ್ಟುಕೊಂಡಿರುವ 'ಫನ್ ಫಿಯರ್ ರೊಮಾನ್ಸ್' ಚಿತ್ರ 'ಚಂದ್ರಲೇಖ'. ಇತ್ತೀಚಿಗೆ ಒಂದು ವಿಶೇಷ ಪ್ರದರ್ಶನವನ್ನು ಮಲ್ಲೇಶ್ವರದ ಮಂತ್ರಿ ಮಾಲ್ ಐನಾಕ್ಸ್ ಚಿತ್ರಮಂದಿರದಲ್ಲಿ ಏರ್ಪಡಿಸಲಾಗಿತ್ತು.

ಚಿತ್ರ ತಂಡದ ಜೊತೆಗೆ 'ಚಂದ್ರಲೇಖ' ಸಿನೆಮವನ್ನು ವೀಕ್ಷಿಸಲು ನಾಯಕಿ ರಾಧಿಕಾ ಪಂಡಿತ್, ಮೇಘನಾ, ಅಜಯ್ ರಾವ್, ಶ್ರೀಮುರಳಿ, ವಿಜಯ ರಾಘವೇಂದ್ರ, ನಿರ್ಮಾಪಕ ರಾಮು, ಶ್ರೀನಿವಾಸಮೂರ್ತಿ, ಲೋಕನಾಥ್, ನಿರ್ದೇಶಕ ಸುನಿ, ಶಶಾಂಕ್ ಹಾಗೂ ಇನ್ನಿತರರು ಆಗಮಿಸಿದ್ದರು. [ಚಂದ್ರಲೇಖ ಚಿತ್ರವಿಮರ್ಶೆ]


ಆರು ಘಂಟೆಯ ಪ್ರದರ್ಶನ ವೀಕ್ಷಿಸಿದ ನಂತರ ಆಹ್ವಾನಿತರೆಲ್ಲರೂ ಚಿತ್ರದ ಕಾಮಿಡಿ ಅಂಶವನ್ನು ಬಹಳವಾಗಿ ಕೊಂಡಾಡಿದರು. ಒಂದು ಹಾರರ್ ಸಿನಿಮಾದಲ್ಲಿ ಕಾಮಿಡಿ ಅಂಶಗಳನ್ನು ಇಷ್ಟು ಸೊಗಸಾಗಿ ಪೋಣಿಸಿ ನೀಡಬಹುದು ಎಂಬುದು ಗಮನಾರ್ಹ ಅಂಶ ಎಂದರು. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

ಇದಿಷ್ಟೇ ಅಲ್ಲದೆ ನಿರ್ದೇಶಕ ಓಂ ಪ್ರಕಾಶ್ ರಾವ್ ಅವರ ಚಾಕಚಕ್ಯತೆ, ಸುಮಧುರ ಹಾಡುಗಳು, ನಾಯಕ ಚಿರಂಜೀವಿ ಸಾರ್ಜಾ ಹಾಗೂ ಸಾನ್ವಿ ಶ್ರೀವತ್ಸ ಅವರ ಅಭಿನಯವನ್ನು ಪ್ರಶಂಸಿದರು.

ತೆಲುಗಿನ ಯಶಸ್ವಿ ಚಿತ್ರ 'ಪ್ರೇಮ ಕಥಾ ಚಿತ್ರಂ' ರೀಮೇಕ್ 'ಚಂದ್ರಲೇಖ'. ರೀಮೇಕ್ ಚಿತ್ರಗಳನ್ನು ಮಾಡುವುದರಲ್ಲಿ ಬಹಳಷ್ಟು ನುರಿತಿರುವ ಓಂ ಪ್ರಕಾಶ್ ರಾವ್ ಅವರು ಈ ಬಾರಿಯೂ ಗೆಲುವಿನ ನಗೆ ಬೀರಿದ್ದಾರೆ. ಒಂದೇ ಮನೆಯಲ್ಲಿ ನಡೆಯುವ ಚಿತ್ರದ ಬಹುತೇಕ ಕಥೆ ಪ್ರೇಕ್ಷಕರನ್ನು ಸೀಟಿಗೆ ಅಂಟಿಕುಳಿತುಕೊಳ್ಳುವಂತೆ ಮಾಡುತ್ತದೆ. (ಒನ್ಇಂಡಿಯಾ ಕನ್ನಡ)

English summary
Chiranjeevi Sarja's latest "Fun Fear Romance" movie 'Chandaralekha' showing successfully and it has has completed three weeks at the box office. Recently special screening arranged at Mantri Mall at Malleswaram, Bangalore. Sandalwood stars laud the movie.
Please Wait while comments are loading...