»   » ನವೆಂಬರ್ 28, 29 ಸ್ಯಾಂಡಲ್ ವುಡ್ಡಿಗೆ ರಜಾ..!

ನವೆಂಬರ್ 28, 29 ಸ್ಯಾಂಡಲ್ ವುಡ್ಡಿಗೆ ರಜಾ..!

Posted By:
Subscribe to Filmibeat Kannada

ನಟಸಾರ್ವಭೌಮ ಡಾ.ರಾಜ್ ಕುಮಾರ್ ಸ್ಮಾರಕ ನವೆಂಬರ್ 29ರಂದು ಲೋಕಾರ್ಪಣೆ ಮಾಡಲಾಗುತ್ತದೆ. ಈ ದಿನ ಕನ್ನಡ ಚಿತ್ರರಂಗದ ನೆನಪಿನ ಪುಟಗಳಲ್ಲಿ ಅಚ್ಚಳಿಯದಂತಿರಬೇಕು ಅಂತ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಡಾ.ರಾಜ್ ಸ್ಮಾರಕ ಲೋಕಾರ್ಪಣೆಯ ಜೊತೆಗೆ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇದಕ್ಕಾಗಿ ನವೆಂಬರ್ 28 ಮತ್ತು 29 ರಂದು ಇಡೀ ಕನ್ನಡ ಚಿತ್ರರಂಗಕ್ಕೆ ರಜೆಯನ್ನ ಘೋಷಿಸಿದೆ.

ಇಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ರೆಬೆಲ್ ಸ್ಟಾರ್, ವಸತಿ ಸಚಿವ ಡಾ.ಅಂಬರೀಷ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಯಿತು. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ಹಿರಿಯ ನಟಿ ಲೀಲಾವತಿ, ಜಯಂತಿ, ದೊಡ್ಡಣ್ಣ ಮುಂತಾದ ಗಣ್ಯರು ಸಭೆಯಲ್ಲಿ ಪಾಲ್ಗೊಂಡು ಡಾ.ರಾಜ್ ಸ್ಮಾರಕ ಅನಾವರಣವನ್ನ ದೊಡ್ಡ ಹಬ್ಬವಾಗಿ ಆಚರಿಸಬೇಕು ಅಂತ ಚರ್ಚಿಸಿದರು.

Sandalwood leave on November 28th on 29th

ನವೆಂಬರ್ 29ರಂದು ಡಾ.ರಾಜ್ ಸ್ಮಾರಕ ಅನಾವರಣವಾದ ಬಳಿಕ ಸಂಜೆ ಅರಮನೆ ಮೈದಾನದಲ್ಲಿ ಅದ್ದೂರಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಕಲಾಸಾಮ್ರಾಟ್ ಎಸ್.ನಾರಾಯಣ್ ನೇತೃತ್ವದಲ್ಲಿ ಚಿತ್ರರಂಗದ ಎಲ್ಲಾ ನಟ-ನಟಿಯರು, ತಂತ್ರಜ್ಞರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಆ ಮೂಲಕ ನವೆಂಬರ್ 29ರಂದು ಚಿತ್ರರಂಗ ದೊಡ್ಡ ಹಬ್ಬವನ್ನ ಆಚರಿಸೋಕೆ ಸಿದ್ದವಾಗ್ತಿದೆ. [ಡಾ.ರಾಜ್ ಸ್ಮಾರಕ ಅನಾವರಣಕ್ಕೆ ರಜಿನಿ, ಬಿಗ್ ಬಿ]

ಡಾ.ರಾಜ್ ಸ್ಮಾರಕ ಅನಾವರಣಕ್ಕೆ ಮೆಗಾ ಸ್ಟಾರ್ ಚಿರಂಜೀವಿ, ಸೂಪರ್ ಸ್ಟಾರ್ ರಜಿನಿಕಾಂತ್, ಬಿಗ್ ಬಿ ಅಮಿತಾಬ್ ಬಚ್ಚನ್ ಸೇರಿದಂತೆ ಭಾರತೀಯ ಚಿತ್ರರಂಗದ ಹಲ ಗಣ್ಯರು ಪಾಲ್ಗೊಳ್ಳುವ ಸಾಧ್ಯತೆ ಇದೆ. (ಫಿಲ್ಮಿಬೀಟ್ ಕನ್ನಡ)

English summary
Dr.Raj memorial inauguration is scheduled on november 29th. In order to, inaugurate Dr.Raj memorial in grandeur manner, KFCC has declared 2 days holiday for all the artists and technicians of sandalwood. All prominent stars will be performing in the cultural program which is organised on november 29th evening. Big B Amithab Bachchan, Rajinikanth, Chiranjeevi are expected to grace the event.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada