»   » ನೋಡಿರಣ್ಣ ಹೇಗಿದೆ ಕನ್ನಡ ಸಿನಿಮಾಗಳ ದರ್ಬಾರು

ನೋಡಿರಣ್ಣ ಹೇಗಿದೆ ಕನ್ನಡ ಸಿನಿಮಾಗಳ ದರ್ಬಾರು

By: ಜೀವನರಸಿಕ
Subscribe to Filmibeat Kannada

2013ರಲ್ಲಿ ಶುರುವಾದ ಪರಭಾಷಾ ಸಿನಿಮಾಗಳ ಬ್ಯಾಡ್ ಲಕ್ ಈ ವರ್ಷ ಕೂಡ ಸರಿಯಾಗಿಲ್ಲ. ಯಾಕಂದ್ರೆ 2012ರವರೆಗೂ ಕನ್ನಡ ಚಿತ್ರಗಳಿಗೆ ಕಾಡ್ತಾ ಇದ್ದ ಥಿಯೇಟರ್ ಸಮಸ್ಯೆ ಈ ಎರಡು ವರ್ಷಗಳಲ್ಲಿ ಕಾಣಿಸಿಕೊಂಡಿಲ್ಲ. ಕನ್ನಡ ಸಿನಿಮಾಗಳಿಗೆ ಒಳ್ಳೆಯ ದಿನಗಳು ಬಂದಿವೆ.

ನಿಮಗೆ ಗೊತ್ತಾ ಥಿಯೇಟರ್ ಗಳ ಕೊರತೆಯಿದೆ. ಪರಭಾಷಾ ಸಿನಿಮಾಗಳು ನಮ್ಮ ಥಿಯೇಟರ್ ಗಳನ್ನ ಆಕ್ರಮಿಸಿಕೊಂಡಿವೆ. ಇರೋದೇ 400 ರಿಂದ 600 ಥಿಯೇಟರ್ ಗಳು. ಅದರಲ್ಲೂ ತೆಲುಗು, ತಮಿಳು ಸಿನಿಮಾಗಳು ಸೆಟ್ಲ್ ಆದ್ರೆ ನಾವೇನ್ ಮಾಡೋಣ ಅನ್ನೋ ತಲೆ ನೋವು ತಲೆದೋರದೆ ಎರಡು ವರ್ಷಗಳೇ ಆಗಿ ಹೋಗಿವೆ. [ಡಬ್ಬಿಂಗ್, ರೀಮೇಕ್ ಎರಡೂ ಬೇಡ: ಕ್ರೇಜಿ ಸ್ಟಾರ್]

ಮನಂ, ಕೊಚಾಡಿಯನ್ ನಂತಹ ಬಿಗ್ ಬಿಗ್ ಸಿನಿಮಾಗಳು ತೆರೆಗೆ ಬಂದ ದಿನವೇ ಕನ್ನಡದ 'ಗಜಕೇಸರಿ' ಸಿನಿಮಾ ಎಂಟ್ರಿಕೊಟ್ಟಿತ್ತು. ತೆಲುಗು, ತಮಿಳಿನ ಸೂಪರ್ ಸ್ಟಾರ್ ಗಳ ಸಿನಿಮಾ ಮುಂದೆ ಕನ್ನಡದ ಕಡಿಮೆ ಬಜೆಟ್ ಸಿನಿಮಾ ಠುಸ್ ಅಂತ ಎಲ್ಲರೂ ಅಂದುಕೊಂಡಿದ್ರು.

ಆದರೆ 'ಗಜಕೇಸರಿ' ಈಗಲೂ ಒಳ್ಳೆಯ ಕಲೆಕ್ಷನ್ ಜೊತೆ ಭರ್ಜರಿ ಪ್ರದರ್ಶನ ಕಾಣ್ತಿದೆ. ನಾವು ಯಾರಿಗೂ ಕಡಿಮೆಯಿಲ್ಲ ಸ್ವಾಮಿ. ಒಂದ್ಸಾರಿ ಈ ವರ್ಷ ಕನ್ನಡ ಸಿನಿಮಾಗಳು ಥಿಯೇಟರ್ ನಲ್ಲಿ ಆಡ್ತಿರೋ ಗೆಲುವಿನ ಕಬಡ್ಡಿ ನೋಡಿ.

ಮಾಣಿಕ್ಯ ನಾನ್ ಸ್ಟಾಪ್ ರನ್ನಿಂಗ್

ಕಿಚ್ಚ, ಕ್ರೇಜಿಸ್ಟಾರ್ ಕಾಂಬಿನೇಷನ್ ಸಿನಿಮಾ 'ಮಾಣಿಕ್ಯ' ಯಾವ ತೆಲುಗು, ತಮಿಳು ಸಿನಿಮಾಗೂ ಕಡಿಮೆ ಇಲ್ಲದ ಹಾಗೆ ಕಲೆಕ್ಷನ್ ಮಾಡಿದೆ. ಇನ್ನೂ ಮಾಡ್ತಿದೆ. ಈಗಲೂ ಥಿಯೇಟರ್ ನಲ್ಲಿ ಭದ್ರವಾಗಿರೋ 'ಮಾಣಿಕ್ಯ' ಚಿತ್ರಪ್ರೇಮಿಗಳಿಗೆ ಇಷ್ಟವಾಗಿದೆ. [ಮಾಣಿಕ್ಯ ಚಿತ್ರ ವಿಮರ್ಶೆ]

ದೃಶ್ಯ ವೈಭವ ಸೂಪರ್

ಕ್ರೇಜಿಸ್ಟಾರ್ ರವಿಮಾಮನ 'ದೃಶ್ಯ' ಚಿತ್ರ ಕ್ಷಣಕ್ಷಣಕ್ಕೂ ಕುತೂಹಲ ಕೆರಳಿಸ್ತಿದೆ. ಚಿತ್ರದಲ್ಲೊಂದು ಥ್ರಿಲ್ ಇದೆ. ದೃಶ್ಯ ನೋಡೋಕೆ ಜನ್ರು ಮುಗುಬೀಳ್ತಿದ್ದು ಕ್ರೇಜಿಸ್ಟಾರ್ ಸಿನಿಮಾನೇ ಹೆಚ್ಚೂ ಕಡಿಮೆ 100 ಥಿಯೇಟರ್ ಗಳನ್ನ ಭದ್ರವಾಗಿ ಹಿಡ್ಕೊಂಡಿದೆ. [ದೃಶ್ಯ ಚಿತ್ರ ವಿಮರ್ಶೆ]

ಉಗ್ರ ಪ್ರದರ್ಶನ ಕಾಣ್ತಿರೋ ಚಿತ್ರ

ಉಗ್ರಂ ಚಿತ್ರ ಕನ್ನಡ ಸಿನಿಮಾ ಯಾವ ಭಾಷೆಗೂ ಕಡಿಮೆಯಿಲ್ಲ ಅಂತ ತೋರಿಸಿದ ಈ ವರ್ಷದ ಚಿತ್ರ. ಥಿಯೇಟರ್ ನವ್ರು ಯಾವ ತೆಲುಗು, ತಮಿಳು ಸಿನಿಮಾ ಇದ್ದರೂ ಕನ್ನಡ ಸಿನಿಮಾ ಬಗ್ಗೆ ನಿರಾಳವಾಗಿ ಥಿಯೇಟರ್ ಕೊಡೋ ದಿನಗಳು ಬಂದಿವೆ. [ಉಗ್ರಂ ಚಿತ್ರ ವಿಮರ್ಶೆ]

ಚಂದ್ರಲೇಖ ಚಾರ್ಮಿಂಗ್

ನೂರನೇ ದಿನದತ್ತ ನುಗ್ಗಿದ 'ಚಂದ್ರಲೇಖ' ಹಾರರ್ ಸಿನಿಮಾ ಆಗಿದ್ರೂ ಒಂದು ಕ್ಷಣ ಅದ್ಭುತ ಮೇಕಿಂಗ್ ನಿಂದ ಮೋಡಿ ಮಾಡ್ತು. ಇವತ್ತು ಒಂದಷ್ಟು ಥಿಯೇಟರ್ ಗಳಲ್ಲಿ ಭದ್ರವಾಗಿ ಕುಳಿತಿರೋ ಚಂದ್ರಲೇಖ ಒಳ್ಳೆಯ ಪ್ರದರ್ಶನ ಕಂಡಿದೆ. [ಚಂದ್ರಲೇಖ ಚಿತ್ರ ವಿಮರ್ಶೆ]

ಗಜಕೇಸರಿಯ ಕಮಾಲ್

ರಜನಿಕಾಂತ್ ಅಭಿನಯದ ಕೊಚಾಡಿಯನ್, ತೆಲುಗಿನ ಸೂಪರ್ ಸ್ಟಾರ್ ಫ್ಯಾಮಿಲಿ ಅಭಿನಯದ ಮನಂ ಸಿನಿಮಾ ತೆರೆಗೆ ಬಂದಾಗಲೂ ತಲೆ ಕೆಡಿಸಿಕೊಳ್ಳದೆ ತೆರೆಗೆ ಬಂದ ಗಜಕೇಸರಿ ತೆಲುಗು, ತಮಿಳು ಸೆಂಟರ್ಗಳಾದ ಕೋಲಾರ, ಬಳ್ಳಾರಿಯಲ್ಲಿ ಇವತ್ತಿಗೂ ಹೌಸ್ ಫುಲ್ ಪ್ರದರ್ಶನ ಕಾಣ್ತಿದೆ. [ಗಜಕೇಸರಿ ಚಿತ್ರ ವಿಮರ್ಶೆ]

ಈಗ ಕನ್ನಡದ ನಟರೇ ಸ್ಟಾರ್ ಗಳು

ಚಾಲೆಂಜಿಂಗ್ ಸ್ಟಾರ್ ಸಿನಿಮಾ ಬಂತು ಅಂದ್ರೆ ತೆಲುಗು, ತಮಿಳು ಬಾಲಿವುಡ್ ಸ್ಟಾರ್ ಯಾರಿದ್ರೂ ಎಲ್ಲರೂ ಥಿಯೇಟರ್ ಬಿಟ್ಟುಕೊಡಲೇಬೇಕು. ಹಾಗಿರುತ್ತೆ ದರ್ಶನ್ ಅಬ್ಬರ. ಪುನೀತ್ ಪವರ್ ಗೆ ತೆಲುಗು, ತಮಿಳಿನ ಪವರ್ ಗಳೂ ಸಾಟಿ ಇಲ್ಲ.

ಕನ್ನಡ ಸಿನಿಮಾಗಳಿಗೆ ಒಳ್ಳೆಯ ದಿನಗಳು

ರಾಕಿಂಗ್ ಸ್ಟಾರ್ ಯಶ್ ಅಮೇರಿಕಾದಲ್ಲಿ ತಮ್ಮ ಸಿನಿಮಾಗೆ ಸಿಕ್ಕ ರೆಸ್ಪಾನ್ಸ್ ಗೆ ಖುಷ್ ಆಗಿದ್ದಾರೆ. ಕನ್ನಡ ಸಿನಿಮಾಗಳೂ ಕಿಂಗ್ ಆಗೋ ದಿನಗಳು ಬರ್ತಿವೆ ಅಂತಿದ್ದಾರೆ. ಹೌದಲ್ವಾ ರಾಜ್ಯದ 600ರಲ್ಲಿ ಹೆಚ್ಚೂ ಕಡಿಮೆ 500 ಥಿಯೇಟರ್ ಗಳಲ್ಲಿ ಕನ್ನಡ ಸಿನಿಮಾಗಳೇ ಇವೆ. ಅಂದ್ಮೇಲೆ ಇದರರ್ಥ ಕನ್ನಡದವರ ಸ್ವಾಭಿಮಾನ ಕೆರಳಿದೆ ಅನ್ನೋದಲ್ವ.

English summary
Sandalwood movies goes off with a bang in the year 2014. Kannada movies like Gajakesari, Manikya, Ugramm, Drishya, Chandralekha all are box-office hit. Even Telugu, Tamil big budget movies are also don't shakes Kannada movies in theatre.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada