India
  For Quick Alerts
  ALLOW NOTIFICATIONS  
  For Daily Alerts

  ಸ್ಯಾಂಡಲ್‌ವುಡ್‌ನಲ್ಲಿ ಸಂಚಲನ ಸೃಷ್ಟಿಸುತ್ತಿರುವ ಈ ನಟಿ ಯಾರು?

  By ಫಿಲ್ಮಿಬೀಟ್ ಡೆಸ್ಕ್
  |

  ಮಾಡಲಿಂಗ್ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟವರು ಸಿನಿಮಾ ಬರೋದು ಕಾಮನ್. ಕನ್ನಡ ಚಿತ್ರರಂಗಕ್ಕೂ ಮಾಡಲಿಂಗ್ ಕ್ಷೇತ್ರದಿಂದ ಹೆಸರು ಮಾಡಿದವರು ಬಂದ ಗೆದ್ದಿದ್ದಾರೆ. ಈಗ ಕೂಡ ಮಾಡಲಿಂಗ್ ಕ್ಷೇತ್ರದಲ್ಲಿ ಜನಪ್ರಿಯರಾಗಿರುವ ಸಂಹಿತಾ ವಿನ್ಯಾ ಸ್ಯಾಂಡಲ್‌ವುಡ್‌ನಲ್ಲಿ ನಾಯಕಿಯಾಗಿ ನೆಲೆಯೂರುತ್ತಿದ್ದಾರೆ. ಪ್ರಸ್ತುತ ಇವರು ನಾಯಕಿಯಾಗಿ ನಟಿಸಿರುವ 'ಯಾಕೋ ಬೇಜಾರು' ಸಿನಿಮಾ ಸಂಚಲನ ಸೃಷ್ಟಿಸಿದೆ.

  ಸಂಹಿತಾ ವಿನ್ಯಾ ನಟಿಸುತ್ತಿರುವ 'ಯಾಕೋ ಬೇಜಾರು' ಸಿನಿಮಾವನ್ನು ಗಾಲಿ ಲಕ್ಕಿ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದ ಟ್ರೈಲರ್ ಇದೇ ಜುಲೈ ಒಂದರಂದು ಬಿಡುಗಡೆಯಾಗಲಿದೆ. ಈ ಅಂದ್ಹಾಗೆ ಈ ಸಿನಿಮಾದಲ್ಲಿ ಸಂಹಿತಾ, ಆರ್ ಜೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರ ಆರಂಭದಿಂದ ಕೊನೆಯತನಕ ಚುರುಕಾದ ಸಂಭಾಷಣೆ ಮೂಲಕ ಸಂಹಿತಾ ವಿನ್ಯಾ ಸಿನಿಪ್ರಿಯರ ಗಮನ ಸೆಳೆಯಲಿದ್ದಾರೆ.

  ದೀಪಿಕಾ, ಪ್ರಿಯಾಂಕಾ, ಐಶ್ವರ್ಯ ಭಾಗವಹಿಸಿದ್ದ 'ಏಷ್ಯಾ ಸ್ಟಾರ್​ ಗಾಲಾ’ದಲ್ಲಿ ಕನ್ನಡದ ನಟಿ ಸಂಹಿತಾ ವಿನ್ಯಾ ದೀಪಿಕಾ, ಪ್ರಿಯಾಂಕಾ, ಐಶ್ವರ್ಯ ಭಾಗವಹಿಸಿದ್ದ 'ಏಷ್ಯಾ ಸ್ಟಾರ್​ ಗಾಲಾ’ದಲ್ಲಿ ಕನ್ನಡದ ನಟಿ ಸಂಹಿತಾ ವಿನ್ಯಾ

  ಸಂಹಿತಾ ನಟಿಸಿರುವ 11ನೇ ಸಿನಿಮಾ

  'ಯಾಕೋ ಬೇಜಾರು' ನಟಿ ಸಂಹಿತಾ ವಿನ್ಯಾ ನಾಯಕಿಯಾಗಿ ನಟಿಸಿರುವ ಹನ್ನೊಂದನೆಯ ಸಿನಿಮಾ. ಈಗಾಗಲೇ 'ವಿಷ್ಣು ಸರ್ಕಲ್', 'ಸೀತಮ್ಮ ಬಂದಳು ಸಿರಿಮಲ್ಲಿಗೆ ತೊಟ್ಟು' ಸೇರಿದಂತೆ ಹಲವು ಸಿನಿಮಾಗಳು ತೆರೆಕಂಡಿವೆ. ಕನ್ನಡದಲ್ಲಿ ಇವರು ಅಭಿನಯಿಸಿರುವ ಆರು ಚಿತ್ರಗಳು ಈಗಾಗಲೇ ರಿಲೀಸ್ ಆಗಿವೆ.

  ಕನ್ನಡದ ಜೊತೆ ಜೊತೆಗೆ ತಮಿಳು ಹಾಗೂ ತೆಲುಗಿನಲ್ಲೂ ಸಂಹಿತಾ ವಿನ್ಯಾ ಸಿನಿಮಾಗಳು ಬಿಡುಗಡೆಯಾಗಿವೆ. ಇತ್ತೀಚೆಗೆ ತೆರೆಗೆ ಬಂದ ಪ್ಯಾನ್ ಇಂಡಿಯಾ ಸಿನಿಮಾ 'ಯೂ ಆರ್ ಮೈ ಹೀರೊ' ಚಿತ್ರ ಸಂಹಿತಾ ವಿನ್ಯಾ ಅವರಿಗೆ ಜನಪ್ರಿಯತೆ ತಂದುಕೊಟ್ಟಿದೆ. ಈ ಸಿನಿಮಾ ಮೂಲಕವೇ ಹಲವು ಅವಕಾಶಗಳು ಹುಡುಕಿಕೊಂಡು ಬರುತ್ತಿದೆ.

  ಇದೊಂದು ಲವ್ ಜಾನರ್ ಸಿನಿಮಾ

  'ಯಾಕೋ ಬೇಜಾರು' ಸಿನಿಮಾ ಪಕ್ಕಾ ಲವ್ ಸ್ಟೋರಿ ಸಿನಿಮಾ. ಈ ಚಿತ್ರದ ಟ್ರೈಲರ್ ಜುಲೈ ಒಂದರಂದು ಬಿಡುಗಡೆಯಾಲಿದ್ದು, ಸದ್ಯದಲ್ಲೇ ಚಿತ್ರ ಕೂಡ ತೆರೆಗೆ ಬರಲಿದೆ. ಖ್ಯಾತ ವಸ್ತ್ರ ವಿನ್ಯಾಸಕಾರ ಫಾರೆವರ್ ನವೀನ್ ಕುಮಾರ್ ಸಂಹಿತಾ ವಿನ್ಯಾಗೆ ವಸ್ತ್ರವಿನ್ಯಾಸ ಮಾಡಿದ್ದಾರೆ. ಸುಬ್ರಹ್ಮಣ್ಯ ಜೆ ವೈದ್ಯ ಅವರ ಛಾಯಾಗ್ರಹಣ 'ಯಾಕೋ ಬೇಜಾರು' ಚಿತ್ರಕ್ಕಿದೆ.

   Sandalwood New Face Actress Samhitha Vinya Creating Buzz In Movies

  ಮಾಡಲಿಂಗ್ ಕ್ಷೇತ್ರದಲ್ಲೂ ಸಂಹಿತಾ ವಿನ್ಯಾ ಹೆಸರು ಫೇಮಸ್. ಫಾರೆವರ್ ನವೀನ್ ಕುಮಾರ್ ಅನೇಕ ಫ್ಯಾಷನ್ ಶೋಗಳ ಮೂಲಕ ಸಂಹಿತಾ ವಿನ್ಯಾ ಜನಪ್ರಿಯರಾಗಿದ್ದಾರೆ. ಬಾಲಿವುಡ್‌ನ ಹೆಸರಾಂತ ನಟಿಯರು ಭಾಗವಹಿಸಿದ್ದ ಮೆಟ್ ಗಾಲದಲ್ಲೂ ಸಂಹಿತಾ ವಿನ್ಯಾ ಭಾಗವಹಿಸಿದ್ದರು. ಮಾಡಲಿಂಗ್ ಹಾಗೂ ಸಿನಿಮಾ ಕ್ಷೇತ್ರ ಎರಡರಲ್ಲೂ ಸಂಹಿತಾ ವಿನ್ಯಾ ಬ್ಯುಸಿಯಾಗಿದ್ದಾರೆ. ಸದ್ಯ ಕನ್ನಡ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

  English summary
  Sandalwood New Face Actress Samhitha Vinya Creating Buzz In Movies, Know More.
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X