»   »  ಕನ್ನಡ ಸಾಹಿತ್ಯ ಸಮ್ಮೇಳನಕ್ಕೂ-ಚಿತ್ರರಂಗಕ್ಕೂ ಇಲ್ಲವಾಯ್ತು ನಂಟು

ಕನ್ನಡ ಸಾಹಿತ್ಯ ಸಮ್ಮೇಳನಕ್ಕೂ-ಚಿತ್ರರಂಗಕ್ಕೂ ಇಲ್ಲವಾಯ್ತು ನಂಟು

Posted By:
Subscribe to Filmibeat Kannada

ಸಿನಿಮಾ ಅಂದರೆ ಕೇವಲ ನಟನೆ ಅಲ್ಲ.. ಸಿನಿಮಾ ಅಂದರೆ ಮನೋರಂಜನೆ ಮಾತ್ರವಲ್ಲ. ಅದಕ್ಕೂ ಮೀರಿ ಸಿನಿಮಾ ಅಂದರೆ ಭಾಷೆ. ನಮ್ಮ ಭಾಷೆ ಹಾಗೂ ಕಲೆಯನ್ನ ಬಿಂಬಿಸುವ ಒಂದು ಮಾಧ್ಯಮ ಸಿನಿಮಾ. ಭಾಷೆ ಸದಾ ಸಿನಿಮಾರಂಗದ ಒಂದು ಪಾಲಾಗಿ ಮುಂಚೂಣಿಯಲ್ಲಿರುತ್ತೆ. ಆದ್ರೆ ಕೆಲವು ಬಾರಿ ಸಿನಿಮಾ ಮಾತ್ರ ಭಾಷೆ-ನುಡಿ ಅಂದಾಗ ಅದರಿಂದ ಹೊರಗೆ ಉಳಿದು ಬಿಡುತ್ತದೆ.

ಇಂತಹದೊಂದು ಪ್ರಶ್ನೆ ಸಿನಿಮಾರಂಗದ ನಿರ್ದೇಶಕರು ಹಾಗೂ ಸಾಹಿತಿಗಳು ಎಲ್ಲರನ್ನೂ ಕಾಡುತ್ತಿದೆ. ಕಾರಣ ಇಷ್ಟೇ. ಮೈಸೂರಿನಲ್ಲಿ ನಡೆಯುತ್ತಿರುವ 83ನೇ ಸಾಹಿತ್ಯ ಸಮ್ಮೇಳನದಲ್ಲಿ ಸಿನಿಮಾರಂಗದವರಾಗಲಿ, ಸಿನಿಮಾಗೆ ಸಂಬಂಧಪಟ್ಟ ವಿಚಾರವಾಗಲಿ ಎಲ್ಲಿಯೂ ಕಣ್ಣಿಗೆ ಬೀಳುವುದಿಲ್ಲ. ಹಾಗಾದ್ರೆ ಸಾಹಿತ್ಯ ಸಮ್ಮೇಳನದಿಂದ ಸಿನಿಮಾರಂಗವನ್ನ ಹೊರಗಿಡಲಾಗಿದ್ಯಾ? ಈ ಬಗ್ಗೆ ಚಿತ್ರರಂಗ ಏನು ಹೇಳುತ್ತದೆ.? ಮುಂದೆ ಓದಿ...

ಸಾಹಿತ್ಯ ಸಮ್ಮೇಳನದಲ್ಲಿ ನಮಗಿಲ್ಲ ಆಧ್ಯತೆ

''ಸಾಹಿತ್ಯ ಜನರಿಗೆ ವೇಗವಾಗಿ ತಲುಪುದು ಕನ್ನಡದ ಗೀತೆಗಳ ಮೂಲಕ. ಈ ಮಾತನ್ನ ಯಾರು ತಳ್ಳಿ ಹಾಕುವಂತಿಲ್ಲ. ಸಾಹಿತ್ಯ ಕೆಟ್ಟದಾಗಿ ಬರೆಯುತ್ತಾರೆ ಅಂತೆಲ್ಲಾ ಪ್ರಶ್ನೆ ಮಾಡುವ ಕೆಲ ಸಾಹಿತಿಗಳು, ಸಾಹಿತ್ಯ ಸಮ್ಮೇಳನದ ಸಮಯದಲ್ಲಿ ಮಾತ್ರ ಸಿನಿಮಾರಂಗ ಹಾಗೂ ಸಿನಿಮಾ ಸಾಹಿತಿಗಳನ್ನ ಮರೆತು ಬಿಡುತ್ತಾರೆ. ಸಿನಿಮಾ ಸಾಹಿತ್ಯದ ಬಗ್ಗೆ ತಕರಾರು ಇದ್ದರೆ ಸಮ್ಮೇಳನಕ್ಕೆ ಚರ್ಚೆಗೆ ಆಹ್ವಾನಿಸಿ ಅಲ್ಲಿ ಮಾತನಾಡಲಿ'' ಎಂದು ಗೀತಾ ರಚನಾಕಾರ ಹಾಗೂ ನಿರ್ದೇಶಕ 'ವಿ ನಾಗೇಂದ್ರ ಪ್ರಸಾದ್' ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಚರ್ಚಾ ವಿಷಯದಲ್ಲಿ ಇರಲಿ ಸಿನಿಮಾ

''ಸಾಹಿತ್ಯ ಸಮ್ಮೇಳನದಲ್ಲಿ ಸಿನಿಮಾದ ಬಗ್ಗೆ ಚರ್ಚೆ ಆಗಲೇ ಬೇಕು. ಆಗ ಮಾತ್ರ ಸಿನಿಮಾರಂಗದ ಜನರು ಭಾಗಿಯಾಗಲು ಸಾಧ್ಯವಾಗುತ್ತೆ. ಹಿಂದಿನಿಂದಲೇ ಚಿತ್ರರಂಗವನ್ನ ಹೊರಗಿಟ್ಟು ಸಮ್ಮೇಳನ ನಡೆಸಲಾಗ್ತಿದೆ.'' ಈ ಎಂದು ಸಾಹಿತಿ ಹಾಗೂ ನಿರ್ದೇಶಕ ಬರಗೂರು ರಾಮಚಂದ್ರಪ್ಪ ಹೇಳಿದರು.

ಸ್ವ-ಇಚ್ಛೆಯಲ್ಲಿ ಭಾಗಿ

''ಸಮ್ಮೇಳನ ಅಂದ ತಕ್ಷಣ ಒಂದು ತಿಂಗಳೇ ಆಹ್ವಾನಿತರ ಪಟ್ಟಿ ತಯಾರಾಗುತ್ತೆ. ಆಗ ಸಿನಿಮಾರಂಗದವರನ್ನೂ ಸೇರಿಸಿಕೊಂಡರೆ ನಾವು ಕೂಡ ಭಾಗಿಯಾಗುವುದರಲ್ಲಿ ಅನುಮಾನವಿಲ್ಲ. ಆಗ ಅನೇಕ ಚಿತ್ರ ಸಾಹಿತಿಗಳು ಮತ್ತು ನಿರ್ದೇಶಕರು ಸಾಹಿತ್ಯ ಸಮ್ಮೇಳನದಲ್ಲಿ ಭಾಗಿಯಾಗಿರುತ್ತಾರೆ'' ಎನ್ನುವುದು ಚಿತ್ರ ಸಾಹಿತಿ ಕವಿರಾಜ್ ಅನಿಸಿಕೆ.

ಚಿತ್ರರಂಗವೂ ಸಾಹಿತ್ಯದಲ್ಲಿ ಪಡೆಯಲಿ ಪಾಲು

''ಸಿನಿಮಾ ಹಾಗೂ ಭಾಷೆ ಒಂದೇ ನಾಣ್ಯದ ಎರಡು ಮುಖಗಳು ಎನ್ನುವ ಮಾತಿದೆ. ಡಾ ರಾಜ್ ಕುಮಾರ್ ಅವರ ಬಗ್ಗೆ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಅಧ್ಯಯನಕ್ಕಾಗಿ ಅನುವು ಮಾಡಿಕೊಡಲಾಗಿದೆ. ಕರ್ನಾಟಕದಲ್ಲೇ ವಿಶ್ವ ಮಾನವ ಸಂದೇಶ ಸಾರಬಲ್ಲ ಎಕೈಕ ವ್ಯಕ್ತಿ ಡಾ.ರಾಜ್ ಕುಮಾರ್ ಎಂದು ಸ್ವತಃ ಕುವೆಂಪು ಅವರೇ ಹೇಳಿದ್ದಾರೆ. ಇದೇ ರೀತಿ ಇನ್ನೂ ಅನೇಕರ ಬಗ್ಗೆ ಜನತೆ ಮತ್ತಷ್ಟು ವಿಚಾರ ತಿಳಿಯಬೇಕಿದೆ. ಹಾಗಾಗಿ ಸರ್ಕಾರ ಇನ್ನೂ ಮುಂದಾದರು ಸಿನಿಮಾರಂಗವನ್ನು ಸಮ್ಮೇಳನದ ಜೊತೆಯಲ್ಲಿ ಸೇರಿಸಿಕೊಳ್ಳಬೇಕಾಗಿದೆ.

English summary
kannada cinema industry should also be preferred at tha kannada shitya sammelana. ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಚಿತ್ರರಂಗಕ್ಕಿಲ್ಲ ಆಹ್ವಾನ. ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಚಿತ್ರರಂಗಕ್ಕೂ ಬೇಕು ಆಧ್ಯತೆ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada