Just In
- 13 min ago
ಫ್ಯಾಂಟಮ್ ಅಪ್ಡೇಟ್: ಕಿಚ್ಚನ ಅಭಿಮಾನಿಗಳಿಗೆ ಕಾದಿದೆ ಭರ್ಜರಿ ಸುದ್ದಿ
- 52 min ago
'ಬಿಗ್ ಬಾಸ್ ತಮಿಳು ಸೀಸನ್ 4' ಗೆದ್ದು ಬೀಗಿದ ನಟ ಆರಿ ಅರ್ಜುನ; ಗಳಿಸಿದ್ದೆಷ್ಟು?
- 2 hrs ago
ಹಿಂದೂ ಭಾವನೆಗಳಿಗೆ ಧಕ್ಕೆ; ಸೈಫ್ ನಟನೆಯ 'ತಾಂಡವ್' ವೆಬ್ ಸರಣಿ ವಿರುದ್ಧ ಬಿಜೆಪಿ ನಾಯಕರ ದೂರು
- 4 hrs ago
ಕಪಾಳಮೋಕ್ಷ ಆರೋಪ; ನಟ ಮಹೇಶ್ ಮಂಜ್ರೇಕರ್ ವಿರುದ್ಧ ದೂರು ದಾಖಲು
Don't Miss!
- Automobiles
ಜನಪ್ರಿಯ ಕವಾಸಕಿ ಬೈಕುಗಳ ಮೇಲೆ ಭರ್ಜರಿ ರಿಯಾಯಿತಿ
- News
ಮೇಯರ್ ಅವಧಿ ಇಂದು ಮುಕ್ತಾಯ; ಮೀಸಲಿನತ್ತ ಎಲ್ಲರ ಚಿತ್ತ
- Finance
ಸತತ ಮೂರನೇ ದಿನ ಚಿನ್ನದ ಬೆಲೆ ಇಳಿಕೆ; ಒಂದು ತಿಂಗಳ ಹಿಂದಿನ ಕನಿಷ್ಠ ಮಟ್ಟಕ್ಕೆ
- Sports
ಐಎಸ್ಎಲ್: ಸಮಬಲದ ಪ್ರದರ್ಶನ ನೀಡಿ ಡ್ರಾ ಮಾಡಿಕೊಂಡ ಎಟಿಕೆಎಂಬಿ, ಗೋವಾ
- Lifestyle
ಅಂಡಾಣು ಶೈತ್ಯೀಕರಣ: ಮಗುವನ್ನು ಪಡೆಯಲು ಈ ವಿಧಾನ ಸುರಕ್ಷಿತವೇ?
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸ್ಟಾರ್ ನಟರ ಚಿತ್ರಗಳ ರಿಲೀಸ್ ಬಗ್ಗೆ ನಿರ್ಮಾಪಕರ ಸಭೆ: ಯಾರೆಲ್ಲ ಸೇರಿದ್ದರು? ಏನು ಚರ್ಚಿಸಿದರು?
ಕೊರೊನಾದಿಂದ ಚಿತ್ರರಂಗಕ್ಕೆ ಬಹಳ ದೊಡ್ಡ ಸಮಸ್ಯೆ ಎದುರಾಗಿತ್ತು. ತಿಂಗಳುಗಳ ಕಾಲ ಚಿತ್ರಮಂದಿರ ಮುಚ್ಚಿದ್ದವು. ಶೇಕಡಾ 50 ರಷ್ಟು ಆಸನ ಭರ್ತಿಯೊಂದಿಗೆ ಸಿನಿಮಾ ಥಿಯೇಟರ್ ತೆರೆಯಲು ಅನುಮತಿ ಸಿಕ್ಕಿದ್ದರೂ ಚಿತ್ರಮಂದಿರಕ್ಕೆ ಜನ ಬರ್ತಿಲ್ಲ. ಇಂತಹ ಸಂದರ್ಭದಲ್ಲಿ ದೊಡ್ಡ ಚಿತ್ರಗಳು ರಿಲೀಸ್ ಮಾಡಿದ್ರೆ ಹಾಕಿದ ಬಂಡವಾಳ ಹೇಗೆ ವಾಪಸ್ ಪಡೆಯುವುದು ಎಂಬ ಗೊಂದಲದಲ್ಲಿ ನಿರ್ಮಾಪಕರಿದ್ದಾರೆ.
ಈ ನಡುವೆ ಥಿಯೇಟರ್‌ಗಿಂತ ಒಟಿಟಿಯಲ್ಲಿ ಸಿನಿಮಾ ಬಿಡುಗಡೆ ಮಾಡುವುದು ಸೂಕ್ತವೇ ಎಂಬ ಅಭಿಪ್ರಾಯವೂ ಇದೆ. ತಮಿಳುನಾಡಿನಲ್ಲಿ ಶೇಕಡಾ 100ರಷ್ಟು ಆಸನ ಭರ್ತಿ ಮಾಡಿ ಪ್ರದರ್ಶನ ಆರಂಭಿಸಲು ಸರ್ಕಾರ ಸಮ್ಮತಿ ಸೂಚಿಸಿದೆ. ಬಹುಶಃ ಕರ್ನಾಟಕದಲ್ಲೂ ಈ ಆದೇಶ ಜಾರಿಯಾಗಬಹುದು ಎಂಬ ಲೆಕ್ಕಾಚಾರದಲ್ಲಿದ್ದ ನಿರ್ಮಾಪಕರಿಗೆ ಕೇಂದ್ರ ಸರ್ಕಾರ ನಿರಾಸೆ ಮಾಡಿದೆ. ಹಾಗಾದ್ರೆ, ಈ ಸಭೆಯಲ್ಲಿ ಯಾವೆಲ್ಲ ವಿಷಯಗಳು ಚರ್ಚೆಯಾದವು? ಯಾರೆಲ್ಲಾ ನಿರ್ಮಾಪಕರು ಸೇರಿದ್ದರು? ಮುಂದೆ ಓದಿ....
2021ರಲ್ಲಿ ಧೂಳೆಬ್ಬಿಸಲು ಸಿದ್ಧವಾಗಿದೆ ಬಹುನಿರೀಕ್ಷೆಯ ಚಿತ್ರಗಳು

ಸಿನಿಮಾಗಳು ಕ್ಲಾಶ್ ಆಗಬಾರದು!
ದರ್ಶನ್, ಸುದೀಪ್, ಪುನೀತ್ ರಾಜ್ ಕುಮಾರ್, ದುನಿಯಾ ವಿಜಯ್, ಯಶ್, ಶಿವರಾಜ್ ಕುಮಾರ್, ಧ್ರುವ ಸರ್ಜಾ ಹೀಗೆ ಸ್ಟಾರ್ ನಟರ ಚಿತ್ರಗಳು ಬಿಡುಗಡೆಗೆ ಸಾಲುಗಟ್ಟಿ ನಿಂತಿವೆ. ಕೆಲವು ಚಿತ್ರಗಳು ರಿಲೀಸ್‌ಗೆ ದಿನಾಂಕವನ್ನು ಲಾಕ್ ಮಾಡಿಕೊಂಡಿದೆ. ಹಿಂದೆಂದೆಯೇ ಸಿನಿಮಾ ಬಿಡುಗಡೆ ಮಾಡಿದ್ರೆ ಥಿಯೇಟರ್ ಸಮಸ್ಯೆ, ಕಲೆಕ್ಷನ್ ಸಮಸ್ಯೆ ಎದುರಾಗಬಹುದು ಎಂಬ ಆತಂಕ ಇದೆ. ಹಾಗಾಗಿ, ಚಿತ್ರಗಳ ನಡುವೆ ಕ್ಲಾಶ್ ಆಗಬಾರದು ಎಂಬ ಚರ್ಚೆ ಈ ಸಭೆಯ ಪ್ರಮುಖ ಅಂಶಗಳಲ್ಲಿ ಒಂದಾಗಿದೆ.
ಏಪ್ರಿಲ್ನಲ್ಲಿ ಯುವರತ್ನ, ಅದೇ ತಿಂಗಳು ಮತ್ತೊಂದು ಬಿಗ್ ಸಿನಿಮಾ ತೆರೆಗೆ?

ಒಟಿಟಿಗೆ ಹೋದ್ರೆ ಏನಾಗುತ್ತದೆ?
ಚಿತ್ರಮಂದಿರಕ್ಕೆ ಜನ ಬರ್ತಿಲ್ಲ ಎಂಬ ಕಾರಣಕ್ಕೆ ಒಟಿಟಿಗೆ ಹೋದ್ರೆ ಅಲ್ಲಿ ಹಾಕಿದ ಬಂಡವಾಳ ಪಾಪಸ್ ಬರುತ್ತಾ? ಇದರಿಂದ ಸ್ಟಾರ್ ನಟರ ಚಿತ್ರಗಳನ್ನೇ ನಂಬಿಕೊಂಡಿರುವ ಥಿಯೇಟರ್ ಮಾಲೀಕರ ಪರಿಸ್ಥಿತಿ ಏನು? ಕೊರೊನಾದಿಂದ ಸಂಕಷ್ಟದಲ್ಲಿರುವ ಎಲ್ಲರ ಹಿತಾದೃಷ್ಟಿ ಕಾಯುವುದು ಹೇಗೆ ಎಂಬ ಪ್ರಮುಖ ವಿಚಾರಗಳು ಚರ್ಚೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಥಿಯೇಟರ್ ಪೂರ್ಣ ಪ್ರಮಾಣದಲ್ಲಿ ಓಪನ್ ಆಗೋದು ಕಷ್ಟ!
ತಮಿಳು ನಟ ವಿಜಯ್ ಮನವಿ ನಂತರ ತಮಿಳು ಸರ್ಕಾರ ಥಿಯೇಟರ್‌ಗೆ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲು ಅನುಮತಿ ನೀಡಿದೆ. ಆದ್ರೆ, ತಮಿಳುನಾಡಿನ ಆದೇಶ ಹಿಂಪಡೆಯುವಂತೆ ಕೇಂದ್ರ ಗೃಹ ಇಲಾಖೆ ಆಕ್ಷೇಪ ವ್ಯಕ್ತಪಡಿಸಿದೆ. ವಿಪತ್ತು ನಿರ್ವಹಣಾ ಕಾಯ್ದೆಯ ಉಲ್ಲಂಘನೆಯಾಗುತ್ತಿದೆ, ಕೂಡಲೇ ಆದೇಶ ಹಿಂದಕ್ಕೆ ತೆಗೆದುಕೊಳ್ಳಬೇಕು ಎಂದು ಪತ್ರ ಬರೆದಿದೆ. ಈ ಬೆಳವಣಿಗೆ ಗಮನಿಸಿದರೆ ಸದ್ಯಕ್ಕೆ ಥಿಯೇಟರ್‌ಗಳ ಪರಿಸ್ಥಿತಿ ಸುಧಾರಿಸುವುದು ಬಹಳ ಕಷ್ಟ. ಇದು ಸಹ ನಿರ್ಮಾಪಕರಿಗೆ ತಲೆ ಬಿಸಿ ಉಂಟು ಮಾಡಿದೆ.
ಏಪ್ರಿಲ್ ಮೇಲೆ ಕನ್ನಡ ನಿರ್ಮಾಪಕರ ಕಣ್ಣು; ಯುವರತ್ನ, ರಾಬರ್ಟ್ ಆಯ್ತು ಮತ್ತೊಂದು ಸಿನಿಮಾ ತೆರೆಗೆ

ಯಾರೆಲ್ಲ ಸಭೆಯಲ್ಲಿ ಹಾಜರಿದ್ದರು?
ನಿರ್ಮಾಪಕರ ಸಭೆಯಲ್ಲಿ ಕನ್ನಡದ ಪ್ರಮುಖ ಪ್ರೊಡ್ಯೂಸರ್‌ಗಳು ಭಾಗಿಯಾಗಿದ್ದರು. ಕೆಜಿಎಫ್, ಯುವರತ್ನ ನಿರ್ಮಾಪಕ ವಿಜಯ್ ಕಿರಗಂದೂರ್, ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ, ಸಲಗ ನಿರ್ಮಾಪಕ ಕೆಪಿ ಶ್ರೀಕಾಂತ್, ಕೋಟಿಗೊಬ್ಬ 3 ನಿರ್ಮಾಪಕ ಸೂರಪ್ಪ ಬಾಬು, ರಾಬರ್ಟ್ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ, ಫ್ಯಾಂಟಮ್ ನಿರ್ಮಾಪಕ ಜಾಕ್ ಮಂಜು, ನಿರ್ಮಾಪಕ ಜಯಣ್ಣ, ಪೊಗರು ನಿರ್ಮಾಪಕ ಪಾಲ್ಗೊಂಡಿದ್ದರು.