Just In
Don't Miss!
- Education
UAS Dharwad Recruitment 2021: ಸೀನಿಯರ್ ರಿಸರ್ಚ್ ಫೆಲೋ ಹುದ್ದೆಗೆ ಮಾ.10ಕ್ಕೆ ನೇರ ಸಂದರ್ಶನ
- News
ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಶಾಸಕಾಂಗ ಸಭೆ ನಿರ್ಣಯಗಳು
- Automobiles
ಹೊಸ ರೂಪದೊಂದಿಗೆ ರಸ್ತೆಗಿಳಿಯಲಿವೆ ತೆರೆಮರೆಗೆ ಸರಿದ ಜಟಕಾ ಬಂಡಿ
- Sports
ಐಎಸ್ಎಲ್: ಫೈನಲ್ಗಾಗಿ ನಾರ್ಥ್ ಈಸ್ಟ್, ಬಾಗನ್ ನಡುವೆ ಫೈನಲ್ ಫೈಟ್
- Lifestyle
ಮಾ.11ಕ್ಕೆ ಕುಂಭ ರಾಶಿಗೆ ಬುಧನ ಪ್ರವೇಶ: ನಿಮ್ಮ ಬದುಕಿನಲ್ಲಿ ಆಗಲಿದೆ ಈ ಬದಲಾವಣೆ
- Finance
ಅಡಿಕೆ, ಕಾಫೀ, ಮೆಣಸು ಹಾಗೂ ರಬ್ಬರ್ನ ಮಾ. 08ರ ಮಾರುಕಟ್ಟೆ ದರ ಇಲ್ಲಿದೆ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಚಿತ್ರಮಂದಿರಕ್ಕೆ ಮಾತ್ರ ಯಾಕೆ ಕಟ್ಟೆಚ್ಚರ? ಸರ್ಕಾರದ ವಿರುದ್ಧ ಸ್ಯಾಂಡಲ್‌ವುಡ್ ಅಸಮಾಧಾನ!
ದೇಶಾದ್ಯಂತ ಚಿತ್ರಮಂದಿರಗಳು ಶೇಕಡಾ 100 ರಷ್ಟು ಆಸನ ಭರ್ತಿಯೊಂದಿಗೆ ಪ್ರದರ್ಶನ ಮಾಡಲು ಕೇಂದ್ರ ಸರ್ಕಾರ ಅನುಮತಿ ನೀಡಿದ್ದರೂ, ಕರ್ನಾಟಕ ಸರ್ಕಾರ ಈ ಆದೇಶಕ್ಕೆ ಬ್ರೇಕ್ ಹಾಕಿದೆ. ರಾಜ್ಯದಲ್ಲಿ 100 ಪರ್ಸೆಂಟ್ ಅವಕಾಶ ಇಲ್ಲ ಎಂದು ತಿಳಿಸಿದೆ. ಎರಡನೇ ಹಂತದ ಕೊರೊನಾ ಭೀತಿಯಿರುವ ಕಾರಣ ಹೇಳಿ ಸ್ಯಾಂಡಲ್‌ವುಡ್‌ಗೆ ಶಾಕ್ ನೀಡಿದೆ.
ಇದು ಕನ್ನಡ ಇಂಡಸ್ಟ್ರಿಯವರ ಬೇಸರಕ್ಕೆ ಕಾರಣವಾಗಿದ್ದು, ನಟ, ನಿರ್ಮಾಪಕರು, ನಿರ್ದೇಶಕ ಹಾಗೂ ತಂತ್ರಜ್ಞರು ಸರ್ಕಾರದ ನಿರ್ಧಾರಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಧ್ರುವ ಸರ್ಜಾ, ದುನಿಯಾ ವಿಜಯ್, ಪ್ರಶಾಂತ್ ನೀಲ್, ಸಿಂಪಲ್ ಸುನಿ, ಕಾರ್ತಿಕ್ ಗೌಡ ಸೇರಿದಂತೆ ಅನೇಕರು ಸರ್ಕಾರದ ತೀರ್ಮಾನವನ್ನು ಪ್ರಶ್ನಿಸುತ್ತಿದ್ದಾರೆ. ಮುಂದೆ ಓದಿ....
ಮಾರ್ಕೆಟ್ನಲ್ಲಿ ಗಿಜಿ ಗಿಜಿ, ಬಸ್ ಫುಲ್ ರಶ್, ಚಿತ್ರಮಂದಿರಕ್ಕೆ ಮಾತ್ರ ನಿರ್ಬಂಧ ಏಕೆ?

ಚಿತ್ರಮಂದಿರಕ್ಕೆ ಮಾತ್ರ ಯಾಕೆ ಕಟ್ಟೆಚ್ಚರ?
ವಿಮಾನದೊಳಗೆ ಭುಜಕ್ಕೆ ಭುಜ ತಾಕಿ ಕೂರಬಹುದು..ದೇವಸ್ಥಾನದಲ್ಲಿ ಎಲ್ಲರ ಕೈಗಳು ಒಂದೇ ಗಂಟೆ ಬಾರಿಸಬಹುದು..ಮಾರ್ಕೆಟ್ ನಲ್ಲಿ ಮಾಮುಲಿ ವ್ಯಾಪಾರ, ರಾಜಕೀಯ ರ಼್ಯಾಲಿಗೆ ಜನಸಾಗರ, ಪಬ್ ಹೋಟೆಲ್ ನಲ್ಲಿ ಎಲ್ಲರ ವಿಹಾರ, ಚಿತ್ರಮಂದಿರಕೆ ಮಾತ್ರ ಯಾಕೆ ಕಟ್ಟೆಚ್ಚರ?? ಎಂದು ನಿರ್ದೇಶಕ ಸಿಂಪಲ್ ಸುನಿ ಪ್ರಶ್ನಿಸಿದ್ದಾರೆ.

ಸಿನಿಮಾ ಅನೇಕರಿಗೆ ಜೀವನ
''ಸಿನಿಮಾ ಎನ್ನುವುದು ಅನೇಕರಿಗೆ ಮನರಂಜನೆಯಾಗಿರಬಹುದು, ಆದರೆ ಹಲವರಿಗೆ ಅದು ಜೀವನ'' ಎಂದು ನಿರ್ದೇಶಕ ಪ್ರಶಾಂತ್ ನೀಲ್ ಸರ್ಕಾರದ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಕೊಟ್ಟರು ರಾಜ್ಯ ಕೊಡಲಿಲ್ಲ: ತಿಂಗಳಾಂತ್ಯದವರೆಗೆ ಚಿತ್ರಮಂದಿರಗಳು ತುಂಬುವಂತಿಲ್ಲ

ಪೂರ್ತಿ ಅವಕಾಶಕ್ಕೆ ಬೇಡಿಕೆ
ಕೆಆರ್‌ಜಿ ಸ್ಟುಡಿಯೋಸ್ ನಿರ್ಮಾಪಕ ಕಾರ್ತಿಕ್ ಗೌಡ ಚಿತ್ರಮಂದಿರಗಳಿಗೆ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲು ಅನುಮತಿ ಕೊಡಿ ಎಂದು ಆಗ್ರಹಿಸಿದ್ದಾರೆ. ಸರ್ಕಾರ ನಿರ್ಧಾರವನ್ನು ಖಂಡಿಸಿರುವ ಸ್ಯಾಂಡಲ್‌ವುಡ್ ಮಂದಿ ಒಗ್ಗಟ್ಟಾಗಿ ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ.

ಧ್ರುವ ಮತ್ತು ದುನಿಯಾ ವಿಜಯ್
ಥಿಯೇಟರ್‌ಗೆ 100 ಪರ್ಸೆಂಟ್ ಅವಕಾಶ ಕೊಡಬೇಕು ಎಂದು ಧ್ರುವ ಸರ್ಜಾ ಮತ್ತು ದುನಿಯಾ ವಿಜಯ್ ಸಹ ಸಾಮಾಜಿಕ ಜಾಲತಾಣದ ಖಾತೆಗಳ ಮೂಲಕ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಧ್ರುವ, ಹಾಗೂ ದುನಿಯಾ ವಿಜಯ್ ಅವರ ಪೋಸ್ಟ್ ಬೆನ್ನಲ್ಲೆ ಇಡೀ ಸ್ಯಾಂಡಲ್‌ವುಡ್ ಈ ಬಗ್ಗೆ ಒಗ್ಗಟ್ಟಿನ ಪ್ರತಿಭಟನೆ ಮಾಡ್ತಿದೆ.

ಥಿಯೇಟರ್ ಒಳಗೆ ಮಾತ್ರ ಕೊರೋನಾಗೆ ಅಂಜಿದೊಡೆಂತಯ್ಯ
''ಬೆಟ್ಟದ ಮೇಲೊಂದು ಮನೆಯ ಮಾಡಿ
ಮೃಗಗಳಿಗಂಜಿದಡೆಂತಯ್ಯಾ ?
ಊರೆಲ್ಲ ಜನಜಂಗುಳಿ ತುಂಬಿ ತುಳುಕುತಿರಲು
Theater ಒಳಗೆ ಮಾತ್ರ ಕೊರೋನಾಗೆ ಅಂಜಿದೊಡೆಂತಯ್ಯ?'' ಎಂದು ನಟ ಧನಂಜಯ್ ಸರ್ಕಾರದ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.