»   » ಡಾ.ರಾಜ್ ಸ್ಮಾರಕ ಸಂಭ್ರಮಕ್ಕೆ ಕಿಚ್ಚ-ದರ್ಶನ್ ಡಾನ್ಸ್

ಡಾ.ರಾಜ್ ಸ್ಮಾರಕ ಸಂಭ್ರಮಕ್ಕೆ ಕಿಚ್ಚ-ದರ್ಶನ್ ಡಾನ್ಸ್

Posted By: ಜೀವನರಸಿಕ
Subscribe to Filmibeat Kannada

ನವೆಂಬರ್ ಒಂದರಂದು ಕನ್ನಡ ರಾಜ್ಯೋತ್ಸವ ನಡೆದ್ರೆ ನವೆಂಬರ್ 29ರಂದು ಕನ್ನಡದ ರಾಜನ ಸ್ಮಾರಕ ಲೋಕಾರ್ಪಣೆಯ ರಂಗು. ರಾಜ್ ರಥ ಈಗಾಗ್ಲೇ ರಾಜ್ಯಾದ್ಯಂತ ತಿರುಗಾಟ ಮಾಡ್ತಿದೆ. ಕೆಲವೇ ದಿನಗಳಲ್ಲಿ ಬೆಂಗಳೂರಲ್ಲಿ ಕನ್ನಡದ ಕಣ್ಮಣಿಯ ನೆನಪಿನ ಹಬ್ಬ ನಡೆಯಲಿದೆ.

ಈ ಹಬ್ಬ ಮತ್ತಷ್ಟು ರಂಗು ಪಡೆಯೋದು ಅರಮನೆ ಮೈದಾನದಲ್ಲಿ. ಅರಮನೆ ಮೈದಾನದಲ್ಲಿ ನಡೆಯೋ ಕಾರ್ಯಕ್ರಮಕ್ಕೆ ಕನ್ನಡ ಚಿತ್ರರಂಗವೇ ಅದ್ದೂರಿಯಾಗಿ ತಯಾರಾಗಿದೆ. ಬಾಲಿವುಡ್ ಶೆಹನ್ ಶಾ ಅಮಿತಾಬ್ ಬಚ್ಚನ್ ಸೇರಿದಂತೆ ಭಾರತೀಯ ಚಿತ್ರರಂಗದ ಮೇರು ತಾರೆಯರ ಸಂಗಮವಾಗಲಿರೋ ವೇದಿಕೆ ಅದು.

ಈ ವೇದಿಕೆಯಲ್ಲಿ ಕನ್ನಡ ಚಿತ್ರರಂಗದ ತಾರೆಯರು ಬಗೆಬಗೆಯ ನೃತ್ಯ ಕಾರ್ಯಕ್ರಮಗಳ ಮೂಲಕ ಪ್ರೇಕ್ಷಕರನ್ನ ರಂಜಿಸಲಿದ್ದಾರೆ. ಈ ಉಸ್ತುವಾರಿಯನ್ನ ವಹಿಸಿಕೊಂಡಿರೋ ಎಸ್ ನಾರಾಯಣ್ ಅಂಡ್ ಟೀಂ ರಾತ್ರಿ ಹಗಲು ಕಲಾವಿದರನ್ನ ಕಾರ್ಯಕ್ರಮಕ್ಕೆ ಸಜ್ಜುಗೊಳಿಸ್ತಿದೆ.

ರೆಬೆಲ್ ಸ್ಟಾರ್ ಅಂಬರೀಶ್ ಕೂಡ ಡಾ.ರಾಜ್ ಗೆ ಗೌರವ ಸಲ್ಲಿಸೋಕೆ ಸ್ಟೆಪ್ ಹಾಕಲಿದ್ದು ಬಹಳ ಸಮಯದ ನಂತರ ವೇದಿಕೆಯೊಂದರಲ್ಲಿ ಬಣ್ಣ ಹಚ್ತಿದ್ದು ಪ್ರೇಕ್ಷಕರ ಕಣ್ಣಿಗೆ ಇದೊಂದು ಅಭೂತಪೂರ್ವ ಕ್ಷಣವಾಗಲಿದೆ. ಅಂಬರೀಶ್ ಸ್ವತಃ ಸ್ಟೆಪ್ ಹಾಕ್ತಾರೆ ಅಂದ್ರೆ ಮತ್ತೆ ಯಾವ್ಯಾವ ತಾರೆಯರು ಹಾಡಿ ಕುಣೀತಾರೆ ಅನ್ನೋ ಒಂದು ಲಿಸ್ಟ್ ಇಲ್ಲಿದೆ ನೋಡಿ.

ಅಂಬಿಗೆ ಜೋಡಿಯಾಗ್ತಾರೆ ಸುಮಲತಾ

ಸುಮಲತಾ ಅಂಬರೀಶ್ ಜೋಡಿ ವೇದಿಕೆಯಲ್ಲಿ ಡಾ.ರಾಜ್ ಹಾಡುಗಳಿಗೆ ಹೆಜ್ಜೆ ಹಾಕಲಿದೆ. ವೇದಿಕೆಗಳಲ್ಲಿ ಸಹಜವಾಗಿ ಬಣ್ಣ ಹಚ್ಚದ ಅಂಬಿ ಈಗ ಕನ್ನಡದ ಕಣ್ಮಣಿ ಡಾ.ರಾಜ್ ಗಾಗಿ ಪತ್ನಿ ಸುಮಲತಾ ಜೊತೆ ಸ್ಟೆಪ್ ಹಾಕಲಿದ್ದಾರೆ.

ಡಾ.ರಾಜ್ ಸಿನಿಮಾ ಹಾಡುಗಳಿಗೆ ಮಾತ್ರ ಡಾನ್ಸ್

ಈ ಕಾರ್ಯಕ್ರಮದ ವಿಶೇಷ ಅಂದ್ರೆ ರಾಜ್ ನಟಿಸಿದ ಚಿತ್ರದ ಹಾಡುಗಳನ್ನೇ ಆಯ್ಕೆ ಮಾಡಿಕೊಂಡು ತಾರೆಯರು ಹೆಜ್ಜೆ ಹಾಕಲಿದ್ದಾರೆ. ವೇದಿಕೆಯಲ್ಲಿ ನಡೆಯಲಿರೋ ಅಷ್ಟೂ ಹಾಡುಗಳೂ ರಾಜ್ ಸಿನಿಮಾದ ಎವರ್ಗ್ರೀನ್ ಹಾಡುಗಳೂ ಅನ್ನೋದು ವಿಶೇಷ.

ಕಿಚ್ಚ-ದಚ್ಚು ಡಾನ್ಸ್

ಚಾಲೆಂಜಿಂಗ್ ಸ್ಟಾರ್ ದರ್ಶನ್-ಕಿಚ್ಚ ಸುದೀಪ್ ಮತ್ತೊಮ್ಮೆ ಒಂದಾಗಿ ವೇದಿಕೆಯಲ್ಲಿ ಹೆಜ್ಜೆ ಹಾಕ್ತಾರೆ. ಈ ಹಿಂದೆ ಅಂಬಿ ಸಂಭ್ರಮದಲ್ಲಿ ಕುಚಿಕೂ ಕುಚಿಕೂ ಹಾಡಿಗೆ ಕುಣಿದಿದ್ದ ಗೆಳೆಯರು ಈಗ ಯಾವ ಹಾಡಿಗೆ ಕುಣೀತಾರೆ ಅನ್ನೋದು ಸಸ್ಪೆನ್ಸ್.

ಡಾ.ಶಿವಣ್ಣರಿಂದ ಆಯ್ಕೆ

ಈ ಹಾಡುಗಳಿಗೆ ಇವರು ಪರ್ಫಾಮ್ ಮಾಡಬೇಕು ಅನ್ನೋದು ಡಾ.ರಾಜ್ ಪುತ್ರ ಶಿವಣ್ಣ ಆಯ್ಕೆಯಂತೆ. ಶಿವರಾಜ್ ಕುಮಾರ್ ತಂದೆಯ ಸ್ಮಾರಕದ ಕಾರ್ಯಕ್ರಮದ ಬಗ್ಗೆ ತೀವ್ರ ಕಾಳಜಿ ವಹಿಸಿದ್ದಾರೆ.

ರಸಿಕರರಾಜನಿಗೆ ರವಿಮಾಮನ ಹೆಜ್ಜೆ

ಕನ್ನಡ ಚಿತ್ರರಂಗದ ರಸಿಕರರಾಜ ರಾಜ್ ರ ಯಾವ ಹಾಡಿಗೆ ಆಧುನಿಕ ರಸಿಕರರರಾಜ ಕ್ರೇಜಿಸ್ಟಾರ್ ರವಿಚಂದ್ರನ್ ಹೆಜ್ಜೆ ಹಾಕ್ತಾರೆ ಅನ್ನೋ ಕ್ಯೂರಿಯಾಸಿಟಿ ಅಭಿಮಾನಿಗಳಲ್ಲಿದೆ.

ಉಪ್ಪಿಗೊಂದು ಚೆಂದದ ಹಾಡು

ಸ್ಯಾಂಡಲ್ ವುಡ್ ರಿಯಲ್ ಸ್ಟಾರ್ ಉಪ್ಪಿ ಕೂಡ ರಾಜ್ ಸ್ಮಾರಕದ ನೆನಪಿಗೆ ಭರ್ಜರಿ ಹೆಜ್ಜೆಹಾಕ್ತಾರಂತೆ. ಉಪ್ಪಿ ಏನೇ ಮಾಡಿದ್ರೂ ಸಿಕ್ಕಾಪಟ್ಟೆಯಾಗೇ ಇರುತ್ತೆ. ಉಪ್ಪಿ-ಪ್ರಿಯಾಂಕಾ ಒಟ್ಟಾಗೀನೇ ಸ್ಟೆಪ್ ಹಾಕ್ತಾರೆ ಅನ್ನೋದ್ರಲ್ಲಿ ಅನುಮಾನವೇ ಇಲ್ಲ.

ಪುನೀತ್ ಶಿವಣ್ಣ ಏನ್ಮಾಡ್ತಾರೆ

ಎಲ್ಲರೂ ಹಾಡ್ತಾರೆ ಕುಣೀತಾರೆ ಆದ್ರೆ ರಾಜ್ ಸುಪುತ್ರರು ಏನ್ಮಾಡ್ತಾರೆ ಅನ್ನೋ ಕುತೂಹಲಕ್ಕೆ ಉತ್ತರ ಸಿಕ್ಕಿಲ್ಲ. ಆದ್ರೆ ರಾಜ್ ಅನ್ನೋ ದಂತಕಥೆಯ ಸಾಧನೆಯನ್ನ ಬಿಂಬಿಸೋ ಡಾಕ್ಯುಮೆಂಟರಿ ತಯಾರಾಗ್ತಿದೆಯಂತೆ.

English summary
Sandalwood industry ready for Dr Rajkumar memorial inaguration, the inaugural function will be held on 29th November in Bangalore. Kichcha Sudeep, Challenging Star Darshan shares stage on this ocassion. Ambarish-Sumalatha, Upendra-Priyanka also performs for Raj evergreen songs.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada