»   » ಸ್ಯಾಂಡಲ್ ವುಡ್ ಫೇವರಿಟ್ ಜೋಡಿ ಇಲ್ಲಿದೆ ನೋಡಿ

ಸ್ಯಾಂಡಲ್ ವುಡ್ ಫೇವರಿಟ್ ಜೋಡಿ ಇಲ್ಲಿದೆ ನೋಡಿ

By: ಜೀವನರಸಿಕ
Subscribe to Filmibeat Kannada

ಸ್ಯಾಂಡಲ್ ವುಡ್ ನಲ್ಲಿ ಅದೆಷ್ಟೋ ಯಶಸ್ವಿ ಜೋಡಿಗಳು ಬಂದು ಹೋಗಿವೆ. ಜೋಡಿ ಅಂದ ಕೂಡ್ಲೇ ಅದು ಹೀರೋ ಹೀರೋಯಿನ್ ಮಾತ್ರ ಅಲ್ಲ. ತೆಲುಗಿನಲ್ಲಿ ಎಂ ಎಂ ಕೀರವಾಣಿ-ಎಸ್ ಎಸ್ ರಾಜಮೌಳಿ ಇದ್ದ ಹಾಗೆ. ಕನ್ನಡದಲ್ಲಿ ರವಿಚಂದ್ರನ್-ಹಂಸಲೇಖ ಇದ್ದ ಹಾಗೆ.

ಕನ್ನಡದಲ್ಲೂ ಇಂತಹ ಅದೆಷ್ಟೋ ಯಶಸ್ವಿ ಕಾಂಬಿನೇಷನ್ ಗಳಿವೆ. ಅವರ ಸಿನಿಮಾಗೇನೇ ದೊಡ್ಡ ಕ್ರೇಜ್ ಕ್ರೀಯೇಟ್ ಆಗಿರುತ್ತೆ. ಹೀರೋ ಹೀರೊಯಿನ್ ಗಳ ಜೋಡಿಯಲ್ಲಿ ಈ ಹಿಂದೆ ಅಂತಹಾ ಥ್ರಿಲ್ ಕೊಟ್ಟಿದ್ದ ಹಲವು ಜೋಡಿಗಲಿದ್ದವು. [ಈ ಸ್ಯಾಂಡಲ್ ವುಡ್ ಜೋಡಿಹಕ್ಕಿಗಳು ಲವ್ ಮಾಡ್ತವ್ರಾ?]

ಡಾ.ರಾಜ್ -ಭಾರತಿ, ವಿಷ್ಣುವರ್ಧನ್-ಸುಹಾಸಿನಿ, ಅಂಬರೀಷ್-ಅಂಬಿಕಾ, ಅನಂತನಾಗ್-ಲಕ್ಷ್ಮಿ ಹೀಗೇ ಹೇಳ್ತಾ ಹೋದ್ರೆ ರವಿಚಂದ್ರನ್-ಜೂಹಿಚಾವ್ಲಾ, ಶಿವರಾಜ್ ಕುಮಾರ್-ಸುಧಾರಾಣಿ ಜೋಡಿಯೂ ಫೇವರೀಟ್.

ಆದ್ರೆ ಮಾಡರ್ನ್ ಸ್ಯಾಂಡಲ್ ವುಡ್ ನಲ್ಲಿ ಇವತ್ತಿನ ಸ್ಟಾರ್ ನಟರಲ್ಲಿ ಒಂದಷ್ಟು ಫೇವರೀಟ್ ಜೋಡಿಗಳಿವೆ. ಆ ಪಟ್ಟಿಯನ್ನ ನಿಮಗೆ ಕೊಡ್ತಾ ಇದ್ದೀವಿ. ಇದರಲ್ಲಿ ನಿಮ್ ಫೇವರೀಟ್ ಯಾರು. ಯಾರಿಗೆ ಯಾರ ಕೆಮಿಷ್ಟ್ರಿ ಸೂಪರ್ ನೀವೇ ನೋಡಿ.

ಸುದೀಪ್-ರಾಗಿಣಿ

ವೀರ ಮದಕರಿ, ಕೆಂಪೇಗೌಡ ಎರಡು ಸೂಪರ್ ಹಿಟ್ ಸಿನಿಮಾ ಕೊಟ್ಟ ಜೋಡಿ ಇದು. ಹೈಟು, ವೆಯ್ಟು ಎಲ್ಲದ್ರಲ್ಲೂ ಕಿಚ್ಚನಿಗೆ ಗ್ಲಾಮರ್ ಡಾಲ್ ಸೂಪರ್ ಮ್ಯಾಚ್.

ದರ್ಶನ್-ರಕ್ಷಿತಾ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಪರ್ಸನಾಲಿಟಿಗೆ ಪರ್ಫೆಕ್ಟ್ ಮ್ಯಾಚ್ ಅಂದ್ರೆ ಅದು ಕ್ರೇಜಿ ಕ್ವೀನ್ ರಕ್ಷಿತಾ. ರಕ್ಷಿತಾ-ದರ್ಶನ್ ಕೆಮಿಷ್ಟ್ರಿಯನ್ನ 'ಕಲಾಸಿಪಾಳ್ಯ'ದಲ್ಲಿ ನೋಡಿದ ಚಿತ್ರಪ್ರೇಮಿಗಳು ಈ ಜೋಡಿಯ ಮತ್ತಷ್ಟು ಸಿನಿಮಾ ಬರ್ಲಿ ಅಂದುಕೊಂಡಿದ್ರು.

ಯಶ್-ರಾಧಿಕಾ ಪಂಡಿತ್

ಮೊಗ್ಗಿನ ಮನಸಿನ ಮುದ್ದಾದ ಜೋಡಿ ಸ್ಯಾಂಡಲ್ ವುಡ್ ಸಿನಿಪ್ರೇಮಿಗಳ ಫೇವರೀಟ್ ಜೋಡಿ ಅನ್ನಿಸಿಕೊಳ್ಳೋದು ಇವರಿಬ್ಬರ ಅಭಿನಯದಿಂದ. ಡ್ರಾಮಾದಲ್ಲೂ ಜೋಡಿಯಾಗಿದ್ದ ಈ ಜೋಡಿಯ ಬಗ್ಗೆ ಭರ್ಜರಿ ಗಾಸಿಪ್ ಗಳು ಇದ್ದಿದ್ದೆ. ಇವರಿಬ್ಬರ ಕೆಮಿಷ್ಟ್ರಿ ಅಷ್ಟು ಚೆನ್ನಾಗಿದ್ದಿದ್ದರಿಂದ ಆ ರೀತಿಯ ಗಾಸಿಪ್ ಗಳೂ ಹುಟ್ಟಿದವು ಎನ್ನಿ.

ಪುನೀತ್-ರಮ್ಯಾ

ಪವರ್ ಸ್ಟಾರ್ ಹೈಟು ವೆಯ್ಟು ಎಲ್ಲದ್ರಲ್ಲೂ ಸಖತ್ ಮ್ಯಾಚಿಂಗ್ ಅಂದ್ರೆ ಅದು ಸ್ಯಾಂಡಲ್ವುಡ್ ಕ್ವೀನ್ ರಮ್ಯಾ. ಅಭಿ, ಆಕಾಶ್ ಚಿತ್ರಗಳಲ್ಲಿ ಈ ಜೋಡಿಯನ್ನ ನೋಡಿ ಅಭಿಮಾನಿಗಳು ಥ್ರಿಲ್ಲಾಗಿದ್ದೇ ಸೂಪರ್ ಜೋಡಿ ಅನ್ನೋ ಕಾರಣಕ್ಕೆ.

ಗಣೇಶ್-ಅಮೂಲ್ಯಾ

ಎರಡು ಯಶಸ್ವಿ ಸಿನಿಮಾ ಕೊಟ್ಟಿರೋ ಈ ಮಾದೇಸ-ಐಸೂ ಜೋಡಿ ಅಂದ್ರೆ ಸ್ಯಾಂಡಲ್ ವುಡ್ ಚಿತ್ರಪ್ರೇಮಿಗಳಿಗೆ ಅಚ್ಚುಮೆಚ್ಚು. ಮುಗ್ಧ ಅನ್ನಿಸೋ ಪಾತ್ರಗಳಲ್ಲಿ ಅಮೋಘ ಅಭಿನಯ ನೀಡೋ ಈ ಜೋಡಿ ಸ್ಯಾಂಡಲ್ ವುಡ್ ಫೇವರೀಟ್ ಜೋಡಿ.

ವಿಜಯ್ ರಾಘವೇಂದ್ರ-ರಾಧಿಕಾ

ನಿನಗಾಗಿ ಅನ್ನೋ ಒಂದೇ ಸಿನಿಮಾದಿಂದ ಫೇವರೀಟ್ ಫೇರ್ ಆಗಿದ್ದು ಈ ಜೋಡಿ. ವಿಜಯ್ ರಾಘವೇಂದ್ರ ರಾಧಿಕಾ ಎಷ್ಟು ಕ್ಯೂಟ್ ಕ್ಯೂಟ್ ಜೊತೆಗೆ ಪರ್ಫೆಕ್ಟ್ ಅನ್ನಿಸಿದ್ರೂ ಅಂದ್ರೆ 'ನಿನಗಾಗಿ' ಸಿನಿಮಾ ಜೋಡಿ ಅಂದ್ರೆ ಹೀಗಿರ್ಬೇಕಪ್ಪ ಅಂದುಕೊಂಡಿದ್ರು. ಈಗ ಇದೇ ಜೋಡಿಯ 'ನಮಗಾಗಿ' ಸಿನಿಮಾ ಸೆಟ್ಟೇರ್ತಿದೆ.

English summary
Sandalwood’s most romantic on-screen couples, who shared splendid chemistry on-screen and went on to become a hit pair. We list the hottest pairs of Sandalwood.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada