For Quick Alerts
  ALLOW NOTIFICATIONS  
  For Daily Alerts

  ಆನ್‌ಲೈನ್‌ಗೆ ಬಂದು ಹೊಟ್ಟೆಯ ಬೊಜ್ಜು ತೋರಿಸಿದ್ದೇಕೆ ನಟಿ ಸಂಜನಾ ಗಲ್ರಾನಿ

  |

  ಡ್ರಗ್ಸ್ ಪ್ರಕರಣ ಸಂಬಂಧ ಅನೇಕ ದಿನಗಳು ಜೈಲುವಾಸ ಅನುಭವಿಸಿ ಬಂದಿರುವ ನಟಿ ಸಂಜನಾ ಗಲ್ರಾನಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟೀವ್ ಆಗಿದ್ದಾರೆ. ಜೈಲಿನಿಂದ ಬಂದ ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂಜನಾ ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ. ಜೈಲಿನಿಂದ ಹೊರಬಂದ ಬಳಿಕ ಖಿನ್ನತೆ ಮತ್ತು ಬೊಜ್ಜು ಕಾಣಿಸಿಕೊಂಡಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ.

  ಸೋಶಿಯಲ್ ಮೀಡಿಯಾದಲ್ಲಿ ತೋರಿಸಿ ಸಂಜನಾ ಗಲ್ರಾನಿ ಹೇಳಿದ್ದೇನು? | Filmibeat Kannada

  ನಟಿಮಣಿಯರು ಹೆಚ್ಚಾಗಿ ಫಿಟ್ನೆಸ್ ಕಡೆ ಗಮನ ಕೊಡುತ್ತಾರೆ. ಡಯಟ್, ಯೋಗ, ಜಿಮ್ ಅಂತ ಹೆಚ್ಚು ತಲೆಕೆಡಿಸಿಕೊಂಡಿರುತ್ತಾರೆ. ಸ್ವಲ್ಪ ದಪ್ಪ ಆದರೂ ಮತ್ತಷ್ಟು ವರ್ಕೌಟ್ ಮಾಡಿ ಫಿಟ್ ಅಂಡ್ ಫೈನ್ ಆಗುತ್ತಾರೆ. ಆದರೀಗ ಸಂಜನಾಗೆ ಟಮ್ಮಿ ಫ್ಯಾಟ್ ಕಾಣಿಸಿಕೊಂಡ ಬಗ್ಗೆ ಬೇಸರ ಹೊರಹಾಕಿದ್ದಾರೆ.

  ಕಿರುತೆರೆಯಲ್ಲಿ ರಾಗಿಣಿ- ಸಂಜನಾ: ಯುಗಾದಿ ಸಂಭ್ರಮದಲ್ಲಿ ಕಣ್ಣೀರಿಟ್ಟ ನಟಿಯರು

  ವಿಡಿಯೋದಲ್ಲಿ ಟಮ್ಮಿ ಫ್ಯಾಟ್ ತೋರಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಖಿನ್ನತೆಯಿಂದ ಫ್ಯಾಟ್ ಬಂದಿದೆ ಎಂದು ಹೇಳಿದ್ದಾರೆ. ವಿಡಿಯೋದಲ್ಲಿ ಹೇಳಿರುವ ಸಂಜನಾ ಹೊಟ್ಟೆಯ ಬೊಜ್ಜು ತೋರಿಸಿ, ಸಣ್ಣ ಆದರೆ ಸಣ್ಣ ಆಗಿದ್ದೀವಿ ಎಂದು ಹೇಳುತ್ತಾರೆ. ಆದರೆ ನಾನು ದಪ್ಪ ಆಗಿದ್ದೀನಿ. ಇದನ್ನು ಬೇರೆಯವರು ಹೇಳುವ ಮೊದಲೇ ನಾನು ಹೇಳುತ್ತಿದ್ದೇನೆ' ಎಂದಿದ್ದಾರೆ.

  'ಖಿನ್ನತೆ ನನ್ನನ್ನು ದಪ್ಪ ಆಗುವಂತೆ ಮಾಡಿದೆ. ಮತ್ತೆ ಸಹಜ ಸ್ಥಿತಿಗೆ ಮರಳುತ್ತೇನೆ. ಇದಕ್ಕೆ ಸಲ್ಯೂಶನ್ ಕೊಡಿ, ಇನ್ಸ್ಟಾಗ್ರಾಮ್ ನಲ್ಲಿ ಕಾಮೆಂಟ್ ಮಾಡಿ' ಎಂದು ಹೇಳಿದ್ದಾರೆ.

  ಸಂಜನಾ ಜೈಲಿನಿಂದ ಬಂದ ಬಳಿಕ ಮೊದಲ ಬಾರಿಗೆ ಕಿರುತೆರೆ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದರು. ಯುಗಾದಿ ಹಬ್ಬದ ಸಂಭ್ರಮದಲ್ಲಿ ಭಾಗಿಯಾಗಿದ್ದರು. ಸಂಭ್ರಮದಲ್ಲಿ ಕಷ್ಟದ ದಿನಗಳನ್ನು ನೆನೆದು ಕಣ್ಣೀರಿಟ್ಟಿದ್ದರು.

  English summary
  Sandalwood Sanjjanaa Galrani says Depression made me fat. Sanjjanaa Galrani's tummy fat video viral.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X