Just In
Don't Miss!
- Lifestyle
ಬುಧವಾರದ ರಾಶಿಫಲ: ಈ ದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ
- News
ಭಾರತದಲ್ಲಿ 20.29 ಲಕ್ಷ ಜನರಿಗೆ ಕೊರೊನಾವೈರಸ್ ಲಸಿಕೆ
- Sports
ಸಯ್ಯದ್ ಮುಷ್ತಾಕ್ ಅಲಿ: ಹಿಮಾಚಲ ಪ್ರದೇಶ ಮಣಿಸಿದ ತಮಿಳುನಾಡು
- Education
ECIL Recruitment 2021: 3 ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ನೇರ ಸಂದರ್ಶನ
- Automobiles
ವಿನೂತನ ಫೀಚರ್ಸ್ಗಳೊಂದಿಗೆ ನ್ಯೂ ಜನರೇಷನ್ ಟಾಟಾ ಸಫಾರಿ ಎಸ್ಯುವಿ ಅನಾವರಣ
- Finance
ಗಣರಾಜ್ಯೋತ್ಸವಕ್ಕೆ ಬಿಎಸ್ಎನ್ಎಲ್ನಿಂದ ವಿಶೇಷ ಆಫರ್
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸ್ಯಾಂಡಲ್ ವುಡ್ ಸರಿಗಮದ ಅದ್ಭುತ ಐಡಿಯಾ ನೋಡ್ರಿ
ಸಮಸ್ಯೆ ಎಲ್ಲರಿಗೂ ಗೊತ್ತಿದ್ದರೂ ಅದಕ್ಕೆ ತಕ್ಕಮಟ್ಟಿಗಿನ ಪರಿಹಾರ ಮಾರ್ಗ ಮಾತ್ರ ಎಲ್ಲರಿಗೂ ಗೊತ್ತಾಗಿಲ್ಲ. ಆದರೆ ಇಲ್ಲೊಬ್ಬರು ನಿರ್ದೇಶಕರು ಒಂದು ಸುಲಭವಾದ ಮಾರ್ಗ ಕಂಡುಹಿಡಿದಿದ್ದಾರೆ.
ಅದು ಯಾವುದಿರಬಹುದೆಂಬ ನಿಮ್ಮ ಕತೂಹಲಕ್ಕೆ ಉತ್ತರ ಇಂಟರ್ನೆಟ್. ಹೌದು ಕನ್ನಡದಲ್ಲಿ ಅಂತರ್ಜಾಲ ಎನ್ನುವ ಈ ತಾಣವನ್ನು ತಮ್ಮ ಸಿನಿಮಾ ಬಿಡುಗಡೆಗೆ ಆಯ್ಕೆ ಮಾಡಿಕೊಂಡಿರುವವರು ಸ್ಯಾಂಡಲ್ ವುಡ್ ಸರಿಗಮ ನಿರ್ದೇಶಕರಾದ ಶರತ್ ಕದ್ರಿ.
ಚಿತ್ರ ನಿರ್ಮಾಣ ಸುಲಭ, ಆದರೆ ಪ್ರದರ್ಶನ ಕಷ್ಟ ಎನ್ನುವುದು ಹಲವು ಕನ್ನಡ ನಿರ್ಮಾಪಕರ ಅಳಲು. ನಿರ್ಮಾಪಕರ ಅಳಲು ನಿರ್ದೇಶಕರಿಗೆ ಅರ್ಥವಾಗಿರುವುದು ಸಹಜ ಅನ್ನಬೇಕೂ ಅಥವಾ ವಿಶೇಷ ಅನ್ನಬೇಕೋ ಎಂಬುದನ್ನು ನೀವೇ ಹೇಳಿ!
ಅನುಭವಸ್ಥ ನಿರ್ಮಾಪಕರ ಪಾಡೇ ಇದಾಗಿರುವಾಗ ಇನ್ನು ಅನನುಭವಿ ನಿರ್ಮಾಪಕರ ಪಾಡು ಏನಾಗಿರಬೇಡ! ಆದರೆ ಹೊಸ ನಿರ್ಮಾಪಕರು ಹೆದರಿ ಮನೆಯಲ್ಲೇ ಕುಳಿತಿರಲು ಸಾಧ್ಯವೇ? ಅವರೂ ಸಿನಿಮಾ ಮಾಡಿ ಹೆಸರು, ಕಾಸು ಸಂಪಾದಿಸಬೇಕಲ್ಲವೇ?
ಆಗಾಗ ಕೆಲವು ಹೊಸಬರ ತಂಡ ಹೊಸ ಹೊಸ ಯೋಚನೆ ಮಾಡಿ ಹೊಸ ಪ್ರಯತ್ನಗಳ ಮೂಲಕ ತಮ್ಮ ಸಿನಿಮಾ ಬಿಡುಗಡೆಯನ್ನು ಮಾಡಿಕೊಂಡು ಯಶಸ್ವಿಯಾಗಿರುವವ ಉದಾಹರಣೆಗಳು ಬೇಕಾದಷ್ಟಿವೆ.
ಈಗ ನಮ್ಮ ಮುಂದಿರುವ ನಿರ್ದೇಶಕ ಶರತ್ ಕದ್ರಿ ಕೂಡ ಅದೇ ಸಾಲಿಗೆ ಸೇರಿರುವವರು. ಶರತ್ ಕದ್ರಿ ನಿರ್ದೇಶನದ ಸ್ಯಾಂಡಲ್ ವುಡ್ ಸರಿಗಮ ಚಿತ್ರತಂಡ ಬಿಡುಗಡೆಗೆ ಸ್ವತಃ ಪರಿಹಾರ ಹುಡುಕೊಕೊಂಡು ನಿರಾಳವಾಗಿದೆ. ಅವರು ತಮ್ಮ ಚಿತ್ರವನ್ನು ಬಿಡುಗಡೆಯನ್ನು ಚಿತ್ರಮಂದಿರದಲ್ಲಿ ಮಾಡದೇ ಅಂತರ್ಜಾಲದಲ್ಲಿ ಬಿಡುಗಡೆ ಮಾಡಲಿದ್ದಾರೆ.
ಆಸಕ್ತರು ಆ ಚಿತ್ರವನ್ನು ತಮ್ಮ ಕಂಪ್ಯೂಟರ್ ಪರದೆ ಮೂಲಕ ಅದನ್ನು ವೀಕ್ಷಿಸಬಹುದು. ಸಿನಿಮಾವನ್ನು ಚಿತ್ರಮಂದಿರಕ್ಕೆ ಹೋಗಿ ವೀಕ್ಷಸುವ ಬದಲು ತಮಗಿಷ್ಟವಾದ ವೇಳೆಯಲ್ಲಿ, ತಮ್ಮತಮ್ಮ ಅನುಕೂಲಕ್ಕೆ ತಕ್ಕಂತೆ ಅದನ್ನು ನೋಡಿ ಹೊಸ ಅನುಭವ ಪಡೆಯಬಹುದು.
ಸ್ಯಾಂಡಲ್ ವುಡ್ ಸರಿಗಮ ಚಿತ್ರದ ಇನ್ನೊಂದು ವಿಶೇಷ ನಿಮ್ಮ ಗಮನದಲ್ಲಿರಲಿ. ಈ ಚಿತ್ರದ ಶೇ. 70 ರಷ್ಟು ಭಾಗಕ್ಕೆ ಗ್ರಾಫಿಕ್ಸ್ ಅಳವಡಿಸಲಾಗಿದೆ. ಅಷ್ಟೇ ಅಲ್ಲ, ಈ ಚಿತ್ರದಲ್ಲಿ 72 ಪಾತ್ರಗಳಿವೆ. ಆದರೂ ಕಥೆಯೇ ಹೀರೋ! ಇದು ಪ್ರೇಕ್ಷಕರನ್ನು ಹೊಸದಾದ ಲೋಕವೊಂದಕ್ಕೆ ಕರೆದುಕೊಂಡು ಹೋದ ಅನುಭವ ನೀಡಲಿದೆ ಎಂಬುದು ಚಿತ್ರತಂಡದ ಅಭಿಪ್ರಾಯ.
ಅಂದಹಾಗೆ, ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿರುವವರು ನಟಿ ಸಿಂಧು. ಈ ಮೊದಲು ಸಿಂಧು, ಪವನ್ ನಿರ್ದೇಶನ ಹಾಗೂ ದಿಗಂತ್ ನಾಯಕತ್ವದ ಲೈಫು ಇಷ್ಟೇನೆ ಚಿತ್ರದ ನಾಯಕಿಯಾಗಿದ್ದರು. ಈಗವರು ಯೋಗರಾಜ್ ಭಟ್ ನಿರ್ದೇಶನ ಹಾಗೂ ಯಶ್ ನಾಯಕತ್ವದ ಡ್ರಾಮಾ, ಹಾಗೂ ಅನಿಶ್ ನಾಯಕತ್ವದ ನನ್ ಲೈಫಲ್ಲಿ ಚಿತ್ರಗಳ ನಾಯಕಿ ಕೂಡ.
ಹೀಗೆ ಸಿಂಧು ಎಂಬ ಪರಿಚಿತ ಕನ್ನಡತಿಯ ಮುಖವನ್ನು ಪ್ರೇಕ್ಷಕರು ಈ 'ಸ್ಯಾಂಡಲ್ ವುಡ್ ಸರಿಗಮ,' ಹಾಗೂ ಸಿನಿಮಾವನ್ನು ಇಂಟರ್ನೆಟ್ ನಲ್ಲಿ ನೊಡಬಹುದು. ಈ ಹೊಸ ಪ್ರಯತ್ನಕ್ಕೆ ಕನ್ನಡ ಸಿನಿಪ್ರೇಕ್ಷಕರ ಪ್ರತಿಕ್ರಿಯೆ ಯಾವ ರೀತಿ ಬರಬಹುದೆಂಬುದನ್ನು ಸಿನಿಮಾ ಬಿಡುಗಡೆ ಬಳಿಕವೇ ಹೇಳಲು ಸಾಧ್ಯ. ಅಲ್ಲಿಯವರೆಗೆ ಕಾಯುವ ತಾಳ್ಮೆ ನಮ್ಮೆಲ್ಲರ ಸದ್ಯದ ಅಗತ್ಯ, ಅಷ್ಟೇ... (ಒನ್ ಇಂಡಿಯಾ ಕನ್ನಡ)