Don't Miss!
- News
ಕಳಪೆ ಊಟದ ವಿರುದ್ಧ ಪ್ರತಿಭಟನೆ; ಬಳ್ಳಾರಿಯಲ್ಲಿ ಎಸ್ಟಿ ಎಸ್ಸಿ ವಿದ್ಯಾರ್ಥಿಗಳು ಹಾಸ್ಟೆಲ್ನಿಂದ ಹೊರಕ್ಕೆ, ಜೆಡಿಎಸ್ ಆಕ್ರೋಶ
- Sports
BGT 2023: ಮೊದಲ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಸ್ಟಾರ್ ಆಲ್ರೌಂಡರ್ ಆಡೋದು ಅನುಮಾನ
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Technology
Tech News of this Week; ಈ ವಾರ ಟೆಕ್ ವಲಯದಲ್ಲಿ ಜರುಗಿದ ಘಟನೆಗಳೇನು?, ಇಲ್ಲಿದೆ ವಿವರ!
- Lifestyle
ವಾರ ಭವಿಷ್ಯ ಜ.29-ಫೆ.4: ಈ ವಾರ ಯಾವ ರಾಶಿಯವರಿಗೆ ಅದೃಷ್ಟ, ಯಾರು ಸ್ವಲ್ಪ ಜಾಗ್ರತೆವಹಿಸಬೇಕು ನೋಡಿ
- Finance
ಅಭ್ಯರ್ಥಿಯ ಸಂದರ್ಶನ ಮಾಡುತ್ತಿದ್ದಾಗಲೇ ಗೂಗಲ್ ಎಚ್ಆರ್ ವಜಾ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ನಾನು ಸತ್ತಿಲ್ಲ, ಆರೋಗ್ಯವಾಗಿ, ಆರಾಮಾಗಿ ಇದ್ದೀನಿ; ನಟ ದೊಡ್ಡಣ್ಣ
ನಾನು ಆರೋಗ್ಯವಾಗಿ, ಆರಾಮಾಗಿ ಮನೆಯಲ್ಲಿ ಇದ್ದೀನಿ ಎಂದು ವಿಡಿಯೋ ಮೂಲಕ ನಟ ದೊಡ್ಡಣ್ಣ ಸ್ಪಷ್ಟನೆ ನೀಡಿದ್ದಾರೆ. ದೊಡ್ಡಣ್ಣ ಇನ್ನಿಲ್ಲ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ದೊಡ್ಡಣ್ಣ ಫೋಟೋ ಹಾಕಿ RIP ಅಂತ ಬರೆದು ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು.
Recommended Video
ಈ ಪೋಸ್ಟ್ ನೋಡಿ ಆತಂಕಗೊಂಡ ಅಭಿಮಾನಿಗಳು, ಸ್ನೇಹಿತರು, ಚಿತ್ರರಂಗದ ಗಣ್ಯರು ದೊಡ್ಡಣ್ಣ ಅವರಿಗೆ ಕರೆ ಮಾಡಿ ವಿಚಾರಿಸಿದ್ದಾರೆ. ಸಾಕಷ್ಟು ಫೋನ್ ಕರೆಗಳು ಬರುತ್ತಿದ್ದಂತೆ ನಟ ದೊಡ್ಡ ವಿಡಿಯೋ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದಾರೆ. ನಾನು ಸತ್ತಿಲ್ಲ ಬದುಕಿದ್ದೀನಿ ಎಂದು ಹೇಳಿದ್ದಾರೆ.
ನಟ
ದೊಡ್ಡಣ್ಣ
ಬಗ್ಗೆ
ಸುಳ್ಳು
ಸುದ್ದಿ:
ಸ್ಪಷ್ಟನೆ
ನೀಡಿದ
ಹಿರಿಯ
ನಟ
ಡಿಂಗ್ರಿ
ನಾಗರಾಜ್
'ಯಾರೋ ಕಿಡಿಗೇಡಿಗಳು ನನ್ನ ಫೋಟೋ ಹಾಕಿ rip ಅಂತ ಹಾಕಿದ್ದಾರೆ. ದೊಡ್ಡಣ್ಣ ನಿಧನರಾಗಿದ್ದಾರೆ ಎನ್ನುವ ಹಾಗೆ ಹಾಕಿದ್ದಾರೆ. ನೂರಾರು ಫೋನ್ ಬರ್ತಿದೆ. ಎಲ್ಲರಿಗೂ ಹೇಳಲು ಇಷ್ಟಪಡುತ್ತೇನೆ. ನಾನು ಮನೆಯಲ್ಲೇ ಇದ್ದೀನಿ, ಆರೋಗ್ಯವಾಗಿ, ಆರಾಮಾಗಿ ಇದ್ದೀನಿ. ಯಾರು ಭಯ ಪಡಬೇಕಾಗಿಲ್ಲ. ಕನ್ನಡ ನಾಡಿನ ಎಲ್ಲಾ ತಂದೆ-ತಾಯಿಗಳ ಆಶೀರ್ವಾದ ನನ್ನ ಮೇಲೆ ಇರುವವರೆಗೂ ನಿಮ್ಮ ದೊಡ್ಡಣ್ಣನಿಗೆ ಏನು ಆಗಲ್ಲ. ಆಯಸ್ಸು ಜಾಸ್ತಿ. ಯಾವುದೊ ಒಂದು ಕಂಟಕ ಭಗೆಹರಿಯಿತು ಅಂತ ಅಂದುಕೊಳ್ಳುತ್ತೇನೆ. ನಾನು ಆರೋಗ್ಯವಾಗಿ ಇದ್ದೀನಿ' ಎಂದು ಹೇಳಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ನೋಡಿ ಆತಂಕಗೊಂಡ ದೊಡ್ಡಣ್ಣ ಗೆಳೆಯ ಹಿರಿಯ ನಟ ಡಿಂಗ್ರಿ ನಾಗರಾಜ್ ಕೂಡ ಕರೆಮಾಡಿ ವಿಚಾರಿಸಿದ್ದಾರೆ. ಬಳಿಕ ಡಿಂಗ್ರಿ ನಾಗರಾಜ್ ಮಾತನಾಡಿ, 'ದೊಡ್ಡಣ್ಣ ಆರೋಗ್ಯವಾಗಿದ್ದಾರೆ. ಈಗ ತಾನೆ ಅವರ ಜೊೆತೆ ಮಾತನಾಡಿದ್ದೇನೆ. ನೋಡು ನಾಗು ಯಾವನೋ ಹಾಕ್ಬಿಟ್ಟಿದ್ದಾನೆ. ನಿಂದು ಸೇರಿ 21ನೇ ಫೋನ್ ಅಂತ ಹೇಳಿದ್ರು. ದೊಡ್ಡಣ್ಣ ಚೆನ್ನಾಗಿದ್ದಾರೆ.' ಎಂದು ಸ್ಪಷ್ಟೆನೆ ನೀಡಿದ್ದರು.