Don't Miss!
- Lifestyle
ಫೆಬ್ರವರಿಯಲ್ಲಿದೆ ಈ 3 ಗ್ರಹಗಳ ಸಂಚಾರ: ಈ 4 ರಾಶಿಯವರಿಗೆ ಮಂಗಳಕರ
- Sports
IND vs NZ 2nd T20: ಭಾರತಕ್ಕೆ ಸಾಧಾರಣ ಗುರಿ ನೀಡಿದ ನ್ಯೂಜಿಲೆಂಡ್
- News
Breaking: ಸಹಾಯಕ ಸಬ್ ಇನ್ಸ್ಪೆಕ್ಟರ್ ಗುಂಡಿನ ದಾಳಿ: ಆಸ್ಪತ್ರೆಯಲ್ಲಿ ಓಡಿಶಾ ಆರೋಗ್ಯ ಸಚಿವ ಸಾವು
- Finance
ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಮುಂದೂಡಿದ ಬ್ಯಾಂಕ್ ಯೂನಿಯನ್ಸ್: ಜ.31ಕ್ಕೆ ಮಹತ್ವದ ಸಭೆ
- Technology
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಮಾದಕ ವ್ಯಸನಿಗಳಲ್ಲದ ಸ್ಯಾಂಡಲ್‌ವುಡ್ ನಟರನ್ನು ಹೆಸರಿಸಿದ ರವಿ ಬೆಳಗೆರೆ
ಮಾದಕ ದ್ರವ್ಯ ತಡೆ ಘಟಕ (ಎನ್‌ಸಿಬಿ) ಬೆಂಗಳೂರಿನಲ್ಲಿ ದಾಳಿ ನಡೆಸಿ ಮಾದಕ ವಸ್ತು ಮಾರಾಟದಲ್ಲಿ ತೊಡಗಿದ್ದ ಮಹಿಳೆ ಹಾಗೂ ಇನ್ನಿಬ್ಬರನ್ನು ಬಂಧಿಸಿದ ನಂತರ. ಸ್ಯಾಂಡಲ್‌ವುಡ್ ನಟ-ನಟಿಯರಿಗೆ ಮಾದಕ ವ್ಯಸನ ಇದೆ ಎಂಬ ಸುದ್ದಿ ಹೊರಬಿದ್ದಿದೆ.
Recommended Video
ಸ್ಯಾಂಡಲ್‌ವುಡ್‌ನ ಕೆಲವು ನಟ-ನಟಿಯರಿಗೆ ಮಾದಕ ವ್ಯಸನ ಇರುವುದು ಸತ್ಯ. ಭದ್ರತೆ ನೀಡುವುದಾದರೆ ಅಂಥಹವರ ಹೆಸರು ಬಹಿರಂಗಗೊಳಿಸುತ್ತೇನೆ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಹೇಳಿದ ಬಳಿಕವಂತೂ ಪ್ರಕರಣ ಮತ್ತೊಂದು ಮಜಲಿಗೆ ತಿರುಗಿದ್ದು, ಸಿನಿ ಲೋಕದ ಹಿರಿಯರು ವಿಷಯದ ಕುರಿತು ಹೇಳಿಕೆಗಳನ್ನು ನೀಡಲು ಇಳಿದಿದ್ದಾರೆ.
ಸಿನಿಮಾ ಲೋಕದೊಂದಿಗೆ ನಂಟು ಹೊಂದಿರುವ, ಹಿರಿಯ ಪತ್ರಕರ್ತರೂ ಆಗಿರುವ ರವಿ ಬೆಳಗೆರೆ ಇಂದು ಸುದ್ದಿಗೋಷ್ಟಿ ನಡೆಸಿ, ಸ್ಯಾಂಡಲ್‌ವುಡ್ ಜೊತೆಗೆ ಡ್ರಗ್ಸ್ ನಂಟಿನ ವಿಷಯದ ಬಗ್ಗೆ ಮಾತನಾಡಿದರು.
ಸುದ್ದಿಗೋಷ್ಠಿಯಲ್ಲಿ ಮಾತಾಡುತ್ತಾ, ಚಂದನವನಕ್ಕೆ ಡ್ರಗ್ ಮಾಫಿಯಾ ನಂಟಿದೆ ಎಂಬುದನ್ನು ನಿರಾಕರಿಸಿದ ರವಿ ಬೆಳಗೆರೆ. ಉಪೇಂದ್ರ, ಜಗ್ಗೇಶ್, ದುನಿಯಾ ವಿಜಯ್ ಅಂಥಹಾ ದೊಡ್ಡ-ದೊಡ್ಡ ನಟರ್ಯಾರೂ ಮಾದಕ ವ್ಯಸನಿಗಳಲ್ಲ ಎಂದರು.

ಡ್ರಗ್ಸ್ ಸೇವಿಸಿದವರಂತೆ ಮಾತನಾಡುತ್ತಾರೆ ಅಷ್ಟೆ: ಬೆಳಗೆರೆ
ಆದರೆ ಕೆಲವರು ಮಾದಕ ವಸ್ತು ಸೇವನೆ ಮಾಡಿದಂತೆ ಮಾತನಾಡುತ್ತಾರೆ ಅಷ್ಟೆ ಎಂದು ನಗೆ ಚಟಾಕಿ ಹಾರಿಸಿದರು ಬೆಳಗೆರೆ. ಅವರ ವ್ಯಂಗ್ಯದ ಮಾತಿನ ಗುರಿ ದುನಿಯಾ ವಿಜಯ್ ಎಂಬುದು ವಿಜಯ್-ರವಿ ಬೆಳಗೆರೆ ನಡುವೆ ನಡೆದಿದ್ದ ಜಗಳ ಗೊತ್ತಿದ್ದ ಯಾರಿಗಾದರೂ ಸುಲಭಕ್ಕೆ ಅರ್ಥವಾಗುತ್ತದೆ.

'ಅವರ್ಯಾರೂ ಡ್ರಗ್ಸ್ ಬಗ್ಗೆ ಮಾತನಾಡಿದ್ದು ನಾನು ಕೇಳಿಲ್ಲ'
ಮುಂದುವರೆದು ಮಾತನಾಡಿದ ರವಿ ಬೆಳಗೆರೆ, ವಿಷ್ಣುವರ್ಧನ್, ಅಂಬರೀಶ್ ಅಂಥಹಾ ಹಿರಿಯ ನಟರುನನಗೆ ಸ್ನೇಹಿತರಾಗಿದ್ದರು. ಈಗ ರಾಕ್‌ಲೈನ್ ವೆಂಕಟೇಶ್ ಇನ್ನೂ ಕೆಲವರು ಸ್ನೇಹಿತರೆ ಆದರೆ ಅವರುಗಳೆಂದೂ ಡ್ರಗ್ಸ್ ಬಗ್ಗೆ ಮಾತನಾಡಿದ್ದನ್ನು ನಾನು ಕೇಳಿಲ್ಲ ಎಂದರು ಬೆಳಗೆರೆ.

ಇಂದ್ರಜಿತ್ ಲಂಕೇಶ್ ಬಗ್ಗೆ ಖಾರದ ಪ್ರತಿಕ್ರಿಯೆ
ಭದ್ರತೆ ನೀಡಿದರೆ ಚಂದನವನದ ಮಾದಕ ವ್ಯಸನಿಗಳ ಮಾಹಿತಿ ನೀಡುತ್ತೇನೆ ಎಂದಿರುವ ಇಂದ್ರಜಿತ್ ಲಂಕೇಶ್ ಹೇಳಿಕೆ ಕುರಿತು ಖಾರದ ಪ್ರತಿಕ್ರಿಯೆ ನೀಡಿದ ರವಿ ಬೆಳಗೆರೆ, ಆತನ ಬಳಿ ಪೂರ್ಣ ಮಾಹಿತಿ ಇದ್ದರೆ ಮಾತನಾಡಬೇಕು. ಇಲ್ಲದೇ ಹೋದರೆ ಸುಮ್ಮನಿರಬೇಕು ಎಂದರು.

'ತಲೆಯ ಮೇಲೆ ಕೂದಲಿಲ್ಲ, ಒಳಗೆ ಬುದ್ಧಿಯೂ ಇಲ್ಲ'
'ತಲೆಯ ಮೇಲೆ ಕೂದಲಿಲ್ಲ. ತಲೆಯ ಒಳಗೆ ಬುದ್ಧಿಯೂ ಇಲ್ಲ. ಆತ ಯಾರೆಂಬುದು ಸಹ ನನಗೆ ಗೊತ್ತಿಲ್ಲ. ಆತನ ತಂದೆ ಗೊತ್ತು. ಆತ ಯಾರೆಂಬುದು ಗೊತ್ತಿಲ್ಲ. ಸುಮ್ಮನೆ ನಾನ್‌ಸೆನ್ಸ್ ಮಾತನಾಡುತ್ತಿದ್ದಾನೆ, ಆತನ ತಂದೆ ಯಾರೆಂಬುದು ಗೊತ್ತು, ಆದರೆ ಈತ ಯಾರೆಂಬುದು ನನಗೆ ಗೊತ್ತೇ ಇಲ್ಲ' ಎಂದು ವಾಗ್ದಾಳಿ ನಡೆಸಿದರು ಬೆಳಗೆರೆ.

'ಅನಿಕಾ ಸುಳ್ಳು ಮಾಹಿತಿ ನೀಡಿರಬಹುದು'
ಪೊಲೀಸರಿಂದ ಬಂಧನಕ್ಕೆ ಒಳಗಾಗಿರುವ ಅನಿಕಾ, ಪ್ರಕರಣದ ದಿಕ್ಕು ತಪ್ಪಿಸಲು ಚಂದನವನದ ಲಿಂಕ್ ಬಗ್ಗೆ ಸುಳ್ಳು ಹೇಳಿರಬಹುದು. ಆಕೆಗೆ ಡ್ರಗ್ಸ್ ಹೇಗೆ ಸಿಕ್ಕಿತು ಎಂಬುದು ತನಿಖೆ ಆಗಬೇಕು. ಆ ರಾಕೆಟ್ ನಲ್ಲಿ ಯಾರ್ಯಾರು ಇದ್ದಾರೆ ಎಂಬುದು ಗೊತ್ತಾಗಬೇಕು ಎಂದರು ರವಿ ಬೆಳಗೆರೆ.