»   » ಕನ್ನಡ ಸಿನಿ ಸ್ಟಾರ್ ಮನೆಗಳ ಮುಂದೆ ಗೂಟದ ಕಾರು!

ಕನ್ನಡ ಸಿನಿ ಸ್ಟಾರ್ ಮನೆಗಳ ಮುಂದೆ ಗೂಟದ ಕಾರು!

By: ಜೀವನರಸಿಕ
Subscribe to Filmibeat Kannada

ಚುನಾವಣಾ ಕಣ ರಂಗೇರುತ್ತಿದ್ದ ಹಾಗೆ ಒಬ್ಬೊಬ್ಬರ ರಾಜಕಾರಿಣಿಗಳ ಗೂಟದ ಕಾರು ಸಿನಿಮಾ ಸ್ಟಾರ್ ಗಳ ಮನೆ ಮುಂದೆ ಪಾರ್ಕ್ ಆಗ್ತಿದೆ. ಒಬ್ಬ ಸ್ಟಾರ್ ಬಂದ್ರೆ ಎಷ್ಟು ಓಟ್ ಗ್ಯಾರಂಟಿ. ಯಾವ ಸ್ಟಾರ್ ಗೆ ಬೆಂಗಳೂರಲ್ಲಿ ಅಭಿಮಾನಿಗಳು ಜಾಸ್ತಿ ಇದ್ದಾರೆ. ಯಾರಿಗೆ ರಾಜ್ಯಾದ್ಯಂತ ಅಭಿಮಾನಿಗಳಿದ್ದಾರೆ. ಈ ಎಲ್ಲಾ ಲೆಕ್ಕಾಚಾರವನ್ನ ಅಳೆದು ತೂಗಿ ರಾಜಕೀಯ ಮುಖಂಡರು ಸಿನಿಮಾ ರಂಗದವರಿಗೆ ಗಾಳ ಹಾಕ್ತಿದ್ದಾರೆ.

ಓಟಿನ ಸಮಯದಲ್ಲಿ ಮಾತ್ರ ನೋಟು ಹೊರತೆಗೆಯೋ ರಾಜಕೀಯದವರು ಕೋಟಿ ಖರ್ಚು ಮಾಡಿಯಾದ್ರೂ ಸಿನಿಮಾ ಸ್ಟಾರ್ ಗಳನ್ನ ಕರೆಸಿ ಪ್ರಚಾರ ಗಿಟ್ಟಿಸೋಕೆ ತಂತ್ರ ಹೆಣೆದಿದ್ದಾರೆ.

ದರ್ಶನ್, ಉಪ್ಪಿ, ಯಶ್, ಸುದೀಪ್, ಗಣೇಶ್, ಪ್ರೇಮ್ ಸೇರಿದಂತೆ ದೊಡ್ಡ ಅಭಿಮಾನಿ ಬಳಗ ಹೊಂದಿರೋ ಸ್ಟಾರ್ ಗಳು ಖಂಡಿತಾ ಗೆಲುವಿಗೆ ದೊಡ್ಡ ಕೊಡುಗೆ ನೀಡ್ತಾರೆ. ಹಾಗಾಗಿ ಕೋಟಿಗಳನ್ನ ಚೆಲ್ಲಿಯಾದ್ರೂ ಈ ಸ್ಟಾರ್ ಗಳನ್ನ ಪ್ರಚಾರಕ್ಕೆ ಸೆಳೆಯೋ ಯೋಜನೆ ಹಾಕ್ತಿವೆ ದೊಡ್ಡ ದೊಡ್ಡ ಪಕ್ಷಗಳು.[ಬಿರುಸಿನ ಮತಯಾಚನೆ ಚಿತ್ರಗಳು]

ಒಂದೊಂದು ಪಕ್ಷಗಳೂ ಕೂಡ ಸ್ಟಾರ್ ಕ್ಯಾಂಪೆಯ್ ನರ್ಸ್ ಲಿಸ್ಟ್ ಹಿಡಿದು ಕುಳಿತಿವೆ. ಇರೋ ಲಿಸ್ಟ್ ನಲ್ಲಿ ಯಾರ್ಯಾರಿದ್ದಾರೆ. ಯಾರ್ಯಾರು ಎಲ್ಲೆಲ್ಲಿಂದ ಪ್ರಚಾರ ಮಾಡೋ ಸಾಧ್ಯತೆಯಿದೆ ಸ್ಲೈಡ್ ನಲ್ಲಿ ನೋಡಿ.

ಪವರ್ ಸ್ಟಾರ್ ಶಿವಮೊಗ್ಗಕ್ಕೆ ಬರ್ತಾರಂತೆ

ಈ ಬಾರಿ ಅತ್ತಿಗೆ ಗೀತಾ ಶಿವರಾಜ್ ಕುಮಾರ್ ಶಿವಮೊಗ್ಗ ಕ್ಷೇತ್ರದಲ್ಲಿ ಚುನಾವಣೆಗೆ ನಿಂತಿದ್ದು, ಪವರ್ ಸ್ಟಾರ್ ಶಿವಮೊಗ್ಗದಲ್ಲಿ ಕೈಬೀಸೋದು ಬಹುತೇಕ ಖಚಿತ. ರಾಜ್ ಕುಟುಂಬ ಒಗ್ಗಟ್ಟಾಗಿದ್ದು ಶಿವಣ್ಣ ಪತ್ನಿಗೆ ಪುನೀತ್ ಪ್ರಚಾರದ ಸಾಥ್ ಕೊಡೋದು ಗ್ಯಾರಂಟಿ.

ಶಿವಮೊಗ್ಗದಲ್ಲಿ ಶಿವಣ್ಣ ಪ್ರಚಾರದ ಬಿರುಗಾಳಿ

ಸ್ಯಾಂಡಲ್ ವುಡ್ ಕಿಂಗ್ ಶಿವಣ್ಣ ಶಿವಮೊಗ್ಗದಲ್ಲಿ ಪ್ರಚಾರದ ಬಿರುಗಾಳಿ ಎಬ್ಬಿಸಲಿದ್ದಾರೆ. ಪತ್ನಿಯ ಗೆಲುವಿಗಾಗಿ ಶಿವಮೊಗ್ಗವನ್ನ ಸಂಪೂರ್ಣ ಸುತ್ತೋಕೆ ಶಿವಣ್ಣ ಬಿಡುವು ಮಾಡಿಕೊಂಡಿದ್ದಾರೆ. ಪತ್ನಿ ಗೀತಾ ಶಿವಣ್ಣ ಪ್ರಚಾರಕ್ಕೆ ಬರ್ತಾರೆ ಅಂತ ಹೇಳಿದ್ದೂ ಆಗಿದೆ.

ಶಿವಮೊಗ್ಗದಲ್ಲಿ ರಾಘಣ್ಣ ರಂಗು

ಅನಾರೋಗ್ಯದಿಂದ ಚೇತರಿಸಿಕೊಳ್ತಿರೋ ರಾಘವೇಂದ್ರ ರಾಜ್ ಕುಮಾರ್ ಕೂಡ ಅಣ್ಣನ ಪತ್ನಿ ಗೀತಾ ಗೆಲುವಿಗೆ ಸಾಥ್ ಕೊಡ್ತಾರೆ ಅನ್ನುವ ಮಾತುಗಳು ಕೇಳಿಬರ್ತಿವೆ. ರಾಘವೇಂದ್ರ ರಾಜ್ ಕುಮಾರ್ ಗೆ ಕೂಡ ರಾಜ್ಯಾದ್ಯಂತ ಅಭಿಮಾನಿಗಳಿದ್ದಾರೆ.

ದರ್ಶನ್ ಯಾರ ಕಡೆ ಪ್ರಚಾರ ಮಾಡ್ತಾರೆ?

ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ದರ್ಶನ ಪಕ್ಷದ ಪರ ಅಲ್ಲ ನನ್ನದೇನಿದ್ರೂ ವ್ಯಕ್ತಿಯ ಪರ ಪ್ರಚಾರ ಅಂತ ಬಿಜೆಪಿಯ ಅರವಿಂದ ಲಿಂಬಾವಳಿ, ಸೇರಿದಂತೆ ರಾಜ್ಯದ ಮೂರು ಮುಖ್ಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪರ ಪ್ರಚಾರ ಮಾಡಿದ್ರು. ಈ ಬಾರಿ ಕೂಡ ದರ್ಶನ್ ಪ್ರಚಾರಕ್ಕಿಳಿಯೋದು ಗ್ಯಾರಂಟಿ. ಆದರೆ ಅಂಬರೀಶ್ ರ ಮಾತಿನಂತೆ ನಡೆಯೋ ದರ್ಶನ್ ಅಂಬರೀಶ್ ಇಲ್ಲದಿರುವಾಗ ಯಾರ ಪ್ರಚಾರ ಮಾಡ್ತಾರೆ ಗೊತ್ತಿಲ್ಲ.

ಕಿಚ್ಚ ಸುದೀಪ್ ಕಾಂಗ್ರೆಸ್ ಗೋ ಬಿಜೆಪಿಗೋ

ಕಳೆದ ಬಾರಿ ಅಶೋಖ್ ಖೇಣಿ ಪರ ಭರ್ಜರಿ ಪ್ರಚಾರ ಮಾಡಿ ಬೀದರ್ ಉತ್ತರ ವಿಧಾನಸಭಾ ಕ್ಷೇತ್ರದಿಂದ ಖೇಣಿಗೆ ಜಯ ದೊರಕಿಸಿಕೊಡುವಲ್ಲಿ ಮುಖ್ಯ ಪಾತ್ರ ವಹಿಸಿದ್ದ ಸುದೀಪ್ ಈ ಬಾರಿ ಯಾರ ಪ್ರಚಾರ ಮಾಡ್ತಾರೆ ಅನ್ನೋದು ಇನ್ನೂ ಗುಪ್ತ್ ಗುಪ್ತ್.

ಉಪ್ಪಿ ಐ ಲೈಕ್ ಇಟ್ ಯಾರಿಗೆ?

ರಾಜ್ಯಾದ್ಯಂತ ದೊಡ್ಡ ಅಭಿಮಾನಿ ಬಳಗ ಹೊಂದಿರೋ ಉಪ್ಪಿ ಯಾರ ಪರ ಪ್ರಚಾರ ಮಾಡ್ತಾರೆ ಅನ್ನೋ ಕುತೂಹಲ ಜನರದ್ದು. ದೊಡ್ಡ ದೊಡ್ಡ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಉಪ್ಪಿಗೆ ದೊಡ್ಡ ಆಫರ್ ಕೊಡೋಕೆ ರೆಡಿಯಿದ್ದು ಸಿನಿಮಾ ಶೂಟಿಂಗ್ ನಡುವೆ ಉಪ್ಪಿ ಯಾರಿಗೆ ಜೈ ಅಂತಾರೆ ಗೊತ್ತಿಲ್ಲ.

ಗೋಲ್ಡನ್ ಸ್ಟಾರ್ ಗಣೇಶ್ ಬಿಜೆಪಿ ಪರ

ಗೋಲ್ಡನ್ ಸ್ಟಾರ್ ಗಣೇಶ್ ಯುವ ಮತದಾರರನ್ನ ಸೆಳೇಯೋಕೆ ಚುನಾವಣಾ ಪ್ರಚಾರಕ್ಕಿಳಿಯೋ ಸಾಧ್ಯತೆಯಿದೆ. ಪತ್ನಿ ಬಿಜೆಪಿಯಲ್ಲಿರೋದ್ರಿಂದ ಸಹಜವಾಗೇ ಗಣೇಶ್ ಬಿಜೆಪಿಗೆ ಸಾಥ್ ಕೊಡಲಿದ್ದಾರೆ.

ಪ್ರೇಮ್ ನೆನಪಿರಲಿ ಅಂತಿದ್ದಾರೆ ನಾಯಕರು

ಲವ್ಲಿ ಸ್ಟಾರ್ ಪ್ರೇಮ್ ಗೆ ಕೂಡ ಯುವ ಅಭಿಮಾನಿ ಬಳಗ ದೊಡ್ಡದಿದೆ. ಪ್ರೇಮ್ ಪ್ರಚಾರಕ್ಕಿಳಿದರೆ ಜನರ ಗಮನ ಸೆಳೆಯಬಹುದು ಅನ್ನೋ ಕಾರಣಕ್ಕೆ ಪ್ರೇಮ್ ಗೆ ಕೂಡ ಆಫರ್ ಗಳಿವೆ. ಹಿಂದೆ ಅಂಬಿ ಜೊತೆ ಪ್ರಚಾರಕ್ಕೆ ಸಾಥ್ ಕೊಟ್ಟಿದ್ದ ಪ್ರೇಮ್ ಲೋಕಸಭೆಗೆ ಯಾರ ಪರ ಪ್ರಚಾರ ಮಾಡ್ತಾರೋ ಕಾದು ನೋಡ್ಬೆಕು.

ಯಶ್ ರಾಕಿಂಗ್ ಇನ್ ಎಲೆಕ್ಷನ್

ರೆಬೆಲ್ ಸ್ಟಾರ್ ಅಂಬಿ ಹೇಳಿದಂತೆ ಕೇಳ್ತಾ ಅಂಬರೀಶ್ ಜೊತೆ ಚುನಾವಣೆಗೆ ಸಾಥ್ ಕೊಡ್ತಿದ್ದ ಯಶ್ ಗೆ ರಾಜ್ಯದಲ್ಲಿ ದೊಡ್ಡ ಅಭಿಮಾನಿ ಬಳಗವಿದೆ. ಯಶ್ ಗೆ ಕೂಡ ಕೋಟಿ ಕೋಟಿಗಳ ಆಫರ್ ಇದ್ದು ಯಶ್ ರ ಪ್ರಚಾರದ ಯಶಸ್ಸಿನ ಸಾಥ್ ಯಾವ ಪಕ್ಷಕ್ಕೆ ಅನ್ನೋದು ಸದ್ಯಕ್ಕೆ ಗೊತ್ತಿಲ್ಲ.

English summary
All political parties has roped in an assorted set of film and television personalities to election campaign. Sudeep, Darshna, Puneeth Rajkumar, Yash, Ganesh have hit the campaign trail seeking support for political parties.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada