For Quick Alerts
  ALLOW NOTIFICATIONS  
  For Daily Alerts

  Yash : ರಾಜದೀಪ್ ಸರ್ದೇಸಾಯಿ ತರ್ಲೆ ಪ್ರಶ್ನೆಗೆ ಯಶ್ ಖಡಕ್ ಉತ್ತರ

  |

  ಕೆಜಿಎಫ್ ಸಿನಿಮಾದ ಮೂಲಕ ದೇಶದೆಲ್ಲಡೆ ಮನೆಮಾತಾಗಿರುವ ರಾಕಿಂಗ್ ಸ್ಟಾರ್ ಯಶ್ ಮಾಧ್ಯಮಗಳ ಪ್ರಶ್ನೆಗೆ ಉತ್ತರ ನೀಡುವವಲ್ಲಿ ನಿಸ್ಸೀಮರು ಎನ್ನುವುದು ಗೊತ್ತಿರುವ ವಿಚಾರ. ಅದನ್ನು ಮತ್ತೆ ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ರುಜುವಾತು ಪಡಿಸಿದ್ದಾರೆ.

  ಪ್ರಮುಖವಾಗಿ ಹಿರಿಯ ಪತ್ರಕರ್ತ/ನಿರೂಪಕ ಇಂಡಿಯಾ ಟುಡೇ ವಾಹಿನಿಯ ರಾಜದೀಪ್ ಸರ್ದೇಸಾಯಿ ನಡೆಸಿಕೊಡುವ ಇಂಡಿಯಾ ಟುಡೇ ಕಂಕ್ಲೇವ್ ಮುಂಬೈ 2022 ಕಾರ್ಯಕ್ರಮದಲ್ಲಿ ಯಶ್ ಅವರಿಗೆ ವಿಶೇಷ ಆಹ್ವಾನ ಕೊಟ್ಟು ಕರೆಸಿಕೊಳ್ಳಲಾಗಿತ್ತು.

  ಯಶೋಮಾರ್ಗ ಕಾರ್ಯ ಯಶಸ್ವಿ: ಯಶ್‌ ಕಾರ್ಯಕ್ಕೆ ತಲ್ಲೂರು ಗ್ರಾಮಸ್ಥರ ಅಭಿನಂದನೆ

  ರಾಜದೀಪ್ ಅವರ ಹಲವು ಪ್ರಶ್ನೆಗಳಿಗೆ ತನ್ನದೇ ರೀತಿಯಲ್ಲಿ ಉತ್ತರಿಸಿದ ಯಶ್, ಎದುರಾದ ಪ್ರಶ್ನೆಗೆ ಇಲ್ಲಿ ರಾಜಕೀಯ ಬೇಡ ಎನ್ನುವ ಮೂಲಕ ರಾಜದೀಪ್ ಅವರ ಬಾಯಿ ಮುಚ್ಚಿಸಿದ್ದಾರೆ.

  ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರೋದ್ಯಮ ಗಳಿಸುತ್ತಿರುವ ಯಶಸ್ಸಿನ ಬಗ್ಗೆ ವಿವರಣೆಯನ್ನು ನೀಡುತ್ತಾ ಬಾಲಿವುಡ್, ಸ್ಯಾಂಡಲ್ ವುಡ್, ಸೌತ್ ಸಿನಿಮಾ ಎಂದು ತಾರತಮ್ಯ ತೋರಬಾರದು. ಇಂಡಿಯನ್ ಸಿನಿಮಾ ಎಂದು ಎಲ್ಲರೂ ಒಗ್ಗೂಡಿ ಹೇಳುವ ಸಮಯವಿದು ಎಂದು ಯಶ್ ಹೇಳಿದ್ದಾರೆ.

   ಇಂಡಿಯಾ ಕಂಕ್ಲೇವ್ ಕಾರ್ಯಕ್ರಮದಲ್ಲಿ 'ಕೆಜಿಎಫ್ ಚಾಪ್ಟರ್ 2' ಸ್ಟಾರ್ ಯಶ್

  ಇಂಡಿಯಾ ಕಂಕ್ಲೇವ್ ಕಾರ್ಯಕ್ರಮದಲ್ಲಿ 'ಕೆಜಿಎಫ್ ಚಾಪ್ಟರ್ 2' ಸ್ಟಾರ್ ಯಶ್

  ಇಂಡಿಯಾ ಕಂಕ್ಲೇವ್ ಕಾರ್ಯಕ್ರಮದಲ್ಲಿ 'ಕೆಜಿಎಫ್ ಚಾಪ್ಟರ್ 2' ಸಿನಿಮಾದ ಡೈಲಾಗುಗಳನ್ನು ಹೇಳಿದ ಯಶ್ ಅವರಿಗೆ ಸಿನಿಮಾದಲ್ಲಿ ಬರುವ ಒಂದು ಸನ್ನಿವೇಶದಲ್ಲಿ ನಡೆದುಕೊಂಡು ಬರುವ ಶೈಲಿಯನ್ನು ತೋರಿಸುವಂತೆ ರಾಜದೀಪ್ ಒತ್ತಾಯಿಸಿದರು. ನಾನು ಮಾಡುವ ಬದಲು ನೀವು ಮಾಡಿ ಎಂದು ಯಶ್ ಅವರು ರಾಜದೀಪ್ ಅವರಿಗೆ ಹೇಳಿದರು. ಅದರಂತೇ, ರಾಜದೀಪ್ ಮತ್ತು ಅವರ ಸಹದ್ಯೋಗಿ ವೇದಿಕೆಯಲ್ಲಿ ಯಶ್ ಶೈಲಿಯಲ್ಲಿ ವಾಕಿಂಗ್ ಸ್ಟೈಲ್ ಮಾಡಲು ಪ್ರಯತ್ನಿಸಿದರು.

   'ಕೆಜಿಎಫ್' ಸಿನಿಮಾದ ಮೂಲಕ ನ್ಯಾಷನಲ್ ಸ್ಟಾರ್ ಆಗಿದ್ದೀರಿ

  'ಕೆಜಿಎಫ್' ಸಿನಿಮಾದ ಮೂಲಕ ನ್ಯಾಷನಲ್ ಸ್ಟಾರ್ ಆಗಿದ್ದೀರಿ

  ಈ ಹಿಂದಿನ ಕಾರ್ಯಕ್ರಮದಲ್ಲೂ ಕೇಳಿದ ಪ್ರಶ್ನೆಯನ್ನು ಯಶ್ ಗೆ ಕೇಳಿದ ರಾಜದೀಪ್, "ಕೆಜಿಎಫ್ ಸಿನಿಮಾದ ಮೂಲಕ ನ್ಯಾಷನಲ್ ಸ್ಟಾರ್ ಆಗಿದ್ದೀರಿ, ನೀವು ನಿಮ್ಮನ್ನು ಭಾರತೀಯನಾಗಿ ನೋಡಲು ಬಯಸುತ್ತೀರಾ ಅಥವಾ ಕನ್ನಡಿಗನಾಗಿ ನೋಡಲು ಬಯಸುತ್ತೀರಾ"ಎಂದು ಕೇಳಿದರು. ಅದಕ್ಕೆ ಉತ್ತರಿಸಿದ "ನಾನೊಬ್ಬ ಹೆಮ್ಮೆಯ ಕನ್ನಡಿಗ ಎನ್ನುವುದು ಸತ್ಯ, ಅದನ್ನು ಬದಲಾಯಿಸಲು ಸಾಧ್ಯವಿಲ್ಲ, ಅದರಂತೆಯೇ ನಾನೊಬ್ಬ ಭಾರತೀಯ ಎನ್ನುವುದೂ ಸತ್ಯ. ನನಗೆ ನಾನೊಬ್ಬ ಕನ್ನಡಿಗ, ಭಾರತೀಯ ಎನ್ನುವ ಗರ್ವವಿದೆ"ಎಂದು ಯಶ್ ಹೇಳಿದರು.

   ಬೆಳಗಾವಿ ನಮಗೆ ಬೇಕೆಂದು ಒತ್ತಾಯಿಸಿಕೊಂಡು ಬರುತ್ತಿದ್ದೇವೆ

  ಬೆಳಗಾವಿ ನಮಗೆ ಬೇಕೆಂದು ಒತ್ತಾಯಿಸಿಕೊಂಡು ಬರುತ್ತಿದ್ದೇವೆ

  "ರಾಕಿ ಬಾಯ್ ಪಾತ್ರ ಮಾಡಲು ಮೊದಲು ನಿಮ್ಮ ಮೇಲೆ ನಿಮಗೆ ನಂಬಿಕೆ ಇರಬೇಕು, ಎಲ್ಲಾ ಅಧ್ಯಕ್ಷತೆಯಿಂದ ದೂರವಿರಬೇಕು" ಎಂದು ರಾಜದೀಪ್ ಸರ್ದೇಸಾಯಿಗೆ ಯಶ್ ಹೇಳಿದರು. "ನಾನು ಮಹಾರಾಷ್ಟ್ರದವನು, ಮರಾಠಿಗ, ಬೆಳಗಾವಿ ನಮಗೆ ಬೇಕೆಂದು ಒತ್ತಾಯಿಸಿಕೊಂಡು ಬರುತ್ತಿದ್ದೇವೆ, ಅದರ ಬಗ್ಗೆ ಪ್ರತ್ಯೇಕವಾಗಿ ಮಾತನಾಡೋಣ'ಎಂದು ರಾಜದೀಪ್ ಹೇಳಿದಾಗ ಖಡಕ್ ಉತ್ತರ ಕೊಟ್ಟ ಯಶ್, "ರಾಜಕೀಯವನ್ನು ಈ ವೇದಿಕೆಯಲ್ಲಿ ತರುವುದು ಬೇಡ, ನಮಗೆ ಇನ್ನೊಂದು ದೇಶ ಸಿಗಬೇಕೆಂದು ನಾವು ಒತ್ತಾಯಿಸಿರುವುದು ನಿಮಗೂ ಗೊತ್ತಿರಲಿ"ಎಂದು ತಿರುಗೇಟು ನೀಡಿದರು.

   ರಾಜದೀಪ್ ಸರ್ದೇಸಾಯಿ ತರ್ಲೆ ಪ್ರಶ್ನೆಗೆ ಯಶ್ ಖಡಕ್ ಉತ್ತರ

  ರಾಜದೀಪ್ ಸರ್ದೇಸಾಯಿ ತರ್ಲೆ ಪ್ರಶ್ನೆಗೆ ಯಶ್ ಖಡಕ್ ಉತ್ತರ

  ಬೆಳಗಾವಿ ವಿವಾದ ಜೀವಂತವಾಗಿರುವ ಈ ಹೊತ್ತಿನಲ್ಲಿ, ಅದರಲ್ಲೂ ರಾಜ್ಯೋತ್ಸವದ ತಿಂಗಳಲ್ಲಿ ರಾಜದೀಪ್ ಸರ್ದೇಸಾಯಿ ಕೇಳಿದ ಪ್ರಶ್ನೆ ಸಾಕಷ್ಟು ವಿವಾದಕ್ಕೆ ಕಾರಣವಾಗುವ ಸಾಧ್ಯತೆಯಿಲ್ಲದಿಲ್ಲ. ಶಿವಸೇನೆ ಮೈತ್ರಿಕೂಟದ ಸರಕಾರ ಅಧಿಕಾರದಲ್ಲಿದ್ದಾಗ ಬಹಳಷ್ಟು ಬಾರಿ, ಸಂಜಯ್ ರಾವತ್ ಸೇರಿದಂತೆ ಬೆಳಗಾವಿಯ ವಿಚಾರದಲ್ಲಿ ಕನ್ನಡಿಗರನ್ನು ಕೆಣಕುವ ಮಾತನ್ನಾಡಿದ್ದರು. ಈಗ, ಕನ್ನಡಿಗ ಯಶ್ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ರಾಜದೀಪ್ ಬೆಳಗಾವಿ ಸಂಬಂಧ ಅಸಂಬದ್ದ ಪ್ರಶ್ನೆಯನ್ನು ಕೇಳಿ ಮತ್ತೆ ಬೆಂಕಿಗೆ ತುಪ್ಪು ಸುರಿಯುವ ಕೆಲಸವನ್ನು ಮಾಡಿದ್ದಾರೆ.

  English summary
  Sandalwood Star Yash In India Conclave Programme: Question Asked About Belagavi. Know More,
  Sunday, November 6, 2022, 12:00
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X