»   » ರಾಕಿಂಗ್ ಸ್ಟಾರ್ ಬರ್ತಡೇ ಗೆ ರಂಗು ತಂದ ಸ್ಯಾಂಡಲ್ ವುಡ್ ಕಲಾವಿದರು

ರಾಕಿಂಗ್ ಸ್ಟಾರ್ ಬರ್ತಡೇ ಗೆ ರಂಗು ತಂದ ಸ್ಯಾಂಡಲ್ ವುಡ್ ಕಲಾವಿದರು

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನ ರಾಕಿಂಗ್ ಸ್ಟಾರ್ ಯಶ್ ನಿನ್ನೆ ಅದ್ದೂರಿಯಾಗಿ ತಮ್ಮ ಹುಟ್ಟುಹಬ್ಬವನ್ನ ಅಭಿಮಾನಿಗಳ ಜೊತೆ ಆಚರಣೆ ಮಾಡಿಕೊಂಡರು. ಸಾವಿರಾರು ಅಭಿಮಾನಿಗಳು ಹೊರ ಜಿಲ್ಲೆಗಳಿಂದಲೂ ಬಂದು ಯಶ್ ಅವರನ್ನ ಭೇಟಿ ಮಾಡಿ ಹುಟ್ಟುಹಬ್ಬದ ಶುಭಾಷಯಗಳನ್ನ ತಿಳಿಸಿದರು.

ಯಶ್ ಹುಟ್ಟುಹಬ್ಬದಲ್ಲಿ ಪತ್ನಿ ರಾಧಿಕಾ ಪಂಡಿತ್ ಕೂಡ ಜೊತೆಯಲ್ಲಿದ್ದು ಅಭಿಮಾನಿಗಳ ಸಂಭ್ರಮದಲ್ಲಿ ಭಾಗಿ ಆಗಿದ್ದರು. ರಾಧಿಕಾ ಅಷ್ಟೇ ಅಲ್ಲದೆ ಯಶ್ ತಂದೆ ತಾಯಿ ಹಾಗೂ ಸಹೋದರಿ ಕುಟುಂಬಸ್ಥರು ಕೂಡ ಹುಟ್ಟುಹಬ್ಬದಲ್ಲಿ ಹಾಜರ್ ಹಾಕಿದ್ದರು.

In Pics: ರಾಕಿಂಗ್ ಸ್ಟಾರ್ ಬರ್ತಡೇಯ ಸ್ಯಾಂಡಲ್ ವುಡ್ ತಾರೆಯರು

ಬೆಳ್ಳಗ್ಗೆ ಅಭಿಮಾನಿಗಳ ಜೊತೆ ಬರ್ತಡೇ ಆಚರಣೆ ಮಾಡಿಕೊಂಡ ನಂತರ ಸಂಜೆ ಚಿತ್ರರಂಗದ ಸ್ಟಾರ್ ಗಳಿಗಾಗಿ ಯಶ್ ಮತ್ತು ರಾಧಿಕಾ ಪಂಡಿತ್ ಅದ್ದೂರಿ ಪಾರ್ಟಿಯನ್ನ ಕೊಟ್ಟಿದ್ದಾರೆ. ಪಾರ್ಟಿಯ ಫೋಟೋಗಳು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಹಾಗಾದ್ರೆ ಯಶ್ ಬರ್ತಡೇ ಪಾರ್ಟಿಯಲ್ಲಿ ಯಾರೆಲ್ಲಾ ಬಂದಿದ್ರು ? ಮುಂದೆ ಓದಿ

ಯಶ್ ಬರ್ತಡೇಯಲ್ಲಿ ಶಿವರಾಜ್ ಕುಮಾರ್

ಯಶ್ 32ನೇ ಹುಟ್ಟುಹಬ್ಬಕ್ಕೆ ಇಡೀ ಕನ್ನಡ ಸಿನಿಮಾರಂಗವನ್ನೇ ಆಹ್ವಾನ ಮಾಡಲಾಗಿತ್ತು. ಪವರ್ ಸ್ಟಾರ್ ಫ್ಯಾಮಿಲಿ ಹಾಗೂ ಶಿವಣ್ಣನ ಕುಟುಂಬ ಕೂಡ ಪಾರ್ಟಿಯಲ್ಲಿ ಭಾಗಿ ಆಗಿತ್ತು.

ರಿಯಲ್ ಸ್ಟಾರ್ ಹಾಗೂ ರೆಬೆಲ್ ಸ್ಟಾರ್

ಬರ್ತಡೇ ಪಾರ್ಟಿಯಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ಹಾಗೂ ಸುಮಲತಾ ಕೂಡ ಬಂದಿದ್ದರು. ಅಷ್ಟೇ ಅಲ್ಲದೆ ರಿಯಲ್ ಸ್ಟಾರ್ ಉಪೇಂದ್ರ ಮತ್ತು ಪ್ರಿಯಾಂಕ ಉಪೇಂದ್ರ ಕೂಡ ಹಾಜರ್ ಹಾಕಿದ್ದರು.

ಪಾರ್ಟಿಯಲ್ಲಿ ಸ್ಯಾಂಡಲ್ ವುಡ್ ಕ್ವೀನ್ಸ್

ಸ್ಯಾಂಡಲ್ ವುಡ್ ನ ನಾಯಕಿಯರು ಹಾಗೂ ಸ್ಟಾರ್ ಗಳ ಪತ್ನಿಯರು ಸೇರಿ ಒಂದು ಗ್ರೂಪ್ ಮಾಡಿಕೊಂಡಿದ್ದಾರೆ. ಆ ಗ್ರೂಪ್ ನ ಎಲ್ಲಾ ಹೆಣ್ಣು ಮಕ್ಕಳು ಪಾರ್ಟಿಯಲ್ಲಿ ಭಾಗಿ ಆಗಿ ಪಾರ್ಟಿಯ ರಂಗು ಹೆಚ್ಚಿಸಿದರು.

ಒಗ್ಗಟ್ಟಿನ ಮಂತ್ರ ಜಪಿಸಿದ ಕಲಾವಿದರು

ಯಶ್ ಹುಟ್ಟುಹಬ್ಬದ ಪಾರ್ಟಿಯಲ್ಲಿ ಚಿತ್ರರಂಗದ ಬಹುತೇಕ ಸ್ಟಾರ್ ಗಳು ಭಾಗಿ ಆಗಿದ್ದರು. ನವರಸ ನಾಯಕ ಜಗ್ಗೇಶ್ ಫ್ಯಾಮಿಲಿ, ಅಮೂಲ್ಯ ಮತ್ತು ಜಗದೀಶ್, ವಿಜಯ ರಾಘವೇಂದ್ರ ಹೀಗೆ ಇನ್ನೂ ಅನೇಕರು ಬಂದಿದ್ದರು. ಈ ಮೂಲಕ ನಾವೆಲ್ಲಾ ಒಂದೇ ಕುಟುಂಬದಂತೆ ಇದ್ದೇವೆ ಎಂದು ತೋರಿಸಿಕೊಟ್ಟರು.

English summary
Kannada actors Shivarajkumar, Puneet Rajkumar, Upendra, Jaggesh, Ambarish and many more were involved in the actor Yash Birthday's party.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X