For Quick Alerts
  ALLOW NOTIFICATIONS  
  For Daily Alerts

  'ಜಂಟಲ್ ಮ್ಯಾನ್'ಗೆ ಸ್ಯಾಂಡಲ್ವುಡ್ ಸ್ಟಾರ್ಸ್ ಫಿದಾ

  |
  ಜಂಟಲ್ ಮೆನ್ ಚಿತ್ರದ ಟ್ರೇಲರ್ ನೋಡಿ ಆಶ್ಚರ್ಯ ವ್ಯಕ್ತಪಡಿಸಿದ ಸ್ಯಾಂಡಲ್ ವುಡ್ ತಾರೆಯರು | GENTLEMAN | PRAJWAL

  ಸ್ಯಾಂಡಲ್ವುಡ್ನಲ್ಲಿ ಸದ್ಯ ಜಂಟಲ್ ಮ್ಯಾನ್ ಟ್ರೈಲರ್ ಸದ್ದು ಮಾಡ್ತಿದೆ. ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಟಿಸಿರುವ ಜಂಟಲ್ ಮ್ಯಾನ್ ಚಿತ್ರದ ಟ್ರೈಲರ್ ಇತ್ತೀಚಿಗಷ್ಟೆ ಬಿಡುಗಡೆಯಾಗಿದ್ದು, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಬಿಡುಗಡೆ ಮಾಡಿದ್ದರು.

  ಸೋಶಿಯಲ್ ಮೀಡಿಯಾದಲ್ಲೂ ಜಂಟಲ್ ಮ್ಯಾನ್ ಟ್ರೈಲರ್ ಟ್ರೆಂಡಿಂಗ್ನಲ್ಲಿದ್ದು, ಕನ್ನಡ ಸಿನಿಮಾರಂಗದ ನಿರ್ದೇಶಕ, ನಟ-ನಟಿಯರು ಮೆಚ್ಚಿಕೊಂಡಿದ್ದಾರೆ.

  ಜಂಟಲ್ ಮ್ಯಾನ್ ಟ್ರೈಲರ್ ನೋಡಿದ ನಿರ್ದೇಶಕ ಸಿಂಪಲ್ ಸುನಿ, ಚೇತನ್ ಕುಮಾರ್, ನಟ ಅಜಯ್ ರಾವ್, ನಟ ಶರಣ್ ಹಾಗೂ ನಟಿ ಮಾನ್ವಿತಾ ಕಾಮತ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಚಿತ್ರದ ಕಾನ್ಸೆಪ್ಟ್ ಮತ್ತು ಮೇಕಿಂಗ್ ಬಗ್ಗೆ ಥ್ರಿಲ್ ಆಗಿದ್ದಾರೆ.

  ಸ್ಲೀಪಿಂಗ್ ಬ್ಯೂಟಿ ಸಿಂಡ್ರೋಮ್‌ (ನಿದ್ರೆ ಮಾಡುವ ಕಾಯಿಲೆ) ಎಂಬ ರೋಗದಿಂದ ನಾಯಕ ಬಳಲುತ್ತಿದ್ದು, 18 ಗಂಟೆ ನಿದ್ದೆ ಮಾಡುವುದು ಹಾಗೂ 6 ಗಂಟೆ ಮಾತ್ರ ಎಚ್ಚರ ಆಗಿರ್ತಾನೆ. ಅವನ ಜೀವನದಲ್ಲಿ ಏನೆಲ್ಲಾ ಆಗುತ್ತೆ ಎಂಬುದು ರೋಚಕ ಕಥೆ.

  ಧ್ರುವ ಸರ್ಜಾ ಜೀವನದಲ್ಲಿ ಇವರೇ 'ಜಂಟಲ್ ಮ್ಯಾನ್' ಅಂತೆ!ಧ್ರುವ ಸರ್ಜಾ ಜೀವನದಲ್ಲಿ ಇವರೇ 'ಜಂಟಲ್ ಮ್ಯಾನ್' ಅಂತೆ!

  ಜಡೇಶ್ ಕುಮಾರ್ ಹಂಪಿ ನಿರ್ದೇಶನ ಮಾಡುತ್ತಿರುವ ಈ ಚಿತ್ರವನ್ನ ಗುರುದೇಶ ಪಾಂಡೆ ನಿರ್ಮಿಸಿದ್ದಾರೆ. ನಿಶ್ವಿಕಾ ನಾಯ್ಡು ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಸಂಚಾರಿ ವಿಜಯ್, ಬೇಬಿ ಆರಾಧ್ಯ, ಭರತ್ ಕಲ್ಯಾಣ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

  ಡೈನಾಮಿಕ್ 'ಜಂಟಲ್ ಮ್ಯಾನ್'ಗೆ ಪವರ್ ನೀಡಿದ ಆಕ್ಷನ್ ಪ್ರಿನ್ಸ್ಡೈನಾಮಿಕ್ 'ಜಂಟಲ್ ಮ್ಯಾನ್'ಗೆ ಪವರ್ ನೀಡಿದ ಆಕ್ಷನ್ ಪ್ರಿನ್ಸ್

  ಸುಧಾಕರ್ ಶೆಟ್ಟಿ ಅವರ ಛಾಯಾಗ್ರಹಣ, ಅಜನೀಶ್ ಲೋಕನಾಥ್ ಅವರ ಸಂಗೀತ, ವೆಂಕಟೇಶ್ ಯುಡಿವಿ ಅವರ ಸಂಕಲನ ಚಿತ್ರಕ್ಕಿದ್ದು, ಮುರಳಿ ಮಾಸ್ಟರ್ ಮತ್ತು ಗುಂಗುಮ್ ರಾಜು ಅವರ ನೃತ್ಯ ಸಂಯೋಜನೆ ಒಳಗೊಂಡಿದೆ.

  ಯೋಗರಾಜ್ ಭಟ್, ಜಯಂತ್ ಕಾಯ್ಕಿಣಿ, ಧನಂಜಯ್, ಕಿನ್ನಲ್ ರಾಜ್ ಅವರ ಸಾಹಿತ್ಯವಿದ್ದು, ಸಂಚಿತ್ ಹೆಗ್ಡೆ, ವಿಜಯ್ ಪ್ರಕಾಶ್, ವಸಿಷ್ಠ ಸಿಂಹ ಅವರ ಧ್ವನಿಯಲ್ಲಿ ಹಾಡುಗಳು ಮೂಡಿಬಂದಿದೆ. ಪ್ರಜ್ವಲ್ ನಟನೆಯ ನಿರೀಕ್ಷೆಯ ಚಿತ್ರಗಳಲ್ಲಿ ಜಂಟಲ್ ಮ್ಯಾನ್ ಪ್ರಮುಖವಾಗಿದೆ.

  English summary
  Kannada director suni, chetan kumar, actor sharan, ajay rao praised prajwal devaraj's Gentleman movie trailer.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X