For Quick Alerts
ALLOW NOTIFICATIONS  
For Daily Alerts

"ಹೆದರಬೇಡಿ ನಾವು ನಿಮ್ಮ ಜೊತೆ ಇದ್ದೀವಿ": ಉತ್ತರ ಕರ್ನಾಟಕ ನೆರವಿಗೆ ನಿಂತ ಶಿವಣ್ಣ ಬ್ರದರ್ಸ್

|
Karnataka Flood: ಸಿನೆಮಾ ಕೆಲಸ ಪಕ್ಕಕ್ಕಿಟ್ಟು ಮಳೆ ಸಂತ್ರಸ್ಥರ ಸಹಾಯಕ್ಕೆ ಬಂದ ಸ್ಯಾಂಡಲ್‍ವುಡ್.

ಉತ್ತರ ಕರ್ನಾಕದಲ್ಲಿ ಪ್ರವಾಹ ಪರಿಸ್ಥಿತಿ ಇನ್ನು ಮುಂದುವರೆದಿದೆ. ಸಂಕಷ್ಟದಲ್ಲಿರುವ ಜನರ ನೆರವಿಗೆ ಕನ್ನಡ ಚಿತ್ರರಂಗ ಧಾವಿಸಿದೆ. ಈಗಾಗಲೆ ಸ್ಟಾರ್ ನಟರು ಅಭಿಮಾನಿಗಳ ಮೂಲಕ ಸಹಾಯ ಮಾಡುತ್ತಿದ್ದಾರೆ. ನಟರ ಮನವಿ ಮೇರೆಗೆ ಅಗತ್ಯ ವಸ್ತುಗಳನ್ನು ತಕ್ಷಣಕ್ಕೆ ತಲುಪಿಸುವ ಕಾರ್ಯದಲ್ಲಿ ಅಭಿಮಾನಿಗಳು ನಿರತರಾಗಿದ್ದಾರೆ.

ಸುದೀಪ್, ದರ್ಶನ್, ಶರಣ್, ಗಣೇಶ್, ಜಗ್ಗೇಶ್, ದುನಿಯಾ ವಿಜಯ್, ಯಶ್, ರಕ್ಷಿತ್ ಶೆಟ್ಟಿ ಸೇರಿದಂತೆ ಅನೇಕ ನಟರು ಕಷ್ಟದಲ್ಲಿರುವ ಜನರ ನೆರವಿಗೆ ಧಾವಿಸಿದ್ದಾರೆ.

ಕರ್ನಾಟಕದ ಯಾವುದೆ ಮೂಲೆಯಲ್ಲೂ ಏನೆ ಸಮಸ್ಯೆ ಆದ್ರು ಸ್ಯಾಂಡಲ್ ವುಡ್ ಮಂದಿ ಸಹಾಯಕ್ಕೆ ಧಾವಿಸುತ್ತಾರೆ. ಈ ಬಾರಿ ಕೂಡ ಚಿತ್ರರಂಗ ನೆರವಿಗೆ ನಿಂತಿದೆ. ಈಗ ಉತ್ತರ ಕರ್ನಾಟಕ ಮಂದಿಯ ಸಹಾಯಕ್ಕೆ ರಾಜ್ ಕುಟುಂಬ ಕೂಡ ನಿಂತಿದೆ. ಜೊತೆಗೆ ನಟಿ ಹರಿಪ್ರಿಯಾ ಕೂಡ ಸಹಾಯಹಸ್ತ ಚಾಚಿದ್ದಾರೆ.

ನೆರವಿಗೆ ಧಾವಿಸಿದ ಪುನೀತ್

ನೆರವಿಗೆ ಧಾವಿಸಿದ ಪುನೀತ್

"ಉತ್ತರ ಕರ್ನಾಟಕದಲ್ಲಿ ಆದಂತಹ ಪ್ರವಾಹ ದೊಡ್ಡ ಹಾನಿ ಉಂಟುಮಾಡುತ್ತಿದೆ. ಈ ನಾವೆಲ್ಲರು ಸೇರೆ ಸ್ಪಂದಿಸಬೇಕಾದ ಸಮಯ. ನಾನು ಮತ್ತು ನಮ್ಮ ಸಂಸ್ಥೆ ನಮ್ಮ ಕೈಲಾದ ಸಹಾಯ ಮಾಡುತ್ತಿದ್ದೇವೆ. ನಾನು ಕೇಳಿಕೊಳ್ಳುವುದೇನಂದ್ರೆ ನಮ್ಮ ಕರ್ನಾಟಕ ಜನತೆಗೆ ಮತ್ತು ಅಭಿಮಾನಿಗಳಿಗೆ ನಿಮ್ಮ ಸುತ್ತಮುತ್ತ ಇರುವ ಸೇವ ಕೇಂದ್ರಗಳಿಗೆ ಹೋಗಿ ನಿಮ್ಮ ಕೈಲಾದ ಸಹಾಯ ಮಾಡಿ"

ಹೆದರಬೇಡಿ ನಿಮ್ಮ ಜೊತೆ ಇದ್ದೀವಿ-ಶಿವಣ್ಣ

ಹೆದರಬೇಡಿ ನಿಮ್ಮ ಜೊತೆ ಇದ್ದೀವಿ-ಶಿವಣ್ಣ

"ಉತ್ತರ ಕರ್ನಾಕದಲ್ಲಿ ಪ್ರವಾಹ ಆಗಿ ಎಷ್ಟೊ ಜನ ಕಷ್ಟದಲ್ಲಿದ್ದಾರೆ. ನಿಮ್ಮ ಜೊತೆಯಲ್ಲಿ ನಾವಿದ್ದೀವಿ. ಯಾವಾಗಲೂ ಇರುತ್ತೇವೆ. ಅಭಿಮಾನಿಗಳು ಈಗಾಗಲೆ ಸಹಾಯ ಮಾಡುತ್ತಿದ್ದಾರೆ. ಇಡೀ ಚಿತ್ರರಂಗದ ನೆರವಿಗೆ ಬಂದಿದೆ. ನಾವು ಇವತ್ತು ಸ್ಟಾರ್ ಡಮ್ ಎಂಜಾಯ್ ಮಾಡುತ್ತಿದ್ದೇವೆ ಅಂದ್ರೆ ಅದಕ್ಕೆ ಅಭಿಮಾನಿಗಳೆ ಕಾರಣ. ಹಾಗಾಗಿ ಅವರು ಕಷ್ಟದಲ್ಲಿದ್ದಾಗ ನಾವು ಸಹಾಯ ಮಾಡುವುದು ನಮ್ಮ ಕರ್ತವ್ಯ. ಎಲ್ಲರು ಒಗ್ಗಟ್ಟಿನಿಂದ ಸಹಾಯ ಮಾಡೋಣ. ಹೆದರಬೇಡಿ ನಾವೆಲ್ಲರು ನಿಮ್ಮ ಜೊತೆ ಇದ್ದೀವಿ. ಕಷ್ಟ ಬರುತ್ತೆ ಅದನ್ನು ಎದುರಿಸೋಣ"

ಸಹಾಯಕ್ಕೆ ಬಂದ ಹರಿಪ್ರಿಯಾ

ಸಹಾಯಕ್ಕೆ ಬಂದ ಹರಿಪ್ರಿಯಾ

ಹರಿಪ್ರಿಯಾ ಖುದ್ದು ಉತ್ತರ ಕರ್ನಾಟಕ್ಕೆ ಹೋಗಿ ಸಹಾಯ ಮಾಡುವ ಯೋಜನೆ ಹಾಕಿಕೊಂಡಿದ್ದಾರೆ. ಆಹಾರ, ಬಟ್ಟೆ, ಮೆಡಿಸಿನ್ಸ್ ಸೇರಿದಂತೆ ಅಗತ್ಯವಸ್ತುಗಳನ್ನು ತೆಗೆದುಕೊಂಡು ಹರಿಪ್ರಿಯಾ ಅವರೆ ಹೋಗುತ್ತಿದ್ದಾರಂತೆ. ಹೇಗೆ ಹೊರಡ ಬಹುದು, ಎಲ್ಲಿಗೆ ಹೋಗಬೇಕು ಎಂದು ಪ್ಲಾನ್ ಮಾಡಿ ಹೊರಡುತ್ತಿದ್ದಾರೆ. ನೀವು ಕೂಡ ಕೈ ಜೋಡಿಸಬಹುದು" ಎಂದು ಹೇಳಿದ್ದಾರೆ.

ಯಾರು ಭಯಪಡ ಬೇಡಿ-ವಿಜಯ್ ರಾಘವೇಂದ್ರ

ಯಾರು ಭಯಪಡ ಬೇಡಿ-ವಿಜಯ್ ರಾಘವೇಂದ್ರ

"ದೊಡ್ಡ ಮಾಮ ಹೇಳುತ್ತಿದ್ರು ಅಭಿಮಾನಿಗಳೆ ದೇವರು ಅಂತ. ಅಂತಹ ದೇವರಿಗೆ ಕಷ್ಟು ಬಂದರೆ ಸುಮ್ಮನಿರಲು ಸಾಧ್ಯವಿಲ್ಲ. ಎಲ್ಲರೂ ಸಹಾಯಮಾಡುತ್ತಿದ್ದಾರೆ. ಅಡುಗೆ ಸಾಮಗ್ರಿ, ಸ್ಯಾನಿಟರಿ ನ್ಯಾಪ್ಕಿನ್ಸ್ ಸೇರಿದಂತೆ ಅಲ್ಲಿ ಉಪಯೋಗಕ್ಕೆ ಬರುವಂತಹ ವಸ್ತುಗಳನ್ನು ಕಳುಹಿಸಿ. ಬೇಗ ಹಾಳಾಗುವಂತಹ ಪದಾರ್ಥ ಬೇಡ. ಕೆ ಎಸ್ ಆರ್ ಟಿ ಅವರು ವಸ್ತುಗಳನ್ನು ಉಚಿತವಾಗಿ ಕೊಡುತ್ತಿದ್ದಾರೆ. ಎಲ್ಲಿ ಅಗತ್ಯವಿದೆಯೊ ಅಲ್ಲಿ ಕೊಡುತ್ತಿದ್ದಾರೆ.ಯಾರು ಭಯಪಡ ಬೇಡಿ. ನಾವು ಇದ್ದೀವಿ ಧೈರ್ಯವಾಗಿರಿ"

English summary
Heavy rain havoc in Karnataka : Karnataka is having a hard time dealing with floods in several districts and heavy rains wreaked havoc. Sandalwood stars Puneeth rajkumar and Shivaraj Kuamr come to help Uttara karnatka people.

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more