»   » ಬಾಲಿವುಡ್ 'ಪದ್ಮಾವತಿ' ಬಗ್ಗೆ ಸ್ಯಾಂಡಲ್ ವುಡ್ 'ಪದ್ಮಾವತಿ' ಹೇಳಿದ್ದೇನು?

ಬಾಲಿವುಡ್ 'ಪದ್ಮಾವತಿ' ಬಗ್ಗೆ ಸ್ಯಾಂಡಲ್ ವುಡ್ 'ಪದ್ಮಾವತಿ' ಹೇಳಿದ್ದೇನು?

Posted By:
Subscribe to Filmibeat Kannada

"ಊರಿಗೊಬ್ಬಳೇ.. ಪದ್ಮಾವತಿ" ಎನ್ನುವ ಹಾಗೆ ಸ್ಯಾಂಡಲ್ ವುಡ್ ಗೂ ಒಬ್ಬಳೇ ಪದ್ಮಾವತಿ, ಹತ್ತು ವರ್ಷ ಸಿನಿಮಾರಂಗವನ್ನ ಆಳಿ ಈಗ ರಾಜಕೀಯದ ಕಡೆ ಹೋದರೂ ಕೂಡ ಸಿನಿಮಾ ನಂಟು ಮಾತ್ರ ಇವರನ್ನ ಬಿಡೋದಿಲ್ಲ. ನಾವ್ ಈಗ ಮಾತನಾಡ್ತಿರೋದು ಮಾಜಿ ನಟಿ 'ರಮ್ಯಾ' ಬಗ್ಗೆ. ಈಗ್ಯಾಕೆ ಇವ್ರ ಮಾತು ಅಂತೀರಾ.? 'ರಮ್ಯಾ' ಪದ್ಮಾವತಿ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ.

ಕೇವಲ ರಮ್ಯಾ ಅಷ್ಟೇ ಅಲ್ಲ, ಇಡೀ ದೇಶವೇ 'ಪದ್ಮಾವತಿ' ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಅದೇ ರೀತಿ ಕನ್ನಡ ಸಿನಿಮಾರಂಗದ ಕಲಾವಿದರು ತಮ್ಮ ತಮ್ಮ ಅಭಿಪ್ರಾಯವನ್ನ ತಿಳಿಸಿದ್ದಾರೆ. ಬಾಲಿವುಡ್ ಪದ್ಮಾವತಿ ಬಗ್ಗೆ ಸ್ಯಾಂಡಲ್ ವುಡ್ ಕಲಾವಿದರು ಏನಂತಾರೆ.? ಮುಂದೆ ಓದಿ

ದೀಪಿಕಾ ಬೆನ್ನಿಗೆ ನಿಂತ 'ಸ್ಯಾಂಡಲ್ ವುಡ್'

ದೇಶದಾದ್ಯಂತ ವಿವಾದದ ಕೇಂದ್ರಬಿಂದು ಆಗಿರುವ ಬಾಲಿವುಡ್ ನಲ್ಲಿ ತೆರೆಗೆ ಬರೋದಕ್ಕೆ ಸಜ್ಜಾಗಿರುವ ಸಿನಿಮಾ 'ಪದ್ಮಾವತಿ' ವಿವಾದದ ಬಗ್ಗೆ ಮಾಜಿ ಸಂಸದೆ 'ರಮ್ಯಾ' ಮಾತನಾಡಿದ್ದಾರೆ. ಸಿನಿಮಾ ಅನ್ನೋದು ನಿರ್ದೇಶಕರ ಕಲ್ಪನೆಗೆ ಬಿಟ್ಟಿದ್ದು, ಇಲ್ಲಿ ರಾಜಕೀಯ ಪ್ರವೇಶ ಆಗಬಾರದು ಅಷ್ಟೇ ಅಲ್ಲದೆ ಅಭಿನಯಿಸಿದ ಕಲಾವಿದರು ಯಾವುದಕ್ಕೂ ಜವಾಬ್ದಾರಿಯಾಗುವುದಿಲ್ಲ ಎನ್ನುತಾ 'ದೀಪಿಕಾ' ಪರ ನಿಂತಿದ್ದಾರೆ.

ಕಲಾವಿದರು ಹೊಣೆ ಅಲ್ಲ ಎಂದ ಹ್ಯಾಟ್ರಿಕ್ ಹೀರೋ

ದೀಪಿಕಾ ಹಾಗೂ ಚಿತ್ರದ ಬಗ್ಗೆ ಮಾತನಾಡಿರುವ 'ಶಿವರಾಜ್ ಕುಮಾರ್' ಮೊದಲು ಸಿನಿಮಾ ನೋಡಿ, ಚಿತ್ರ ನೋಡದೆ ನಿರ್ಧಾರಕ್ಕೆ ಬರುವುದು ತಪ್ಪು ಎಂದಿದ್ದಾರೆ. ಹಾಗೆಯೇ ಕಲಾವಿದರು ಅಭಿನಯದ ಬಗ್ಗೆ ಮಾತ್ರ ಗಮನಹರಿಸಿರುತ್ತಾರೆ ಎಂದಿದ್ದಾರೆ.

ನಿರ್ದೇಶಕರ ಬಗ್ಗೆ 'ರಕ್ಷಿತ್' ಅಭಿಪ್ರಾಯ

ಸಿನಿಮಾ ಸ್ಕ್ರಿಪ್ಟ್ ಮಾಡುವಾಗ ತುಂಬಾ ಜವಾಬ್ದಾರಿಯಿಂದ ಮಾಡಬೇಕಾಗುತ್ತೆ. ಸ್ವತಂತ್ರ ಇದೇ ಅಂದ ಮಾತ್ರಕ್ಕೆ ಯಾರ ಭಾವನೆಯನ್ನೂ ನೋಯಿಸುವಂತಿಲ್ಲ. ಅದೇ ರೀತಿ ವಿವಾದ ಆಗಿರುವ ಸಿನಿಮಾದಲ್ಲಿ ಅಭಿನಯಿಸಿದ್ದಾರೆ ಅಂದ ಮಾತ್ರಕ್ಕೆ ಕಲಾವಿದರನ್ನ ಟಾರ್ಗೆಟ್ ಮಾಡುವುದನ್ನ ನಾನು ಒಪ್ಪೋದಿಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ 'ರಕ್ಷಿತ್ ಶೆಟ್ಟಿ'.

ಪದ್ಮಾವತಿ ಬಗ್ಗೆ ರೈ ಮಾತು

ಇನ್ನು 'ಜಸ್ಟ್ ಆಸ್ಕಿಂಗ್' ಹೆಸರಿನಲ್ಲಿ ಸುದ್ದಿಗೋಷ್ಠಿ ನಡೆಸಿದ್ದ 'ಪ್ರಕಾಶ್' ಪದ್ಮಾವತಿ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ವಿವಾದವಾಗಿರುವ ಸಿನಿಮಾದಲ್ಲಿ ಅಭಿನಯಿಸಿರೋದಕ್ಕೆ ಮೂಗು ಕತ್ತರಿಸುತ್ತೇನೆ, ಕತ್ತು ಕಡಿಯುತ್ತೇನೆ ಎನ್ನುತ್ತಿರೋದು ಎಷ್ಟರ ಮಟ್ಟಿಗೆ ಸರಿ ಎಂದಿದ್ದಾರೆ. ನಾವು ಯಾವ ಮಟ್ಟಕ್ಕೆ ತಲುಪಿದ್ದೇವೆ ಎಂದು ಪ್ರಶ್ನೆ ಮಾಡಿದ್ದಾರೆ.

English summary
Sandalwood Stars reacts about 'Padmavathi Controversy'. 'ಪದ್ಮಾವತಿ' ಸಿನಿಮಾ ಬಗ್ಗೆ ಪ್ರತಿಕ್ರಿಯೆ ನೀಡಿದ ಸ್ಯಾಂಡಲ್ ವುಡ್ ಕಲಾವಿದರು

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada