»   » 'ಚಮಕ್' ಕೊಡಲು ರೆಡಿಯಾದ್ರು ಸ್ಯಾಂಡಲ್ ವುಡ್ ಸ್ಟಾರ್ಸ್

'ಚಮಕ್' ಕೊಡಲು ರೆಡಿಯಾದ್ರು ಸ್ಯಾಂಡಲ್ ವುಡ್ ಸ್ಟಾರ್ಸ್

Posted By:
Subscribe to Filmibeat Kannada

ಸಿಂಪಲ್ ಸುನಿ ತಮ್ಮ ಟ್ಯಾಲೆಂಟ್ ನಿಂದ ಕನ್ನಡ ಸಿನಿರಸಿಕರಿಗೆ ಚಿತ್ರದ ಟೀಸರ್ ಮೂಲಕ 'ಚಮಕ್' ಕೊಟ್ಟಿದ್ದರು. ಚಿತ್ರೀಕರಣ ಮುಗಿಸಿ ತೆರೆಗೆ ಬರೋದಕ್ಕೆ ಸಿದ್ದವಾಗಿರುವ 'ಚಮಕ್' ಸಿನಿಮಾದ ಆಡಿಯೋ ಇಂದು (ಡಿಸೆಂಬರ್ 4)ಬಿಡುಗಡೆ ಆಗುತ್ತಿದೆ. ಆಡಿಯೋ ರಿಲೀಸ್ ಕಾರ್ಯಕ್ರಮದಲ್ಲಿ ಸ್ಯಾಂಡಲ್ ವುಡ್ ಸ್ಟಾರ್ ಗಳ ದಂಡೇ ಹಾಜರ್ ಹಾಕುತ್ತಿದೆ.

ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಕಿರಿಕ್ ಹುಡುಗಿ ರಶ್ಮಿಕಾ ಮಂದಣ್ಣ ಅಭಿನಯದ 'ಚಮಕ್' ಸಿನಿಮಾದ ಆಡಿಯೋ ರಿಲೀಸ್ ಕಾರ್ಯಕ್ರಮ ಭರ್ಜರಿಯಾಗಿ ನಡೆಯಲಿದೆ. ಅರ್ಜುನ್ ರೆಡ್ಡಿ ಸಿನಿಮಾ ಖ್ಯಾತಿಯ ವಿಜಯ್ ದೇವರಕೊಂಡ ಮುಖ್ಯ ಅತಿಥಿಯಾಗಿ ಆಗಮಿಸುತ್ತಿದ್ದಾರೆ. ಸ್ಯಾಂಡಲ್ ವುಡ್ ನಿಂದ ಡಿಂಪಲ್ ಕ್ವೀನ್ ರಚಿತಾ ರಾಮ್ ಹಾಗೂ ನೀನಾಸಂ ಸತೀಶ್ ಭಾಗಿಯಾಗಲಿದ್ದಾರೆ.

 Sandalwood Stars will be present at Chamak movie audio program

'ಚಮಕ್' ಸಿನಿಮಾಗೆ ಸಾಥ್ ನೀಡಲಿದ್ದಾರೆ ಟಾಲಿವುಡ್ ನಟ

ಧ್ವನಿ ಸುರಳಿ ಬಿಡುಗಡೆ ಜೊತೆಯಲ್ಲೇ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಗಣ್ಯರಿಗೆ ಸನ್ಮಾನ ಮಾಡಲು ಸಿನಿಮಾ ತಂಡ ನಿರ್ಧಾರ ಮಾಡಿದೆ. ಜನಪದ ಲೋಕದ ಗಾನ ಕೋಗಿಲೆ ಪದ್ಮಶ್ರೀ ಪುರಸ್ಕೃತ ಸುಕ್ರಿ ಬೊಮ್ಮ ಗೌಡ ಅವರನ್ನ ಸನ್ಮಾನಿಸಲಿದೆ.

ಈಗಿನ ಯಂಗ್ ಜನರೇಷನ್ ಗಾಗಿ ಡೊಳ್ಳು ಕುಣಿತಾ, ಬೀಟ್ ಬಾಕ್ಸ್, rap, ಬೆಲ್ಲಿ ಡ್ಯಾನ್ಸ್ ಜೊತೆಯಲ್ಲಿ ಭರತ ನಾಟ್ಯ ಕೂಡ ಇರುತ್ತೆ. ಒಟ್ಟಾರೆ ಟೀಸರ್ ಮೂಲಕ ಕನ್ನಡ ಸಿನಿಮಾ ಪ್ರೇಕ್ಷಕರಿಗೆ ಸಣ್ಣದೊಂದು ಚಮಕ್ ಕೊಟ್ಟಿದ್ದ ಸಿನಿಮಾತಂಡ ಆಡಿಯೋ ರಿಲೀಸ್ ಮಾಡಿ ಸಿನಿಮಾ ಹೇಗಿರುತ್ತೆ ಅನ್ನೋ ಸೂಚನೆ ನೀಡಲಿದೆ.

ಚಮಕ್ 'ಫಸ್ಟ್ ನೈಟ್' ಟೀಸರ್ ಬಂತು; ಒಂದು ಕಣ್ಣು ಮುಚ್ಕೊಂಡು ನೋಡಿ

ಹತ್ತು ವರ್ಷಗಳ ಹಿಂದೆ 'ಮುಂಗಾರು ಮಳೆ' ಸಿನಿಮಾ ರಿಲೀಸ್ ಆಗಿದ್ದ ದಿನಾಂಕವೇ ಚಮಕ್ ಚಿತ್ರ ಬಿಡುಗಡೆ ಮಾಡಲು ತಯಾರಿ ಮಾಡಿಕೊಂಡಿದ್ದಾರೆ ನಿರ್ದೇಶಕ ಸುನಿ. ಸದ್ಯ ಸೆನ್ಸಾರ್ ಮಂಡಳಿ ಬಾಗಿಲಲ್ಲಿ ನಿಂತಿರೋ ಸಿನಿಮಾವನ್ನ ಬಿಗ್ ಸ್ಕ್ರೀನ್ ಮೇಲೆ ನೋಡುವುದಕ್ಕೆ ಪ್ರೇಕ್ಷಕರು ಮಾತ್ರ ಕಾತುರದಿಂದ ಕಾದಿರೋದಂತೂ ನಿಜ.

English summary
Simple Suni directed Chamak movie audio ceremony will happen today. Sandalwood Stars will be present at the program.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada