For Quick Alerts
  ALLOW NOTIFICATIONS  
  For Daily Alerts

  ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಿಖಿಲ್-ರೇವತಿಗೆ ಶುಭಹಾರೈಸಿದ ಸ್ಯಾಂಡಲ್ ವುಡ್ ಸ್ಟಾರ್ಸ್

  |

  ನಟ, ರಾಜಕಾರಣಿ ನಿಖಿಲ್ ಕುಮಾರ್ ಸರಳವಾಗಿ ಹಸೆಮಣೆ ಏರಿದ್ದಾರೆ. ಲಾಕ್ ಡೌನ್ ನಡುವೆಯೂ ಸಪ್ತಪದಿ ತುಳಿದ ನವ ಜೋಡಿಗೆ ಸ್ಯಾಂಡಲ್ ವುಡ್ ಸ್ಟಾರ್ ಶುಭಕೋರಿದ್ದಾರೆ. ಇನ್ನೂ ಇಂತಹ ಕಷ್ಟದ ಸಮಯದಲ್ಲಿಯೂ ಮದುವೆ ಸಂಭ್ರಮ ಬೇಕಿತ್ತಾ ಎಂದು ಅನೇಕರು ಆಕ್ರೋಶ ಹೊರಹಾಕುತ್ತಿದ್ದೆ, ಆದರೆ ಇನ್ನೂ ಕೆಲವರು ಹೊಸ ಜೀವನಕ್ಕೆ ಕಾಲಿಟ್ಟ ನಿಖಿಲ್-ರೇವತಿಗೆ ಶುಭಹಾರೈಸುತ್ತಿದ್ದಾರೆ.

  ಇಂದು ಬೆಳಗ್ಗೆ 9.15 ರಿಂದ 9.45ರ ಶುಭ ಲಗ್ನದಲ್ಲಿ ನಿಖಿಲ್, ರೇವತಿಗೆ ಮಾಂಗಲ್ಯ ಧಾರಣೆ ಮಾಡಿದ್ದಾರೆ. ಈ ಶುಭ ಸಮಾರಂಭಕ್ಕೆ ಕೇವಲ ದೊಡ್ಡ ಗೌಡರ ಮನೆಯ ಕುಟುಂಬ ಮಾತ್ರ ಭಾಗವಾಗಿತ್ತು. ರಾಮನಗರ ಸಮೀಪ ಇರುವ ಹೆಚ್ ಡಿ ಕೆ ಫಾರ್ಮ್ ಹೌಸ್ ನಲ್ಲಿ ನಡೆದ ನಿಖಿಲ್-ರೇವತಿ ಮದುವೆಗೆ ಕುಟುಂಬದವರು ಹೊರತುಪಡಿಸಿ ಬೇರೆ ಗಣ್ಯರ್ಯಾರು ಭಾಗಿಯಾಗಿಲ್ಲ. ಆದರೆ ನವ ಜೋಡಿಗೆ ಸಾಮಾಜಿಕ ಜಾಲತಾಣದ ಮೂಲಕವೇ ಶುಭಹಾರೈಸುತ್ತಿದ್ದಾರೆ. ಮುಂದೆ ಓದಿ...

  ವೈವಾಹಿಕ ಜೀವನ ಸುಖಕರವಾಗಿರಲಿ-ಸಿಂಪಲ್ ಸುನಿ

  "ಭಾರತದ ಮಾಜಿ ಪ್ರಧಾನಿ ಮೊಮ್ಮೊಗ ಹಾಗೂ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಮಗ ಮದುವೆಯ ಬಂಧನದಲ್ಲಿ ಜೊತೆಯಾದ, ನಿಖಿಲ್ ಹಾಗೂ ಅವರ ಬಾಳ ಸಂಗಾತಿ ರೇವತಿಯವರಿಗೆ ವೈವಾಹಿಕ ಜೀವನ ಸುಖಕರವಾಗಿರಲಿ ಎಂಬ ಶುಭಹಾರೈಕೆಗಳು" ಎಂದು ನಿರ್ದೇಶಕ ಸಿಂಪಲ್ ಸುನಿ ವಿಶ್ ಮಾಡಿದ್ದಾರೆ.

  ವಧು ವರರಿಗೆ ಹೃತ್ಪೂರ್ವಕ ಶುಭಾಶಯಗಳು- ಭಟ್ರು

  ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಿಖಿಲ್ ಮತ್ತು ರೇವತಿಗೆ ನಿರ್ದೇಶಕ ಯೋಗರಾಜ್ ಭಟ್ ಸಹ ಶುಭಹಾರೈಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಶ್ ಮಾಡಿರುವ ಭಟ್ರು "ವಧು ವರರಿಗೆ ಹೃತ್ಪೂರ್ವಕ ಶುಭಾಶಯಗಳು"ಎಂದು ಹೇಳಿದ್ದಾರೆ.

  "ನಿಮ್ಮ ಕಲ್ಯಾಣ, ಜೀವನ, ವೃತ್ತಿ ಎಲ್ಲವೂ ಮಾದರಿಯಾಗಲಿ..."

  "ಸಹೋದರರಾದ ನಿಖಿಲ್ ಕುಮಾರಸ್ವಾಮಿ ಹಾಗು ರೇವತಿ ರವರಿಗೆ ನನ್ನ ಶುಭಾಶಯಗಳು. ನಿಮ್ಮ ಕಲ್ಯಾಣ, ನಿಮ್ಮ ಜೀವನ, ನಿಮ್ಮ ವೃತ್ತಿ, ನಿಮ್ಮ ಜನ ಸೇವೆ, ನಿಮ್ಮ ದಾರಿ. ಎಲ್ಲವೂ ಮಾದರಿಯಾಗಲಿ" ಎಂದು ನಿರ್ದೇಶಕ ಸಂತೋಷ್ ಆನಂದ್ ರಾಮ್ ಶುಭ ಹಾರೈಸಿದ್ದಾರೆ.

  ಅದೃಷ್ಟವಂತ ನಿಖಿಲ್: ಜಗ್ಗೇಶ್

  "ಮದುವೆ ಸ್ವರ್ಗದಲ್ಲಿ ನಿಶ್ಚಯಿಸಿದ ದೇವರ ನಿಯಮ. ತಂದೆ ತಾಯಿ ತಾತ ಅಜ್ಜಿ ಆಶೀರ್ವಾದ ಪಡೆದು ಮದುವೆ ಆಗುವುದಕ್ಕೆ ವಿಶೇಷ ಯೋಗ ಬೇಕು. ಅದು ಪಡೆದ ಅದೃಷ್ಟವಂತ ನಿಖಿಲ್. ದಾಂಪತ್ಯ ಜೀವನಕ್ಕೆ ಕಾಲಿಟ್ಟ ಯುವ ಜೋಡಿಗೆ ಶುಭ ಹಾರೈಕೆ. ನೂರ್ಕಾಲ ಸುಖವಾಗಿ ಬಾಳಿ" ಎಂದು ನಟ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.

  English summary
  Sandalwood stars likes Jaggesh, Suni and Yogaraj Bhat wish to Nikhil Kumar and revathi.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X