For Quick Alerts
  ALLOW NOTIFICATIONS  
  For Daily Alerts

  'ಜಾನಕಿ'ಯ ತಂದೆಗೆ ಜನ್ಮದಿನ, ಎಪ್ಪತ್ತರ ಸಂಭ್ರಮದಲ್ಲಿ ಟಿಎನ್ ಸೀತಾರಾಮ್

  By ಶಶಿಕರ ಪಾತೂರು
  |

  ಕನ್ನಡ ಕಿರುತೆರೆ ವಾಹಿನಿಯ ಪ್ರೇಕ್ಷಕರಿಗೆ ಬಲುಮೆಚ್ಚಿನ ಹೆಸರು ಟಿ.ಎನ್ ಸೀತಾರಾಮ್. ಅವರ ನಿರ್ದೇಶನದ ಧಾರಾವಾಹಿಗಳು ಸಾರ್ವತ್ರಿಕ ದಾಖಲೆ ಮೂಡಿಸಿವೆ. ಪ್ರಸ್ತುತ 'ಮಗಳು ಜಾನಕಿ' ಧಾರಾವಾಹಿಯ ನಿರ್ದೇಶಕ, ನಿರ್ಮಾಪಕರಾಗಿ ಮತ್ತು ಜಾನಕಿಯ ತಂದೆಯ ಪಾತ್ರವಾಗಿ ಜನಮನ ಸೆಳೆಯುತ್ತಿದ್ದಾರೆ. ಇಂದು (ಡಿಸೆಂಬರ್ 6) ಅವರಿಗೆ ಎಪ್ಪತ್ತನೇ ವರ್ಷದ ಜನ್ಮದಿನದ ಸಂಭ್ರಮ. ಈ ವಿಶೇಷವಾಗಿ ಚಿತ್ರರಂಗ ಹಾಗೂ ರಂಗಭೂಮಿಯ ಕೆಲವು ಕಲಾವಿದರು ಫಿಲ್ಮಿಬೀಟ್ ಜೊತೆ ಮಾತನಾಡಿದ್ದಾರೆ.

  ''ನನ್ನ ಸೀತಾರಾಮ್ ಸ್ನೇಹ ಸಂಬಂಧದ ಬಗ್ಗೆ ಮಾತನಾಡುವಾಗಲೆಲ್ಲ ಜನರು ಇದು 'ಮಾಯಾಮೃಗ' ಧಾರಾವಾಹಿಯಿಂದ ಬೆಳೆದು ಬಂದ ನಂಟು ಎಂದುಕೊಂಡಿದ್ದಾರೆ. ಆದರೆ ರಂಗಭೂಮಿಯಲ್ಲಿ ಬಿವಿ ಕಾರಂತ್ ಅವರು ಕ್ರಾಂತಿ ಸೃಷ್ಟಿಸುವ ಸಮಯದಲ್ಲೇ ಸೀತಾರಾಮ್ ಮತ್ತು ಅವರ ಸ್ನೇಹಿತರು ಸೇರಿಕೊಂಡು ಮುಕ್ತ ಎನ್ನುವ ಪತ್ರಿಕೆ ಶುರುಮಾಡಿದರು''

  ''ಪತ್ರಿಕೆ ತುಂಬ ಚೆನ್ನಾಗಿ ಬರುತ್ತಿತ್ತು. ಆದರೆ ಸ್ವಲ್ಪ ಕಾಂಟ್ರವರ್ಸಿಯನ್ನೂ ಪಡೆದುಕೊಂಡಿತ್ತು. ಆಗಲೇ ಇವರು ಒಬ್ಬ ಉತ್ತಮ ಬರಹಗಾರ ಎನ್ನುವ ಕಾರಣದಿಂದ ಅವರಿಗೆ ಹತ್ತಿರವಾದೆ. ಅವರ ಅಂದಿನ ಕಂಟೆಂಟ್ ನಾನು ಒಪ್ಪುತ್ತೇನೋ ಬಿಡುತ್ತೇನೋ ಎನ್ನುವುದು ಬೇರೆ ವಿಚಾರ. ಆದರೆ ಚೆನ್ನಾಗಿ ಬರೆಯುತ್ತಿದ್ದರು'' ಎಂದು ರಾಷ್ಟ್ರಪ್ರಶಸ್ತಿ ಪುರಸ್ಕೃತ ನಟ ದತ್ತಣ್ಣ ಕಥೆ ಅವರ ಬಗ್ಗೆ ಹೇಳಲು ಆರಂಭಿಸಿದರು. ಮುಂದೆ ಓದಿ.....

   ಬರಹಗಾರ-ನಟ-ಲಾಯರ್

  ಬರಹಗಾರ-ನಟ-ಲಾಯರ್

  ''ಅವರ ಪತ್ರಿಕೆ ಅಂದಿನ ರಂಗಭೂಮಿಯ ಬೆಳವಣಿಗೆಯಲ್ಲಿ ಸಾಕಷ್ಟು ಪ್ರಧಾನ ಪಾತ್ರವಹಿಸಿದ್ದು ಕೂಡ ನಿಜ. ಅದರ ಬಳಿಕ ಅವರು ಲಾಯರ್ ಆದರು. ಆದರೆ ಲಾಯರ್ ಗಿರಿಗಿಂತ ತಮ್ಮ ಧಾರಾವಾಹಿಗಳಲ್ಲಿ ಲೀಗಲ್ ಆಸ್ಪೆಕ್ಟ್ಸ್ ನ ತುಂಬ ಚೆನ್ನಾಗಿ ಕವರ್ ಮಾಡಲು ಶುರುಮಾಡಿದರು. ಅವರು ಲಂಕೇಶ್ ಜೊತೆಗೆ ಸೇರಿಕೊಂಡು ಪತ್ರಿಕೆಯಲ್ಲಿ ಬರೆಯುವುದರ ಜೊತೆಗೆ ಅವರ 'ಅನುರೂಪ' ಸಿನಿಮಾದಲ್ಲಿ ನಾಯಕರಾಗಿಯೇ ನಟಿಸಿದರು. ಒಳ್ಳೆಯ ಹೆಸರು ಪಡೆದರು. ಆದರೆ ಯಾಕೋ‌ ಸಿನಿಮಾದಲ್ಲಿ ನಟನೆಯನ್ನು ಅವರು ಮುಂದುವರಿಸಲಿಲ್ಲ. ಬಹುಶಃ ಅವರಿಗೆ ಬರವಣಿಗೆಯಲ್ಲಿ ಇರುವ ಪ್ರೀತಿಯೇ ಇದಕ್ಕೆ ಕಾರಣ ಇರಬಹುದು''

  ವಿಚಿತ್ರವಾದ ಕೈ ಬರಹ

  ವಿಚಿತ್ರವಾದ ಕೈ ಬರಹ

  ಟಿ ಎನ್ನೆಸ್ ಒಳ್ಳೆಯ ಬರಹಗಾರರೇನೋ ಹೌದು. ಆದರೆ ಅವರ ಕೈ ಬರಹ ತುಂಬ ಕೆಟ್ಟದಾಗಿರುತ್ತವೆ. ಎಷ್ಟರಮಟ್ಟಿಗೆ ಎಂದರೆ ತಾವೇ ಬರೆದಿದ್ದರನ್ನು ಗಂಟೆಗಳ ಬಳಿಕ ಕಂಡರೆ ಅವರಿಗೇ ಓದಲು ಸಾಧ್ಯವಾಗುವುದಿಲ್ಲ.! ತುಂಬ ಯೋಚನೆ ಮಾಡಿ ಒಳ್ಳೆಯ ಸಂಭಾಷಣೆಗಳನ್ನು ತಯಾರಿ ಮಾಡಿರುತ್ತಾರೆ. ಆದರೆ ಬರಹಕ್ಕೆ ಇಳಿಸುವುದು ಮಾತ್ರ ಕೊನೆಯ ಘಳಿಗೆಯಲ್ಲಿ. ಇದು ಅವರ ವೈಶಿಷ್ಟ್ಯ ಎಂದೇ ಹೇಳಬಹುದು.

  ಕಿರುತೆರೆಯ ರಾಜ್ ಕುಮಾರ್

  ಕಿರುತೆರೆಯ ರಾಜ್ ಕುಮಾರ್

  ''ಅವರಿಗೆ ಆಗಿರುವ ವಯಸ್ಸು ಅವರಲ್ಲೇ ಕಾಣಿಸಲ್ಲ.! ಅದಕ್ಕೆ ಕಾರಣ ಅವರು ತಮ್ಮ ಚಟುವಟಿಕೆಯ ಮೂಲಕ ಸಕ್ರಿಯರಾಗಿರುವುದು. "ಕನ್ನಡ ಚಿತ್ರರಂಗಕ್ಕೆ ರಾಜ್ ಕುಮಾರ್ ಹೇಗೆಯೋ ಕಿರುತೆರೆಯ ಪಾಲಿಗೆ ಸೀತಾರಾಮ್ ಹಾಗೆಯೇ". ಅದಕ್ಕೆ ಹಲವಾರು ಕಾರಣಗಳಿವೆ. ಕನ್ನಡ ಕಿರುತೆರೆ ಧಾರಾವಾಹಿಗಳಿಗೆ ಒಂದು ಭದ್ರವಾದ ಬುನಾದಿ ಮತ್ತು ಸಾಂಸ್ಕೃತಿಕ ಘನತೆಯನ್ನು ತಂದುಕೊಟ್ಟವರೆಂದು ಟಿಎನ್ ಸೀತಾರಾಮ್ ಅವರನ್ನು ಹೇಳಬಹುದು. ವೈಯಕ್ತಿಕವಾಗಿ ಮಾತ್ರವಲ್ಲ, ಇನ್ನೊಬ್ಬರ ಕಷ್ಟಕ್ಕೆ ಮರುಗುವ ವಿಚಾರದಲ್ಲಿ ಕೂಡ ಸೀತಾರಾಮ್ ಹೃದಯವಂತ ವ್ಯಕ್ತಿ. ಸಾಹಿತ್ಯ, ನಾಟಕ, ಕಿರುತೆರೆ, ಸಿನಿಮಾ ಹೀಗೆ ಎಲ್ಲ ಕ್ಷೇತ್ರಗಳಲ್ಲಿ ಕೂಡ ಅವರ ಸಾಧನೆ ಗುರುತಿಸುವಂಥದ್ದು'' - ಪಿ ಶೇಷಾದ್ರಿ, ಖ್ಯಾತ ಸಿನಿಮಾ ನಿರ್ದೇಶಕರು

  ನಾವು ಒಂದೇ ಕಾಲಘಟ್ಟದಲ್ಲಿ ಇದ್ದೇವೆ ಎನ್ನುವುದೇ ಹೆಮ್ಮೆ

  ನಾವು ಒಂದೇ ಕಾಲಘಟ್ಟದಲ್ಲಿ ಇದ್ದೇವೆ ಎನ್ನುವುದೇ ಹೆಮ್ಮೆ

  'ಇಂದಿಗೂ ಸೀತಾರಾಮ್ ಧಾರಾವಾಹಿಗಳಿಗೆ ಅದರದ್ದೇ ಆದ ಮಹತ್ವವಿದೆ. ನನ್ನಲ್ಲಿ ಕೂಡ ಅವರ ಧಾರಾವಾಹಿಗಳಲ್ಲೇಕೆ ನಟಿಸುತ್ತಿಲ್ಲ ಎಂದು ವಿಚಾರಿಸುವವರು ಇದ್ದಾರೆ. ಇಂಥ ಸೀತಾರಾಮ್ ಅವರಿಗೆ ಚಿತ್ರರಂಗದಲ್ಲಿ ಮಾತ್ರ ಅಂಥ ಯಶಸ್ಸು ದೊರಕಿಲ್ಲ. ‌ಆದರೆ ಮುಂದಿನ ದಿನಗಳಲ್ಲಿ ಅವರು ಸಿನಿಮಾಗಳಲ್ಲಿ ‌ಕೂಡ ದೊಡ್ಡ ಮಟ್ಟದ ಹೆಸರು ಮಾಡುವಂತಾಗಲಿ ಎಂದು ಈ ಸಂದರ್ಭದಲ್ಲಿ ನಾನು ಹಾರೈಸುತ್ತೇನೆ. ನಾವು ಒಂದೇ ಕಾಲಘಟ್ಟದಲ್ಲಿ ಇದ್ದೇವೆ ಎನ್ನುವುದೇ ಹೆಮ್ಮೆ'' ಎಂದು ದತ್ತಣ್ಣ, ರಾಷ್ಟ್ರಪ್ರಶಸ್ತಿ ಪುರಸ್ಕೃತ ನಟ

   ಸೀತಾರಾಮ್ ಬರವಣಿಗೆಯೇ ನಮಗೆ ಸ್ಫೂರ್ತಿ

  ಸೀತಾರಾಮ್ ಬರವಣಿಗೆಯೇ ನಮಗೆ ಸ್ಫೂರ್ತಿ

  ''ಸೀತಾರಾಮ್ ಅವರು ಒಬ್ಬ ನ್ಯಾಚುರಲ್‌ ಜೀನಿಯಸ್. ನಮಗೆಲ್ಲ ಮೊದಲ ಪ್ರಭಾವ ಅವರ ಬರವಣಿಗೆ ಎಂದು ಧೈರ್ಯವಾಗಿ ಹೇಳಬಹುದು. ಅವರು ಬರೆಯಲು ಶುರು ಮಾಡಿದ ಬಳಿಕವೇ ಕಿರುತೆರೆಯಲ್ಲಿ ಗಟ್ಟಿ ಸಾಹಿತ್ಯದ ಪ್ರವೇಶ ಆಯಿತು ಎನ್ನಬಹುದು. ಅವರು ಬರೆಯಲು ಶುರು ಮಾಡಿದಾಗಲೇ ಬರಹದಲ್ಲಿ ಹೊಸತನ ಪ್ರವೇಶಿಸಿತು. ಹೇಳಿಕೊಳ್ಳಲಾಗದ ಭಾವನೆಗಳನ್ನು ಕೂಡ ಪದಗಳಲ್ಲಿ ಹಿಡಿದಿಡುವ ಕಲೆ ಅವರಿಗೆ ಕರಗತವಾಗಿತ್ತು. ಮಾಯಾಮೃಗ ಕಾಲದಲ್ಲೇ ಅವುಗಳು ನನ್ನ ಮೇಲೆ ಪ್ರಭಾವ ಬೀರಿತ್ತು. ಅವರಿಗೆ ಎಪ್ಪತ್ತಾದರೂ ಇಪ್ಪತ್ತು ಆಗಿರುವಂತೆ ಕಾಣಿಸುತ್ತಾರೆ. ಎವರ್ ಗ್ರೀನ್ ಯಂಗ್ ಅಂಡ್ ಎನರ್ಜೆಟಿಕ್ ಎಂಬ ಪದ ಪ್ರಯೋಗವನ್ನು ಕಿರುತೆರೆಯಲ್ಲಿ ಮಾಡೋದಾದರೆ ಅದು ಅವರಿಗೆ ಮೀಸಲು. ಅವರಿಗೆ ಜನ್ಮದಿನದ ಶುಭಾಶಯಗಳು'' ನಾಗೇಂದ್ರ ಶಾ, ನಟರು, ನಿರ್ದೇಶಕರು

   ಅವರಿಗೆ ಇಂದಿಗೂ ಮೂವತ್ತು..!

  ಅವರಿಗೆ ಇಂದಿಗೂ ಮೂವತ್ತು..!

  "ನಾನು ಸೀತಾರಾಮ್ ಅವರನ್ನು ರಾಜಿ ಎಂದು ಕರೆಯುತ್ತೇನೆ! ನಾವು ಮಾಯಾಮೃಗ ಧಾರಾವಾಹಿಯಲ್ಲಿ ಜೊತೆಗೆ ಕೆಲಸ ಮಾಡಿದ್ದೆವು. ನೋಡು ನೋಡುತ್ತಿದ್ದಂತೆ ಅವರಿಗೆ 70ವರ್ಷ ತುಂಬಿದೆ. ಆದರೆ ಪ್ರೀತಿ ತುಂಬಿದ ಅವರ ಮನಸ್ಸಿಗೆ ಮಾತ್ರ ಇಂದಿಗೂ 30 ವರ್ಷ ಮಾತ್ರ ಎಂದು ನನಗೆ ಗೊತ್ತು. ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.. ಭಗವಂತ ಅವರಿಗೆ ಆಯಸ್ಸು, ಆರೋಗ್ಯ, ಐಶ್ವರ್ಯ ಮತ್ತು ಮನಃಶಾಂತಿಯನ್ನು ಸದಾ ಕರುಣಿಸಲಿ ಎಂದು ಈ ಸಂದರ್ಭದಲ್ಲಿ ಪ್ರಾರ್ಥಿಸುತ್ತೇನೆ. ಅವರು ನಮ್ಮ ಕುಟುಂಬದಲ್ಲಿ ಒಬ್ಬರಂತೆ ಇರುವವರು. ಹಾಗಾಗಿ ನನ್ನ ಪತ್ನಿ ಚಿತ್ರಾ ಶೆಣೈ ಮತ್ತು ಮಗಳು ಖುಷಿಯ ಹಾರೈಕೆಯನ್ನು ಕೂಡ ಈ ಸಂದರ್ಭದಲ್ಲಿ ಖುಷಿಯಿಂದ ತಲುಪಿಸುತ್ತಿದ್ದೇನೆ. ವಂದನೆಗಳು.." ಗುರುದಾಸ್ ಶೆಣೈ ನಿರ್ಮಾಪಕ, ನಿರ್ದೇಶಕರು

  English summary
  Kannada Director and actor tn seetharam celebrates his birthday today (december 6th). Sandalwood stars wish to tn seetharam.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X